ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒನ್ಇಂಡಿಯಾ ಕನ್ನಡದಿಂದ ಎಸ್ಎಸ್ಎಲ್ ಸಿ ಪಾಸಾದವರಿಗೆ ಮಾರ್ಗದರ್ಶಿ

|
Google Oneindia Kannada News

ಬೆಂಗಳೂರು ಆ. 03: ಭಾರತದ ಅರ್ಥ ವ್ಯವಸ್ಥೆ ಕುಸಿಯುತ್ತಿದೆ. ಇನ್ನೊಂದೆಡೆ ಕೋವಿಡ್ ದೇಶದ ಜನರ ಬದುಕನ್ನೇ ಮೂರಾಬಟ್ಟೆ ಮಾಡಿದೆ. ಕೋಟ್ಯಂತರ ಮಂದಿ ಇರುವ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ರಾಜ್ಯದಲ್ಲಿ ಈ ವರ್ಷ ಆರು ಲಕ್ಷ ಎಸ್ಎಸ್ಎಲ್‌ಸಿ ಹಾಗೂ ನಾಲ್ಕು ಲಕ್ಷ ಪಿಯುಸಿ ಒಟ್ಟು ಹತ್ತು ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಹೊರ ಬಿದ್ದಿದ್ದಾರೆ. ಎಸ್ಎಸ್ಎಲ್‌ಸಿ, ಪಿಯುಸಿ ಪಾಸಾಗಿ ಸಾಂಪ್ರದಾಯಿಕ ಕೋರ್ಸ್‌ಗಳಿಗಿಂತಲೂ ತ್ವರಿತ ಉದ್ಯೋಗ ಸಿಗುವ ವೃತ್ತಿಪರ ಡಿಪ್ಲೋಮಾ ಮುಗಿಸಿ ಉದ್ಯೋಗ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಈ ಹಿನ್ನೆಲೆಯಲ್ಲಿ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ಪಾಸಾದವರು ಅಗ್ನಿ ಮತ್ತು ಕೈಗಾರಿಕಾ ಸುರಕ್ಷತೆ ಕ್ಷೇತ್ರದಲ್ಲಿ ಉದ್ಯೋಗ ಆಧಾರಿತ ಡಿಪ್ಲೋಮಾ ಹಾಗೂ ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್ ಗಳ ವಿವರ ಇಲ್ಲಿ ನೀಡಲಾಗಿದೆ.

ಅಗ್ನಿ ಮತ್ತು ಸುರಕ್ಷತೆ ಕುರಿತ ವಿವರ

ಅಗ್ನಿ ಮತ್ತು ಸುರಕ್ಷತೆ ಕುರಿತ ವಿವರ

ದೇಶದಲ್ಲಿ ಲಕ್ಷಾಂತರ ಕೈಗಾರಿಕೆಗಳಿವೆ. ಮಾತ್ರವಲ್ಲ ಪೊಲೀಸ್ ಇಲಾಖೆಯಲ್ಲಿ ಕೂಡ ಅಗ್ನಿ ಶಾಮಕ ದಳ ಎಲ್ಲಾ ರಾಜ್ಯಗಳಲ್ಲಿ ಇವೆ. ಯಾವುದೇ ಅಗ್ನಿ ಅವಘಡ ಸಂಭವಿಸಿದರೆ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಅದನ್ನು ನಂದಿಸುತ್ತದೆ. ಕೈಗಾರಿಕೆ ಸೇರಿದಂತೆ ವಿದ್ಯುತ್ ಇರುವ ಪ್ರತಿ ಸಂಸ್ಥೆಯಲ್ಲಿ ಈಗಿನ ಕಾಲದಲ್ಲಿ ಅಗ್ನಿ ಸುರಕ್ಷತೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಅಗ್ನಿ ಅವಘಡ ಸಂಭವಿಸಿ ಆಗುವ ನಷ್ಟಕ್ಕಿಂತೂ ಅಗ್ನಿ ಸುರಕ್ಷತೆಗೆ ಬಹುತೇಕ ಸಂಸ್ಥೆಗಳು ಹೆಚ್ಚು ಒತ್ತು ನೀಡುತ್ತಿವೆ. ಹೀಗಾಗಿ ಅಗ್ನಿ ಸುರಕ್ಷತೆ ವಿಭಾಗದಲ್ಲಿ ಉದ್ಯೋಗ ಗ್ಯಾರೆಂಟಿ ಕೊಡುವ ಸಾಕಷ್ಟು ಡಿಪ್ಲೋಮಾ ಕೋರ್ಸ್‌ಗಳಿವೆ. ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ಪಾಸಾದವರು ಈ ಡಿಪ್ಲೋಮಾ ಕೋರ್ಸ್ ಓದುವ ಮೂಲಕ ಉದ್ಯೋಗ ಪಡೆದು ಅತಿ ಬೇಗ ಉದ್ಯೋಗವಂತರಾಗುವ ಅವಕಾಶಗಳಿವೆ.

