ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೀ ಸ್ಟಾಲ್ ಹೋಗಿ, ಫುಡ್ ಟ್ರಕ್ ಬಂತು!: ಚಾಯ್ ವಾಲಿಯ ರೋಚಕ ಕಥನ

|
Google Oneindia Kannada News

ಪಾಟ್ನಾ, ಮೇ 9: ಬಿಹಾರದಲ್ಲಿ ಪದವೀಧರ ಚಾಯ್ ವಾಲಿ ಎಂದೇ ಫೇಮಸ್ ಆಗಿದ್ದ ಪ್ರಿಯಾಂಕಾ ಗುಪ್ತಾ ಬಗ್ಗೆ ನಿಮಗೆಲ್ಲ ತಿಳಿದೇ ಇರುತ್ತದೆ. ನಮಗೆ ಅವರ ಬಗ್ಗೆ ಗೊತ್ತಿಲ್ಲ ಎನ್ನುವವರಿದ್ದರೆ ಈ ಸ್ಟೋರಿಯಲ್ಲಿ ಓದಿ ತಿಳಿಯಿರಿ.

2019ರಲ್ಲೇ ಅರ್ಥಶಾಸ್ತ್ರ ವಿಭಾಗದಲ್ಲಿ ಪದವಿ ಮುಗಿಸಿದ ಪ್ರಿಯಾಂಕಾ ಗುಪ್ತಾ ಎರಡು ವರ್ಷಗಳ ಕಾಲ ಉದ್ಯೋಗವನ್ನು ಹುಡುಕಿದರೂ ಯಾವುದೇ ಉದ್ಯೋಗ ಸಿಕ್ಕಿರಲಿಲ್ಲ. ಇದರಿಂದ ನೊಂದುಕೊಳ್ಳದೇ ಸ್ಪೂರ್ತಿ ಪಡೆದುಕೊಂಡ ಪ್ರಿಯಾಂಕಾ ಗುಪ್ತಾ ಈಗ ಇತರರಿಗೂ ಮಾದರಿ ಎನಿಸಿದ್ದಾರೆ. ಅಸಲಿಗೆ ಅವರು ಮಾಡಿದ್ದು ಇಷ್ಟೇ.

ಪದವಿ ಓದಿದ್ದರೂ ಟೀ ಸ್ಟಾಲ್ ಹಾಕಿದ 'ಗ್ರ್ಯಾಜುಯೇಟ್ ಚಾಯ್ ವಾಲಿ'ಪದವಿ ಓದಿದ್ದರೂ ಟೀ ಸ್ಟಾಲ್ ಹಾಕಿದ 'ಗ್ರ್ಯಾಜುಯೇಟ್ ಚಾಯ್ ವಾಲಿ'

ಎಂಬಿಎ ವ್ಯಾಸಂಗ ಮಾಡಿದ ಪ್ರಫುಲ್ ಬಿಲ್ಲೋರ್ ಅಂಥವರೇ ಚಾಯ್ ವಾಲಾ ಆಗಿ ದುಡಿಯುತ್ತಿರುವಾಗ ನಾನೇಕೆ ಇಂಥದೊಂದು ಪ್ರಯತ್ನ ಮಾಡಬಾರದು ಎಂದುಕೊಂಡರು. ಆಗ ಶುರುವಾಗಿದ್ದೇ ಬಿಹಾರದ ಪದವೀಧರೆ "ಚಾಯ್ ವಾಲಿ"ಯ ಟೀ ಸ್ಟಾಲ್. ಪ್ರಿಯಾಂಕಾ ಗುಪ್ತಾ ಟೀ ಸ್ಟಾಲ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಆಗಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಸೌಂಡ್ ಮಾಡಿದ್ದ ಪ್ರಿಯಾಂಕಾ ಗುಪ್ತಾ ಚಾಯ್ ಸ್ಟಾಲ್ ಅನ್ನು ಈಗ ಮುಚ್ಚಲಾಗುತ್ತಿದೆ. ಅದೇಕಪ್ಪಾ ಎನ್ನುವ ಪ್ರಶ್ನೆಗೆ ಉತ್ತರ ಮುಂದಿದೆ ಓದಿ.

ಚಾಯ್ ವಾಲಿ ಸ್ಟಾಲ್ ನಲ್ಲಿ ರುಚಿಕರ ಚಾಯ್

ಚಾಯ್ ವಾಲಿ ಸ್ಟಾಲ್ ನಲ್ಲಿ ರುಚಿಕರ ಚಾಯ್

ಮೊದಲಿಗೆ ಟೀ ಸ್ಟಾಲ್ ಆರಂಭಿಸಿದ್ದ ಪ್ರಿಯಾಂಕಾ ಗುಪ್ತಾ, ವಿಭಿನ್ನ ಹಾಗೂ ರುಚಿಕರ ಚಾಯ್ ಅನ್ನು ತಯಾರಿಸುವುದಕ್ಕಾಗಿಯೇ ಕೆಲವು ಕಾರ್ಮಿಕರನ್ನು ನೇಮಿಸಿಕೊಂಡಿದ್ದರು. ಕುಲ್ಹಾದ್ ಚಾಯ್ ನಿಂದ ಹಿಡಿದು ಪಾನ್ ಚಾಯ್ ವರೆಗೂ ವೆರೈಟಿ ಆಫ್ ಚಾಯ್ ಅನ್ನು ಮಾಡಲಾಗುತ್ತಿತ್ತು. 10 ರಿಂದ 20 ರೂಪಾಯಿಗೆ ಸಿಗುವ ಚಾಯ್ ಜೊತೆಗೆ ಸ್ನ್ಯಾಕ್ಸ್ ಅನ್ನು ಸವಿಯಲು ಜನರು ಸಾಲುಗಟ್ಟಿ ನಿಲ್ಲುತ್ತಿದ್ದರು.

