ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯದ ಸಮಸ್ಯೆ ಪರಿಹಾರಕ್ಕೆ ಕೊಬ್ಬು ಕರಗಿಸಿ

|
Google Oneindia Kannada News

ಪ್ರತಿಯೊಬ್ಬರೂ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ದೇಹ ಸಪೂರವಾಗಿರಬೇಕು ಎಂದು ಬಯಸುತ್ತಾರೆ. ಆದರೆ, ಇವತ್ತಿನ ಆಹಾರ ಪದ್ಧತಿ ಮತ್ತು ದೈಹಿಕ ಶ್ರಮವಿಲ್ಲದ ದುಡಿಮೆ ನಮ್ಮ ದೇಹವನ್ನು ದಢೂತಿಯನ್ನಾಗಿ ಮಾಡುತ್ತಿದೆ.

ಬಹಳಷ್ಟು ಜನ ಸುಂದರ ಮತ್ತು ಆಕರ್ಷಕವಾಗಿ ಕಾಣುವ ಸಲುವಾಗಿ ದೇಹವನ್ನು ದಂಡಿಸಿ, ಆಹಾರದಲ್ಲಿ ಪಥ್ಯ ಅಳವಡಿಸಿ ಸಣ್ಣಗೆ, ತೆಳ್ಳಗೆ ಇರುವಂತೆ ನೋಡಿಕೊಳ್ಳುತ್ತಾರೆ. ಇದೊಂದು ರೀತಿಯ ತಪಸ್ಸು ಎಂದರೂ ತಪ್ಪಾಗಲಾರದು. ಏಕೆಂದರೆ ದೇಹ ದಂಡಿಸುವುದು ನಿರಂತರ ಕ್ರಿಯೆಯಾಗಬೇಕು ಅದು ಒಂದು ದಿನ ಮಾಡಿ ಬಿಡುವಂತಹ ಕೆಲಸವಲ್ಲ.

ಮಾರಕ ಕಾಯಿಲೆ ಕ್ಯಾನ್ಸರ್ ಬಗ್ಗೆ ಇರಲಿ ಎಚ್ಚರ ಮಾರಕ ಕಾಯಿಲೆ ಕ್ಯಾನ್ಸರ್ ಬಗ್ಗೆ ಇರಲಿ ಎಚ್ಚರ

ನಮ್ಮ ದೇಹದ ಎತ್ತರಕ್ಕೆ ತಕ್ಕಂತೆ ತೂಕವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೂ ಕಷ್ಟಪಟ್ಟು ಒಂದಷ್ಟು ವೈದ್ಯರ ಸಲಹೆಯಂತೆ ವ್ಯಾಯಾಮ ಮತ್ತು ಆಹಾರ ಸೇವನೆಯಲ್ಲಿ ಒಂದಷ್ಟು ಹಿತಮಿತ, ಪಥ್ಯಾಕ್ರಮಗಳನ್ನು ಅಳವಡಿಸಿಕೊಂಡರೆ ದೇಹವನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಬೇರೆಯವರಿಗೂ ನಾವು ಸುಂದರ ಮತ್ತು ಆಕರ್ಷಕವಾಗಿ ಕಾಣಲು ಸಾಧ್ಯವಾಗುತ್ತದೆ.

ದೇಹದ ಕೊಬ್ಬು ಕರಗಿಸುವ ಈ ಮಾತ್ರೆ ಕೊರೊನಾ ಸೋಂಕಿಗೂ ರಾಮಬಾಣ ದೇಹದ ಕೊಬ್ಬು ಕರಗಿಸುವ ಈ ಮಾತ್ರೆ ಕೊರೊನಾ ಸೋಂಕಿಗೂ ರಾಮಬಾಣ

