ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟೀಲ್, ಪ್ಲಾಸ್ಟಿಕ್, ಕಾಪರ್ ಆಯ್ತು; ಬಟ್ಟೆ ಮೇಲೂ ಬದುಕುತ್ತಾ ಕೊರೊನಾ?

|
Google Oneindia Kannada News

ನೀವು ಧರಿಸುವ ಬಟ್ಟೆ ಮೇಲೆ ಡೆಡ್ಲಿ ಕೊರೊನಾ ವೈರಸ್ ಬದುಕಬಹುದೇ.? ಒಂದು ವೇಳೆ ಬದುಕುವುದೇ ಆದಲ್ಲಿ ಎಷ್ಟು ಗಂಟೆ ಅಥವಾ ಎಷ್ಟು ದಿವಸ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಬಟ್ಟೆಗಳ ಮೇಲೆ ಕೊರೊನಾ ವೈರಸ್ ಜೀವಂತವಾಗಿರುವ ಸಾಧ್ಯತೆ ಇದೆ. ಆದ್ರೆ, ಎಷ್ಟು ಕಾಲ ಎಂಬುದರ ಬಗ್ಗೆ ನಿಖರವಾಗಿ ಇನ್ನೂ ತಿಳಿದುಬಂದಿಲ್ಲ.

FACT CHECK: ಕೊರೊನಾ ವೈರಸ್ ಗಾಳಿಯಲ್ಲಿ 8 ಗಂಟೆ ಬದುಕಬಹುದೇ?FACT CHECK: ಕೊರೊನಾ ವೈರಸ್ ಗಾಳಿಯಲ್ಲಿ 8 ಗಂಟೆ ಬದುಕಬಹುದೇ?

ಪ್ಲಾಸ್ಟಿಕ್, ಸ್ಟೀಲ್, ಕಾಪರ್ ಮೇಲೆ ಕೊರೊನಾ ವೈರಸ್ ಜೀವಿತಾವಧಿ ಕುರಿತು ಈಗಾಗಲೇ ಸಂಶೋಧನೆಗಳು ನಡೆದಿವೆ. ಆದ್ರೆ, ಬಟ್ಟೆಗಳ ಮೇಲಿನ ಕೊರೊನಾ ವೈರಸ್ ಜೀವಿತಾವಧಿ ಬಗ್ಗೆ ಇಲ್ಲಿಯವರೆಗೂ ಯಾರೂ ತಲೆ ಕೆಡಿಸಿಕೊಂಡಿಲ್ಲ.

ಬಹುತೇಕ ವೈರಸ್ ಗಳು ರಂಧ್ರ ರಹಿತ ವಸ್ತುಗಳ (ಸ್ಟೀಲ್, ಕಾಪರ್) ಮೇಲೆ ಹೆಚ್ಚು ಕಾಲ ಬದುಕಿರುತ್ತವೆ. ಆದ್ರೆ, ಬಟ್ಟೆಗಳು ರಂಧ್ರಗಳಿಂದ ಕೂಡಿದ್ದು, ರಂಧ್ರ ಹೊಂದಿರುವ ಮೇಲ್ಮೈಗಳ ಮೇಲೆ ವೈರಸ್ ಗಳ ಜೀವಿತಾವಧಿ ಕಡಿಮೆ. ಯಾಕಂದ್ರೆ, ರಂಧ್ರಗಳಿಂದ ಕೂಡಿರುವ ವಸ್ತುಗಳು ವೈರಸ್ ಪಾಲಿಗೆ ಬಲೆಯಲ್ಲಿ ಸಿಲುಕಿದಂತೆ.