ಭವಿಷ್ಯದಲ್ಲೂ ಅಗ್ನಿ ಮತ್ತು ಕೈಗಾರಿಕಾ ಸುರಕ್ಷತೆಗೆ ಒತ್ತು

ಭವಿಷ್ಯದಲ್ಲೂ ಅಗ್ನಿ ಮತ್ತು ಕೈಗಾರಿಕಾ ಸುರಕ್ಷತೆಗೆ ಒತ್ತು

ದೇಶದಲ್ಲಿ ಇತ್ತೀಚೆಗೆ ಸಾಕಷ್ಟು ಅಗ್ನಿ ಅವಘಡಗಳು ಸಂಭಿವಿಸದ ಹಿನ್ನೆಲೆಯಲ್ಲಿ ಬೃಹತ್ ಸಂಸ್ಥೆ ಹಾಗೂ ಕಾರ್ಖಾನೆಗಳಲ್ಲಿ ಅಗ್ನಿ ಸುರಕ್ಷತೆ ಕಡ್ಡಾಯಗೊಳಿಸಲಾಗಿದೆ. ಶಾಲಾ ಸಂಸ್ಥೆಗಳು ಕೂಡ ಇದಕ್ಕೆ ಹೊರತಾಗಿಲ್ಲ. ಅಗ್ನಿ ಸುರಕ್ಷತಾ ಸಿಬ್ಬಂದಿಯನ್ನು ಕಾರ್ಖಾನೆಗಳು ಕಡ್ಡಾಯವಾಗಿ ಹೊಂದಿರಬೇಕೆಂದು ನ್ಯಾಯಾಲಯಗಳೇ ಅನೇಕ ಪ್ರಕರಣಗಳಲ್ಲಿ ನಿರ್ದೇಶನ ನೀಡಲಾಗಿದೆ. ಹೀಗಾಗಿ ಕೆಲವು ರಾಜ್ಯಗಳಲ್ಲಿ ಅಗ್ನಿ ಮತ್ತು ಕೈಗಾರಿಕಾ ಸುರಕ್ಷತೆ ಸಿಬ್ಬಂದಿ ನೇಮಕ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲೂ ಅಗ್ನಿ ಸುರಕ್ಷತೆ ಹಾಗೂ ಕೈಗಾರಿಕಾ ಸುರಕ್ಷತೆ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಾಗಲಿವೆ. ಹೀಗಾಗಿ ವಿಶಿಷ್ಟ ಕ್ಷೇತ್ರದಲ್ಲಿ ಸಿಗುವ ಡಿಪ್ಲೋಮಾ ಕೋರ್ಸ್ ಮುಗಿಸುವುದರಿಂದ ಉದ್ಯೋಗ ಸಿಗುವ ಅವಕಾಶಗಳು ಹೆಚ್ಚಾಗಿರುತ್ತವೆ.

