ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PFI banned : ಪಿಎಫ್‌ಐ ನಿಷೇಧ ಯಾಕೆ? ಐದು ಕಾರಣ ಕೊಟ್ಟ ಸರಕಾರ

|
Google Oneindia Kannada News

ಬೆಂಗಳೂರು, ಸೆ. 28: ಎರಡು ದಿನ ದೇಶಾದ್ಯಂತ ಪಿಎಫ್‌ಐ ಸ್ಥಳಗಳ ಮೇಲೆ ಎನ್‌ಐಎ ಮತ್ತು ಪೊಲೀಸರ ತಂಡಗಳು ರೇಡ್ ನಡೆಸಿದ ಘಟನೆ ಬೆನ್ನಲ್ಲೇ ಇದೀಗ ಆ ಸಂಘಟನೆಯನ್ನು ಸರಕಾರ ಐದು ವರ್ಷಗಳ ಕಾಲ ನಿಷೇಧಿಸಿದೆ.

ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಹಾಗು ಅದರ ಎಂಟು ಅಂಗ ಸಂಘಟನೆಗಳನ್ನು ಕೇಂದ್ರ ಗೃಹ ಸಚಿವಾಲಯ ಬುಧವಾರ ನಿಷೇಧಿಸಿದೆ. ಭಯೋತ್ಪಾದನೆಗೆ ಹಣದ ಸರಬರಾಜು ಮಾಡುತ್ತಿದ್ದ ಪ್ರಮುಖ ಆರೋಪದ ಹಿನ್ನೆಲೆಯಲ್ಲಿ ನಿಷೇಧ ಮಾಡಿರುವುದು ತಿಳಿದುಬಂದಿದೆ.

ಭಾರತದಲ್ಲಿ ಪಿಎಫ್ಐ ಸೇರಿ 8 ಸಂಘಟನೆಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರಭಾರತದಲ್ಲಿ ಪಿಎಫ್ಐ ಸೇರಿ 8 ಸಂಘಟನೆಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ

ಪಿಎಫ್‌ಐ ನಿಷೇಧಿಸಬೇಕು ಎಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಹಲವು ವರ್ಷಗಳಿಂದಲೂ ಇಟ್ಟಿದ್ದ ಬೇಡಿಕೆ. ಈ ಸಂಘಟನೆಯ ವ್ಯವಹಾರಗಳ ಮೇಲೆ ಗಮನ ಇಟ್ಟು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆಹಾಕಿದ ಬಳಿಕವಷ್ಟೇ ಕೇಂದ್ರ ಸರಕಾರ ನಿಷೇಧದ ನಿರ್ಧಾರ ಮಾಡಿದೆ.

Five Reasons Why PFI Is Banned by Central Govt

ನಿಷೇಧಗೊಂಡ ಸಂಘಟನೆಗಳು:

* ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)
* ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ)
* ನ್ಯಾಷನಲ್ ವುಮೆನ್ಸ್ ಫ್ರಂಟ್
* ಜೂನಿಯರ್ ಫ್ರಂಟ್
* ರಿಹ್ಯಾಬ್ ಇಂಡಿಯಾ ಫೌಂಡೇಶನ್ (ಆರ್‌ಐಎಫ್)
* ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ)
* ನ್ಯಾಷನಲ್ ಕಾನ್‌ಫೆಡರೇಶನ್ ಆಫ್ ಹೂಮನ್ ರೈಟ್ಸ್ ಆರ್ಗನೈಸೇಶನ್ (ಎನ್‌ಸಿಎಚ್‌ಆರ್‌ಒ)
* ಎಂಪವರ್ ಇಂಡಿಯಾ ಫೌಂಡೇಶನ್ ಅಂಡ್ ರಿಹ್ಯಾಬ್ ಫೌಂಡೇಶನ್, ಕೇರಳ.

ರಾಜ್ಯಾದ್ಯಂತ ಪಿಎಫ್‌ಐ ನಿದ್ದೆಗೆಡಿಸಿದ ಪೊಲೀಸ್ ರೇಡ್; 40ಕ್ಕೂ ಹೆಚ್ಚು ಕಡೆ ದಾಳಿರಾಜ್ಯಾದ್ಯಂತ ಪಿಎಫ್‌ಐ ನಿದ್ದೆಗೆಡಿಸಿದ ಪೊಲೀಸ್ ರೇಡ್; 40ಕ್ಕೂ ಹೆಚ್ಚು ಕಡೆ ದಾಳಿ

ಸೆಪ್ಟೆಂಬರ್ 22 ಮತ್ತು 27ರಂದು ಎರಡು ದಿನ ಎನ್‌ಐಎ ಮತ್ತು ಇಡಿ ಅಧಿಕಾರಿಗಳ ತಂಡಗಳು ದೇಶದ ವಿವಿಧೆಡೆ ದಾಳಿ ಮಾಡಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದವು. ಅವುಗಳ ಆಧಾರದ ಮೇಲೆ ಪಿಎಫ್‌ಐ ಹಾಗೂ ಸಹಚರ ಸಂಘಟನೆಗಳನ್ನು ನಿಷೇಧಿಸಲಾಗಿದೆ.

