ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

JNU ಶುಲ್ಕ ಹೆಚ್ಚಳ: ಪ್ರತಿಭಟನೆ ಏಕೆ? ಕೇಂದ್ರ ವಿವಿಗಳ ಶುಲ್ಕ ಎಷ್ಟು?

|
Google Oneindia Kannada News

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಶುಲ್ಕ ಹೆಚ್ಚಳ ವಿರೋಧಿಸಿ ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಕೇಂದ್ರ ಸರ್ಕಾರದ ದೌರ್ಜನ್ಯ ಖಂಡಿಸಿ ಹಲವು ವಿದ್ಯಾರ್ಥಿ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಜೆಎನ್ ಯು ವಿದ್ಯಾರ್ಥಿಗಳು ಬರೀ ಶುಲ್ಕ ಹೆಚ್ಚಳದ ವಿರುದ್ಧ ಮಾತ್ರ ಹೋರಾಡುತ್ತಿದ್ದಾರೆಯೇ? ಹಾಸ್ಟೆಲ್ ಶುಲ್ಕ ಎಷ್ಟಿದೆ? ಕೇಂದ್ರ ವಿವಿಗಳ ಶುಲ್ಕ ಎಷ್ಟಿದೆ? ವಿವರ ನಿಮ್ಮ ಮುಂದಿದೆ...

ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಜಲ ಫಿರಂಗಿ, ಲಾಠಿ ಚಾರ್ಜ್ ಮಾಡಿರುವುದು, ನೂರಾರು ಮುಖಂಡರನ್ನು ಬಂಧಿಸಿ, ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುವುದು ಈ ಹಿಂದೆಯೂ ನಡೆದಿತ್ತು. ಈಗಲೂ ನಡೆದಿದೆ.

ಸದಾ ಸುದ್ದಿಯಲ್ಲೇ ಇರುವ JNU ಹಿಂದಿದೆ ವೈಭವದ ಇತಿಹಾಸಸದಾ ಸುದ್ದಿಯಲ್ಲೇ ಇರುವ JNU ಹಿಂದಿದೆ ವೈಭವದ ಇತಿಹಾಸ

ದೊಡ್ಡ ದೊಡ್ಡ ಉದ್ಯಮಿಗಳಿಗೆ, ಕಾರ್ಪೊರೇಟ್ ಸಂಸ್ಥೆ ಕಂಪನಿಗಳಿಗೆ 12 ಲಕ್ಷ ರೂ. ತೆರಿಗೆ ಮತ್ತು ಸಾಲ ಮನ್ನಾ ಮಾಡಲಾಗುತ್ತದೆ. ಆದರೆ ವಿದ್ಯಾರ್ಥಿಗಳ ಹಾಸ್ಟೆಲ್ ಶುಲ್ಕ ಇಳಿಕೆ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಇದರ ಜೊತೆಗೆ ವಸ್ತ್ರ ಸಂಹಿತೆ ಬೇರೆ ಹೇರಲಾಗುತ್ತಿದೆ.

ಬಡ ವಿದ್ಯಾರ್ಥಿಗಳ ನೆರವಿಗಾಗಿ ವಿಶೇಷ ಕಾಯ್ದೆ ಮಾಡಿ 1968ರಲ್ಲಿ ಸ್ಥಾಪನೆಯಾದ ಜೆಎನ್ ಯು ಮೂಲ ಉದ್ದೇಶವನ್ನೇ ಹಾಳುಗೆಡಲಾಗುತ್ತಿದೆ. ಶುಲ್ಕ ಹೆಚ್ಚಳ ಪ್ರತಿಭತನೆ ಒಂದು ವರ್ಗದ ವಿದ್ಯಾರ್ಥಿ ಸಂಘಟನೆಗೆ ಸೀಮಿತವಾಗಿಲ್ಲ. ಎಬಿವಿಪಿ, ಎನ್ ಎಸ್ ಯುಐ ಸೇರಿದಂತೆ 30ಕ್ಕೂ ಅಧಿಕ ಸಂಘಟನೆಗಳು ಪ್ರತಿಭಟನೆಗಿಳಿದಿವೆ. ಇದು ಬಿಜೆಪಿ ಸರ್ಕಾರ ಅಥವಾ ಇನ್ಯಾವುದೇ ಸರ್ಕಾರದ ವಿರುದ್ಧ ಹೋರಾಟವಲ್ಲ, ಬದಲಿಗೆ ಸಮಾನ ಶಿಕ್ಷಣ ಹಕ್ಕು, ಆರ್ಥಿಕ ಸಮಾನತೆಯ ಕೂಗು.

