ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತರಕಾರಿಯಿಂದಲೂ ಹಬ್ಬುತ್ತಿದ್ಯಾ ಕೊರೊನಾ ಸೋಂಕು?

|
Google Oneindia Kannada News

ಬೆಂಗಳೂರು, ಮೇ 25: ಲಾಕ್‌ಡೌನ್ ಪ್ರಾರಂಭವಾದ ದಿನದಿಂದಲೂ ಕೊರೊನಾ ವೈರಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುಳ್ಳು ಸುದ್ದಿ ಹರಿದಾಡುತ್ತಿದೆ. ದಿನ ಬಳಕೆ ಅಗತ್ಯ ವಸ್ತುಗಳಿಂದ ಸೋಂಕು ಹರಡುವ ಬಗ್ಗೆ ಕೂಡಾ ಸುದ್ದಿ ಹಬ್ಬಿದೆ. ಈ ಪೈಕಿ ತರಕಾರಿ ಖರೀದಿಯಿಂದಲೂ ವೈರಸ್ ಹಬ್ಬುತ್ತಿದೆಯೇ? ಎಂಬ ಪ್ರಶ್ನೆ ಎದ್ದಿದೆ.

Recommended Video

ತರಕಾರಿಯಿಂದಲು ಹಬ್ಬುತ್ತಿದೆ ಕೊರೋನಾ ಮಹಾಮಾರಿ!! ಎಚ್ಚರ!! | Oneindia Kannada

ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕಳೆದ ಒಂದು ವಾರದಲ್ಲಿ ಕರ್ನಾಟಕದಲ್ಲಿ ಕೊರೊನಾವೈರಸ್ ಹಬ್ಬುತ್ತಿರುವ ವೇಗವು ಅಧಿಕವಾಗಿದೆ. ಈ ನಡುವೆ ಜನರಲ್ಲಿ ಹೊಸ ಆತಂಕ ಶುರುವಾಗಿದೆ. ತರಕಾರಿಯಿಂದಲೂ ಹಬ್ಬುತಿದ್ಯಾ ಕೊರೊನಾ ಸೋಂಕು? ಎಂಬ ಶಂಕೆ ಇದೆ.

Fact Check: ತರಕಾರಿ ಮಾರಾಟಗಾರರಿಂದ ಕೊರೊನಾ ಸೋಂಕು?Fact Check: ತರಕಾರಿ ಮಾರಾಟಗಾರರಿಂದ ಕೊರೊನಾ ಸೋಂಕು?

ತರಕಾರಿ ಖರೀದಿಸುವ ಮುನ್ನ ಹುಷಾರ್! ಎಂಬ ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬುತ್ತಿವೆ. ದೇಶವ್ಯಾಪಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಹಣ್ಣು- ತರಕಾರಿ ಮಂಡಿಗಳಲ್ಲಿ ಮಾರುವ ಜನರನ್ನೂ ಬಿಟ್ಟಿಲ್ಲ ಕೊರೋನಾ ಸೋಂಕು, ಕೊರೋನಾ ತರಕಾರಿಗಳ ಮೂಲಕವೂ ಮನೆಗಳಿಗೆ ಪ್ರವೇಶಿಸುವ ಸಾಧ್ಯತೆ ಎಂದು ಹೇಳಲಾಗಿದೆ. ಈ ಬಗ್ಗೆ ಆಹಾರ ತಜ್ಞರು ಏನು ಹೇಳಿದ್ದಾರೆ? ತರಕಾರಿ ಖರೀದಿಸುವುದನ್ನು ನಿಲ್ಲಿಸಬೇಕೇ? ಎಂಬ ಪ್ರಶ್ನೆಗಳಿಗೆ ಉತ್ತರ ಮುಂದಿದೆ..

ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ

ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ

ಹರ್ಯಾಣದ ದಾಬುವಾ ಕಾಲೋನಿ, ತಮಿಳುನಾಡು ತರಕಾರಿ ಮಾರುಕಟ್ಟೆಗೆ ಬಂದು ತರಕಾರಿ ಖರೀದಿಸಿದ ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಹೀಗಾಗಿ, ತರಕಾರಿ ಮೂಲಕವೂ ಕೊರೊನಾ ಹರಡುತ್ತೆ ಎಂಬುದನ್ನು ಆಹಾರ ತಜ್ಞರು ಅಲ್ಲಗೆಳೆದಿದ್ದಾರೆ. ಆದರೆ, ತರಕಾರಿ ಖರೀದಿಸುವ ಮುನ್ನ ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.

