ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷವಾದರೂ ಕೋವಿಡ್‌ ಸೋಂಕಿತರಿಗೆ ಕಾಡಬಹುದು ಆಯಾಸ, ಉಸಿರಾಟದ ಸಮಸ್ಯೆ: ಅಧ್ಯಯನ

|
Google Oneindia Kannada News

ಪ್ಯಾರಿಸ್‌, ಆಗಸ್ಟ್‌ 27: ಕೊರೊನಾ ವೈರಸ್‌ ಸೋಂಕು ಬಂದ ಒಂದು ವರ್ಷದ ಬಳಿಕವೂ ಆಯಾಸ ಹಾಗೂ ಉಸಿರಾಟದ ತೊಂದರೆಯು ಹಲವಾರು ಕೋವಿಡ್‌ ಸೋಂಕಿತರಲ್ಲಿ ಇರುತ್ತದೆ ಎಂದು ಕೊರೊನಾ ವೈರಸ್‌ ಸೋಂಕಿನ ಬಗ್ಗೆ ಇತ್ತೀಚಿಗೆ ನಡೆಸಲಾದ ಚೀನಾದ ಅಧ್ಯಯನ ವರದಿಯೊಂದು ಹೇಳಿದೆ. ಈ ಅಧ್ಯಯನವು ಕೊರೊನಾ ವೈರಸ್‌ ಸೋಂಕಿನ ದೀರ್ಘಾವಧಿ ಆರೋಗ್ಯ ಸಮಸ್ಯೆಯ ಬಗ್ಗೆ ನಡೆಸಲಾದ ಅಧ್ಯಯನವಾಗಿದೆ. ಈ ಅಧ್ಯಯನವನ್ನು ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌, ದಿ ಲ್ಯಾನ್ಸೆಟ್ ಶುಕ್ರವಾರ ಪ್ರಕಟ ಮಾಡಿದೆ.

ಕೊರೊನಾ ವೈರಸ್‌ ಸೋಂಕು ಹೆಚ್ಚಳವಾಗಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾದ ಕೋವಿಡ್ ಸೋಂಕಿತರ ಪೈಕಿ ಅರ್ಧದಷ್ಟು ಕೊರೊನಾ ವೈರಸ್‌ ಸೋಂಕಿತರು ಈಗಲೂ ಯಾವುದಾದರೂ ಒಂದು ಕೋವಿಡ್‌ ಲಕ್ಷಣದಿಂದ ಬಳಲುತ್ತಿದ್ದಾರೆ. ಅಂದರೆ ಸೋಂಕಿನಿಂದ ಗುಣಮುಖರಾದವರಲ್ಲಿ ಒಂದು ವರ್ಷ ಕಳೆದರೂ ಉಸಿರಾಟದ ತೊಂದರೆ ಆಯಾಸದಂತಹ ಲಕ್ಷಣಗಳು ಕಂಡು ಬರುತ್ತಿದೆ. ಕೋವಿಡ್‌ ಸೋಂಕಿನಿಂದ ಗುಣಮುಖರಾದವರ ಪೈಕಿ ಅಧಿಕವಾಗಿ ಆಯಾಸ ಹಾಗೂ ಸ್ನಾಯು ದೌರ್ಬಲ್ಯ ಕಂಡು ಬರುತ್ತದೆ ಎಂದು ಈ ಚೀನಾದ ಅಧ್ಯಯನ ವರದಿಯು ಹೇಳುತ್ತದೆ.

ಎಲ್ಲಾ ಕೋವಿಡ್‌ ರೂಪಾಂತರದಿಂದ ರಕ್ಷಿಸಬಲ್ಲ SARS2-38 ಪ್ರತಿಕಾಯ ಪತ್ತೆಎಲ್ಲಾ ಕೋವಿಡ್‌ ರೂಪಾಂತರದಿಂದ ರಕ್ಷಿಸಬಲ್ಲ SARS2-38 ಪ್ರತಿಕಾಯ ಪತ್ತೆ

