• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫ್ಲಾಶ್ ಬ್ಯಾಕ್ 2019; ಜನ ಹೆಚ್ಚು ಓದಿದ ಟಾಪ್ 10 ಒನ್ ಇಂಡಿಯಾ ಕನ್ನಡ ಸುದ್ದಿಗಳು

By Lekhaka
|

ನಾವೀಗ 2019ರ ಅಂಚಿನಲ್ಲಿದ್ದೇವೆ. ದಶಕವೊಂದರ ಅಂತ್ಯದಲ್ಲಿರುವ ಈ ಹೊತ್ತು, ಮುಂದಿನ ಸಂವತ್ಸರವನ್ನು ಹೊಸ ಹುಮ್ಮಸ್ಸಿನೊಂದಿಗೆ ಸ್ವಾಗತಿಸುವ ಸಮಯವೂ ಹೌದು. 2020ರ ಹೊಸ್ತಿಲಲ್ಲಿ ನಿಂತಿರುವ ನಮಗೆ, 2019ರ ಅವಲೋಕನವೂ ಮುಖ್ಯವೇ ಅಲ್ಲವೇ?

ಈ ವರ್ಷ ಏನೆಲ್ಲಾ ನಡೆಯಿತು? ಯಾವುದೆಲ್ಲಾ ಜನರ ಮನದಲ್ಲಿ ಉಳಿಯಿತು? "ಒನ್ ಇಂಡಿಯಾ ಕನ್ನಡ"ದಲ್ಲಿ ಈ ವರ್ಷ ಜನರು ಯಾವ ಸುದ್ದಿಗಳನ್ನು ಹೆಚ್ಚು ಓದಿದರು?... ಇವೆಲ್ಲವನ್ನೂ ನಿಮ್ಮ ಮುಂದಿಡುತ್ತಿದ್ದೇವೆ. ಈ ವರ್ಷ ಜನರು ಅತಿ ಹೆಚ್ಚು ಓದಿದ "ಒನ್ ಇಂಡಿಯಾ ಕನ್ನಡ" ಟಾಪ್ 10 ಸುದ್ದಿಗಳು ಇಲ್ಲಿವೆ...

ಬಿಪಿಎಲ್ ಕಾರ್ಡ್‌ದಾರರಿಗೆ ಸಿಹಿ ಕೊಟ್ಟ ಸರ್ಕಾರ

ಬಿಪಿಎಲ್ ಕಾರ್ಡ್‌ದಾರರಿಗೆ ಸಿಹಿ ಕೊಟ್ಟ ಸರ್ಕಾರ

ಬಿಪಿಎಲ್ ಕಾರ್ಡ್‌ದಾರರು ಇನ್ನು ಮುಂದೆ ಆಸ್ಪತ್ರೆಗಳ ಒಪಿಡಿಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು ಎಂಬ ಸುದ್ದಿಯನ್ನು ಹೆಚ್ಚು ಮಂದಿ ಓದಿದ್ದರು. ಬಿಪಿಎಲ್ ಕಾರ್ಡ್‌ ಹೊಂದಿರುವವರು, ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಒಪಿಡಿ ವಿಭಾಗದಲ್ಲಿ ತಪಾಸಣೆ ಮತ್ತು ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಇದಕ್ಕೂ ಮುನ್ನ ಒಪಿಡಿ ಚಿಕಿತ್ಸೆ, ಸ್ಕ್ಯಾನಿಂಗ್, ಎಕ್ಸ್‌ ರೇ ಮಾಡಿಸಿದಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ಶೇ 50 ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಈ ಶುಲ್ಕ ಸಹ ಇರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಸೂಚನೆ ಹೊರಡಿಸಿದ್ದು, ಇಲಾಖೆಯ ಅಧಿಕಾರಿಗಳು ಬಿಪಿಎಲ್ ಕಾರ್ಡ್‌ ದಾರಿಗೆ ಉಚಿತ ಚಿಕಿತ್ಸೆ ನೀಡುವ ಕುರಿತು ಸುತ್ತೋಲೆ ಹೊರಡಿಸಿದ್ದರು. ಮುಂದೆ ಓದಿ...