JNUದಲ್ಲಿ ನಡೆಯುತ್ತಿರುವ ಸಂಶೋಧನೆ, ಆವಿಷ್ಕಾರಗಳೇನು?JNUದಲ್ಲಿ ನಡೆಯುತ್ತಿರುವ ಸಂಶೋಧನೆ, ಆವಿಷ್ಕಾರಗಳೇನು?

ನಾವು ತೆರಿಗೆದಾರರು ನಮ್ಮ ತೆರಿಗೆ ಹಣವನ್ನು ಜೆಎನ್ ಯು ನಂಥ ವಿವಿಗೆ ಖರ್ಚು ಮಾಡಿ, ಸಾರ್ವಜನಿಕ ಆರೋಗ್ಯ, ರಸ್ತೆ, ಸಾರಿಗೆಗೆ ಬಳಸಿ ಎಂದು ಟ್ವಿಟ್ಟರಲ್ಲಿ ನಡೆದ ಅಭಿಯಾನಕ್ಕೆ ದೇಶದೆಲ್ಲೆಡೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಶುಲ್ಕ ಏರಿಕೆ, ವಸ್ತ್ರ ಸಂಹಿತೆ, ಹಲವು ನಿಯಮಗಳು

ಶುಲ್ಕ ಏರಿಕೆ, ವಸ್ತ್ರ ಸಂಹಿತೆ, ಹಲವು ನಿಯಮಗಳು

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು 12 ಕೋಟಿ ರು ಆದಾಯ ಕೊರತೆ ಎದುರಿಸುತ್ತಿದ್ದು, ಶುಲ್ಕ ಏರಿಕೆ ಅನಿವಾರ್ಯ ಎಂದು ಹೇಳಿದೆ. ಪ್ರತಿ ತಿಂಗಳಿಗೆ 10 ರು ನಿಂದ 300 ರು ಹಾಸ್ಟೆಲ್ ಶುಲ್ಕ ಏರಿಕೆ ವಿರುದ್ಧ ಮಾತ್ರ ವಿದ್ಯಾರ್ಥಿಗಳು ರೊಚ್ಚಿಗೆದ್ದಿಲ್ಲ. ಬದಲಿಗೆ ಇಡೀ ಶುಲ್ಕ ವ್ಯವಸ್ಥೆ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಅಕ್ಟೋಬರ್ 28ರಂದು ಜಾರಿಗೆ ಬಂದ ಹೊಸ ದರ ಪಟ್ಟಿಯನ್ನು ಸಂಪೂರ್ಣವಾಗಿ ಒಪ್ಪದಿರಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ. 11 ಗಂಟೆಗೆ ಕರ್ಫ್ಯೂ ಸಮಯ ನಿಗದಿ, ಗ್ರಂಥಾಲಯ ಬಂದ್ ಆದ ಅರ್ಧ ಗಂಟೆಯಲ್ಲಿ ಎಲ್ಲವೂ ಬಂದ್ ಆಗಬೇಕು, ಮೆಸ್ ನಲ್ಲಿ ವಸ್ತ್ರ ಸಂಹಿತೆ ಜಾರಿ, 1700 ರು ಸೇವಾ ಶುಲ್ಕ ಪ್ರತಿ ತಿಂಗಳಿಗೆ ವಿಧಿಸಿರುವುದು ಕಿಚ್ಚು ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ.

ಜೆಎನ್ ಯು ಶುಲ್ಕ ಎಷ್ಟಿದೆ?

ಜೆಎನ್ ಯು ಶುಲ್ಕ ಎಷ್ಟಿದೆ?

ಅಕ್ಟೋಬರ್ 28ರ ಆಘಾತಕಾರಿ ಶುಲ್ಕ ಏರಿಕೆ ಪ್ರಕಟಣೆಯ ಬಂದ ಬಳಿಕ ನವೆಂಬರ್ 11 ರಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಎದುರು ಪ್ರತಿಭಟನ ನಡೆಸಲಾಯಿತು. ನವೆಂಬರ್ 13ರಂದು ಭಾಗಶಃ ಪರಿಷ್ಕರಿಸಲಾಯಿತು, ಬಿಪಿಎಲ್ ವಿದ್ಯಾರ್ಥಿಗಳ ಶುಲ್ಕ ಮಾತ್ರ ತಗ್ಗಿಸಲಾಯಿತು.ಆದರೆ, ಇದನ್ನು ಒಪ್ಪಲು ಯಾರು ತಯಾರಿಲ್ಲ.

