ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಕೊರೊನಾ ಆಂಟಿಬಾಡಿ ಕಾಕ್‍ಟೈಲ್ ಥೆರಪಿ ಯಶಸ್ವಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 17: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ, ಕೋವಿಡ್ -19 ವೈರಸ್ ಹರಡುವಿಕೆಯನ್ನು ಕಡಿಮೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಕೊರೊನಾ ಲಸಿಕೆ ಹಾಕುವ ನಿಟ್ಟಿನಲ್ಲಿ ಸಾಮೂಹಿಕವಾಗಿ ಪ್ರಯತ್ನಗಳನ್ನು ಮಾಡುತ್ತಿರುವ ನಡುವೆಯು ಜನರು ಕೋವಿಡ್ 19 ಸೋಂಕಿಗೆ ತುತ್ತಾಗುತ್ತಿದ್ದಾರೆ. ಹೆಚ್ಚಿನ ಅಪಾಯ ಇರುವವರಿಗೆ, ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಳ್ಳದವರಿಗೆ ಅಥವಾ ಕಡಿಮೆ ರೋಗನಿರೋಧಕ ಶಕ್ತಿ ಇರುವ ರೋಗಿಗಳಿಗೆ ಆಂಟಿಬಾಡಿ ಕಾಕ್‍ಟೈಲ್ ಥೆರಪಿ ಶಿಫಾರಸ್ಸು ಮಾಡಲಾದ ಚಿಕಿತ್ಸಾ ವಿಧಾನವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಇದನ್ನು ಕ್ರಾಂತಿಕಾರಕ ಬದಲಾವಣೆ ಎಂದು ಪರಿಗಣಿಸಲಾಗುತ್ತದೆ ಮತ್ತು ಆರೋಗ್ಯ ರಕ್ಷಣೆ ಸಮುದಾಯವು ಹುಡುಕುತ್ತಿರುವ ಪರಿಹಾರವಾಗಿದೆ.

ಭಾರತದಲ್ಲಿ 35000 ಕ್ಕೂ ಹೆಚ್ಚು ರೋಗಿಗಳು ಆಂಟಿಬಾಡಿ ಕಾಕ್‍ಟೈಲ್ ಥೆರಪಿಯನ್ನು ಪಡೆದಿದ್ದು, ಆಂಟಿಬಾಡಿ ಕಾಕ್‍ಟೈಲ್ ಥೆರಪಿಯ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಿದಾಗ, ಕೋವಿಡ್ -19 ವಿರುದ್ಧ ಭರವಸೆಯ ಹೋರಾಟವನ್ನು ಇದು ಪ್ರದರ್ಶಿಸಿದೆ. ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಸುಮಾರು 904 ಸೋಂಕಿತರು ಸೇರಿದಂತೆ ರಾಜ್ಯದ 1068 ರೋಗಿಗಳಿಗೆ ಆಂಟಿಬಾಡಿ ಕಾಕ್‍ಟೈಲ್ ಥೆರಪಿ ಚಿಕಿತ್ಸೆ ನೀಡಲಾಗಿದೆ.