Flashback 2019: ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪುಗಳು

ಏಳು ತಲೆ ಸರ್ಪದ ಹಿಂದಿನ ಹುನ್ನಾರ; ಅಸಲಿ ಕಥೆ ಬಿಚ್ಚಿಟ್ಟ ಉರುಗ ತಜ್ಞ

ಏಳು ತಲೆ ಸರ್ಪದ ಹಿಂದಿನ ಹುನ್ನಾರ; ಅಸಲಿ ಕಥೆ ಬಿಚ್ಚಿಟ್ಟ ಉರುಗ ತಜ್ಞ

ಅಕ್ಟೋಬರ್ 9ರಂದು ಕನಕಪುರದಲ್ಲಿ ಏಳು ಹೆಡೆಯ ಸರ್ಪದ ಪೊರೆ ಕಂಡುಬಂದ ಸುದ್ದಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು. ಆರು ತಿಂಗಳ ಹಿಂದೆ ಏಳು ಹೆಡೆ ಸರ್ಪದ ಪೊರೆ ಕಾಣಿಸಿಕೊಂಡಿದ್ದು, ಅಲ್ಲಿಂದ ಹತ್ತು ಹಡಿ ದೂರದಲ್ಲಿ ಮತ್ತೆ ಪೊರೆ ಕಂಡುಬಂದಿದ್ದು ಅಚ್ಚರಿ ಮೂಡಿಸಿತ್ತು. ಸುತ್ತಮುತ್ತಲಿನ ಊರಿನ ಜನರೂ ಗುಂಪುಗುಂಪಾಗಿ ಹಾವಿನ ಪೊರೆ ನೋಡಲು ದೌಡಾಯಿಸಿದ್ದರು. ಇದೆಂಥ ಅಚ್ಚರಿ ಎಂದು ಬೆರಗಾಗಿದ್ದರು. ಹಾವಿನ ಪೊರೆಯ ವೀಡಿಯೋ ಕೂಡ ವೈರಲ್ ಆಗಿತ್ತು. ಆದರೆ ಇವೆಲ್ಲ ಶುದ್ಧ ಸುಳ್ಳು, ಜನರನ್ನು ಮರಳು ಮಾಡಲು ಮಾಡಿರುವ ವ್ಯವಸ್ಥಿತ ಸಂಚು ಎಂದು ಆರೋಪಿಸಿದ್ದರು ಉರುಗ ತಜ್ಞ ಆರ್.ಸುರೇಶ್.

ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎನ್ ಕೌಂಟರ್ ನಡೆದಿದ್ದು ಹೇಗೆ?

ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎನ್ ಕೌಂಟರ್ ನಡೆದಿದ್ದು ಹೇಗೆ?

ಹೈದರಾಬಾದ್ ನಲ್ಲಿ 27 ವರ್ಷದ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಸುದ್ದಿ ಇಡೀ ದೇಶದಲ್ಲೇ ಭಾರೀ ಆಕ್ರೋಶ ಉಂಟು ಮಾಡಿತ್ತು. ಈ ಪ್ರಕರಣದ ಆರೋಪಿಗಳು ಪೊಲೀಸರ ಎನ್‌ ಕೌಂಟರ್‌ನಲ್ಲಿ ಮೃತಪಟ್ಟಿದ್ದು, ಈ ಎನ್ ಕೌಂಟರ್ ನಡೆಯುವ ಮುನ್ನ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಒತ್ತಾಯ ಎಲ್ಲೆಡೆಯಿಂದ ಕೇಳಿಬಂದಿತ್ತು. ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದರು. ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಕೇಶವುಲು ಎನ್ ಕೌಂಟರ್‌ನಲ್ಲಿ ಮೃತಪಟ್ಟ ಆರೋಪಿಗಳು. ಆರೋಪಿಗಳನ್ನು ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋದಾಗ ಎನ್‌ ಕೌಂಟರ್ ನಡೆದಿತ್ತು. ನ್ಯಾಯಾಂಗ ಬಂಧನಲ್ಲಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಸತತ ವಿಚಾರಣೆ ಬಳಿಕ ಸ್ಥಳ ಮಹಜರು ಮಾಡಲು ಆರೋಪಿಗಳನ್ನು ಕರೆದುಕೊಂಡು ಹೋದ ವೇಳೆ ಎನ್ ಕೌಂಟರ್ ನಡೆದಿತ್ತು. ಮುಂದೆ ಓದಿರಿ...

