ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಗೆ ಬೇಕಾದ ವಾಟ್ಸಪ್‌ ಚಾಟ್ ಡಿಲೀಟ್‌ ಆದ್ರೆ ಚಿಂತೆ ಬೇಡ... ಈ ರೀತಿ ರಿಕವರ್‌ ಮಾಡಿಕೊಳ್ಳಿ

|
Google Oneindia Kannada News

ವಾಟ್ಸಪ್‌ ಇಂದು ಭಾರತ ಸೇರಿದಂತೆ ವಿಶ್ವದ ಪ್ರಮುಖ ಭಾಗಗಳಲ್ಲಿ ಸಂದೇಶಗಳನ್ನು ರವಾನಿಸಲು ಇರುವ ಪ್ರಮುಖ ವೇದಿಕೆಯಾಗಿದೆ. ಲಕ್ಷಾಂತರ ಭಾರತೀಯರು ಪ್ರತಿದಿನ ವಿವಿಧ ಕಾರ್ಯಗಳಿಗಾಗಿ ಮತ್ತು ಸಾವಿರಾರು ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲು ಮೆಟಾ ಮಾಲೀಕತ್ವದ ಟೆಕ್ಸ್ಟಿಂಗ್ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ. ಕೆಲವೊಮ್ಮೆ ವಿವಿಧ ಕಾರಣಗಳಿಂದ ಪ್ರಮುಖ ಸಂದೇಶಗಳು ಆಕಸ್ಮಿಕವಾಗಿ ಅಳಿಸಿ ಹೋಗುತ್ತವೆ. ಕೆಲವೊಮ್ಮೆ ವಾಟ್ಸಪ್‌ ಬಳಕೆದಾರ ಹಳೆ ಫೋನ್‌ನಿಂದ ಹೊಸ ಫೋನ್‌ಗೆ ಬದಲಾಯಿಸಿಕೊಳ್ಳುವಾಗ ತನ್ನ ಚಾಟ್‌ಗಳನ್ನು ಕಳೆದುಕೊಳ್ಳುತ್ತಾರೆ.

ವಾಟ್ಸಾಪ್‌ಗೆ ಹೊಸ ಫೀಚರ್; ಗ್ರೂಪ್‌ಗೆ ಹೆಚ್ಚು ಜನರು, ರಿಯಾಕ್ಷನ್ಸ್, ದೊಡ್ಡ ಫೈಲ್ವಾಟ್ಸಾಪ್‌ಗೆ ಹೊಸ ಫೀಚರ್; ಗ್ರೂಪ್‌ಗೆ ಹೆಚ್ಚು ಜನರು, ರಿಯಾಕ್ಷನ್ಸ್, ದೊಡ್ಡ ಫೈಲ್

ಮಹತ್ವವಾದ ವಾಟ್ಸಪ್‌ ಸಂದೇಶಗಳನ್ನು ಕಳೆದುಕೊಳ್ಳುದು ಕೆಲವೊಮ್ಮೆ ಸಮಸ್ಯೆ ತಂದೊಡ್ಡಬಹುದು. ಪ್ರಮುಖವಾಗಿ ಕೆಲವು ಲಿಂಕ್ಸ್‌, ಫೋಟೋಗಳು, ಕಾಂಟ್ಯಾಕ್ಟ್‌ ನಂಬರ್‌, ಹೀಗೆ ಕೆಲವು ಚಾಟ್‌ಗಳು ಕಳೆದುಕೊಳ್ಳಲು ತುಂಬಾ ಮೌಲ್ಯಯುತವಾಗಿಬಹುದು. ಒಂದು ವೇಳೆ ಬಳಕೆದಾರರು ತಮ್ಮ ವಾಟ್ಸಪ್‌ನಲ್ಲಿರುವ ಸಂದೇಶಗಳು ಡಿಲೀಟ್ ಆದರೆ ಚಿಂತಿಸುವ ಅಗತ್ಯವಿಲ್ಲ. ಡಿಲೀಟ್‌ ಆದ ಸಂದೇಶಗಳನ್ನು ಗೂಗಲ್ ಡ್ರೈವ್ ಅಥವಾ ಮೊಬೈಲ್ ಬ್ಯಾಕ್‌ ಅಪ್‌ ಸಹಾಯದಿಂದ ಮರು ಪಡೆಯಬಹುದಾಗಿದೆ. ಅದಕ್ಕಾಗಿ ನೀವು ಕೆಲವು ಸರಳ ಹಂತಗಳನ್ನು ಅನುಸರಿಸಿದರೆ ಸಾಕು, ಆ ಮೂಲಕ ಅಳಿಸಿ ಹೋದ ವಾಟ್ಸ್‌ಆ್ಯಪ್ ಸಂಭಾಷಣೆಗಳನ್ನು ಮರು ಪಡೆಯಬಹುದು.

