• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Explained: ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ಅಂಟಿದರೆ ಉಳಿದವರ ಕಥೆ!?

|

ನವದೆಹಲಿ, ಏಪ್ರಿಲ್ 22: ಅಯ್ಯೋ ನಮ್ಮ ಮನೆಯಲ್ಲೇ ಒಬ್ಬರಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ನಾನು ಪ್ರತಿನಿತ್ಯ ಕೊವಿಡ್-19 ಸೋಂಕಿತರ ಮಧ್ಯೆಯೇ ಕೆಲಸ ಮಾಡಬೇಕು. ನನಗೆ ಎಲ್ಲಿ ಮಹಾಮಾರಿ ಅಂಟಿಕೊಳ್ಳುತ್ತದೆಯೋ ಏನೋ ಎಂದು ಆತಂಕಪಡುತ್ತಿರುವ ಜನರಿಗೆ ಇಲ್ಲಿದೆ ಮುನ್ನೆಚ್ಚರಿಕೆ ಕ್ರಮಗಳು.

ಪ್ರತಿನಿತ್ಯ ಕೊರೊನಾವೈರಸ್ ಸೋಂಕಿತರ ಮಧ್ಯೆಯೇ ಸಂಪರ್ಕದಲ್ಲಿ ಇರುವವರು. ಸೋಂಕಿನ ಲಕ್ಷಣಗಳಿಲ್ಲದೇ ಕೊವಿಡ್-19 ಪಾಸಿಟಿವ್ ಬಂದಿರುವ ರೋಗಿಗಳ ಜೊತೆ ನಿತ್ಯ ವ್ಯವಹರಿಸುವುದಕ್ಕೂ ಮೊದಲು ನೀವು ಈ ಮುನ್ನೆಚ್ಚರಿಕೆ ಹಾಗೂ ನಿಯಂತ್ರಣ ಕ್ರಮಗಳನ್ನು ಪಾಲನೆ ಮಾಡಬೇಕು.

ಭಾರತದಲ್ಲಿ ಹೊಸ ಅಲೆಯ ಆತಂಕ: ಕೊರೊನಾ 3ನೇ ರೂಪಾಂತರ ತಳಿ!ಭಾರತದಲ್ಲಿ ಹೊಸ ಅಲೆಯ ಆತಂಕ: ಕೊರೊನಾ 3ನೇ ರೂಪಾಂತರ ತಳಿ!

ಕೊರೊನಾವೈರಸ್ ಸೋಂಕಿತರ ಉಸಿರಾಟದ ಹನಿ, ಕೆಮ್ಮು, ಸೀನುವುದು ಹಾಗೂ ಹತ್ತಿರದ ಸಂಪರ್ಕದಿಂದ ರೋಗವು ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಕೊವಿಡ್-19 ಸೋಂಕಿನ ಹರಡುವಿಕೆ ಮತ್ತು ನಿಯಂತ್ರಣ ಹಾಗೂ ಮುನ್ನೆಚ್ಚರಿಕೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಮತ್ತು ಉತ್ತರಗಳ ಸಹಿತ ಒಂದು ವರದಿ "ಒನ್ಇಂಡಿಯಾ" ಓದುಗರಿಗಾಗಿ.

ನಿಮ್ಮ ಮನೆಯ ಸದಸ್ಯರಲ್ಲಿ ಕೊರೊನಾವೈರಸ್ ಕಾಣಿಸಿಕೊಂಡರೆ?

ನಿಮ್ಮ ಮನೆಯ ಸದಸ್ಯರಲ್ಲಿ ಕೊರೊನಾವೈರಸ್ ಕಾಣಿಸಿಕೊಂಡರೆ?

- ಒಂದು ವೇಳೆ ನಿಮ್ಮ ಮನೆಯ ಒಬ್ಬ ಸದಸ್ಯರಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆಯೇ.

- ನಿಮ್ಮ ಮನೆಯ ಎಲ್ಲ ಸದಸ್ಯರಿಗೆ ಪಾಸಿಟಿವ್ ಇದೆ ಎಂದು ಊಹಿಸಿಕೊಳ್ಳಿರಿ.

* ಒಂದು ವೇಳೆ ನಿಮ್ಮ ಮನೆ ಸದಸ್ಯರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ನಿಮಗೆ ನೆಗೆಟಿವ್ ವರದಿ ಬಂದಿರುತ್ತದೆ. ಇಂಥ ಸಂದರ್ಭದಲ್ಲಿ ಅವರ ಬಗ್ಗೆ ಕಾಳಜಿ ಜೊತೆಗೆ ನಿಮ್ಮ ಬಗ್ಗೆ ಸುರಕ್ಷತೆಯನ್ನು ಹೊಂದಿರಬೇಕಾಗಿರುತ್ತದೆ. ನಿಮ್ಮನ್ನು ನೀವು ರಕ್ಷಿಸಿಕೊಂಡು ನಿಮ್ಮ ಸುತ್ತಲು ಇರುವವರನ್ನು ಸೋಂಕಿನಿಂದ ಕಾಪಾಡುವುದಕ್ಕೆ ಏನು ಮಾಡಬೇಕು ಎಂಬುದಕ್ಕೆ ಈ ನಿಮಯಗಳನ್ನು ಪಾಲಿಸಿರಿ.

ಕೊವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ

ಕೊವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ

 • ಆಗಾಗ ನಿಮ್ಮ ಕೈಗಳನ್ನು ನೀರು, ಸೋಪ್ ಮತ್ತು ಆಲ್ಕೋಹಾಲ್ ಮಿಶ್ರಿತ ದ್ರವ್ಯದಿಂದ ತೊಳೆದುಕೊಳ್ಳುವುದು.
 • ಕೆಮ್ಮುತ್ತಿರುವ ಹಾಗೂ ಸೀನುತ್ತಿರುವ ಕುಟುಂಬ ಸದಸ್ಯರಿಂದ ಅಗತ್ಯ ಅಂತರ ಕಾಯ್ದುಕೊಳ್ಳುವುದು.
 • ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದಿದ್ದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ.
 • ಕಣ್ಣು, ಮೂಗು ಮತ್ತು ಬಾಯಿ ಮುಟ್ಟಿಕೊಳ್ಳಬೇಡಿ.
 • ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ಬಾಯಿ ಮತ್ತು ಮುಖವನ್ನು ಮುಚ್ಚಿಕೊಳ್ಳಿ.
 • ಅನಾರೋಗ್ಯವಿದೆ ಎನಿಸಿದ್ದಲ್ಲಿ ಮನೆಯಿಂದ ಹೊರ ಹೋಗಬೇಡಿ.
 • ಒಂದು ವೇಳೆ ಜ್ವರ, ಕೆಮ್ಮು ಮತ್ತು ಉಸಿರಾಟ ಸಮಸ್ಯೆ ಕಾಣಿಸಿಕೊಂಡಲ್ಲಿ ವೈದ್ಯರನ್ನು ಸಂಪರ್ಕಿಸಿ.
 • ಸಾಮಾನ್ಯ ಲಕ್ಷಣಗಳ ಹೊರತಾಗಿ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಅನಿಸಿದ ತಕ್ಷಣ ಆರೋಗ್ಯ ತಜ್ಞರನ್ನು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಸಂಪರ್ಕಿಸಿ ಆಸ್ಪತ್ರೆಗೆ ದಾಖಲಾಗಿ.

No Stocks: ಲಸಿಕೆ ಕೇಂದ್ರದ ಎದುರು ಈ ಬೋರ್ಡ್ ಹಾಕಲು ಕಾರಣವೇನು?No Stocks: ಲಸಿಕೆ ಕೇಂದ್ರದ ಎದುರು ಈ ಬೋರ್ಡ್ ಹಾಕಲು ಕಾರಣವೇನು?

ಮಾಸ್ಕ್ ಧರಿಸುವುದು ಏಕೆ ಅತ್ಯಗತ್ಯ?

ಮಾಸ್ಕ್ ಧರಿಸುವುದು ಏಕೆ ಅತ್ಯಗತ್ಯ?

ಕೊರೊನಾವೈರಸ್ ಸೋಂಕಿತರು ಅಥವಾ ಸೋಂಕು ಇಲ್ಲದವರು ಮಾಸ್ಕ್ ಧರಿಸುವುದರಿಂದ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಮಾಸ್ಕ್ ಒಂದರಿಂದಲೇ ಕೊವಿಡ್-19 ಸೋಂಕಿನಿಂದ ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇದರ ಜೊತೆಗೆ ಕೈಗಳನ್ನು ಶುದ್ಧವಾಗಿ ತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡ ಅತಿಮುಖ್ಯವಾಗಿರುತ್ತದೆ.

ಕೊರೊನಾ ಸೋಂಕಿತರನ್ನು ಯಾವಾಗ ಆಸ್ಪತ್ರೆಗೆ ದಾಖಲಿಸಬೇಕು?

ಕೊರೊನಾ ಸೋಂಕಿತರನ್ನು ಯಾವಾಗ ಆಸ್ಪತ್ರೆಗೆ ದಾಖಲಿಸಬೇಕು?

