ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಘಮಗುಡುವ "ಮೈಸೂರು ಮಲ್ಲಿಗೆ"ಗೆ ಫೇಮಸ್ ದೇವರಾಜ ಮಾರುಕಟ್ಟೆಯ ಈ ಮಳಿಗೆ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 19; ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡುವ ಲಕ್ಷಾಂತರ ಪ್ರವಾಸಿಗರಾರೂ ಪ್ರಸಿದ್ಧ ಮೈಸೂರು ಮತ್ತು ಮಂಡ್ಯದ ಮಲ್ಲಿಗೆಯ ಸುವಾಸನೆಯನ್ನು ಮಿಸ್‌ ಮಾಡಿಕೊಳ್ಳುವುದಿಲ್ಲ. ಮೈಸೂರಿನ ಸುತ್ತ ಮುತ್ತ ಮತ್ತು ಮಂಡ್ಯದ ಶ್ರೀರಂಗ ಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಮಲ್ಲಿಗೆ ಹೂವು ಮೈಸೂರು ಮಲ್ಲಿಗೆ ಎಂದೇ ಪ್ರಸಿದ್ಧಿ ಪಡೆದಿದ್ದು ಸುವಾಸನೆಯಿಂದಾಗಿ.

ರಾಜ್ಯದಲ್ಲಿ ಹಡಗಲಿ ಮಲ್ಲಿಗೆ ಮತ್ತು ಉಡುಪಿ ಮಲ್ಲಿಗೆ ಹೂವುಗಳಿಗೆ ಒಂದಷ್ಟು ಹೆಸರು ಇದೆಯಾದರೂ ಮೈಸೂರು ಮಲ್ಲಿಗೆಯ ಸುಮಧುರ ಕಂಪು ಇವುಗಳಿಗೆ ಇಲ್ಲ.

ಮೈಸೂರಿನ 18 ವೈಶಿಷ್ಟ್ಯಕ್ಕೆ ಸಿಗಲಿದೆ ಅಂತರಾಷ್ಟ್ರೀಯ ಮಟ್ಟದ ಹೆಗ್ಗುರುತುಮೈಸೂರಿನ 18 ವೈಶಿಷ್ಟ್ಯಕ್ಕೆ ಸಿಗಲಿದೆ ಅಂತರಾಷ್ಟ್ರೀಯ ಮಟ್ಟದ ಹೆಗ್ಗುರುತು

ಮೈಸೂರು ಮಲ್ಲಿಗೆ ರಾಜ ಮಹಾರಾಜರ ಕಾಲದಿಂದಲೂ ಪಾರಂಪರಿಕ ಹೂವೇ ಆಗಿದೆ. ಅರಮನೆಗೆ ನಿತ್ಯ ಪೂಜೆಗೆ, ನಾಡದೇವಿ ಚಾಮುಂಡೇಶ್ವರಿ ದೇವಾಲಯಕ್ಕೆ ನಿತ್ಯ ಮಲ್ಲಿಗೆ ಹೂವು ಬೇಕೇ ಬೇಕು. ಈ ಹೂವಿನ, ಹೂವಿನ ಇತಿಹಾಸದ ಬಗ್ಗೆ, ಈ ಹೂವು ಮೈಸೂರಿನಲ್ಲಿ ಎಲ್ಲೆಲ್ಲಿ ಸಿಗಬಹುದು ಎಂಬುದರ ಕುರಿತು ಇಲ್ಲಿದೆ ಒಂದು ನೋಟ...

ಮಲ್ಲಿಗೆಗೆ ಫೇಮಸ್ ಈ ಸ್ಟಾಲ್

ಮಲ್ಲಿಗೆಗೆ ಫೇಮಸ್ ಈ ಸ್ಟಾಲ್

ದೇವರಾಜ ಮಾರುಕಟ್ಟೆಯ ಹೂವಿನ ಮಂಡಿಯಲ್ಲೇ ಹೆಚ್ಚಾಗಿ ತಾಜಾ ಮಲ್ಲಿಗೆ ಹೂವುಗಳು ಸಿಗುತ್ತವೆ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಹೂ ಮತ್ತು ಹಣ್ಣು ಖರೀದಿಸುವುದು ವಾಡಿಕೆ ಆಗಿದೆ. ಇಲ್ಲಿಗೆ ಬರುತ್ತಿದ್ದಂತೆ ಈ ಹೂವಿನ ಸುವಾಸನೆಯೇ ನಿಮ್ಮನ್ನು ಸ್ವಾಗತಿಸುತ್ತದೆ. ಇಲ್ಲಿ ಮೈಸೂರು ಮಲ್ಲಿಗೆಗೆ ಫೇಮಸ್‌ ಅಗಿರುವ ಅಂಗಡಿ ಗಾಯತ್ರಿ ಫ್ಲವರ್ ಸ್ಟಾಲ್.

