ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

|
Google Oneindia Kannada News

ಜಗತ್ತಿನ ಪಾಲಿಗೆ 'ದೊಡ್ಡಣ್ಣ'ನಾಗಿರುವ ಅಮೆರಿಕ ಅಧ್ಯಕ್ಷರ ಆಯ್ಕೆಗೆ ಕೌಂಟ್‌ಡೌನ್ ಶುರುವಾಗಿದೆ. ಜಸ್ಟ್ 28 ದಿನಗಳು ಮಾತ್ರ, ಅಮೆರಿಕದ ಅಧಿಕಾರ ಹಿಡಿಯೋದು ಯಾರು ಎಂಬ ಟ್ರಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿದೆ. ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದೆ.

ಈ ಹೊತ್ತಲ್ಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಗ್ಗೆ ಹತ್ತಾರು ಪಶ್ನೆಗಳು ಉದ್ಭವಿಸುತ್ತಿವೆ. ವಿಶ್ವದ ಪವರ್‌ಫುಲ್ ವ್ಯಕ್ತಿಯ ಆಯ್ಕೆ ಹೇಗೆ ನಡೆಯುತ್ತೆ, ಮತದಾನ ಪ್ರಕ್ರಿಯೆ ನಡೆಯೋದು ಹೇಗೆ ಎಂಬ ಹಲವು ಪ್ರಶ್ನೆಗಳು ಬಹುತೇಕರನ್ನ ಕಾಡುತ್ತಿವೆ. ಅಷ್ಟಕ್ಕೂ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ. ಅಮೆರಿಕ ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಸಂಯುಕ್ತ ಸಂಸ್ಥಾನ ಮಾದರಿ ಸರ್ಕಾರ ಅಲ್ಲಿ ಅಸ್ತಿತ್ವದಲ್ಲಿದೆ. ಅಲ್ಲಿ ಪ್ರಧಾನಿ ನೇತೃತ್ವದ ಆಡಳಿತ ಇರುವುದಿಲ್ಲ. ಬದಲಾಗಿ ಅಧ್ಯಕ್ಷನೇ ದೇಶದ ಚುಕ್ಕಾಣಿ ಹಿಡಿಯುತ್ತಾನೆ. ಹೀಗೆ ಅಮೆರಿಕ ಅಧ್ಯಕ್ಷನ ಆಯ್ಕೆ ಹೇಗಾಗುತ್ತದೆ..? ಅಧ್ಯಕ್ಷರ ಆಯ್ಕೆಗೆ ಇರುವ ಮಾನದಂಡ ಯಾವುದು..? ಯಾವ ಆಧಾರದಲ್ಲಿ ಅಮೆರಿಕ ಅಧ್ಯಕ್ಷ ಬಹುಮತ ಸಾಬೀತು ಮಾಡುತ್ತಾನೆ ಎಂಬಿತ್ಯಾದಿ ಕುತೂಹಲಗಳಿಗೆ ಸಂಪೂರ್ಣ ಉತ್ತರ ಇಲ್ಲಿದೆ.

244 ವರ್ಷಗಳ ಇತಿಹಾಸ..!

244 ವರ್ಷಗಳ ಇತಿಹಾಸ..!

ಜಗತ್ತಿಗೆ ಪ್ರಜಾಪ್ರಭುತ್ವದ ಪಾಠ ಹೇಳಿಕೊಟ್ಟಿದ್ದು ಯುರೋಪಿಯನ್ನರು. ಆದರೆ ಅದೇ ಪ್ರಜಾಪ್ರಭುತ್ವವನ್ನು ಆಧುನಿಕ ಜಗತ್ತಿನಲ್ಲಿ ಎತ್ತಿಹಿಡಿದಿದ್ದು ಅಮೆರಿಕ. ಜಾರ್ಜ್ ವಾಷಿಂಗ್‌ಟನ್, ಅಬ್ರಹಾಂ ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಒಬಾಮಾ ಹೀಗೆ ಡೊನಾಲ್ಡ್ ಟ್ರಂಪ್ ಅಧಿಕಾರ ಹಿಡಿಯುವವರೆಗೂ 45 ಅಧ್ಯಕ್ಷರನ್ನ ಅಮೆರಿಕ ಕಂಡಿದೆ. ಅಮೆರಿಕ ಪ್ರಜಾಪ್ರಭುತ್ವ ಇತಿಹಾಸಕ್ಕೆ 244 ವರ್ಷ ಇತಿಹಾಸವಿದೆ. ಆಧುನಿಕ ಜಗತ್ತಿನಲ್ಲಿ ಯಾವುದೇ ರಾಷ್ಟ್ರ ಕೂಡ ಈ ವಿಚಾರದಲ್ಲಿ ಅಮೆರಿಕವನ್ನು ಹಿಂದೆ ಹಾಕಲು ಸಾಧ್ಯವಾಗಿಲ್ಲ.