ಸದ್ಯ ವಾರ್ಷಿಕವಾಗಿ 2200 ರು ವೇತನ ನೀಡಬೇಕಾಗುತ್ತದೆ. 250 ರು ಅಡುಗೆ ನಿರ್ವಹಣೆ ವೆಚ್ಚ, ವಾರ್ಷಿಕ ಸುದ್ದಿಪತ್ರಿಕೆ ಬಿಲ್ 600 ರು, ಹಾಸ್ಟೆಲ್ ರೂಮ್ ಬಾಡಿಗೆ 10 ರಿಂದ 20 ರು, ಮೆಸ್ ಫೀ 2500 ರು. ಒಟ್ಟಾರೆ ಊಟ ಸಹಿತ 32000 ರು ನಿಂದ 33000 ರು ವಾರ್ಷಿಕ ಶುಲ್ಕ. ಊಟ ರಹಿತ ಶುಲ್ಕ ವ್ಯವಸ್ಥೆ ತೆಗೆದುಕೊಂಡರೆ ವಾರ್ಷಿಕ 3290 ರು ಗೂ ಅಧಿಕ ಮೊತ್ತವಾಗದು.

ತೆರಿಗೆದಾರರ ಹಣವನ್ನು JNU ಬಳಸುತ್ತಿರುವುದು ಹೇಗೆ?ತೆರಿಗೆದಾರರ ಹಣವನ್ನು JNU ಬಳಸುತ್ತಿರುವುದು ಹೇಗೆ?

ಹೊಸ ಶುಲ್ಕ ಬಂದರೆ ಎಷ್ಟು ಕಟ್ಟಬೇಕು?

ಹೊಸ ಶುಲ್ಕ ಬಂದರೆ ಎಷ್ಟು ಕಟ್ಟಬೇಕು?

ಆದರೆ, ಈಗ ಹಾಸ್ಟೆಲ್ ರೂಂ ಫೀ 10 ರು ನಿಂದ 300 ರು ಗೇರಿಸಲಾಗಿದೆ. ಡಬ್ಬಲ್ ರೂಮಿಗೆ 600 ರು ಪ್ರತಿ ತಿಂಗಳು ನೀಡಬೇಕಾಗುತ್ತದೆ. ಜೊತೆಗೆ 1700 ರು ಸೇವಾ ಶುಲ್ಕ ಪ್ರತಿ ತಿಂಗಳಿಗೆ ವಿಧಿಸಲಾಗಿದೆ. ಒಟ್ಟಾರೆ ಮೆಸ್ ಫೀ ಸೇರಿಸಿ ವಾರ್ಷಿಕ 60,000 ರು ಪಾವತಿಸಬೇಕಾಗುತ್ತದೆ. ಬಡತನದ ರೇಖೆಗಿಂತ ಕೆಳಗಿರುವವರಿಗೆ ವಿನಾಯಿತಿ ನೀಡಲಾಗಿದ್ದರೂ ವಾರ್ಷಿಕ 46,000 ರು ಪಾವತಿಸುವುದು ಕಷ್ಟಕರವಾಗಿದೆ. ಇದಲ್ಲದೆ, ಇನ್ನಷ್ಟು ಶುಲ್ಕಗಳು ಆಗಾಗ ಈ ಪಟ್ಟಿಗೆ ಸೇರುತ್ತಿರುತ್ತದೆ.

ಜೆಎನ್ ಯುವಿಗೆ ಸೇರುವ ವಿದ್ಯಾರ್ಥಿಗಳ ಪೈಕಿ ಶೇ40 ರಷ್ಟು ಮಂದಿಯ ಕುಟುಂಬ ತಿಂಗಳಿಗೆ 12,000 ರು ಗಿಂತಲೂ ಕಡಿಮೆ ಆದಾಯವನ್ನು ಹೊಂದಿವೆ. ಶೇ 27 ರಷ್ಟು ಮಂದಿ ವಿದ್ಯಾರ್ಥಿಗಳ ಕುಟುಂಬ ತಿಂಗಳಿಗೆ 6,000 ರು ಆದಾಯವನ್ನೂ ಹೊಂದಿಲ್ಲ.

