ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Covid-19: ಸತ್ಯ ಮತ್ತು ಸುಳ್ಳಿನ ಹುಡುಕಾಟ; ಕೊರೊನಾ ವೈರಸ್ ಸುತ್ತ

|
Google Oneindia Kannada News

ನವದೆಹಲಿ, ಮಾರ್ಚ್.21: ಜಾಗತಿಕ ವಲಯದಲ್ಲಿ ಹಾವಳಿ ಎಬ್ಬಿಸಿರುವ ಕೊರೊನಾ ವೈರಸ್ ಕುರಿತು ಜನರು ಮೊದಲೇ ಭಯಭೀತರಾಗಿದ್ದಾರೆ. ಕೆಲವು ಕಿಡಿಗೇಡಿಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಕೊವಿಡ್-19 ಕುರಿತು ಸುಳ್ಳು ಸುಳ್ಳು ವದಂತಿಗಳನ್ನು ಹರಿ ಬಿಡುತ್ತಿದ್ದಾರೆ.

ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ನಿಂದ ಶನಿವಾರದ ಅಂಕಿ-ಅಂಶಗಳ ಪ್ರಕಾರ 11,820ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. 2,82,742ಕ್ಕೂ ಅಧಿಕ ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದು, 93,450ಕ್ಕೂ ಹೆಚ್ಚು ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಕೊರೊನಾ ವೈರಸ್: ಏರ್ ಪೋರ್ಟ್ ಗಳಲ್ಲಿ ಹೇಗಿರುತ್ತೆ ಟ್ರೀಟ್ ಮೆಂಟ್?ಕೊರೊನಾ ವೈರಸ್: ಏರ್ ಪೋರ್ಟ್ ಗಳಲ್ಲಿ ಹೇಗಿರುತ್ತೆ ಟ್ರೀಟ್ ಮೆಂಟ್?

ಜನರ ಎದೆಯಲ್ಲಿ ನಡುಕ ಹುಟ್ಟಿಸಿರುವ ಮಹಾಮಾರಿ ಕೊರೊನಾ ವೈರಸ್ ಕುರಿತು ಯಾವುದನ್ನು ನಂಬಬೇಕು. ಯಾವುದನ್ನೇ ನಂಬಬಾರದು. ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದರ ಕುರಿತು ಒಂದು ವಿಶ್ಲೇಷಣಾತ್ಮಕ ವರದಿ ಇಲ್ಲಿದೆ ನೋಡಿ.

ನೊವೆಲ್ ಕೊರೊನಾ ವೈರಸ್ ಸೋಂಕಿಗೆ ಮದ್ದು ಇದೆಯಾ ಇಲ್ಲವಾ?

ನೊವೆಲ್ ಕೊರೊನಾ ವೈರಸ್ ಸೋಂಕಿಗೆ ಮದ್ದು ಇದೆಯಾ ಇಲ್ಲವಾ?

ಕೊರೊನಾ ವೈರಸ್ ಸೋಂಕಿಗೆ ಮದ್ದು ಸಿಗುತ್ತದೆ ಎಂದು ಸುಳ್ಳು ಸುದ್ದಿ ಹರಡುತ್ತಿರುವ ನಕಲಿ ವೈದ್ಯರನ್ನು ಈಗಾಗಲೇ ದೇಶದ ಹಲವೆಡೆ ಪೊಲೀಸರು ಬಂಧಿಸಿದ್ದಾರೆ. ಏಕೆಂದರೆ ಇದುವರೆಗೂ ಕೊರೊನಾ ವೈರಸ್ ಗೆ ಯಾವುದೇ ಔಷಧಿಯನ್ನು ಕಂಡು ಹಿಡಿದಿಲ್ಲ. ಔಷಧಿಯನ್ನು ಕಂಡು ಹಿಡಿಯಲು ಕನಿಷ್ಠ 18 ತಿಂಗಳ ಕಾಲ ಬೇಕಾಗುತ್ತದೆ ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯೇ ಸ್ಪಷ್ಟನೆ ನೀಡಿದೆ. ಇದರ ಮಧ್ಯೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಔಷಧಿ ಕಂಡು ಹಿಡಿಯಲು ಶ್ರಮಿಸುತ್ತಿದ್ದಾರೆ.

ಎಥನಾಲ್ ಮತ್ತು ಉಪ್ಪಿನ ನೀರು ಬಳಿಸಿದರೆ ಸಾಕೇ?

ಎಥನಾಲ್ ಮತ್ತು ಉಪ್ಪಿನ ನೀರು ಬಳಿಸಿದರೆ ಸಾಕೇ?