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಭಾರಿ ಮುಖಭಂಗಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಭಾರಿ ಮುಖಭಂಗ

ಅಧ್ಯಕ್ಷನಾಗಲು ಇರಬೇಕಾದ ಅರ್ಹತೆ ಏನು..?

ಅಧ್ಯಕ್ಷನಾಗಲು ಇರಬೇಕಾದ ಅರ್ಹತೆ ಏನು..?

ಅಮೆರಿಕ ಸಂವಿಧಾನದ ಪ್ರಕಾರ ಅಧ್ಯಕ್ಷೀಯ ಅಭ್ಯರ್ಥಿಯಾಗುವವರು ಅಲ್ಲೇ ಹುಟ್ಟಿರಬೇಕು, ಅಮೆರಿಕದ ಪ್ರಜೆಯಾಗಿರಬೇಕು. ಅಲ್ಲದೆ ಅಭ್ಯರ್ಥಿಯಾಗಲು ಕನಿಷ್ಠ 35 ವರ್ಷ ವಯಸ್ಸಾಗಿರಬೇಕು. ಅಮೆರಿಕ ಅಧ್ಯಕ್ಷರ ಆಯ್ಕೆ ಸುಲಭದ ವಿಚಾರವಲ್ಲ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಸುದೀರ್ಘವಾಗಿದ್ದು, ನವೆಂಬರ್‌ನಲ್ಲೇ ಮತದಾನ ನಡೆದರೂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹಾಗೂ ಅಧಿಕಾರ ಹಸ್ತಾಂತರ ಶುರುವಾಗುವುದು ಜನವರಿಯಲ್ಲಿ. ಹೀಗೆ ಅಮೆರಿಕ ಅಧ್ಯಕ್ಷರನ್ನು ಆಯ್ಕೆ ಮಾಡಲು ಹಲವು ತಿಂಗಳ ಸಮಯ ಬೇಕಾಗುತ್ತದೆ.

4 ವರ್ಷಕ್ಕೊಮ್ಮೆ ಅಧ್ಯಕ್ಷರು ಬದಲಾಗುತ್ತಾರೆ

4 ವರ್ಷಕ್ಕೊಮ್ಮೆ ಅಧ್ಯಕ್ಷರು ಬದಲಾಗುತ್ತಾರೆ

ಅಮೆರಿಕ ಅಧ್ಯಕ್ಷರನ್ನು ಪ್ರತಿ 4 ವರ್ಷಕ್ಕೊಮ್ಮೆ ಬದಲಾಯಿಸಲಾಗುತ್ತದೆ ಅಥವಾ ಮರು ಆಯ್ಕೆ ಮಾಡುತ್ತಾರೆ. 2020ರಲ್ಲಿ ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದೆ. 18 ವರ್ಷ ಮೇಲ್ಪಟ್ಟ ಅಮೆರಿಕನ್ನರು ಮತದಾನ ಮಾಡಲಿದ್ದಾರೆ. ಆದರೆ ಕೊರೊನಾ ಹಿನ್ನೆಲೆ ಈ ಬಾರಿ ಅಂಚೆ ಮತದಾನ ಪದ್ಧತಿಯ ಮೊರೆ ಹೋಗಲಾಗಿದೆ.

ಡೊನಾಲ್ಡ್ ಟ್ರಂಪ್ ಒಬ್ಬ ನಾಲಾಯಕ್ ಅಧ್ಯಕ್ಷ: ಬರಾಕ್ ಒಬಾಮಾಡೊನಾಲ್ಡ್ ಟ್ರಂಪ್ ಒಬ್ಬ ನಾಲಾಯಕ್ ಅಧ್ಯಕ್ಷ: ಬರಾಕ್ ಒಬಾಮಾ