70 ವರ್ಷಗಳ ಹಿಂದಿನ ಸ್ಟಾಲ್

70 ವರ್ಷಗಳ ಹಿಂದಿನ ಸ್ಟಾಲ್

ಈ ಗಾಯತ್ರಿ ಫ್ಲವರ್ ಸ್ಟಾಲ್ ಮಾಲೀಕ ನಾರಾಯಣಪ್ಪ ಅವರು. ಇವರ ತಂದೆ ಮರಿಯಪ್ಪ ಅವರಿಂದ 70 ವರ್ಷಗಳ ಹಿಂದೆ ಚಾಲನೆಗೊಂಡ ಅಂಗಡಿಯಲ್ಲಿ ಈಗ ಮೊಮ್ಮಕ್ಕಳು ವ್ಯಾಪಾರ ಮಾಡುತ್ತಿದ್ದಾರೆ. ನಾರಾಯಣಪ್ಪ ಅವರಿಗೆ ಏಳು ಜನ ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳು. ಏಳು ಜನ ಮಕ್ಕಳು ಈಗಲೂ ದೇವರಾಜ ಮಾರುಕಟ್ಟೆಯಲ್ಲಿ ಪ್ರತ್ಯೇಕ ಅಂಗಡಿಗಳನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ ಐದು ಅಂಗಡಿಗಳಿಗೆ ಗಾಯತ್ರಿ ಫ್ಲವರ್ ಸ್ಟಾಲ್ ಹೆಸರೇ ಇದೆ. ಇನ್ನೆರಡು ಅಂಗಡಿಗಳಿಗೆ ಅನ್ನಪೂರ್ಣ ಫ್ಲವರ್ ಸ್ಟಾಲ್ ಹೆಸರು ಇಟ್ಟಿದ್ದಾರೆ.

ನೇಪಥ್ಯಕ್ಕೆ ಸರಿದ ಹೆಂಗಳೆಯರ ನೆಚ್ಚಿನ 'ಮೈಸೂರು ಮಲ್ಲಿಗೆ'ನೇಪಥ್ಯಕ್ಕೆ ಸರಿದ ಹೆಂಗಳೆಯರ ನೆಚ್ಚಿನ 'ಮೈಸೂರು ಮಲ್ಲಿಗೆ'

ನಿತ್ಯವೂ 2 ಟನ್ ಹೂವು ಮಾರಾಟ

ನಿತ್ಯವೂ 2 ಟನ್ ಹೂವು ಮಾರಾಟ

ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ನಾರಾಯಣಪ್ಪ ಅವರ ಮಗ ಶ್ರೀನಿವಾಸ್‌, "ನಮ್ಮ ತಾತ ಮರಿಯಪ್ಪ ಅವರೇ ಮಲ್ಲಿಗೆ ಹೂವನ್ನು ಬೆಳೆದು ತಮ್ಮ ಅಂಗಡಿಯಲ್ಲೇ ಮಾರಾಟ ಮಾಡುತ್ತಿದ್ದರು. ಈಗಿನ ತಿಬ್ಬಾ ದೇವಿ ಥಿಯೇಟರ್‌ ಪಕ್ಕದಲ್ಲೇ ನಮ್ಮದು ಎಂಟು ಎಕರೆ ಭೂಮಿ ಇದ್ದು ಮಲ್ಲಿಗೆ ಬೆಳೆಯಲಾಗುತಿತ್ತು. ನಂತರ ಸರ್ಕಾರ ಅದನ್ನು 1972-73ರಲ್ಲಿ ವಶಪಡಿಸಿಕೊಂಡಿತು" ಎಂದರು. ನಿತ್ಯವೂ ಸುಮಾರು 2 ಟನ್‌ ಗಳಷ್ಟು ಹೂವುಗಳನ್ನು ಮಾರಾಟ ಮಾಡುವ ಇವರು ಹೋಲ್‌ ಸೇಲ್ ಮತ್ತು ಚಿಲ್ಲರೆ ವ್ಯಾಪಾರವನ್ನೂ ಮಾಡುತ್ತಿದ್ದಾರೆ.

ನೀವೂ ಭೇಟಿ ನೀಡಿ

ನೀವೂ ಭೇಟಿ ನೀಡಿ

ನಿತ್ಯವೂ ಬೆಳಿಗ್ಗೆ ಮಲ್ಲಿಗೆ, ಕನಕಾಂಬರ, ಕಾಕಡ ಹೂವುಗಳನ್ನು ಮಡಿಕೇರಿ, ವೀರಾಜಪೇಟೆ, ಚಾಮರಾಜನಗರ, ಹಾಸನ, ಚನ್ನರಾಯಪಟ್ಟಣದ ಹೂವಿನ ವ್ಯಾಪಾರಿಗಳಿಗೆ ಬಸ್‌ ನಲ್ಲಿ ಕಳಿಸಿಕೊಡುತಿದ್ದೇವೆ ಎಂದು ಹೇಳಿದರು. ಈಗ ಮೈಸೂರು ಸುತ್ತ ಮುತ್ತ ಮಲ್ಲಿಗೆ ಹೂವಿನ ಉತ್ಪಾದನೆ ಕಡಿಮೆ ಆಗಿದ್ದು, ತಮಿಳುನಾಡಿನ ಮಧುರೈ ಮತ್ತು ಸೇಲಂನಿಂದ ಹೆಚ್ಚಾಗಿ ಮಲ್ಲಿಗೆ ಹೂವು ಬರುತ್ತಿದೆ ಎಂದು ಅವರು ಹೇಳಿದರು.

ಹಾಗಿದ್ದರೆ ನೀವೂ ಮೈಸೂರಿಗೆ ಹೋದರೆ, ಮೈಸೂರಿನ ಈ ಫೇಮಸ್ ಮಲ್ಲಿಗೆ ಕೊಳ್ಳಲು ಈ ಮಳಿಗೆಗೆ ಒಮ್ಮೆ ಭೇಟಿ ನೀಡಿ...

English summary
One of the speciality of mysuru is Mysuru Mallige. Jasmine grown around mysuru and mandya famous for its fragrance. Here is a detail on where you can get this mysuru mallige in mysuru...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X