Flashback 2019; ದೇಶವನ್ನು ಬೆಚ್ಚಿ ಬೀಳಿಸಿದ ಘಟನೆಗಳು

ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣ ಹುಚ್ಚಿಗೆ ಗೃಹಿಣಿ ಬಲಿ

ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣ ಹುಚ್ಚಿಗೆ ಗೃಹಿಣಿ ಬಲಿ

ಸಾಮಾಜಿಕ ಜಾಲತಾಣದ ಹುಚ್ಚಿಗೆ ಗೃಹಿಣಿಯೊಬ್ಬರು ತನ್ನ ಜೀವವನ್ನೇ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿತ್ತು. ಸ್ಮ್ಯುಯೆಲ್ ಆಪ್‌ ಬಳಸಿ ಹಾಡು ಹಾಡುತ್ತಿದ್ದ ಶಿಲ್ಪಾ ಎಂಬುವರು, ತನ್ನ ಜೊತೆ ಆಪ್‌ನಲ್ಲಿ ಹಾಡು ಹಾಡುತ್ತಿದ್ದ ಯುವಕ ಹಾಡಲು ಸ್ಪಂದಿಸಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಗೃಹಿಣಿ ಶಿಲ್ಪಾ ನಗರದ 16ನೇ ವಾರ್ಡಿನ ಗರ್ಲ್ಸ್ ಸ್ಕೂಲ್ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಗೃಹಿಣಿ ಶಿಲ್ಪಾ ಗೆ ಸ್ಮ್ಯುಯೆಲ್ ಆಪ್‌ನಲ್ಲಿ ಹಾಡುವ ಹುಚ್ಚು ಹತ್ತಿತ್ತು. ಆಕೆ ಹಾಸನದ ದೇವರಾಜ್ ಎಂಬಾತನ ಜೊತೆಗೆ ಯುಗಳ ಗೀತೆಗಳನ್ನು ಹಾಡಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದರು. ಕೆಲವು ತಿಂಗಳಿಂದ ಶಿಲ್ಪಾ ಮತ್ತು ದೇವರಾಜ್ ಹೀಗೆ ಆಪ್‌ನಲ್ಲಿ ಯುಗಳ ಗೀತೆಗಳನ್ನು ಹಾಡುತ್ತಿದ್ದರು. ಆದರೆ ತನ್ನ ಜೊತೆ ಆಪ್‌ನಲ್ಲಿ ಹಾಡು ಹಾಡುತ್ತಿದ್ದ ದೇವರಾಜ್ ಹಾಡು ಹಾಡಲು ಸ್ಪಂದಿಸಲಿಲ್ಲವೆಂದು ಶಿಲ್ಪಾ ತಮ್ಮ ನಿವಾಸದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಂದೆ ಓದಿರಿ...

ಒಂದೇ ರಾತ್ರಿಯಲ್ಲಿ ಕೋಟ್ಯಧಿಪತಿಗಳಾದ ಕೇರಳದ ಆರು ಸೇಲ್ಸ್ ಮನ್‌ಗಳು

ಒಂದೇ ರಾತ್ರಿಯಲ್ಲಿ ಕೋಟ್ಯಧಿಪತಿಗಳಾದ ಕೇರಳದ ಆರು ಸೇಲ್ಸ್ ಮನ್‌ಗಳು

ಕೇರಳದಲ್ಲಿ ಆರು ಮಂದಿ ಸೇಲ್ಸ್ ಮನ್ ಗೆ ಲಾಟರಿ ಹೊಡೆದು ರಾತ್ರೋರಾತ್ರಿ ಸುದ್ದಿಯಾಗಿದ್ದರು. ಬುಧವಾರ (ಸೆಪ್ಟೆಂಬರ್ 18) ರಾತ್ರಿಯವರೆಗೆ ರಸ್ತೆ ಬದಿ ಊಟ ಮಾಡಿ, ಕಿಷ್ಕಿಂದೆಯಂತಹ ಮನೆಯಲ್ಲಿ ಮಲಗಿ, ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ಕೇರಳದ ಆರು ಮಂದಿ ಸೇಲ್ಸ್ ‌ಮನ್‌ಗಳು ಗುರುವಾರ ಬೆಳಿಗ್ಗೆ ವೇಳೆಗೆ ಕೋಟ್ಯಧಿಪತಿಗಳಾಗಿದ್ದರು. ತಿರು ಓಣಂ ಹಬ್ಬಕ್ಕೆಂದು ಕೇರಳ ಲಾಟರೀಸ್ ಇಲಾಖೆ ಈ ಬಾರಿ 12 ಕೋಟಿ ಮೌಲ್ಯದ ಬೃಹತ್ ಲಾಟರಿ ನಡೆಸಿತ್ತು, ಇದರ ಫಲಿತಾಂಶ ಪ್ರಕಟವಾಗಿದ್ದು, 12 ಕೋಟಿ ಬಹುಮಾನ ಕೇರಳದ ಕೊಲ್ಲಂ ಬಳಿಯ ಕರುನಾಗಪಲ್ಲಿಯ ಆರು ಮಂದಿ ಸೇಲ್ಸ್ ಮನ್‌ಗಳ ಪಾಲಾಗಿತ್ತು. ಕರುನಾಗಪಲ್ಲಿಯಲ್ಲಿ ಆಭರಣ ಅಂಗಡಿಯ ಸೇಲ್ಸ್ ‌ಮನ್‌ಗಳಾಗಿದ್ದ ರಾಜೀವನ್, ರಾಮ್ಜಿಮ್, ರೋನಿ, ವಿವೇಕ್, ಸುಬಿನ್, ರತೀಶ್ ಬುಧವಾರ ರಾತ್ರಿಯಷ್ಟೇ ತಿರು ಓಣಂ ಬಂಪರ್ ಲಾಟರಿಯ ಎರಡು ಟಿಕೆಟ್ ‌ಗಳನ್ನು ಖರೀದಿಸಿದ್ದರು. ಬೆಳಿಗ್ಗೆ ಎದ್ದು ನೋಡಿದರೆ ಒಂದು ಟಿಕೆಟ್ ‌ಗೆ ಬಂಪರ್ ಲಾಟರಿ ಹೊಡೆದಿತ್ತು. ಮುಂದೆ ಓದಿರಿ...

