ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂಡಮಾರುತ ಬರುವ ಮುನ್ನ, ಬಂದ ಮೇಲೆ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಏನು?

|
Google Oneindia Kannada News

ಯಾರಾದರೂ ತಮ್ಮ ಬದುಕಿನಲ್ಲಿ ಆದ ಅನಾಹುತವನ್ನು ವಿವರಿಸುವಾಗ ಕಷ್ಟಗಳು 'ಚಂಡಮಾರುತ'ದಂತೆ ಬಂದೆರಗಿದವು ಎಂಬ ಹೋಲಿಕೆ ನೀಡುತ್ತಾರೆ. ಏಕೆಂದರೆ ಅನಾಹುತಕ್ಕೆ ರೂಪಕವಾಗಿ ನೀಡಬಲ್ಲಂಥದ್ದು ಚಂಡಮಾರುತ. ಇದೀಗ 'ಫಾನಿ' ಎಂಬ ಚಂಡಮಾರುತ ಬಂದಿದೆ. ಅದು ಏನೆಲ್ಲ ಅನಾಹುತ ಮಾಡಬಹುದೋ ಎಂಬ ಆತಂಕವಂತೂ ಇದ್ದೇ ಇದೆ. ಮೊದಲಿಗೆ ತಮಿಳುನಾಡು, ಕೇರಳ, ಕರ್ನಾಟಕ, ಒಡಿಶಾದಲ್ಲಿ ಎಚ್ಚರಿಕೆಯನ್ನು ನೀಡಲಾಯಿತು.

ಆ ನಂತರ ಹೆಚ್ಚಿನ ಅನಾಹುತ ಒಡಿಶಾದಲ್ಲಿ ಆಗಬಹುದು ಎನ್ನಲಾಯಿತು. ಆದರೂ ಸೋಮವಾರದಂದು ಕರ್ನಾಟಕ ಹಾಗೂ ತಮಿಳುನಾಡು ಗಡಿಯ ಚಾಮರಾಜನಗರ ಜಿಲ್ಲೆಯ ಬಂಡೀಪುರ ಭಾಗದಲ್ಲಿ ಭಾರೀ ಮಳೆ ಆಗಿದೆ. ಅದು 'ಫಾನಿ' ಚಂಡಮಾರುತದ ಎಫೆಕ್ಟ್ ಎನ್ನಲಾಗುತ್ತಿದೆ. ತಮಿಳುನಾಡಿನಲ್ಲಿ ಬೀಸಿದ ಚಂಡಮಾರುತ ಕರ್ನಾಟಕದ ಕೆಲ ಭಾಗದಲ್ಲೂ ಪ್ರಭಾವ ಬೀರಿದೆ.

ಫ್ಯಾನಿ ಸೈಕ್ಲೋನ್ ಕೆಲವೇ ಗಂಟೆಗಳಲ್ಲಿ ಒಡಿಶಾಕ್ಕೆ ಲಗ್ಗೆ: 10 ಅಂಶಗಳುಫ್ಯಾನಿ ಸೈಕ್ಲೋನ್ ಕೆಲವೇ ಗಂಟೆಗಳಲ್ಲಿ ಒಡಿಶಾಕ್ಕೆ ಲಗ್ಗೆ: 10 ಅಂಶಗಳು

ಹೌದು, ಚಂಡಮಾರುತದ ಮುನ್ಸೂಚನೆ ಅಂತ ನೀಡುತ್ತಾರಲ್ಲಾ, ಆಗ ಏನು ಮಾಡಬೇಕು? ಚಂಡಮಾರುತ ಅಪ್ಪಳಿಸುವ ಮುನ್ನ, ಅಪ್ಪಳಿಸುವಾಗ ಹಾಗೂ ತನ್ನ ಅಬ್ಬರ ಮುಗಿಸಿ, ಒಂದು ಹಂತಕ್ಕೆ ಶಾಂತವಾದ ನಂತರ ನಾವು ಏನು ಮಾಡಬೇಕು ಎಂಬುದನ್ನು ರಾಷ್ತ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತುಂಬ ಚೆನ್ನಾಗಿ ವಿವರಿಸಿದೆ. ಇಲ್ಲಿದೆ ಆ ವಿವರಣೆ.

ಚಂಡಮಾರುತಕ್ಕೂ ಮುನ್ನ ಏನು ಮಾಡಬೇಕು?

ಚಂಡಮಾರುತಕ್ಕೂ ಮುನ್ನ ಏನು ಮಾಡಬೇಕು?

* ಯಾವುದಕ್ಕೂ ಹೆದರದೆ, ವದಂತಿಗಳಿಗೆ ಕಿವಿಗೊಡದೆ, ಸಮಾಧಾನ ಚಿತ್ತರಾಗಿರಬೇಕು.

* ಮೊಬೈಲ್ ಫೋನ್ ಗಳಲ್ಲಿ ಪೂರ್ತಿ ಚಾರ್ಜ್ ಇರುವಂತೆ ನೋಡಿಕೊಳ್ಳಬೇಕು.

* ರೇಡಿಯೋ ಮತ್ತು ಟೀವಿಗಳಲ್ಲಿ ನೀಡುವ ಮಾಹಿತಿ ಮೂಲಕ ತಕ್ಷಣದ ಪರಿಸ್ಥಿತಿ ಏನು ಎಂಬ ಬಗ್ಗೆ ತಿಳಿದುಕೊಳ್ಳಿ.