ಹೈದರಾಬಾದ್ ವಿವಿ ಶುಲ್ಕ ವಿವರ

ಹೈದರಾಬಾದ್ ವಿವಿ ಶುಲ್ಕ ವಿವರ

ದಿ ಲಾಜಿಕಲ್ ಇಂಡಿಯನ್ ವೆಬ್ ಕಲೆ ಹಾಕಿರುವ ಮಾಹಿತಿಯಂತೆ ಕೇಂದ್ರ ವಿವಿಗಳಲ್ಲಿರುವ ಶುಲ್ಕ ವಿವರ ಹೀಗಿದೆ:

ಹೈದರಾಬಾದ್ ವಿವಿ: ಸಾಮಾನ್ಯ, ಒಬಿಸಿ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಎಸ್ ಸಿ, ಎಸ್ಟಿ ಗಳಿಗೆ ಮೂರು ಸ್ತರದಲ್ಲಿ ಶುಲ್ಕ ಪಾವತಿ.
ಸಾಮಾನ್ಯ, ಒಬಿಸಿ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮೆಸ್ ರೀಫಂಡ್ 2500 ರು, ರೂಮ್ ಬಾಡಿಗೆ ಪ್ರತಿ ಸೆಮಿಸ್ಟರ್ ಗೆ 500 ರು, ಅಡುಗೆ ಸಲಕರಣೆ ವಾರ್ಷಿಕ 250 ರು, ಹಾಸ್ಟೆಲ್ ನಿಧಿ ಒಂದು ಬಾರಿ 600 ರು
ಒಟ್ಟಾರೆ: 3850 ರು

ಎಸ್ ಸಿ/ ಎಸ್ಟಿ ವಾರ್ಷಿಕ 2 ಲಕ್ಷ ಆದಾಯಯುಳ್ಳವರು ಹಾಗೂ 2 ಲಕ್ಷ ರು ಗಿಂತ ಕಡಿಮೆ ಆದಾಯಯುಳ್ಳವರು
ಮೆಸ್ ರೀಫಂಡ್ 2500 ರು(1500 ರು), ರೂಮ್ ಬಾಡಿಗೆ ಪ್ರತಿ ಸೆಮಿಸ್ಟರ್ ಗೆ ಎರಡು ಕೆಟಗೆರಿಗೂ ಇಲ್ಲ, ಅಡುಗೆ ಸಲಕರಣೆ ವಾರ್ಷಿಕ 250 ರು(250ರು), ಹಾಸ್ಟೆಲ್ ನಿಧಿ ಒಂದು ಬಾರಿ 400 ರು (400ರು)
ಒಟ್ಟಾರೆ: 3150 ರು (2150ರು)

ಬನಾರಸ್ ಹಿಂದು ವಿವಿ, ವಾರಣಾಸಿ

ಬನಾರಸ್ ಹಿಂದು ವಿವಿ, ವಾರಣಾಸಿ

* ಬನಾರಸ್ ಹಿಂದು ವಿವಿ, ವಾರಣಾಸಿ
ವಾರ್ಷಿಕ ಹಾಸ್ಟೆಲ್ ಫೀ 4500 ರು (ಭಾರತೀಯ ವಿದ್ಯಾರ್ಥಿಗಳಿಗೆ), 7850 ರು (ವಿದೇಶಿಯರಿಗೆ)
* ಜಾಮೀಯಾ ಮಿಲಿಯಾ ಇಸ್ಲಾಮಿಯಾ, ನವದೆಹಲಿ
ಹಾಸ್ಟೆಲ್ ಶುಲ್ಕ ವಾರ್ಷಿಕವಾಗಿ 29750 ರು, ಎಲೆಕ್ಟ್ರಿಸಿಟಿ, ನಿರ್ವಹಣಾ ವೆಚ್ಚ ಸೇರಿ.
* ಆಲಿ ಘರ್ ಮುಸ್ಲಿಂ ವಿವಿ
ವಾರ್ಷಿಕ 14000 ರು ಹಾಗೂ 12000 ರು ವಾರ್ಷಿಕ ಮೆಸ್ ಬಳಕೆಗೆ ಶುಲ್ಕ.
* ಜಾದವ್ ಪುರ್ ವಿವಿ, ಕೋಲ್ಕತಾ
ಪ್ರತಿ ತಿಂಗಳು ರೂಮಿಗೆ 25 ರು (ವಿದ್ಯುತ್ ಬಿಲ್ ಸೇರಿ), ಸಂಶೋಧನಾ ವಿದ್ಯಾರ್ಥಿಗಳಿಗೆ 450 ರು, ಮೆಸ್ ಶುಲ್ಕ 3000 ರು

English summary
Fact Check: JNU tells govt fee hike unavoidable due to fund deficit,JNU Fee hike comaparison to Central Universities around India,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X