• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಫಾಲ್ ಫ್ಯಾಶನ್': ಇದು ನಡಿಗೆ ಫ್ಯಾಶನ್ ಶೋ ಅಲ್ಲ ಬೀಳುವ ಫ್ಯಾಶನ್ ಶೋ..

|
Google Oneindia Kannada News

ಸಾಮಾನ್ಯವಾಗಿ ಫ್ಯಾಶನ್‌ ಶೋಗಳಲ್ಲಿ ವೈಯ್ಯಾರದ ನಡಿಗೆ ಬಹುಮುಖ್ಯವಾದದ್ದು. ತುಂಡುಡುಗೆಗಳನ್ನು ತೊಟ್ಟು ವೇದಿಕೆ ಮೇಲೆ ಬಳುಕುತ್ತಾ ಬರುವ ಮಾಡೆಲ್‌ಗಳನ್ನು ನೋಡುವುದೇ ಒಂದು ಥ್ರಿಲ್. ಇದರಲ್ಲಿ ಹಲವಾರು ಫ್ಯಾಶನ್ ಡಿಸೈನರ್‌ಗಳು ಹಲವಾರು ರೀತಿಯ ಉಡುಗೆಗಳನ್ನು ತಯಾರಿಸಿ ಅದಕ್ಕೆ ಬೇಕಾದ ರೀತಿಯಲ್ಲಿ ಮಾಡೆಲ್‌ಗಳನ್ನು ರೆಡಿ ಮಾಡಿ ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಾರೆ.

ಎಲ್ಲರ ಗಮನದಲ್ಲಿರುವ ವಿಚಾರ ಅಂದರೆ ವೇದಿಕೆಯಲ್ಲಿ ಬಗೆ ಬಗೆಯ ಉಡುಗೆ ತೊಟ್ಟು ಯುವಕ-ಯುವತಿಯರು ತಮ್ಮದೇ ಆದ ಶೈಲಿಯಲ್ಲಿ ನಡೆದುಕೊಂಡು ವೇದಿಕೆಗೆ ಬರುತ್ತಾರೆ. ಆದರೆ ಇಲ್ಲೊಂದು ಫ್ಯಾಶನ್ ಶೋನಲ್ಲಿ ಸ್ಪರ್ಧಿಗಳು ನಡೆಯುವುದಿಲ್ಲ. ಬದಲಿಗೆ ನಡೆಯುತ್ತಲೇ ಕೆಳಗೆ ಬೀಳುತ್ತಾರೆ. ಇದೆಂಥ ಫ್ಯಾಶನ್ ಶೋ ಅಂತ ನೀವು ಆಶ್ಚರ್ಯ ಪಡಬಹುದು. ಆದರಿದು ಸತ್ಯ.

ಮೆಕ್ಕೆಜೋಳದ ಬೆಳೆಗೆ ಫಾಲ್ ಸೈನಿಕ ಹುಳು ಕಾಟ; ನಿರ್ವಹಣೆ ಹೇಗೆ? ಮೆಕ್ಕೆಜೋಳದ ಬೆಳೆಗೆ ಫಾಲ್ ಸೈನಿಕ ಹುಳು ಕಾಟ; ನಿರ್ವಹಣೆ ಹೇಗೆ?

ಸಾಮಾನ್ಯವಾಗಿ ವೇದಿಕೆ ಮೇಲೆ ಆಯತಪ್ಪಿ, ಪಾದರಕ್ಷೆಗಳು ಜಾರಿ ಸ್ಪರ್ಧಿಗಳು ಕೆಳಗೆ ಬೀಳುವುದು ಕಾಮನ್. ಆದರೆ ಮಾಡೆಲ್‌ಗಳು ವಿಭಿನ್ನವಾಗಿ ಬೀಳುವುದೇ ಇಲ್ಲಿ ಫ್ಯಾಶನ್ ಶೋ ಆಗಿ ಮಾರ್ಪಡಿಸಲಾಗಿದೆ. ಈ ಫ್ಯಾಶನ್ ಶೋನಾ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಸೃಜನಾತ್ಮಕ ನಿರ್ದೇಶಕರಾದ ಬೀಟ್ ಕಾರ್ಲ್ಸನ್ ಅವರ ಚೊಚ್ಚಲ ಪ್ರದರ್ಶನ AVAVAV ನಲ್ಲಿ ಇಂಥಹದೊಂದು ಫ್ಯಾಶನ್ ಶೋ ನಡೆದಿದೆ. ಫ್ಯಾಷನ್ ಶೋನಲ್ಲಿ ಮಾಡೆಲ್‌ಗಳು ಉದ್ದೇಶಪೂರ್ವಕವಾಗಿ ರನ್‌ವೇ ಮೇಲೆ ಬೀಳುವುದು ಮತ್ತು ಮುಗ್ಗರಿಸುವುದು ಕಂಡುಬಂದಿದೆ.

ಮಾಡೆಲ್‌ಗಳು ಒಂದೊಂದು ರೀತಿಯಲ್ಲಿ ಬೀಳುವುದು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದೆ. AVAVAV ಬ್ರ್ಯಾಂಡ್ ಕ್ಲಾ ಪಾದರಕ್ಷೆಗಳಿಗೆ ಪ್ರಸಿದ್ಧವಾಗಿದೆ. ಇದು ಮಿಲನ್ ಫ್ಯಾಶನ್ ವೀಕ್‌ನಲ್ಲಿ ಇತ್ತೀಚಿನ ಸಂಗ್ರಹವಾದ 'ಫಿಲ್ತಿ ರಿಚ್' ಅನ್ನು ಪ್ರದರ್ಶಿಸಿತು.