* ಪ್ರಥಮ ಚಿಕಿತ್ಸೆ ನೀಡುವ ಕಿಟ್ ವೊಂದು ಸಿದ್ಧವಾಗಿರಲಿ.

* ಮುಖ್ಯವಾದ ದಾಖಲಾತಿಗಳನ್ನು ವಾಟರ್ ಪ್ರೂಫ್ ಪೆಟ್ಟಿಗೆಗಳಲ್ಲಿ ಇಡಿ.

* ನಿಮ್ಮ ಮನೆಯ ಸುರಕ್ಷತೆಗೆ ಕ್ರಮ ಕೈಗೊಳ್ಳಿ.

* ಯಾವುದೇ ಚೂಪಾದ ವಸ್ತುವನ್ನು ಸಡಿಲ ಆಗಿರದಂತೆ ಎಚ್ಚರ ವಹಿಸಿ.

* ಮನೆಯಲ್ಲಿರುವ ಪ್ರಾಣಿಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಿ

ಚಂಡಮಾರುತ ಅಪ್ಪಳಿಸಿದಾಗ

ಚಂಡಮಾರುತ ಅಪ್ಪಳಿಸಿದಾಗ

* ವಿದ್ಯುತ್ ಸಂಪರ್ಕ ಒದಗಿಸುವ ಮುಖ್ಯ ಸ್ವಿಚ್ ಆಫ್ ಮಾಡಿ. ಅಡುಗೆ ಅನಿಲ ಸರಬರಾಜು ನಿಲ್ಲಿಸಿ.

* ಬಾಗಿಲು ಹಾಗೂ ಕಿಟಕಿಯನ್ನು ಮುಚ್ಚಿ.

* ನಿಮ್ಮ ಮನೆ ಸುರಕ್ಷಿತವಲ್ಲ ಅಂತಾದರೆ ಚಂಡಮಾರುತ ತೀವ್ರವಾಗುವ ಮುನ್ನ ಸುರಕ್ಷಿತ ಸ್ಥಳ ತಲುಪಿ

* ರೇಡಿಯೋ ಅಥವಾ ಟ್ರಾನ್ಸಿಸ್ಟರ್ ಮೂಲಕ ಸನ್ನಿವೇಶದ ಮಾಹಿತಿ ಪಡೆಯಿರಿ.

* ಬಿಸಿಯಾದ ನೀರನ್ನೇ ಕುಡಿಯಿರಿ.

* ಅಧಿಕೃತ ಎಚ್ಚರಿಕೆಗಳ ಮೇಲೆ ಮಾತ್ರ ನಂಬಿಕೆ ಇಡಿ.

24 ಗಂಟೆಗಳಲ್ಲಿ ಹೆಚ್ಚಲಿದೆ ಫ್ಯಾನಿ ಅಬ್ಬರ, ಒಡಿಶಾದಲ್ಲಿ ಹೈ ಅಲರ್ಟ್24 ಗಂಟೆಗಳಲ್ಲಿ ಹೆಚ್ಚಲಿದೆ ಫ್ಯಾನಿ ಅಬ್ಬರ, ಒಡಿಶಾದಲ್ಲಿ ಹೈ ಅಲರ್ಟ್

ಚಂಡಮಾರುತದ ನಂತರ

ಚಂಡಮಾರುತದ ನಂತರ

* ಹಾನಿಗೀಡಾದ ಕಟ್ಟಡದೊಳಗೆ ಪ್ರವೇಶಿಸಬೇಡಿ.

* ಮುರಿದ ವಿದ್ಯುತ್ ಕಂಬ, ತಂತಿ ಹಾಗೂ ಇತರ ಚೂಪಾದ ವಸ್ತುಗಳ ಬಗ್ಗೆ ಎಚ್ಚರಿಕೆ ಇರಲಿ.

* ಎಷ್ಟು ಸಾಧ್ಯವೋ ಅಷ್ಟು ಬೇಗ ಸುರಕ್ಷಿತ ಸೂರು ತಲುಪಿಕೊಳ್ಳಿ.

ಮೀನುಗಾರರು ಎಚ್ಚರಿಕೆ ವಹಿಸಬೇಕಾದ ವಿಚಾರ

ಮೀನುಗಾರರು ಎಚ್ಚರಿಕೆ ವಹಿಸಬೇಕಾದ ವಿಚಾರ

* ರೇಡಿಯೋ ಸೆಟ್ ವೊಂದನ್ನು ಜತೆಯಲ್ಲಿ ಇರಿಸಿಕೊಂಡಿರಬೇಕು, ಅದಕ್ಕೆ ಹೆಚ್ಚುವರಿ ಬ್ಯಾಟರಿ ಸಿದ್ಧಪಡಿಸಿಕೊಂಡಿರಬೇಕು.

* ಸುರಕ್ಷಿತ ಸ್ಥಳದಲ್ಲಿ ದೋಣಿಯ ಲಂಗರು ಹಾಕಿರಬೇಕು.

* ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು.

ಫಾನಿ ಚಂಡಮಾರುತದ ಪ್ರಭಾವದಿಂದ ಗುಂಡ್ಲುಪೇಟೆ ಸುತ್ತ ಭಾರೀ ಮಳೆಫಾನಿ ಚಂಡಮಾರುತದ ಪ್ರಭಾವದಿಂದ ಗುಂಡ್ಲುಪೇಟೆ ಸುತ್ತ ಭಾರೀ ಮಳೆ

English summary
Here is the useful information on how to prepare for cyclone. Fany cyclone arrived. On the backdrop of that, here is the information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X