ನಮ್ಮ ದೇಹವನ್ನು ವಿರೂಪಗೊಳಿಸುವಲ್ಲಿ ಬೊಜ್ಜು ಪ್ರಮುಖ ಪಾತ್ರವಹಿಸುತ್ತದೆ. ಆಹಾರ ಕ್ರಮದಲ್ಲಿ ಒಂದಷ್ಟು ಶಿಸ್ತು, ಪಥ್ಯ ಮತ್ತು ಕಠಿಣ ವ್ಯಾಯಾಮಗಳನ್ನು ಮಾಡುವ ಮೂಲಕ ಬೊಜ್ಜನ್ನು ಕರಗಿಸಿದ್ದೇ ಆದರೆ ದೇಹವೂ ಸುಂದರವಾಗಿರುತ್ತದೆ ಜತೆಗೆ ಆರೋಗ್ಯವೂ ಇರುತ್ತದೆ. ಸಾಮಾನ್ಯವಾಗಿ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾದಾಗ ದೇಹದ ಗಾತ್ರಹಿಗ್ಗುತ್ತದೆ. ಇದೇ ಬೊಜ್ಜು. ಮನುಷ್ಯನಿಗೆ ಬೊಜ್ಜು ಹೆಚ್ಚಾಗುತ್ತಿದ್ದಂತೆಯೇ ರಕ್ತದೊತ್ತಡ, ಹೃದಯದ ಕಾಯಿಲೆ, ಪಿತ್ತಕೋಶದ ಕಾಯಿಲೆ, ಮೂಳೆ ಸವೆತ, ಕೀಲುಗಳ ಕಾಯಿಲೆ, ಉಸಿರಾಟದ ತೊಂದರೆ, ಸುಸ್ತು, ಆಯಾಸದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಬೊಜ್ಜು ಇಳಿಸದಿದ್ದರೆ ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ಇಲ್ಲ!ಬೊಜ್ಜು ಇಳಿಸದಿದ್ದರೆ ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ಇಲ್ಲ!

ಜಂಕ್ ಫುಡ್ ಸೇವನೆ

ಜಂಕ್ ಫುಡ್ ಸೇವನೆ

ಇತ್ತೀಚಿಗಿನ ಆಹಾರಕ್ರಮಗಳು, ಜಂಕ್ ಫುಡ್ ಸೇವನೆ, ಆಹಾರ ಸೇವನೆಯಲ್ಲಿ ಶಿಸ್ತು ಅಳವಡಿಸಿಕೊಳ್ಳದೆ, ಸಿಕ್ಕಿದನ್ನೆಲ್ಲ ಸೇವಿಸೋದು, ಕುಳಿತಲ್ಲೇ ಹೆಚ್ಚು ಹೊತ್ತು ಇರುವುದು, ವಾಕಿಂಗ್, ವ್ಯಾಯಾಮ, ದೈಹಿಕ ಶ್ರಮದ ಕೆಲಸ ಮಾಡದಿರುವುದು ಬೊಜ್ಜು ಬರಲು ಕಾರಣವಾಗಿದೆ. ಹೀಗಾಗಿ ನಾವು ಸಾಧ್ಯವಾದಷ್ಟು ವಾಕಿಂಗ್, ವ್ಯಾಯಾಮಗಳ ಬೊಜ್ಜು ಬಾರದಂತೆ ನೋಡಿಕೊಳ್ಳುವ ಅಗತ್ಯವಿದೆ. ಸದಾ ದೈಹಿಕ ಶ್ರಮದ ಕೆಲಸ ಮಾಡುವ ರೈತರು, ಕಾರ್ಮಿಕರಲ್ಲಿ ಬೊಜ್ಜು ಕಾಣಿಸಿಕೊಳ್ಳುವುದು ಅಪರೂಪವಾಗಿರುತ್ತದೆ. ಆದರೆ ದೈಹಿಕ ಶ್ರಮ ಕಡಿಮೆ ಇರುವ ಕೆಲಸಗಳನ್ನು ಮಾಡುವವರಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.