ಇನ್ನು ಆಯಾಸ, ಉಸಿರಾಟದ ಸಮಸ್ಯೆ ಹಾಗೂ ಸ್ನಾಯು ದೌರ್ಬಲ್ಯದಂತಹ ಲಕ್ಷಣಗಳು ಕೋವಿಡ್‌ ಸೋಂಕಿನಿಂದ ಗುಣಮುಖರಾದ ಸುಮಾರು 12 ತಿಂಗಳ ಬಳಿಕ ಅಧಿಕ ಮಂದಿಯಲ್ಲಿ ಕಾಣಿಸಿಕೊಂಡಿದೆ ಎಂದು ಅಧ್ಯಯನವು ಉಲ್ಲೇಖ ಮಾಡಿದೆ. ಈ ಅಧ್ಯಯನವು ಧೀರ್ಘ ಕೋವಿಡ್‌ ಎಂಬ ಸ್ಥಿತಿಯ ಬಗ್ಗೆ ಮಾಡಲಾದ ಅಧ್ಯಯನವಾಗಿದೆ. ಹಾಗೆಯೇ ಮೂರು ಜನರಲ್ಲಿ ಒಬ್ಬರಿಗೆ ತಾವು ಕೋವಿಡ್‌ಗೆ ಚಿಕಿತ್ಸೆ ಪಡೆದು ಒಂದು ವರ್ಷವಾದರೂ ಉಸಿರಾಟದ ಸಮಸ್ಯೆ ಇದೆ ಎಂದು ತಿಳಿಸಿದೆ. ಹಾಗೆಯೇ ಕೊರೊನಾ ವೈರಸ್‌ ಸೋಂಕಿನಿಂದಾಗಿ ತೀವ್ರ ಅನಾರೋಗ್ಯಕ್ಕೆ ಒಳಗಾದವರಲ್ಲಿ ಅಧಿಕವಾಗಿ ಈಗಲೂ ಈ ಸಮಸ್ಯೆಗಳು ಇದೆ ಎಂದು ಅಧ್ಯಯನ ಉಲ್ಲೇಖ ಮಾಡಿದೆ.

 ದೈನಂದಿನ ಕೆಲಸ ಮಾಡಲು ಕಷ್ಟಪಡುತ್ತಿರುವ ಸೋಂಕಿನಿಂದ ಗುಣಮುಖರಾದವರು

ದೈನಂದಿನ ಕೆಲಸ ಮಾಡಲು ಕಷ್ಟಪಡುತ್ತಿರುವ ಸೋಂಕಿನಿಂದ ಗುಣಮುಖರಾದವರು

"ಪ್ರಸ್ತುತ ಕೊರೊನಾ ವೈರಸ್‌ ಸೋಂಕಿಗೆ ಯಾವುದೇ ನಿಗದಿತ ಚಿಕಿತ್ಸೆ ಇಲ್ಲದೆ ಇರುವ ಕಾರಣದಿಂದಾಗಿ ಹಾಗೂ ಈ ಧೀರ್ಘಾವಧಿ ಲಕ್ಷಣಗಳ ಬಗ್ಗೆ ಅಧಿಕ ಮಾಹಿತಿ ಜನರಲ್ಲಿ ಇಲ್ಲದೆ ಇರುವ ಕಾರಣದಿಂದಾಗಿ ಧೀರ್ಘಾವಧಿ ಕೋವಿಡ್ ಸೋಂಕಿತರು ತಮ್ಮ ಸಾಮಾನ್ಯ ಜೀವನವನ್ನು ನಡೆಸಲು ಕಷ್ಟಪಡುತ್ತಾರೆ. ಹಾಗೆಯೇ ತಮ್ಮ ದೈನಂದಿನ ಕೆಲಸಗಳನ್ನು ಮಾಡಲು ಕೂಡಾ ಕಷ್ಟಪಡುತ್ತಿದ್ದಾರೆ," ಎಂದು ಲ್ಯಾನ್ಸೆಟ್‌ ಈ ಚೀನಾದ ಅಧ್ಯಯನದೊಂದಿಗೆ ಪ್ರಕಟ ಮಾಡಿದ ತನ್ನ ಸಂಪಾದಕೀಯದಲ್ಲಿ ಹೇಳಿದೆ.

 ಸೋಂಕಿನಿಂದ ಸಂಪೂರ್ಣ ಗುಣಮುಖರಾಗಲು ಬೇಕು ಒಂದು ವರ್ಷ!

ಸೋಂಕಿನಿಂದ ಸಂಪೂರ್ಣ ಗುಣಮುಖರಾಗಲು ಬೇಕು ಒಂದು ವರ್ಷ!