Best of 2019: ಟಿಕ್ ಟಾಕ್ ಟಾಪ್ 10 ಕ್ರೇಜಿ ವಿಡಿಯೋಗಳು

ಯಾದಗಿರಿ ಕಣ್ವ ಸ್ವಾಮಿಯ ಚಾಟಿಂಗ್ ಹಿಸ್ಟರಿ; ಕ್ಲಿಕ್ ಮಾಡೋ ಮುನ್ನ ಯೋಚ್ನೆ ಮಾಡಿ!

ಯಾದಗಿರಿ ಕಣ್ವ ಸ್ವಾಮಿಯ ಚಾಟಿಂಗ್ ಹಿಸ್ಟರಿ; ಕ್ಲಿಕ್ ಮಾಡೋ ಮುನ್ನ ಯೋಚ್ನೆ ಮಾಡಿ!

ಯಾದಗಿರಿ ಜಿಲ್ಲೆಯ ಸುರಪುರದ ಹುಣಸಿಹೊಳಿ ಗ್ರಾಮದ ಕಣ್ವ ಪೀಠದ ಶ್ರೀ ವಿದ್ಯಾವಾರಿಧಿ ತೀರ್ಥ ಸ್ವಾಮೀಜಿ ಸುದ್ದಿಯಾಗಿದ್ದು ಮಹಿಳೆಯೊಂದಿಗೆ ಮಾಡಿದ್ದಾರೆ ಎನ್ನಲಾದ ವಾಟ್ಸ್ ಆಪ್ ಚಾಟ್ ನಿಂದ. ಮೈಸೂರು ಮೂಲದ ನಂದಿನಿ ಎಂಬುವರ ಜೊತೆ ವಾಟ್ಸ್ ಆಪ್ ಮೂಲಕ ಅಸಭ್ಯವಾಗಿ ಸಂಭಾಷಣೆ ನಡೆಸಿದ್ದು ಎನ್ನಲಾದ ಚಾಟ್, ವಿಡಿಯೋ ಮತ್ತು ಆಡಿಯೋಗಳು ಅನಾಮಧೇಯ ವ್ಯಕ್ತಿಯಿಂದ ಹೊರ ಬಂದಿದ್ದು, ಅವೆಲ್ಲವೂ ವೈರಲ್ ಆಗಿದ್ದವು.