ವ್ಯಾಯಾಮ ಬೊಜ್ಜಿನ ಸಮಸ್ಯೆಗೆ ಪರಿಹಾರ

ವ್ಯಾಯಾಮ ಬೊಜ್ಜಿನ ಸಮಸ್ಯೆಗೆ ಪರಿಹಾರ

ಇನ್ನು ಬೊಜ್ಜು ಹೇಗೆ ಬರುತ್ತದೆ? ಎಂಬುದಕ್ಕೆ ವೈದ್ಯರು ಕೆಲವೊಂದು ಕಾರಣಗಳನ್ನು ನೀಡುತ್ತಾರೆ. ಅದೇನೆಂದರೆ ಅನುವಂಶೀಯವಾಗಿಯೂ ಬರಬಹುದು. ಇಲ್ಲವೆ ದೇಹದ ಶ್ರಮ ಕಡಿಮೆಯಾಗಿ ಆಹಾರ ಸೇವನೆ ಜಾಸ್ತಿಯಾದರೂ ಬರಬಹುದು. ನಡವಳಿಕೆಯಲ್ಲಿನ ವಿಭಿನ್ನತೆ, ತಿನ್ನುವುದನ್ನು ಪ್ರೇರೇಪಿಸುವುದು, ಕಂಡಿದೆಲ್ಲವನ್ನೂ ತಿನ್ನಬೇಕೆಂಬ ಬಯಕೆ, ಆಗಾಗ್ಗೆ ಆಹಾರ ಸೇವಿಸುವುದು. ಕೊಬ್ಬಿನ ಅಂಶವಿರುವ ಪದಾರ್ಥಗಳನ್ನು ತಿನ್ನುವುದು. ದೈಹಿಕ ಶ್ರಮಕ್ಕೆ ಒತ್ತು ನೀಡದಿರುವುದು ಕೂಡ ಬೊಜ್ಜು ಬರಲು ದಾರಿ ಮಾಡಿಕೊಡುತ್ತದೆ. ಆದ್ದರಿಂದ ನಮ್ಮ ದೇಹದಲ್ಲಿ ಬೊಜ್ಜು ಬೆಳೆಯುವುದನ್ನು ತಡೆಯಬೇಕಾದರೆ ಸೇವಿಸುವ ಆಹಾರವು ಖರ್ಚು ಮಾಡುವ ಶಕ್ತಿಗೆ ಸಮವಾಗಿರಬೇಕು. ದೇಹದ ತೂಕವನ್ನು ಪರೀಕ್ಷಿಸಿಕೊಂಡು ಕೆಲವೊಂದು ನಿಯಮಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡರೆ ಬೊಜ್ಜಿನ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗುತ್ತದೆ.

ಎತ್ತರಕ್ಕೆ ತಕ್ಕಂತೆ ತೂಕ ಕಾಪಾಡಿಕೊಳ್ಳಿ

ಎತ್ತರಕ್ಕೆ ತಕ್ಕಂತೆ ತೂಕ ಕಾಪಾಡಿಕೊಳ್ಳಿ

ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಕೆಲವೊಂದು ಅಂಶಗಳನ್ನು ನಾವು ಗಮನದಲ್ಲಿಟ್ಟುಕೊಳ್ಳುವುದು ಅತಿ ಮುಖ್ಯ. ಅದೇನೆಂದರೆ ನಮ್ಮ ಎತ್ತರಕ್ಕೆ ತಕ್ಕಂತೆ ತೂಕವನ್ನು ಕಾಪಾಡಿಕೊಳ್ಳುವುದು. ಆಹಾರದ ಬಗ್ಗೆ ಗಮನಹರಿಸಿ ದೇಹದ ತೂಕವನ್ನು ಸಮತೋಲನೆಯಲ್ಲಿಟ್ಟುಕೊಳ್ಳುವುದು. ದೈಹಿಕ ಶ್ರಮಕ್ಕಿಂತ ಹೆಚ್ಚು ಆಹಾರ ಸೇವನೆಯಿಂದ ಬೊಜ್ಜು ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ ನಿಯಮಿತ ಆಹಾರ ಮತ್ತು ದೈಹಿಕ ಚಟುವಟಿಕೆಗಳಿಗೆ ಒತ್ತು ನೀಡಬೇಕು. ದೇಹದ ನಡುವನ್ನು ತೆಳ್ಳಗೆ(ತೆಳುವಾಗಿ) ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರವಾಗಿ ಬೊಜ್ಜು ಬರಲು ಆರಂಭವಾಗಿ ಬಿಡುತ್ತದೆ.