ಕೋರ್ಸ್‌ಗಳ ವಿವರ

ಕೋರ್ಸ್‌ಗಳ ವಿವರ

ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ಪಾಸಾದವರು ಒಂದು ವರ್ಷ ಅವಧಿಯ ಡಿಪ್ಲೋಮಾ ಇನ್ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಬಹುದು. ಪದವೀಧರರು ಮೂರು ವರ್ಷದ ಸ್ನಾತಕೋತ್ತರ ಡಿಪ್ಲೋಮಾ ಪಡೆಯಬಹುದು. ಡಿಪ್ಲೋಮಾ ಇನ್ ಫೈರ್ ಅಂಡ್ ಇಂಡಸ್ಟ್ರಿಯಲ್ ಸೇಫ್ಟಿ, ಡಿಪ್ಲೊಮಾ ಇನ್ ಇಂಡಸ್ಟ್ರಿಯಲ್ ಅಂಡ್ ಕನ್‌ಸ್ಟ್ರಕ್ಷನ್ ಸೇಫ್ಟಿ ಮ್ಯಾನೇಜ್‌ಮೆಂಟ್, ಅಡ್ವಾನ್ಸ್ ಡಿಪ್ಲೋಮಾ ಕೋರ್ಸ್ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ಡಿಪ್ಲೋಮಾ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಅನೇಕ ತರಬೇತಿ ಸಂಸ್ಥೆಗಳು ಅರ್ಜಿ ಆಹ್ವಾನಿಸಿದ್ದು ಸೂಕ್ತ ತರಬೇತಿ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವುದು ಅಷ್ಟೇ ಮಹತ್ವವಾದುದು.

ಎಲ್ಲೆಲ್ಲಿ ತರಬೇತಿ ಹಾಗೂ ಶುಲ್ಕ

ಎಲ್ಲೆಲ್ಲಿ ತರಬೇತಿ ಹಾಗೂ ಶುಲ್ಕ

ಅಗ್ನಿ ಮತ್ತು ಸುರಕ್ಷತೆ ವಿಭಾಗದಲ್ಲಿ ಡಿಪ್ಲೋಮಾ ಹಾಗೂ ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್ ಕಲಿಸುವ ಸಾಕಷ್ಟು ತರಬೇತಿ ಕೇಂದ್ರಗಳಿವೆ. ಬೆಂಗಳೂರು, ಮಂಗಳೂರು, ಉಡುಪಿ, ಹುಬ್ಬಳ್ಳಿ ಧಾರವಾಡ ಅನೇಕ ಕಡೆ ಇವೆ. ಆದರೆ ವೃತ್ತಿಪರ ತರಬೇತಿ ಕೊಡುವಂತಹ ತರಬೇತಿ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ತರಬೇತಿ ಹೆಸರಿನಲ್ಲಿ ಹಣ ಮಾಡುವ ಸಂಸ್ಥೆಗಳ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ಇನ್ನು ಸಾಮಾನ್ಯವಾಗಿ ಅಗ್ನಿ ಸುರಕ್ಷತೆ ಹಾಗೂ ಕೈಗಾರಿಕಾ ಸುರಕ್ಷತೆ ವಿಭಾಗದ ಡಿಪ್ಲೋಮಾ ಕೋರ್ಸ್‌ಗಳಿಗೆ ವಾರ್ಷಿಕ 50 ರಿಂದ 60 ಸಾವಿರ ಶುಲ್ಕ ತಗುಲಬಹುದು. ಕೋರ್ಸ್‌ಗಳ ಜತೆಗೆ ಪ್ರಾಯೋಗಿಕ ಇಂಟರ್ನ್ ಶಿಪ್ ಸಹ ಇರುತ್ತದೆ. ಹೀಗಾಗಿ ಅಗ್ನಿ ಸುರಕ್ಷತೆ ಮತ್ತು ಕೈಗಾರಿಕಾ ಸುರಕ್ಷತೆ ಡಿಪ್ಲೋಮಾ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬಹುದು. ಪದವಿ ವಿದ್ಯಾರ್ಥಿಗಳು ಕೂಡ ಸ್ನಾತಕೋತ್ತರ ಡಿಪ್ಲೋಮಾ ಪಡೆಯಲು ಇಲ್ಲಿ ಅವಕಾಶವಿದೆ. ಈ ಕೋರ್ಸ್ ಗಳಿಗೆ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಆಯೋಗವೇ ಮಾನ್ಯತೆ ನೀಡಿದೆ.

English summary
Fire and Industries safety after SSLC and PUC in India: Here we talking about the Fire and Industries safety diploma courses which can be pursued on the basis of SSLC. Read more details in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X