ನಿಮ್ಮ ರಾಶಿಯ ಚಿಹ್ನೆಯ ಪ್ರಕಾರ ಗುಣ- ಸ್ವಭಾವ ತಿಳಿದುಕೊಳ್ಳಿ

ನಿಮ್ಮ ರಾಶಿಯ ಚಿಹ್ನೆಯ ಪ್ರಕಾರ ಗುಣ- ಸ್ವಭಾವ ತಿಳಿದುಕೊಳ್ಳಿ

ನಮ್ಮ ರಾಶಿಯ ಚಿಹ್ನೆಗೂ ನಿಮ್ಮ ಗುಣ ಸ್ವಭಾವಕ್ಕೂ ಸಂಬಂಧ ಇರುತ್ತಾ? ಹೇಗೆ ನಿಮ್ಮ ನಕ್ಷತ್ರಕ್ಕೂ ಹಾಗೂ ನಿಮ್ಮ ಗುಣಾವಳಿಗೂ ನಂಟಿರುತ್ತದೋ ಅದೇ ರೀತಿ ರಾಶಿ ಚಕ್ರದಲ್ಲಿ ಇರುವ ಚಿಹ್ನೆಗಳಿಗೂ ವ್ಯಕ್ತಿತ್ವಕ್ಕೂ ಸಂಬಂಧ ಇದ್ದೇ ಇರುತ್ತದೆ. ಜ್ಯೋತಿಷ್ಯದ ಪ್ರಕಾರ ಯಾವುದೇ ವ್ಯಕ್ತಿಯ ಲಗ್ನ ಆತನ ದೇಹ ಪ್ರಕೃತಿಯನ್ನು ಮತ್ತು ಸ್ವಭಾವವನ್ನು ಸೂಚಿಸುತ್ತದೆ ಮತ್ತೂ ಮುಂದುವರಿದು ಹೇಳಬೇಕು ಅಂದರೆ, ಲಗ್ನದಲ್ಲಿ ಯಾವ ಗ್ರಹ ಇದೆ ಮತ್ತು ಲಗ್ನಕ್ಕೆ ಯಾವ ಗ್ರಹಗಳ ದೃಷ್ಟಿ ಇದೆ ಎಂಬುದನ್ನು ಸಹ ನೋಡಿ ಒಬ್ಬ ವ್ಯಕ್ತಿಯ ಬಗ್ಗೆ ಹಲವು ವಿಚಾರಗಳನ್ನು ತೀರ್ಮಾನ ಮಾಡಬಹುದು. ಯಾರ ಜತೆಗೆ ಪಾರ್ಟನರ್ ಷಿಪ್ ಮಾಡಬಹುದು? ಯಾರಿಗೆ ಅಹಂ ಜಾಸ್ತಿ? ಯಾರು ಹುಂಬರು? ಹೀಗೆ ಬಹಳ ಸುಲಭಕ್ಕೆ ಕಂಡು ಹಿಡಿಯುವ ಲೇಖನವನ್ನು ಜನರು ಹೆಚ್ಚು ಓದಿದ್ದರು.

ಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆ

ಟೆಕ್ಕಿ ಶುಭಶ್ರೀ ಸಾವಿನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆ

ಚೆನ್ನೈನಲ್ಲಿ ದಾರುಣ ಸಾವು ಕಂಡ 23 ವರ್ಷ ವಯಸ್ಸಿನ ಶುಭಶ್ರೀ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದರು. ಆಕೆಯ ಕೊನೆಯ ಕ್ಷಣಗಳು ಕ್ಯಾಮರಾವೊಂದರಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹೆಲ್ಮೆಟ್ ಧರಿಸಿಯೇ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಶುಭಶ್ರೀ ಮೇಲೆ ಅಕ್ರಮ ಫ್ಲೆಕ್ಸ್ ವೊಂದು ಬಿದ್ದ ಪರಿಣಾಮ ಆಕೆ ಗಾಡಿಯಿಂದ ರಸ್ತೆಗೆ ಉರುಳಿದ್ದರು. ಅದೇ ಸಂದರ್ಭದಲ್ಲಿ ವೇಗವಾಗಿ ಬಂದ ಟ್ರಕ್ ಅವರ ಮೇಲೆ ಹರಿದು ಆಕೆ ಅಸುನೀಗಿದ್ದರು. ಶುಭಶ್ರೀ ಕೊನೆಯ ಕ್ಷಣಗಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಮಾಡದ ತಪ್ಪಿಗೆ ಶಿಕ್ಷೆ ಸಾವು ಕಂಡ ಶುಭಶ್ರೀ ಆತ್ಮಕ್ಕೆ ಶುಭ ಕೋರಲಾಗಿತ್ತು ಜೊತೆಗೆ ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು ಎಂಬ ಆಕ್ರೋಶವೂ ವ್ಯಕ್ತವಾಗಿತ್ತು.