ಹಣ್ಣು -ತರಕಾರಿಗಳಿಂದ ಯಾವುದೇ ವೈರಸ್ ಹರಡಲ್ಲ

ಹಣ್ಣು -ತರಕಾರಿಗಳಿಂದ ಯಾವುದೇ ವೈರಸ್ ಹರಡಲ್ಲ

ಮಾರುಕಟ್ಟೆಯಿಂದ ತರಕಾರಿ ಖರೀದಿಸುವವರು ಕಾಳಜಿ ವಹಿಸಿ, ತರಕಾರಿಗಳನ್ನು ಸೋಂಕಿನಿಂದ ಮುಕ್ತಗೊಳಿಸಲು ಕೆಲವು ಉಪಾಯ ಕೈಗೊಳ್ಳಿ. ಹಣ್ಣು-ತರಕಾರಿಗಳು ಯಾವುದೇ ವೈರಸ್ ತರುವುದಿಲ್ಲ, ಬಳಕೆಯಿಂದಲೂ ವೈರಸ್ ಹರಡುವುದಿಲ್ಲ. ಆದರೆ, ಕೊರೋನಾ ವೈರಸ್ ಜನಸಂದಣಿಯಲ್ಲಿರುವ ಸೋಂಕಿತ ವ್ಯಕ್ತಿಯಿಂದ ಬರುತ್ತದೆ. ಸೋಂಕಿತ ವ್ಯಕ್ತಿಯ ಉಸಿರಾಟ, ಆತ ಅಥವಾ ಆಕೆ ಮುಟ್ಟಿದ ವಸ್ತುಗಳ ಸಂಪರ್ಕದಿಂದ ಮಾತ್ರ ಹರಡಲು ಸಾಧ್ಯ.

ತರಕಾರಿಗಳನ್ನು ತರುವಾಗ ಸ್ವಲ್ಪ ಕಾಳಜಿ ವಹಿಸಿರಿ

ತರಕಾರಿಗಳನ್ನು ತರುವಾಗ ಸ್ವಲ್ಪ ಕಾಳಜಿ ವಹಿಸಿರಿ

ಆದರೆ, ತರಕಾರಿಗಳನ್ನು ತರುವಾಗ ಸ್ವಲ್ಪ ಕಾಳಜಿ ವಹಿಸುವುದು ಮುಖ್ಯ. ಆರೋಗ್ಯ ಸೇತು ಅಪ್ಲಿಕೇಷನ್ ಆನ್ ಮಾಡಿಕೊಂಡು ಹೊರಗಡೆ ಕಾಲಿಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮಾರುಕಟ್ಟೆಗೆ ಕಾಲಿಡಬೇಡಿ. ಮಾರುಕಟ್ಟೆಗೆ ಹೋಗುವಾಗ ನಿಮ್ಮ ಕೈಯನ್ನು ಸ್ವಚ್ಛಗೊಳಿಸಿ, ಮುಖಕ್ಕೆ ಮಾಸ್ಕ್ ಧರಿಸಿ ಮತ್ತು ಕೈಗವಸ್ತುಗಳನ್ನು ಧರಿಸಿ, ಬಟ್ಟೆಯ ಚೀಲಗಳಲ್ಲಿ ತರಕಾರಿ ಹೊತ್ತು ತನ್ನಿ. ಯಾವುದೇ ಕಾರಣಕ್ಕೂ ಚೀಲವನ್ನು ಮುಟ್ಟಬೇಡಿ ಮತ್ತು ತರಕಾರಿಗಳನ್ನು ನೇರವಾಗಿ ಚೀಲದಲ್ಲಿ ಇರಿಸಿ.

ಮನೆಗೆ ತಂದ ಬಳಿಕವೂ ಸ್ವಚ್ಛತೆ ಕಾಪಾಡಿ

ಮನೆಗೆ ತಂದ ಬಳಿಕವೂ ಸ್ವಚ್ಛತೆ ಕಾಪಾಡಿ

ಮನೆಗೆ ತರಕಾರಿ ತಂದ ನಿಮ್ಮ ಕೈಗಳನ್ನು ಸೋಪಿನಿಂದ ಸ್ವಚ್ಛಗೊಳಿಸಿ ನಂತರ ಬ್ಯಾಗಿನಿಂದ ತರಕಾರಿ ತೆಗೆದು ಸ್ವಲ್ಪ ಸಮಯದವರೆಗೆ ಉಪ್ಪುಅಥವಾ ಅಡುಗೆ ಸೋಡಾ ಸೇರಿಸಿದ ಬಿಸಿ ನೀರಿನಲ್ಲಿ ತರಕಾರಿಯನ್ನು ಚೆನ್ನಾಗಿ ತೊಳೆಯಿರಿ. ಹಸಿ ತರಕಾರಿ ಬದಲು ಬೇಯಿಸಿದ ತರಕಾರಿಯನ್ನು ತಿನ್ನಿ. ತರಕಾರಿ ವ್ಯಾಪಾರಿಗಳು ತರಕಾರಿ, ಹಣ್ಣುಗಳ ಮೇಲೆ ಎಂಜಲು ತುಪ್ಪುತ್ತಿದ್ದಾರೆ. ಇದರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆ ಎನ್ನುವ ಸುಳ್ಳು ಸುದ್ದಿ ಎಲ್ಲೆಡೆ ಹರಿಡಿತ್ತು. ಈ ರೀತಿ ಯಾವುದೇ ಸುದ್ದಿಗೆ ಕಿವಿಗೊಡಬೇಡಿ. ಆರೋಗ್ಯ ಸೇತು ಆಪ್ ನಲ್ಲಿರುವ ಸಹಾಯವಾಣಿಗೆ ಕರೆ ಮಾಡಿ ಗೊಂದಲ ಪರಿಹರಿಸಿಕೊಳ್ಳಿ ಎಂದು ಆಹಾರ ತಜ್ಞೆ ಡಾ. ಕೀರ್ತಿಕಿರಿಸಾವೆ ಹೇಳಿದ್ದಾರೆ.

English summary
Fact Check: There are rumours and fear that Vegetables may spread Coronavirus infection. But, it is not true says Food expert Keerthi Kirisave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X