 • ಒಂದು ವೇಳೆ ಸೂಕ್ಷ್ಮ ಮತ್ತು ರೋಗದ ಲಕ್ಷಣಗಳು ಕಾಣಿಸಿಕೊಳ್ಳದ ಸಂದರ್ಭಗಳಲ್ಲಿ ಕೊರೊನಾವೈರಸ್ ಸೋಂಕು ತಗುಲಿದ್ದರೂ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಬಹುದು.
 • ಆದರೆ, ಆರೋಗ್ಯದ ಸ್ಥಿತಿ ಗಂಭೀರವಾದರೆ ಅಥವಾ ಹದಗೆಟ್ಟರೆ ಕಡ್ಡಾಯವಾಗಿ ಆಸ್ಪತ್ರೆಗೆ ತೆರಳಲೇಬೇಕು.
 • ನಿಮ್ಮ ದೇಹದ ಉಷ್ಣಾಂಶ 101 ಡಿಗ್ರಿ ಸೆಲ್ಸಿಯಸ್ ಗಿಂತಲೂ ಹೆಚ್ಚಾಗಿದ್ದರೆ, ಮೂರು ದಿನಕ್ಕಿಂತ ಹೆಚ್ಚು ಅವಧಿವರೆಗೂ ಕೆಮ್ಮು ನಿರಂತರವಾಗಿದ್ದರೆ ಹಾಗೂ ಸಿಆರ್ ಪಿ ಪ್ರಮಾಣವು 10ಕ್ಕಿಂತ ಹೆಚ್ಚಾಗಿದ್ದರೆ ಆರೋಗ್ಯ ಅಧಿಕಾರಿಗಳು ನೀವು ಆಸ್ಪತ್ರೆಗೆ ದಾಖಲಾಗುವುದಕ್ಕೆ ಸಲಹೆ ನೀಡುತ್ತಾರೆ.
ಕುಟುಂಬದ ಸದಸ್ಯರೊಬ್ಬರಿಗೆ ಕೊರೊನಾ ಪಾಸಿಟಿವ್?

ಕುಟುಂಬದ ಸದಸ್ಯರೊಬ್ಬರಿಗೆ ಕೊರೊನಾ ಪಾಸಿಟಿವ್?

 • ಒಂದು ವೇಳೆ ನಿಮ್ಮ ಮನೆಯ ಒಬ್ಬ ಸದಸ್ಯರಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿದ್ದರೆ, ನಿಮ್ಮ ಮನೆಯ ಎಲ್ಲ ಸದಸ್ಯರಿಗೆ ಪಾಸಿಟಿವ್ ಇದೆ ಎಂದು ತಿಳಿದುಕೊಳ್ಳಿ.
 • ಕೊರೊನಾವೈರಸ್ ಸೋಂಕಿತ ವ್ಯಕ್ತಿಯು ತಕ್ಷಣವೇ ಸ್ವಯಂಪ್ರೇರಿತರಾಗಿ ಐಸೋಲೇಟ್ ಆಗಬೇಕು ಹಾಗೂ ಸೋಂಕಿತನ ಜೊತೆಗೆ ಹತ್ತಿರದಿಂದ ಸಂಪರ್ಕ ಹೊಂದಿರುವ ವ್ಯಕ್ತಿ ಕೂಡಾ ಕ್ವಾರೆಂಟೈನ್ ಆಗಬೇಕು.
 • ಸೋಂಕಿತ ವ್ಯಕ್ತಿಯು ಮನೆಯ ಒಂದು ಪ್ರತ್ಯೇಕ ಕೊಠಡಿಯಲ್ಲಿ ಇರಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದಲ್ಲಿ ಸೋಂಕಿತನಿಂದ ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಕೊವಿಡ್-19 ಸೋಂಕಿತ ವ್ಯಕ್ತಿ ಅಥವಾ ಅವರ ಜೊತೆಗೆ ಒಂದು ಕೊಠಡಿಯಲ್ಲಿ ವಾಸವಿರುವ ಯಾರೇ ಆಗಿದ್ದರೂ ಕಡ್ಡಾಯವಾಗಿ ಎನ್-95 ಮಾಸ್ಕ್ ಧರಿಸಬೇಕು.
 • ಸೋಂಕು ತಗುಲಿದ ವ್ಯಕ್ತಿಯನ್ನು ಇರಿಸಿದ ಕೊಠಡಿಯಲ್ಲಿ ಸರಿಯಾಗಿ ಗಾಳಿ ಆಡುವಂತಿರಬೇಕು. ಉಸಿರಾಟಕ್ಕೆ ಯಾವುದೇ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.
ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಬೇಕು

ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಬೇಕು

 • ತತ್ ಕ್ಷಣದಿಂದಲೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಆರಂಭಿಸಿ, ಮನೆಯ ನಿಗದಿತ ಕೊಠಡಿಯಲ್ಲಿ ಇತರ ಸದಸ್ಯರಿಂದ ದೂರದಲ್ಲಿ ಇರಿ ಮತ್ತು ಪ್ರತ್ಯೇಕ ಶೌಚಾಲಯವನ್ನು ಬಳಸಿರಿ.
 • ಸೋಂಕು ಹರಡದಂತೆ ತಡೆಯಲು ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮತ್ತು ಮೂಗು ಮುಚ್ಚಿಕೊಳ್ಳುವಂತೆ ಮುಖಕ್ಕೆ ಅಂಗವಸ್ತ್ರ(ಟಿಶ್ಯೂ)ವನ್ನು ಅಡ್ಡಲಾಗಿ ಹಿಡಿಯಿರಿ.
 • ಸೋಪ್, ಶಾಂಪು, ಆಲ್ಕೋಹಾಲ್ ಮಿಶ್ರಿತ ದ್ರವ್ಯದಿಂದ ಆಗಾಗ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳಿರಿ.
 • ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳದೇ ಯಾವುದೇ ಕಾರಣಕ್ಕೂ ಮುಖವನ್ನು ಮುಟ್ಟಿಕೊಳ್ಳಬೇಡಿ.
 • ಸೋಂಕಿನ ಲಕ್ಷಣ ಮತ್ತು ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ಹೆಚ್ಚು ನಿಗಾವಹಿಸಿ, ಅಗತ್ಯ ಬಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿರಿ.
ಸ್ವಯಂಪ್ರೇರಿತರಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು

ಸ್ವಯಂಪ್ರೇರಿತರಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು

 • ಐಸೋಲೇಟ್ ಆಗಿರುವ ವ್ಯಕ್ತಿಯು ಕೊರೊನಾವೈರಸ್ ಸೋಂಕಿನ ಪರೀಕ್ಷೆಗೆ ಒಳಗಾಗಬೇಕು. ಆತನ ಜೊತೆಗೆ ಸಂಪರ್ಕದಲ್ಲಿದ್ದು ಕ್ವಾರೆಂಟೈನ್ ಆಗಿರುವ ವ್ಯಕ್ತಿ ಕೂಡಾ ತನ್ನ ಆರೋಗ್ಯ ಸ್ಥಿತಿಗತಿ ಮತ್ತು ಲಕ್ಷಣಗಳ ಬಗ್ಗೆ 5 ದಿನಗಳವರೆಗೂ ನಿಗಾ ವಹಿಸಿರಬೇಕು.
 • ನೀವು ಕೊರೊನಾವೈರಸ್ ಸೋಂಕು ತಗುಲಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ವರದಿ ಬರುವವರೆಗೂ ಕಾದು ಕೂರುವ ಹಾಗಿಲ್ಲ.
 • ಏಕೆಂದರೆ ಪರೀಕ್ಷೆ ಮಾಡಿಸಿಕೊಂಡ ನಂತರದಲ್ಲಿ ನಿನಗೆ ಸೋಂಕು ತಗುಲುವ ಆತಂಕವೂ ಇರುತ್ತದೆ.
 • ಒಂದು ವೇಳೆ ನಿಮ್ಮಲ್ಲಿ ರೋಗದ ಲಕ್ಷಣ ಕಾಣಿಸಿಕೊಂಡರೆ, ಒಂದೇ ಮನೆಯಲ್ಲಿ ನೀವೆಲ್ಲರೂ ವಾಸವಾಗಿದ್ದರೆ ಎಲ್ಲರಿಗೂ ಕೊರೊನಾವೈರಸ್ ಸೋಂಕು ತಗುಲಿದೆ ಎಂದು ಭಾವಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.
ಲಸಿಕೆ ಹಾಕಿಸಿಕೊಂಡರೂ ಬರುತ್ತಾ ಕೊರೊನಾವೈರಸ್?

ಲಸಿಕೆ ಹಾಕಿಸಿಕೊಂಡರೂ ಬರುತ್ತಾ ಕೊರೊನಾವೈರಸ್?

 • ಒಂದು ವೇಳೆ ನೀವು ಲಸಿಕೆ ಹಾಕಿಸಿಕೊಂಡಿದ್ದು, ನಿಮ್ಮಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ಯಾವಾಗಲೂ ನೆನಪಿಡಿ ನಿಮಗೂ ಕೂಡಾ ಸೋಂಕು ತಗುಲುವ ಸಾಧ್ಯತೆ ಇರುತ್ತದೆ.
 • ಈಗಾಗಲೇ ಒಂದು ಬಾರಿ ನಿಮಗೆ ಕೊರೊನಾವೈರಸ್ ಸೋಂಕು ತಗುಲಿದ್ದರೆ ಮತ್ತೊಂದು ಬಾರಿ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ.
English summary
If You Are Caring For Someone With COVID-19 At Home Or In A Non-Healthcare Setting, Follow This Advice To Protect Yourself And Others From Covid-19 Infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X