ಈ ಅಧ್ಯಯನವು ಕೊರೊನಾ ವೈರಸ್‌ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಲು ಸುಮಾರು ಒಂದು ವರ್ಷಕ್ಕೂ ಅಧಿಕ ಕಾಲ ಬೇಕಾಗುತ್ತದೆ ಎಂಬುವುದನ್ನು ತಿಳಿಸುತ್ತದೆ. ಕೊರೊನಾ ವೈರಸ್‌ ಸೋಂಕು ವಿಶ್ವದಲ್ಲೇ ಮೊದಲ ಬಾರಿಗೆ ಪತ್ತೆಯಾದ ಚೀನಾದ ವುಹಾನ್‌ ಪ್ರಾಂತ್ಯದಲ್ಲಿ 2020 ರ ಜನವರಿಯಿಂದ ಮೇ ತಿಂಗಳವರೆಗೆ ಕೊರೊನಾ ವೈರಸ್‌ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಸುಮಾರು 1,300 ಮಂದಿಯ ಮೇಲೆ ಅಧ್ಯಯನ ಮಾಡಲಾಗಿದೆ. ಪ್ರಸ್ತುತ ಕೊರೊನಾ ವೈರಸ್‌ ಸೋಂಕು ಇಡೀ ವಿಶ್ವದಲ್ಲೇ ಹರಡಿದೆ. ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾಗಿದೆ.

ಅಧ್ಯಯನ ಆಧಾರ: ಈಗ ಉತ್ತಮ ರಕ್ಷಣೆಗಾಗಿ ಕೋವಿಡ್‌ ಲಸಿಕೆಯ 3 ನೇ ಡೋಸ್‌ ಬಗ್ಗೆ ಚರ್ಚೆ!ಅಧ್ಯಯನ ಆಧಾರ: ಈಗ ಉತ್ತಮ ರಕ್ಷಣೆಗಾಗಿ ಕೋವಿಡ್‌ ಲಸಿಕೆಯ 3 ನೇ ಡೋಸ್‌ ಬಗ್ಗೆ ಚರ್ಚೆ!

 ಅಧ್ಯಯನ ಹೇಳುವುದು ಏನು?

ಅಧ್ಯಯನ ಹೇಳುವುದು ಏನು?

ಇನ್ನು ಕೊರೊನಾ ವೈರಸ್‌ ಸೋಂಕು ತಗುಲಿ ಸೋಂಕಿನಿಂದ ಗುಣಮುಖರಾದ ಬಳಿಕವೂ ಕನಿಷ್ಠ ಒಂದು ಕೊರೊನಾ ವೈರಸ್‌ ಲಕ್ಷಣವನ್ನಾದರೂ ಹೊಂದಿರುವ ಜನರ ಪೈಕಿ ಸುಮಾರು ಶೇಕಡ 68 ಮಂದಿಯಲ್ಲಿ ಮಾತ್ರ ಆರು ತಿಂಗಳ ಬಳಿಕವೂ ಕೊರೊನಾ ವೈರಸ್‌ನ ಯಾವುದಾದರೂ ಒಂದು ಲಕ್ಷಣಗಳು ಇದ್ದವು. ಹನ್ನೆರಡು ತಿಂಗಳುಗಳ ಬಳಿಕ ಈ ದೀರ್ಘಾವಧಿ ಕೊರೊನಾ ವೈರಸ್‌ ಸೋಂಕು ಲಕ್ಷಣವನ್ನು ಹೊಂದಿರುವವರ ಸಂಖ್ಯೆಯು ಶೇಕಡ 49 ಕ್ಕೆ ಇಳಿಕೆ ಕಂಡಿದೆ. ಆದರೆ ಈ ಪೈಕಿ ಉಸಿರಾಟದ ಸಮಸ್ಯೆಯು ಆರು ತಿಂಗಳಿನಲ್ಲಿ ಶೇಕಡ 26 ರಷ್ಟು ಕೊರೊನಾ ವೈರಸ್‌ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಕಂಡು ಬಂದಿದ್ದರೆ, ಹನ್ನೆರಡು ತಿಂಗಳು ಆಗುತ್ತಿದ್ದಂತೆ ಈ ಸಂಖ್ಯೆಯು ಶೇಕಡ 30 ಕ್ಕೆ ಏರಿಕೆಯಾಗಿದೆ. ಅಂದರೆ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡ ದೀರ್ಘ ಅವಧಿಯವರೆಗೂ ಉಸಿರಾಟದ ಸಮಸ್ಯೆ ಇರುತ್ತದೆ. ಹಾಗೆಯೇ ಸೋಂಕಿನಿಂದ ಗುಣಮುಖರಾದ ಆರು ತಿಂಗಳ ಬಳಿಕ ಉಸಿರಾಟ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಅಧಿಕ ಆಗುತ್ತಿದೆ.