follow this step for Recover your deleted whats app messages

ನಿಮ್ಮ ಅಳಿಸಿ ಹೋದ ವಾಟ್ಸಪ್‌ ಸಂದೇಶಗಳನ್ನು ಈ ರೀತಿ ಪಡೆದುಕೊಳ್ಳಿ
> ನಿಮ್ಮ ಮೊಬೈಲ್‌ನ ಫೈಲ್ ಮ್ಯಾನೇಜರ್ ಆಪ್‌ಗೆ ಹೋಗಿ, ಒಂದು ವೇಳೆ ಕಾಣದಿದ್ದರೆ ಆಪ್‌ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ.
>ಇಂಟರ್ನಲ್‌ ಸ್ಟೋರೇಜ್‌ನಲ್ಲಿರುವ ವಾಟ್ಸ್‌ಪ್‌ ಆಪ್‌ ಫೋಲ್ಡರ್‌ ಫೋಲ್ಡರ್‌ಗೆ ಹೋಗಿ.
>ವಾಟ್ಸಪ್‌ ಫೋಲ್ಡರ್‌ನಲ್ಲಿ ಡಾಟಾಬೆಸಸ್‌ ಅನ್ನು ಆಯ್ಕೆ ಮಾಡಿ, ಇಲ್ಲಿ ದಿನಾಂಕಗಳ ಪ್ರಕಾರ ನಿಮ್ಮ ಎಲ್ಲಾ ಚಾಟ್‌ಗಳು ಬ್ಯಾಕ್‌ಅಪ್ ಆಗಿರುತ್ತದೆ.
> ವಾಟ್ಸಪ್‌ ಚಾಟ್‌ ಹಿಸ್ಟರಿಯಲ್ಲಿ ನೀವು ಮರು ಪಡೆಯಲು ಬಯಸುತ್ತಿರುವ ದಿನಾಂಕದಲ್ಲಿ ಬ್ಯಾಕ್‌ಅಪ್‌ಅನ್ನು ಆಯ್ಕೆ ಮಾಡಿಕೊಳ್ಳಿ.
> ಒಂದು ವೇಳೆ ಬ್ಯಾಕ್‌ಅಪ್ ನಿಮ್ಮ ಹೆಚ್ಚುವರಿ ಮೆಮೊರಿ ಕಾರ್ಡ್‌ನಲ್ಲಿದ್ದರೆ, ಅದನ್ನು ಕಾಪಿ ಮಾಡಿ ಇಂಟರ್ನಲ್‌ ಸ್ಟೋರೇಜ್‌ಗೆ ಪೇಸ್ಟ್ ಮಾಡಿಕೊಳ್ಳಬೇಕು.
>ನಂತರ msgstore.db.crypt12 ಎಂಬ ಹೆಸರಿನ ಫೈಲ್‌ಗಳನ್ನು msgstore_BACKUP.db.crypt12 ಎಂದು ಬದಲಿಸಬೇಕು.
> ನಂತರ msgstore-YYY-MM-DD.1.db.crypt12. ಹುಡುಕಿ, ಅದನ್ನು msg.db.crypt12. ಬದಲಾಯಿಸಬೇಕು.
> ನಂತರ ನಿಮ್ಮ ಮೊಬೈಲ್‌ನಲ್ಲಿ ವಾಟ್ಸಪ್‌ಅನ್ನು ಡಿಲೀಟ್‌ ಮಾಡಿ ಮತ್ತೆ ಇನ್‌ಸ್ಟಾಲ್ ಮಾಡಿ, ನಿಮ್ಮ ಮೊಬೈಲ್ ನಂತರ ಮೂಲಕ ಸೈನ್‌ ಇನ್‌ ಆಗಿ ಮತ್ತು Restore ಅನ್ನು ಕ್ಲಿಕ್‌ ಮಾಡಿ. ಆಗ ಡಿಲೀಟ್‌ ಆಗಿರುವ ನಿಮ್ಮೆಲ್ಲಾ ಸಂದೇಶಗಳನ್ನು ಮರಳಿಪಡೆಯಬಹುದು.

follow this step for Recover your deleted whats app messages

ವಾಟ್ಸ್‌ಆ್ಯಪ್ ಆಪ್‌ ತನ್ನ ಸರ್ವರ್‌ಗಳಲ್ಲಿ ನಿಮ್ಮ ಸಂಭಾಷಣೆಗಳನ್ನು ಉಳಿಸಿಕೊಳ್ಳುವುದಿಲ್ಲ ಎಂಬುದರ ಬಗ್ಗೆ ಗಮನವಿರಲಿ. ಅದು ಗೂಗಲ್ ಡ್ರೈವ್ ಅಥವಾ ನಿಮ್ಮ ಮೊಬೈಲ್‍ನ ಇಂಟರ್ನಲ್ ಸ್ಟೋರೇಜ್‍ನಲ್ಲಿ ಡಾಟಾಬೇಸ್‍ಗಳನ್ನು ರಚನೆ ಮಾಡಿ ಉಳಿಸಿರುತ್ತದೆ. ಇದು ಆಕಸ್ಮಿಕವಾಗಿ ಅಳಿಸಿ ಹೋದ ಚಾಟ್‍ಗಳನ್ನು ಮರು ಸ್ಥಾಪಿಸಲು ಇವುಗಳನ್ನು ಬಳಸಬಹುದು.

English summary
Deleted important Whats App Chat Accidentally? follow this step-by-step for recover your chat history
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X