"ಪಿಎಫ್‌ಐ ಮತ್ತದರ ಅಂಗ ಸಂಘಟನೆಗಳು ಸಾಮಾಜಿಕ-ಆರ್ಥಿಕ, ಶೈಕ್ಷಣಿಕ ಹಾಗು ರಾಜಕೀಯ ಸಂಘಟನೆಯ ರೂಪದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ವಾಸ್ತವದಲ್ಲಿ ಸಮಾಜದ ಒಂದು ನಿರ್ದಿಷ್ಟ ವರ್ಗದವರ ಮನಸಿನಲ್ಲಿ ಮತಾಂಧತೆ ತುಂಬುವ ರಹಸ್ಯ ಕಾರ್ಯಸೂಚಿ ಹೊಂದಿದೆ. ಪ್ರಜಾತಂತ್ರ ಪರಿಕಲ್ಪನೆ ಬದಿಗೊತ್ತುವ ಹಾಗು ಸಾಂವಿಧಾನಿಕ ಅಧಿಕಾರ ಮತ್ತು ಸಾಂವಿಧಾನಿಕ ವ್ಯವಸ್ಥೆಗೆ ಅಗೌರವ ತೋರುವ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ" ಎಂದು ಕೇಂದ್ರ ಸರಕಾರ ಹೇಳಿದೆ.

Five Reasons Why PFI Is Banned by Central Govt

ಐದು ಕಾರಣಗಳು

* ಪಿಎಫ್‌ಐ ದೇಶದ ಭದ್ರತೆಗೆ ಅಪಾಯ ತರುವ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿತ್ತು. ದೇಶಧ ಕೋಮುಸೌಹಾರ್ದ ಮತ್ತು ಶಾಂತಿಗೆ ಭಂಗ ತರುವ ರೀತಿಯಲ್ಲಿ ಕೆಲಸ ಮಾಡುತ್ತಿತ್ತು.
* ದೇಶದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಬೆಂಬಲ ನೀಡಿತ್ತು.
* ಪಿಎಫ್‌ಐನ ಸಂಸ್ಥಾಪಕರು ನಿಷೇಧಿತ ಸಿಮಿ ಉಗ್ರ ಸಂಘಟನೆಯ ನಾಯಕರಾಗಿದ್ದವರು. ಬಾಂಗ್ಲಾದೇಶ ಜಮಾತ್-ಉಲ್-ಮುಜಾಹಿದೀನ್ (ಜೆಎಂಬಿ) ಜೊತೆ ನಂಟು ಹೊಂದಿದ್ದಾರೆ.
* ಐಸಿಸ್ ಮುಂತಾದ ಜಾಗತಿಕ ಭಯೋತ್ಪಾದಕ ಸಂಘಟನೆಗಳ ಜೊತೆ ಪಿಎಫ್‌ಐಗೆ ಸಂಬಂಧ ಇದೆ.
* ದೇಶದಲ್ಲಿ ನಿರ್ದಿಷ್ಟ ಸಮುದಾಯದವರನ್ನು ಮತಾಂಧಗೊಳಿಸುವ ಮತ್ತು ದೇಶದಲ್ಲಿ ಅಭದ್ರತೆಯ ವಾತಾವರಣ ನಿರ್ಮಿಸುವ ಉದ್ದೇಶದಿಂದ ಪಿಎಫ್‌ಐ ಕಾರ್ಯನಿರ್ವಹಿಸುತ್ತಿತ್ತು.

ಪಿಎಫ್‌ಐ ನಿಷೇಧಿಸಲು ಈ ಮೇಲಿನ ಕೆಲ ಕಾರಣಗಳಿರುವುದು ಸದ್ಯಕ್ಕೆ ತಿಳಿದುಬಂದಿದೆ. ಈ ಬಗ್ಗೆ ಸರಕಾರದಿಂದ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.