ಸಾವನ್ನು 70% ರಷ್ಟು ಕಡಿಮೆ ಮಾಡಿದೆ

ಸಾವನ್ನು 70% ರಷ್ಟು ಕಡಿಮೆ ಮಾಡಿದೆ

ಆಂಟಿಬಾಡಿ ಕಾಕ್‍ಟೈಲ್ ಚಿಕಿತ್ಸೆಯ ರೋಗಿಗಳ ಸಾವನ್ನು 70% ರಷ್ಟು ಕಡಿಮೆ ಮಾಡಿ ಸಾವಿನ ಅಪಾಯದಿಂದ ಪಾರು ಮಾಡುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಬೊಜ್ಜು ಅಥವಾ ಮಧುಮೇಹ ಅಥವಾ ತೀವ್ರ ಹೃದಯರಕ್ತನಾಳ, ಶ್ವಾಸಕೋಶ, ಮೂತ್ರಪಿಂಡ ಅಥವಾ ಪಿತ್ತಜನಕಾಂಗದ ಅಸ್ವಸ್ಥತೆಗಳು ರೋಗನಿರೋಧಕ ಶಕ್ತಿ ಇಲ್ಲದವರು ಕ್ಯಾನ್ಸರ್ ಚಿಕಿತ್ಸೆ, ಮೂಳೆ ಮಜ್ಜೆಯ ಅಥವಾ ಅಂಗಾಂಗ ಕಸಿ, ಇಮ್ಯುನೊಲಾಜಿಕಲ್ ನ್ಯೂನತೆಗಳು, ಎಚ್‍ಐವಿ ಸಿಕಲ್‍ಸೆಲ್ ರಕ್ತಹೀನತೆ, ಥಲಸ್ಸೆಮಿಯಾ ಈ ಔಷಧಿಯನ್ನು ವಯಸ್ಕರು ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸೌಮ್ಯದಿಂದ ಮಧ್ಯಮ ಪ್ರಮಾಣದ ಕೋವಿಡ್ 19 ರೋಗಲಕ್ಷಣ ಇರುವವರಿಗೆ ನೀಡಬಹುದು.

ಸಿಹಿಸುದ್ದಿ: ಈ ಚಿಕಿತ್ಸೆ ಪಡೆದರೆ 24 ಗಂಟೆಗಳಲ್ಲಿ ಕೊರೊನಾವೈರಸ್ ಮಾಯ!?ಸಿಹಿಸುದ್ದಿ: ಈ ಚಿಕಿತ್ಸೆ ಪಡೆದರೆ 24 ಗಂಟೆಗಳಲ್ಲಿ ಕೊರೊನಾವೈರಸ್ ಮಾಯ!?

ಶ್ವಾಸಕೋಶ ತಜ್ಞ ಡಾ.ರವೀಂದ್ರ ಮೆಹ್ತಾ

ಶ್ವಾಸಕೋಶ ತಜ್ಞ ಡಾ.ರವೀಂದ್ರ ಮೆಹ್ತಾ

ಅಪೋಲೋ ಆಸ್ಪತ್ರೆಗಳ ಶ್ವಾಸಕೋಶ ತಜ್ಞ ಡಾ.ರವೀಂದ್ರ ಮೆಹ್ತಾ, "ತಮ್ಮ ತಂಡವು 40 ಕ್ಕೂ ಹೆಚ್ಚು ರೋಗಿಗಳಿಗೆ ಈ ಚಿಕಿತ್ಸೆಯನ್ನು ಬಳಸಿದೆ ಮತ್ತು ಈ ರೋಗಿಗಳು ಪ್ರಯೋಗದ ವರದಿಗಳಿಗೆ ಅನುಗುಣವಾಗಿ ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ಹೇಳಿದರು. ಮೂರನೇ ಅಲೆಯ ಸಂದರ್ಭದಲ್ಲಿ ಈ ಚಿಕಿತ್ಸೆಯು ಅಮೂಲ್ಯ ಜೀವಗಳನ್ನು ಮತ್ತು ಆಸ್ಪತ್ರೆ/ಐಸಿಯು ಹಾಸಿಗೆಗಳನ್ನು ಉಳಿಸಬಲ್ಲದು ಇದನ್ನು ಡೇ ಕೇರ್ ಅಥವಾ ಶಾರ್ಟ್ ಸ್ಟೇ ಸೆಟಪ್‍ಗಳಲ್ಲಿ ಇಂಟ್ರಾವೆನಸ್ ಇನ್ಫ್ಯೂಷನ್ ಅಥವಾ ಇನ್ಸುಲಿನ್ ಇಂಜೆಕ್ಷನ್‍ನಂತೆ ನೀಡಬಹುದು