ಚಾಯ್ ವಾಲಿ ನೆರವಿಗೆ ನಿಂತ ವ್ಯಕ್ತಿ

ಚಾಯ್ ವಾಲಿ ನೆರವಿಗೆ ನಿಂತ ವ್ಯಕ್ತಿ

ಪದವೀಧರೆ ಆಗಿದ್ದರೂ ಟೀ ಸ್ಟಾಲ್ ಇಟ್ಟುಕೊಳ್ಳುವ ಮೂಲಕ ದೇಶಾದ್ಯಂತ ಸುದ್ದಿಯಾದ ಪ್ರಿಯಾಂಕಾ ಗುಪ್ತಾಗೆ ಹಲವರು ನೆರವಿನ ಹಸ್ತ ಚಾಚಿದರು. ಟೀ ಸ್ಟಾಲ್ ಶುರು ಮಾಡಿದ್ದ ಪ್ರಿಯಾಂಕಾ ಗುಪ್ತಾ ಈಗ ಅದನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿರುವ ಅವರು ಈಗ, ಟೀ ಸ್ಟಾಲ್ ಬದಲಿಗೆ ಫುಡ್ ಟ್ರಕ್ ನಡೆಸುವುದಕ್ಕೆ ತೀರ್ಮಾನಿಸಿದ್ದಾರೆ.

ಚಾಯ್ ವಾಲಿಗೆ 'ಷರತ್ತುಬದ್ಧ' ಫುಡ್ ಟ್ರಕ್ ಉಡುಗೊರೆ

ಚಾಯ್ ವಾಲಿಗೆ 'ಷರತ್ತುಬದ್ಧ' ಫುಡ್ ಟ್ರಕ್ ಉಡುಗೊರೆ

ಟೀ ಸ್ಟಾಲ್ ಇಟ್ಟುಕೊಂಡಿದ್ದ ಪ್ರಿಯಾಂಕಾ ಗುಪ್ತಾರಿಗೆ ವ್ಯಕ್ತಿಯೊಬ್ಬರು ಫುಡ್ ಟ್ರಕ್ ಅನ್ನು ಉಡುಗೊರೆಯಾಗಿ ನೀಡಲು ಮುಂದಾದರು. ಈ ಉಡುಗೊರೆಯನ್ನು ಒಪ್ಪಿಕೊಂಡ ಪ್ರಿಯಾಂಕಾ ಒಂದು ಷರತ್ತು ಹಾಕಿದರು. ಅದು ಏನೆಂದರೆ ಈಗ ತಾವು ಪಡೆದುಕೊಳ್ಳುವ ಫುಡ್ ಟ್ರಕ್ಕಿಗೆ ಹಂತ ಹಂತವಾಗಿ ಹಣವನ್ನು ನೀಡುವುದಾಗಿ ಹೇಳಿದರು. ಈ ಷರತ್ತಿಗೆ ಒಪ್ಪಿಕೊಂಡ ನಂತರವೇ ಫುಡ್ ಟ್ರಕ್ ಅನ್ನು ಪಡೆದುಕೊಳ್ಳಲು ಅವರು ನಿರ್ಧರಿಸಿದರು.

ಕನಸು ನನಸಾಗುವ ದಿನಗಳು ದೂರವಿಲ್ಲ

ಕನಸು ನನಸಾಗುವ ದಿನಗಳು ದೂರವಿಲ್ಲ

ಉದ್ಯೋಗವಿಲ್ಲದೇ ಕೊರಗುವುದಕ್ಕಿಂತ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕು ಎನ್ನುವ ಆಶಾವಾದದಲ್ಲಿ ಶುರುವಾಗಿದ್ದ ಪ್ರಿಯಾಂಕಾ ಗುಪ್ತಾ ಚಾಯ್ ಸ್ಟಾಲ್ ಈಗ ಫುಡ್ ಟ್ರಕ್ ಆಗಿ ಬೆಳವಣಿಗೆ ಆಗಿದೆ. ಪ್ರಿಯಾಂಕಾ ಗುಪ್ತಾರ ಫುಡ್ ಟ್ರಕ್ ರಸ್ತೆಗಿಳಿಯುವ ದಿನಗಳು ಇನ್ನೇನು ದೂರವಿಲ್ಲ. ಅಂದುಕೊಂಡಂತೆ ತಮ್ಮದೇ ಉದ್ಯೋಗವನ್ನು ಆರಂಭಿಸಿರುವ ಪದವೀಧರೆ ಈಗ ಉದ್ಯೋಗವಿಲ್ಲದೇ ಅಲೆಯುವ ನಿರುದ್ಯೋಗಿಗಳ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿ ಹೊರ ಹೊಮ್ಮಿದ್ದಾರೆ.

English summary
Priyanka Gupta, an economics graduate Famous 'Graduate Chaiwali' is Now Closing Tea Stall; now starting food truck that will let her widen her offerings. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X