ಬಟ್ಟೆಗಳನ್ನು ಶುಚಿಯಾಗಿ ಇಟ್ಟುಕೊಳ್ಳಿ

ಬಟ್ಟೆಗಳನ್ನು ಶುಚಿಯಾಗಿ ಇಟ್ಟುಕೊಳ್ಳಿ

ಬಟ್ಟೆಗಳ ಮೇಲೆ ಕೊರೊನಾ ವೈರಸ್ ಜೀವಿತಾವಧಿ ನಿಖರವಾಗಿ ಗೊತ್ತಿಲ್ಲ. ಆದರೆ, ನಿಮ್ಮ ನಿಮ್ಮ ಬಟ್ಟೆಗಳನ್ನು ನೀವು ಶುಚಿಯಾಗಿ ಇಟ್ಟುಕೊಳ್ಳುವುದು ಉತ್ತಮ. ''ಡಿಟರ್ಜೆಂಟ್ ಗಳಿಗೆ ವೈರಾಣುಗಳನ್ನು ಕೊಲ್ಲುವ ಶಕ್ತಿ ಇರುತ್ತದೆ. ಸೋಂಕು ಪೀಡಿತರ ಬಟ್ಟೆಗಳನ್ನು ತೊಳೆಯುವಾಗ ಸ್ವಲ್ಪ ಜಾಗೃತವಾಗಿರಿ'' ಎನ್ನುತ್ತಾರೆ ಡಾ.ತನು ಸಿಂಘಲ್.

ಬಿಸಿ ನೀರಿನಲ್ಲಿ ಬಟ್ಟೆ ತೊಳೆಯಿರಿ

ಬಿಸಿ ನೀರಿನಲ್ಲಿ ಬಟ್ಟೆ ತೊಳೆಯಿರಿ

ಸೋಂಕು ಪೀಡಿತ ವ್ಯಕ್ತಿ ಧರಿಸಿದ ಬಟ್ಟೆ, ಬೆಡ್ ಶೀಟ್, ಟವಲ್ ಇತ್ಯಾದಿ ಬಟ್ಟೆಗಳನ್ನು ಡಿಟರ್ಜೆಂಟ್ ಬಳಸಿ ಬಿಸಿ ನೀರಿನಲ್ಲಿ ತೊಳೆಯಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಬಟ್ಟೆ ಮಾಸ್ಕ್ ಗಳನ್ನು ಬಳಸುತ್ತಿದ್ದರೆ, ಪ್ರತಿ ದಿನ ತೊಳೆಯಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಅಲರ್ಟ್ ಪ್ಲೀಸ್: ಕೊರೊನಾ ವಿಚಾರದಲ್ಲಿ ಮತ್ತೊಂದು ಕರೆಗಂಟೆ ಮೊಳಗಿಸಿದ WHO!ಅಲರ್ಟ್ ಪ್ಲೀಸ್: ಕೊರೊನಾ ವಿಚಾರದಲ್ಲಿ ಮತ್ತೊಂದು ಕರೆಗಂಟೆ ಮೊಳಗಿಸಿದ WHO!

ಸ್ಟೀಲ್ ಮೇಲೆ ಕೊರೊನಾ ವೈರಸ್ ಜೀವಿತಾವಧಿ

ಸ್ಟೀಲ್ ಮೇಲೆ ಕೊರೊನಾ ವೈರಸ್ ಜೀವಿತಾವಧಿ

ಅಧ್ಯಯನಗಳ ಪ್ರಕಾರ, ಸ್ಟೇನ್ ಲೆಸ್ ಸ್ಟೀಲ್ ಹಾಗೂ ಪ್ಲಾಸ್ಟಿಕ್ ಮೇಲೆ ಮೂರು ದಿನಗಳವರೆಗೂ ಕೊರೊನಾ ವೈರಸ್ ಬದುಕಬಹುದು. ಕಾಪರ್ ಮೇಲೆ 4 ಗಂಟೆ ಜೀವಿತಾವಧಿ ಹೊಂದಿರುವ ಕೊರೊನಾ ವೈರಸ್, ಕಾರ್ಡ್ ಬೋರ್ಡ್ ಮೇಲೆ ಮತ್ತು ಗಾಳಿಯಲ್ಲಿ 3 ಗಂಟೆ ಕಾಲ ಬದುಕಿರುವ ಸಾಧ್ಯತೆ ಇದೆ.

ವಿಶ್ವದ ಅಂಕಿ-ಅಂಶ

ವಿಶ್ವದ ಅಂಕಿ-ಅಂಶ

ವಿಶ್ವದಾದ್ಯಂತ ಇಲ್ಲಿಯವರೆಗೂ 7,99,741 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಆ ಪೈಕಿ ಈಗಾಗಲೇ 38,721 ಜನ ಮೃತಪಟ್ಟಿದ್ದು, 1,69,995 ಮಂದಿ ಸಾವನ್ನೇ ಗೆದ್ದು ಬಂದಿದ್ದಾರೆ. ಕೋವಿಡ್-19 ನಿಂದಾಗಿ 30,281 ಜನ ಇನ್ನೂ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

English summary
For how long Coronavirus can survive on clothes.?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X