ಕಲೆಕ್ಷನ್‌ನಲ್ಲಿ ಬ್ಲಿಂಗ್‌ ಕೋಚರ್‌ ಧರಿಸಿದ ಮಾದರಿಗಳು, ಡಾಲರ್‌ ಚಿಹ್ನೆಯ ಲಾಂಛನಗಳು, ಮೊಣಕಾಲು ಎತ್ತರದ ದೈತ್ಯಾಕಾರದ ಬೂಟುಗಳು, ದೊಡ್ಡ ಗಾತ್ರದ ಹೂಡಿಗಳು ಮತ್ತು ಜಾಕೆಟ್‌ಗಳು ಮತ್ತು ಬೂದು, ನೀಲಿ, ಗುಲಾಬಿ ಮತ್ತು ತಟಸ್ಥವಾಗಿರುವ ಬಣ್ಣದ ಪ್ಯಾಲೆಟ್‌ಗಳನ್ನು ಪ್ರಸ್ತುತಪಡಿಸಿತು.

ಶ್ರೀಮತಿ ಕಾರ್ಲ್ಸನ್ ತನ್ನ Instagram ನಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. "ಇತರ ಅನೇಕರಂತೆ ನಾನು ಕಳೆದ ವರ್ಷದಿಂದ ಹಣ ಗಳಿಸಲು ಹಂಬಲಿಸುತ್ತಿದ್ದೆ. ಎಲ್ಲೆಡೆ ನಾನು ಏನು ಮಾಡಬೇಕೆಂದಯ ಚರ್ಚೆ ಮಾಡುತ್ತಿದೆ. ನಾನು ಶ್ರೀಮಂತಳಾಗಿ ಕಾಣಲು ಬಯಸುತ್ತೇನೆ. ಶ್ರೀಮಂತಳಾಗುತ್ತೇನೆ. ಜೊತೆಗೆ ಅದನ್ನು ಅತಿರೇಕದ ಮಟ್ಟಕ್ಕೆ ಕೊಂಡೊಯ್ಯಲು ಬಯಸುತ್ತೇನೆ. ಈ ಕಠಿಣ ಶ್ರಮದಿಂದ ನಾನು ನನ್ನ ಸಂಪತ್ತನ್ನು ಅನುಭವಿಸಿದ್ದೇನೆ. ಈ ಕರುಣಾಜನಕ ಥೀಮ್ ಮತ್ತು ಫ್ಯಾಷನ್‌ ನನ್ನನ್ನು ಮತ್ತೆ ಗುರುತಿಸಿಕೊಳ್ಳುವಂತೆ ಮಾಡಿದೆ. ನಕಲಿ ಶ್ರೀಮಂತಿಕೆ ಅಪಾಯವನ್ನು ತಂದೊಡ್ಡುತ್ತದೆ" ಎಂದಿದ್ದಾರೆ.

ವಿಡಿಯೊವನ್ನು ಇಲ್ಲಿ ಪರಿಶೀಲಿಸಿ:

ಹೈಪ್‌ಬೀಸ್ಟ್‌ಗೆ ನೀಡಿದ ಸಂದರ್ಶನದಲ್ಲಿ, Ms ಕಾರ್ಲ್ಸನ್ ಟ್ರಿಪ್-ಅಪ್ ಮಾಡೆಲ್‌ಗಳ ಕೋಲಾಹಲಕಾರಿ ತುಣುಕುಗಳ ಬಗ್ಗೆ ಮಾತನಾಡಿದರು. "ಈ ಸಂಗ್ರಹಣೆ ನಮಗೆ ಸಂಪತ್ತು ಮತ್ತು ಅಪಾಯ ಎಂಬುದರ ವ್ಯಂಗ್ಯಾತ್ಮಕ ಅವಲೋಕನವಾಗಿದೆ. ದುಬಾರಿ ಉಡುಪುಗಳ ಮೇಲೆ ಟ್ಯಾಕಿ ಲೋಗೊಗಳು ಬಳಸುವ ಬದಲು ಮತ್ತು 'ಡೆಮ್ನಾಸ್ಕ್' ಕಲ್ಪನೆಯ ವಿರುದ್ಧವಾಗಿ ಮಾಡಲು ಬಯಸಿದ್ದೇನೆ' ಎಂದು ಹೇಳಿದರು.

ಇಂಟರ್ನೆಟ್ ಸರಳವಾಗಿ ಪರಿಕಲ್ಪನೆಯನ್ನು ಇಷ್ಟಪಟ್ಟಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಫ್ಯಾಶನ್ ಶೋ ಅನ್ನು "ಐಕಾನಿಕ್" ಎಂದು ಕರೆದಿದ್ದಾರೆ. ವಿಡಿಯೊ 70,800 ಇಷ್ಟಗಳು ಮತ್ತು ಹಲವಾರು ಕಾಮೆಂಟ್‌ಗಳೊಂದಿಗೆ 3.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. "ಫ್ಯಾಶನ್‌ನಲ್ಲಿ ಬೀಳಲು ಸರಿಯಾದ ಮಾರ್ಗ" ಎಂದು ಬಳಕೆದಾರರು ಬರೆದಿದ್ದಾರೆ.

English summary
Models fall differently in this fashion show. Watch the video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X