ಬೈಕ್ ಸವಾರರಿಗೆ ಪೊಲೀಸರಿಂದ ನೆಮ್ಮದಿ ನೀಡಿದ ಹೈಕೋರ್ಟ್ ಆದೇಶ

ಬೈಕ್ ಸವಾರರಿಗೆ ಪೊಲೀಸರಿಂದ ನೆಮ್ಮದಿ ನೀಡಿದ ಹೈಕೋರ್ಟ್ ಆದೇಶ

ಬೈಕ್ ಸವಾರರಿಗೆ ಸಂಚಾರಿ ಪೊಲೀಸರ ಕಾಟ ಅಷ್ಟಿಷ್ಟಲ್ಲ. ಆದರೆ ಕೇರಳ ಹೈಕೋರ್ಟ್ ನೀಡಿರುವ ಆದೇಶ ಅಲ್ಲಿನ ಬೈಕ್ ಸವಾರರಿಗೆ ನಿರಾಳತೆ ನೀಡಿತ್ತು. ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ನಿಲ್ಲಲು ಸಂಚಾರಿ ಪೊಲೀಸರು ಸೂಚಿಸಬಹುದೇ ವಿನಃ ಅವರನ್ನು ನಿಲ್ಲುವಂತೆ ಒತ್ತಡ ಹೇರುವಂತಿಲ್ಲ, ಬಲ ಪ್ರದರ್ಶನ ಮಾಡುವಂತಿಲ್ಲ, ಹಾಗೂ ಅವರನ್ನು ಬೆನ್ನಟ್ಟಿ ಹೋಗುವಂತಿಲ್ಲ ಎಂದು ಹೈಕೋರ್ಟ್ ಆದೇಶ ಮಾಡಿತ್ತು. ಕೇರಳ ಹೈಕೋರ್ಟ್‌ನ ಈ ಆದೇಶ ಡಿಸೆಂಬರ್ 1ರಿಂದ ಜಾರಿ ಆಗಲಿರುವುದಾಗಿ ಹೇಳಿದ್ದು, ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ, ಕೇರಳ ಹೈಕೋರ್ಟ್‌ ನ್ಯಾಯಾಧೀಶ ರಾಜಾ ವಿಜಯರಂಗನ್ ಅವರು ಈ ಆದೇಶ ಹೊರಡಿಸಿದ್ದರು. ಬೈಕ್ ಸವಾರರನ್ನು ತಡೆಯಲು ಪೊಲೀಸರು 'ಬಲ ಪ್ರದರ್ಶನ' ಮಾಡುವಂತಿಲ್ಲ ಎಂದು ಆದೇಶಿಸಿದ್ದರು. ಮುಂದೆ ಓದಿರಿ...

ರಾಜ್ಯ ಮೈತ್ರಿ ಸರ್ಕಾರ, ರಾಜ್ಯ ಹವಾಮಾನದ ಬಗ್ಗೆ ಕೋಡಿಮಠ ಶ್ರೀ ಭವಿಷ್ಯ

ರಾಜ್ಯ ಮೈತ್ರಿ ಸರ್ಕಾರ, ರಾಜ್ಯ ಹವಾಮಾನದ ಬಗ್ಗೆ ಕೋಡಿಮಠ ಶ್ರೀ ಭವಿಷ್ಯ

ಕೋಡಿಮಠ ಶ್ರೀಗಳು ಮೈತ್ರಿ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದು, ಈ ಸರ್ಕಾರಕ್ಕೆ ಹೆಚ್ಚು ಕಾಲ ಆಯುಷ್ಯವಿಲ್ಲ ಎಂದು ಹೇಳಿದ್ದರು. 'ಬಿತ್ತಿದ ಬೆಳಸು ಪರರು ಕೊಯ್ದಾರು, ಹಂಚಿದ ಬೀಜ ಒಂದು, ಬೆಳೆದ ಪೈರು ಮತ್ತೊಂದು' ಎಂದು ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ದೆಹಲಿಯಲ್ಲಿ ನಾನು ಹೇಳಿದ್ದೆ ಎಂದ ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಒಂದು ವರ್ಷದಿಂದ 18 ತಿಂಗಳ ಒಳಗೆ ಮತ್ತೆ ಮತ ಕೇಳುತ್ತಾರೆ ಎಂದು ಕಳೆದ ವಿಧಾನಸಭೆ ಚುನಾವಣೆಗೆ ಮುನ್ನವೇ ಹೇಳಿದ್ದೆ, ಈಗಲೂ ಅದೇ ಮಾತಿಗೆ ಬದ್ಧನಾಗಿದ್ದೇನೆ ಎಂದು ಭವಿಷ್ಯ ನುಡಿದಿದ್ದರು. ಮುಂದೆ ಓದಿರಿ...

English summary
We are in the end of 2019. It is also important to overview the incidents which happened this year. Here is a list of Top 10 one India Kannada news read by people this year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X