'3 ನೇ ಕೋವಿಡ್‌ ಅಲೆ ಜು. 4 ರಂದೇ ಅಪ್ಪಳಿಸಿದೆ' ಎಂದ ಹೈದರಾಬಾದ್‌ನ ಭೌತವಿಜ್ಞಾನಿ'3 ನೇ ಕೋವಿಡ್‌ ಅಲೆ ಜು. 4 ರಂದೇ ಅಪ್ಪಳಿಸಿದೆ' ಎಂದ ಹೈದರಾಬಾದ್‌ನ ಭೌತವಿಜ್ಞಾನಿ

 ಮಹಿಳೆಯರಿಗೆ ಅಧಿಕ ಆಯಾಸ, ಮಾನಸಿಕ ಸಮಸ್ಯೆ

ಮಹಿಳೆಯರಿಗೆ ಅಧಿಕ ಆಯಾಸ, ಮಾನಸಿಕ ಸಮಸ್ಯೆ

ಇನ್ನು ದೀರ್ಘಾವಧಿ ಕೊರೊನಾ ವೈರಸ್‌ ಸೋಂಕು ಲಕ್ಷಣಗಳು ಪುರುಷರಿಗಿಂತ ಅಧಿಕ ಮಹಿಳೆಯರಲ್ಲಿ ಕಂಡು ಬಂದಿದೆ ಎಂದು ಅಧ್ಯಯನವು ಹೇಳುತ್ತದೆ. ಈ ಧೀರ್ಘಾವಧಿ ಕೋವಿಡ್‌ ಸೋಂಕು ಬಗ್ಗೆ ಮಾಡಲಾದ ಅಧ್ಯಯನದಲ್ಲಿ ಸುಮಾರು 43 ಶೇಕಡದಷ್ಟು ಮಹಿಳೆಯರಿಗೆ ಆಯಾಸ ಹಾಗೂ ಸ್ನಾಯು ದೌರ್ಬಲ್ಯ ಕಂಡು ಬಂದಿದೆ ಎಂದು ವರದಿ ಹೇಳುತ್ತದೆ. ಇನ್ನು ಅದರಲ್ಲೂ ಅಧಿಕ ಮಹಿಳೆಯರು ಆತಂಕ ಅಥವಾ ಖಿನ್ನತೆಗೆ ಒಳಗಾಗಿ ಅದಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಸುಮಾರು ಶೇಕಡ 88 ರಷ್ಟು ಜನರು ತಮ್ಮ ಎಲ್ಲಾ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದು ಸುಮಾರು ಒಂದು ವರ್ಷದ ಬಳಿಕ ಕೆಲಸ ಮಾಡುವುದನ್ನು ಆರಂಭ ಮಾಡಿದ್ದಾರೆ ಎಂದು ಕೂಡಾ ಅಧ್ಯಯನವು ಹೇಳುತ್ತದೆ.

ಇನ್ನು ಈ ಹಿಂದಿನ ಸಂಶೋಧನೆಯು ಕೋವಿಡ್‌ನಿಂದ ಬಳಲುತ್ತಿರುವ ಆರೋಗ್ಯ ಕಾರ್ಯಕರ್ತರು ಮತ್ತು ರೋಗಿಗಳಿಗೆ ದೀರ್ಘಾವಧಿಯ ಬೆಂಬಲವನ್ನು ಆಯಾ ದೇಶದ ಅಧಿಕಾರಿಗಳು ನೀಡಬೇಕು ಎಂದು ಹೇಳಿರುವುದನ್ನು ಈ ಅಧ್ಯಯನವು ಉಲ್ಲೇಖ ಮಾಡಿದೆ. "ದೀರ್ಘಾವಧಿಯ ಕೋವಿಡ್‌ ಪ್ರಸ್ತುತ ವೈದ್ಯಕೀಯ ವ್ಯವಸ್ಥೆಗೆ ಒಂದು ಸವಾಲು" ಎಂದು ಲ್ಯಾನ್ಸೆಟ್‌ ಸಂಪಾದಿಕೀಯ ಹೇಳುತ್ತದೆ. ಪ್ರಸ್ತುತ ಕೊರೊನಾ ವೈರಸ್‌ ಸೋಂಕಿತರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅಧಿಕ ಅಧ್ಯಯನ ಅತ್ಯಗತ್ಯ ಎಂದು ಲ್ಯಾನ್ಸೆಟ್‌ ಹೇಳುತ್ತದೆ.

(ಒನ್‌ ಇಂಡಿಯಾ ಸುದ್ದಿ)

English summary
Study finds Fatigue, Shortness Of Breath May Affect Covid Patients For A Year. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X