ಇನ್ನು, ಉಪ್ಪಿನ ನೀರು ಮತ್ತು ಎಥನಾಲ್ ಗಳಿಂದ ಬಾಯಿ ಮುಕ್ಕಳಿಸುವುದು. ಎಸೆಂಟಿಕ್ ಆಸಿಡ್, ಬ್ಲೀಚ್ ನಿಂದ ಕೈಗಳನ್ನು ತೊಳೆಯುವುದರಿಂದ ಸೋಂಕು ಹರಡುವುದಿಲ್ಲ ಎಂಬುದು ಶುದ್ಧಸುಳ್ಳಾಗಿದೆ. ಎಥನಾಲ್ ಎಂದರೆ ಮದ್ಯವನ್ನು ಸೇವಿಸುವುದರಿಂದ ಸೋಂಕು ಬರುವುದಿಲ್ಲ ಎಂಬುದು ಸುಳ್ಳು. ಇದರ ಬದಲಿಗೆ ಸೋಪ್ ಮತ್ತು ಬಿಸಿ ನೀರಿನಿಂದ ಕೈಗಳನ್ನು ತೊಳೆಯಬೇಕು. ಕೆಮ್ಮು, ಸೀನು ಮತ್ತು ಜ್ವರದಿಂದ ಬಳಲುತ್ತಿರುವ ಜನರಿಂದ ಅಂತರ ಕಾಯ್ದುಕೊಳ್ಳಬೇಕು. ಇನ್ನು, ನೀವೇ ಸೋಂಕಿತರಾಗಿದ್ದಲ್ಲಿ ನಿಮ್ಮಿಂದ ಬೇರೆಯವರಿಗೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಆದಷ್ಟು ಮನೆಯ ಒಂದು ಕೋಣೆಯಲ್ಲಿ ಪ್ರತ್ಯೇಕವಾಗಿ ಇರಬೇಕು ಎಂದು ವರದಿಗಳು ತಿಳಿಸುತ್ತವೆ.

'Made In China' ವಸ್ತುಗಳ ಬಳಕೆಯಿಂದ ಕೊರೊನಾ ಸೋಂಕು?

'Made In China' ವಸ್ತುಗಳ ಬಳಕೆಯಿಂದ ಕೊರೊನಾ ಸೋಂಕು?

ಚೀನಾದಲ್ಲಿ ಉತ್ಪಾದನೆಯಾದ ವಸ್ತುಗಳನ್ನು ಖರೀದಿಸುವುದು, ಅವುಗಳನ್ನು ಬಳಸುವುದರಿಂದ ಕೊರೊನಾ ವೈರಸ್ ಸೋಂಕು ಹರಡುವುದಿಲ್ಲ. ವಸ್ತುಗಳ ಮೂಲಕ ಸೋಂಕು ಜನರಿಗೆ ಹರಡುವ ಸಾಧ್ಯತೆಗಳು ತೀರಾ ವಿರಳವಾಗಿರುತ್ತದೆ. ಬದಲಿಗೆ ಸೋಂಕಿತ ವ್ಯಕ್ತಿಯ ಕೆಮ್ಮು, ಸೀನು ಮತ್ತು ಸ್ಪರ್ಶದಿಂದ ಕೊರೊನಾ ವೈರಸ್ ವೇಗವಾಗಿ ಹರಡುತ್ತದೆ ಎಂದು ತಿಳಿದು ಬಂದಿದೆ.

ಮಾಸ್ಕ್ ಧರಿಸಿದರಷ್ಟೇ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯ?

ಮಾಸ್ಕ್ ಧರಿಸಿದರಷ್ಟೇ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯ?

ಮಾರಕ ಸೋಂಕು ಕೊರೊನಾ ವೈರಸ್ ನಿಂದ ಜನರು ಪಾರಾಗಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಬೇಕು ಎಂದು ಹೇಳಲಾಗುತ್ತಿದೆ. ಅದರ ಅಗತ್ಯವಿಲ್ಲ. ಸೋಂಕಿತರು ಮಾತ್ರ ಕೊರೊನಾ ವೈರಸ್ ಬೇರೆಯವರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಮಾಸ್ಕ್ ಗಳನ್ನು ಧರಿಸಬೇಕು. ಉಳಿದಂತೆ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂಬುದು ಕೇವಲ ಸುಳ್ಳು ಎಂದು ಸ್ವತಃ ವೈದ್ಯರೇ ಸ್ಪಷ್ಟಪಡಿಸಿದ್ದಾರೆ.

English summary
Fact And False News About Deadly Coronavirus In World.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X