ಪಿಎಫ್‌ಐ ಹುಟ್ಟು:

ಪಾಪುಲರ್ ಫ್ರಂಟ್ ಆಫ್ ಇಂಡಿಯಾ 2006ರಲ್ಲಿ ಸ್ಥಾಪನೆಯಾಗಿದ್ದು. ಸಮಾಜಮುಖಿ ಕಾರ್ಯಗಳನ್ನು ಮಾಡುವ ಉದ್ದೇಶದಿಂದ ಇದು ಪ್ರಾರಂಭವಾಯಿತು ಎಂದು ಹೇಳಲಾಗಿತ್ತು. ಆದರೆ, ಕೊಲೆ ಇತ್ಯಾದಿ ಕೃತ್ಯಗಳಲ್ಲಿ ಪಿಎಫ್‌ಐ ಕೈವಾಡ ಇರುವುದು ಮತ್ತು ಮುಸ್ಲಿಂ ಸಮುದಾಯದಲ್ಲಿ ಇಸ್ಲಾಂ ಮತಾಂಧತೆಯನ್ನು ಹೆಚ್ಚಿಸುವ, ದೇಶವಿರೋಧಿ ಕೃತ್ಯಗಳಿಗೆ ಪ್ರಚೋದಿಸುವ ಕೆಲಸವನ್ನು ಪಿಎಫ್‌ಐ ಮಾಡುತ್ತಿದೆ ಎಂಬ ಅರೋಪಗಳು ಬಹಳ ಕೇಳಿಬಂದಿದ್ದವು. ಹಿಂದೆ ನಿಷೇಧಿಸಲಾಗಿದ್ದ ಸಿಮಿ ಸಂಘಟನೆಯ ಹೊಸ ರೂಪವೇ ಪಿಎಫ್‌ಐ ಎಂದೂ ಹೇಳಲಾಗುತ್ತಿತ್ತು. ಹೀಗಾಗಿ ಇದನ್ನು ನಿಷೇಧಿಸಬೇಕೆಂಬ ಕೂಗು ಹಲವು ರಾಜ್ಯಗಳಿಂದ ಬಂದಿತ್ತು. ಕೇರಳ ಮತ್ತು ಕರ್ನಾಟಕದಲ್ಲಿ ಪಿಎಫ್‌ಐ ಬಹಳ ಸಕ್ರಿಯವಾಗಿದೆ.

ಇತ್ತೀಚೆಗೆ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಪಿಎಫ್‌ಐ ಸಂಘಟನೆಯ ಸದಸ್ಯರು ಸಂಚು ರೂಪಿಸಿದ ಸಂಗತಿ ಬೆಳಕಿಗೆ ಬಂದಿತ್ತು. ಹೀಗಾಗಿ, ಸರಕಾರ ಬಹಳ ಕ್ಷಿಪ್ರವಾಗಿ ಕಾರ್ಯೋನ್ಮುಖವಾಗಿ ಪಿಎಫ್‌ಐ ನಿಷೇಧಕ್ಕೆ ಅಗತ್ಯವಾಗಿರುವ ಸಾಕ್ಷ್ಯಾಧಾರಗಳನ್ನು ಕಲೆಹಾಕಲು ಸೆಪ್ಟೆಂಬರ್ 22 ಮತ್ತು 27ರಂದು ಎರಡು ದಿನ ತನಿಖಾ ಸಂಸ್ಥೆಗಳಿಂದ ದಾಳಿ ಮಾಡಿಸಿದೆ ಎನ್ನಲಾಗಿದೆ.

ಪಿಎಫ್‌ಐಗೆ ವಿದೇಶಗಳಿಂದ ಫಂಡಿಂಗ್ ಬರುತ್ತಿರುವ ಬಗ್ಗೆ ಇಡಿ ಬಳಿ ಖಚಿತ ಮಾಹಿತಿ ಇದೆ. ಹಾಗೆಯೇ, ಅನೇಕ ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ಪಿಎಫ್‌ಐ ಕೈವಾಡ ಸ್ಪಷ್ಟವಾಗಿದೆ. ಆದರೆ, ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕ ನಂತರ ಕೇಂದ್ರ ಗೃಹ ಸಚಿವಾಲಯವು ಪಿಎಫ್‌ಐ ಹಾಗೂ ಎಂಟು ಸಹಚರ ಸಂಘಟನೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸುವ ನಿರ್ಧಾರಕ್ಕೆ ಬಂದಿದೆ.

ಇನ್ನು, ಕರ್ನಾಟಕದಲ್ಲಿ ನಡೆದ ಹಿಜಾಬ್ ವಿವಾದಲ್ಲಿ ಪಿಎಫ್‌ಐ, ಸಿಎಫ್‌ಐ ಪಾತ್ರ ಬಹಳ ಇದೆ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತಿರೋಧಿಸಲು ಪ್ರಚೋದನೆ ಕೊಡಲಾಗಿತ್ತು. ಬೇಕೆಂದೇ ವಿವಾದ ಹುಟ್ಟುಹಾಕಲಾಗಿತ್ತು ಎಂಬ ಆರೋಪ ಇದೆ.

(ಒನ್ಇಂಡಿಯಾ ಸುದ್ದಿ)

English summary
Popular Front of India and its 8 affiliated organizations were banned by Central government for 5 years. Here are five reasons why these are banned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X