ಡಾ.ಟಿ.ಆರ್.ಹೇಮಕುಮಾರ್

ಡಾ.ಟಿ.ಆರ್.ಹೇಮಕುಮಾರ್

ಸಕ್ರ ವರ್ಲ್ಡ್ ಹಾಸ್ಪಿಟಲ್ ಮತ್ತು ಬೆಂಗಳೂರಿನ ಜೀವಿಕಾ ಆಸ್ಪತ್ರೆಯಲ್ಲಿ ಕೋವಿಡ್ -19 ಆರೈಕೆಯಲ್ಲಿ ತೊಡಗಿರುವ ಕನ್ಸಲ್ಟೆಂಟ್ ಫಿಸಿಶಿಯನ್ ಡಾ.ಟಿ.ಆರ್.ಹೇಮಕುಮಾರ್ ಅವರು, ''18 ರೋಗಿಗಳು ತಮ್ಮ ಆರೈಕೆಯಲ್ಲಿ ಪಡೆದಿದ್ದಾರೆ ಮೂರನೇ ಅಲೆಯ ಸಾಧ್ಯತೆ ಹಿನ್ನೆಲೆಯಲ್ಲಿ ಸರಿಯಾದ ಚಿಕಿತ್ಸೆಯ ಬಗ್ಗೆ ಅರಿವು ಅತ್ಯಗತ್ಯ. ಕೋವಿಡ್ ಪಾಸಿಟಿವ್ ರೋಗಿ ಅಥವಾ ಕೋವಿಡ್ ಪಾಸಿಟಿವ್ ರೋಗಿಗೆ ತೆರೆದುಕೊಳ್ಳುವಂಥ ವ್ಯಕ್ತಿಯು ಸರಿಯಾದ ಸಮಯದಲ್ಲಿ ಪ್ರತಿಕಾಯ ಕಾಕ್‍ಟೈಲ್ ಚಿಕಿತ್ಸೆಯನ್ನು ಪಡೆದರೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ರೋಗಿಗಳಲ್ಲಿ ರೋಗ ತೀವ್ರತೆಯಿಂದ ಆಸ್ಪತ್ರೆಗೆ ಸೇರಿಸುವುದನ್ನು ತಡೆಯಲು ಸಾಧ್ಯವಿದೆ,'' ಎಂದು ಒತ್ತಿ ಹೇಳಿದರು.

ಇಬ್ಬರು ಕೊರೊನಾ ಸೋಂಕಿತರ ಮೇಲೆ ಪ್ರತಿಕಾಯ ಕಾಕ್‌ಟೈಲ್ ಚಿಕಿತ್ಸೆಇಬ್ಬರು ಕೊರೊನಾ ಸೋಂಕಿತರ ಮೇಲೆ ಪ್ರತಿಕಾಯ ಕಾಕ್‌ಟೈಲ್ ಚಿಕಿತ್ಸೆ

ಥೆರಪಿ ನಂತರ ಕೊವಿಡ್-19 ಲಸಿಕೆ

ಥೆರಪಿ ನಂತರ ಕೊವಿಡ್-19 ಲಸಿಕೆ

ಭಾರತದಲ್ಲಿ ಕ್ಯಾಸಿರಿವಿಮಾಬ್ ಮತ್ತು ಇಂಡೆವಿಮಾಬ್ ಔಷಧಿಗಳ ಮಿಶ್ರಿತ ಮೊನೊಕ್ಲಾನಲ್ ಪ್ರತಿಕಾಯ ಚಿಕಿತ್ಸೆಗೆ 70,000 ರೂಪಾಯಿ ಅಥವಾ 1,000 ಯುಎಸ್ ಡಾಲರ್ ಖರ್ಚು ಆಗುತ್ತದೆ. ಅಮೆರಿಕಾದಲ್ಲಿ ಒಬ್ಬರಿಗೆ ಇದೇ ಚಿಕಿತ್ಸೆ ನೀಡುವುದಕ್ಕೆ 20,000 ಯುಎಸ್ ಡಾಲರ್ ಆಗುತ್ತದೆ. ಮೊನೊಕ್ಲಾನಲ್ ಪ್ರತಿಕಾಯ ಚಿಕಿತ್ಸೆಗೆ ಆದ್ಯತೆ ಹೆಚ್ಚಾಗುತ್ತಿದ್ದಂತೆ ಈ ಚಿಕಿತ್ಸಾ ವೆಚ್ಚವೂ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಮೊನೊಕ್ಲಾನಲ್ ಪ್ರತಿಕಾಯ ಚಿಕಿತ್ಸೆ ಪಡೆದುಕೊಂಡ 3 ತಿಂಗಳ ನಂತರದಲ್ಲಿ ಕೊವಿಡ್-19 ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಅನುಮತಿ ನೀಡಲಾಗಿದೆ.

English summary
Exposed to Covid-19 or at a High risk of being of being exposed! Recovery, Faster with USFDA authorize Antibody Cocktail Therapy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X