ಒಮ್ಮೆಗೆ ಹೆಚ್ಚು ತೂಕ ಇಳಿಸಿಕೊಳ್ಳದಿರಿ

ಒಮ್ಮೆಗೆ ಹೆಚ್ಚು ತೂಕ ಇಳಿಸಿಕೊಳ್ಳದಿರಿ

ಇನ್ನು ತೂಕ ಹೆಚ್ಚಾಯಿತೆಂದು ಯಾರೋ ಹೇಳಿದರೆಂಬ ಕಾರಣಕ್ಕೆ ಒಮ್ಮೆಗೆ ಹೆಚ್ಚು ತೂಕ ಇಳಿಸಿಕೊಳ್ಳುವ ಕಾರ್ಯಕ್ಕೆ ಕೈ ಹಾಕಬಾರದು. ದೇಹದ ತೂಕವನ್ನು ಕಠಿಣ ವ್ಯಾಯಾಮ, ಯೋಗಗಳ ಮೂಲಕ ವಾರಕ್ಕೆ ಅರ್ಧ ಕೆಜಿಯಿಂದ ಒಂದು ಕೆಜಿಯಷ್ಟು ಇಳಿಸಿದರೆ ಸಾಕು. ಒಮ್ಮೆಗೆ ಹೆಚ್ಚು ತೂಕ ಇಳಿಸಿಕೊಳ್ಳುವುದು ಒಳ್ಳೆಯದಲ್ಲ. ತೂಕ ಇಳಿಕೆಗಾಗಿ ಔಷಧಿ, ಮಾತ್ರೆ ಇನ್ನಿತರ ಚಿಕಿತ್ಸೆಗೆ ಮೊರೆ ಹೋಗುವುದು ಅಪಾಯಕಾರಿ. ಏನೇ ಮಾಡುವುದಿದ್ದರೂ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಸ್ವಯಂ ಚಿಕಿತ್ಸೆ ಆರೋಗ್ಯಕ್ಕೆ ಮಾರಕ ಎಂಬುದನ್ನು ಮರೆಯಬಾರದು.

ಆಹಾರ ಪಥ್ಯದ ಜತೆಗೆ ವ್ಯಾಯಾಮ

ಆಹಾರ ಪಥ್ಯದ ಜತೆಗೆ ವ್ಯಾಯಾಮ

ನಮ್ಮ ಆಹಾರ ಕ್ರಮದಲ್ಲಿ ವ್ಯತ್ಯಾಸವಾಗಿ ದಿನವೊಂದಕ್ಕೆ 100 ಕ್ಯಾಲೋರಿ ಆಹಾರ ಹೆಚ್ಚಾದರೂ ಒಬ್ಬರ ತೂಕ ವರ್ಷಕ್ಕೆ ನಾಲ್ಕು ಕೆಜಿಯಷ್ಟು ಹೆಚ್ಚಾಗುತ್ತದೆಯಂತೆ. ಆದ್ದರಿಂದ ಆಹಾರ ಪಥ್ಯದ ಜತೆಗೆ ವ್ಯಾಯಾಮ ಮಾಡುವುದು ಅಗತ್ಯವಾಗಿರುತ್ತದೆ. ಅಲ್ಲದೆ ಮುಂಜಾನೆ ಸುಮಾರು ಮುಕ್ಕಾಲು ಅಥವಾ ಒಂದು ಗಂಟೆಕಾಲ ವೇಗದ ನಡಿಗೆಯೂ ಕೊಬ್ಬಿನ ಅಂಶವನ್ನು ಕರಗಿಸಿ ಬೊಜ್ಜು ತಡೆಯಲು ಸಾಧ್ಯವಾಗುತ್ತದೆ. ಸಣ್ಣ ಪುಟ್ಟ ಕೆಲಸಗಳಿಗೆ ಹೋಗಬೇಕಾದರೂ ವಾಹನಗಳನ್ನು ಬಳಸುವ ಬದಲು ನಡಿಗೆಯನ್ನು ರೂಢಿಸಿಕೊಳ್ಳಿ. ಮುಖ್ಯವಾಗಿ ನಾವು ಅರಿಯ ಬೇಕಾದ ವಿಷಯವೇನೆಂದರೆ ಬೊಜ್ಜು ಬಂದ ನಂತರ ಅದನ್ನು ಕರಗಿಸಲು ಶ್ರಮ ಪಡುವ ಬದಲು ಬೊಜ್ಜು ಬರದಂತೆ ನೋಡಿಕೊಳ್ಳುವುದು ಒಳ್ಳೆಯದು.

English summary
To Stay Health Burn fat and eat a foods which will help to burn fat. Running, walking, cycling and swimming exercises can help burn fat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X