ಪರೋಕ್ಷ ಚುನಾವಣೆ ಮೂಲಕ ಆಯ್ಕೆ

ಪರೋಕ್ಷ ಚುನಾವಣೆ ಮೂಲಕ ಆಯ್ಕೆ

ಭಾರತದಲ್ಲಿ ಇರುವಂತೆ ಅಮೆರಿಕದಲ್ಲಿ ಹತ್ತಾರು ಪಕ್ಷಗಳು ಅಸ್ತಿತ್ವದಲ್ಲಿ ಇಲ್ಲ. ಅಮೆರಿಕದಲ್ಲಿ 2 ರಾಜಕೀಯ ಪಕ್ಷಗಳಿದ್ದು, ಅಧ್ಯಕ್ಷರನ್ನು 'ಎಲೆಕ್ಟೊರೋಲ್ ಕಾಲೇಜು' ಮೂಲಕ ಆಯ್ಕೆಮಾಡಲಾಗುತ್ತದೆ. ಸಾರ್ವಜನಿಕರು 'ಎಲೆಕ್ಟೊರೋಲ್ ಕಾಲೇಜು'ಗಳ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಮತ ಹಾಕುತ್ತಾರೆ. ಹೀಗೆ ಜನರ ಮತ ಪಡೆದು ಆಯ್ಕೆಯಾಗುವ ಪ್ರತಿನಿಧಿಗಳು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ಪಡೆಯುತ್ತಾರೆ. ಈ ಬಾರಿ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡೆನ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ. ಪ್ರತಿ ರಾಜ್ಯದಲ್ಲಿ ಎಲೇಕ್ಟರ್‌ಗಳ ಸಂಖ್ಯೆ ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಆ ರಾಜ್ಯದ ಪಾಲು ಆಧರಿಸಿ ನಿರ್ಧರಿಸಲಾಗುತ್ತಿದೆ. ಈ ಪ್ರಕ್ರಿಯೆಗೆ ಇತ್ತೀಚಿನ ಜನಸಂಖ್ಯಾ ವರದಿ ಆಧಾರವಾಗಿರುತ್ತದೆ. ಅಂದರೆ 2019ರಲ್ಲಿ ನಡೆದ ಅಮೆರಿಕದ ಜನಗಣತಿ ಆಧಾರದಲ್ಲಿ ಅಮೆರಿಲದಲ್ಲಿ ಒಟ್ಟು 32.8 ಕೋಟಿ ಪ್ರಜೆಗಳಿದ್ದಾರೆ.

ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಎಷ್ಟು..?

ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಎಷ್ಟು..?

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ 50 ರಾಜ್ಯಗಳಿದ್ದು, ವಾಶಿಂಗ್‌ಟನ್ ಡಿಸಿ ಅಮೆರಿಕದ ರಾಜಧಾನಿಯಾಗಿದೆ. ಹೀಗೆ ವಾಶಿಂಗ್‌ಟನ್ ಡಿಸಿ ಸೇರಿದಂತೆ 51 ರಾಜ್ಯಗಳ ಪ್ರಜೆಗಳು ಅಮೆರಿಕ ಅಧ್ಯಕ್ಷರ ಆಯ್ಕೆಗೆ ಮತದಾನ ಮಾಡುತ್ತಾರೆ. ಒಟ್ಟು 538 ಚುನಾಯಿತ ಪ್ರತಿನಿಧಿಗಳಿರುತ್ತಾರೆ. 538 ಪ್ರತಿನಿಧಿಗಳ ಪೈಕಿ ಪ್ರತಿ ರಾಜ್ಯವನ್ನೂ ಪ್ರತಿನಿಧಿಸಲು ಇಬ್ಬರು ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ಒಟ್ಟು 100 ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ವಾಷಿಂಗ್ಟನ್ ಡಿಸಿ ಸೇರಿದಂತೆ ಒಟ್ಟು 51 ಎಲೆಕ್ಟೊರಾಲ್ ಕಾಲೇಜುಗಳಿವೆ. ಪ್ರತಿ ರಾಜ್ಯದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಬಹುಮತ ದೊರೆಯುತ್ತದೆಯೋ ಆ ಅಭ್ಯರ್ಥಿಗೆ ರಾಜ್ಯದ ಇತರ ಎಲ್ಲ ಮತಗಳು ಒಗ್ಗೂಡುತ್ತವೆ.

ಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆ

ಅಧ್ಯಕ್ಷರಾಗಲು ಎಷ್ಟು ಬಹುಮತ ಅಗತ್ಯ..?

ಅಧ್ಯಕ್ಷರಾಗಲು ಎಷ್ಟು ಬಹುಮತ ಅಗತ್ಯ..?

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನ ಅಲಂಕರಿಸಬೇಕಾದರೆ ಕನಿಷ್ಠ 270 ಮತ ಅಗತ್ಯವಾಗಿರುತ್ತದೆ. ಅಂದರೆ ಒಟ್ಟು 538 ಚುನಾಯಿತ ಪ್ರತಿನಿಧಿಗಳ ಪೈಕಿ 270 ಚುನಾಯಿತ ಅಭ್ಯರ್ಥಿಗಳ ಬೆಂಬಲ ಅತ್ಯಗತ್ಯವಾಗಿರುತ್ತದೆ. ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗೂ 2 ಮತಗಳನ್ನು ಹಾಕುವ ಹಕ್ಕು ಇರುತ್ತದೆ. ಒಂದು ಮತ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮತ್ತೊಂದು ಮತ ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲುತ್ತದೆ. ಇನ್ನು ಚುನಾವಣೆ ಪ್ರಕ್ರಿಯೆ ಬಗ್ಗೆ ಅನುಮಾನ ಹೊಂದಿದ್ದರೆ ಅಥವಾ ಈ ಕುರಿತಾಗಿ ತಕರಾರು ಇದ್ದರೆ ಸೋತ ಅಭ್ಯರ್ಥಿ ಅಮೆರಿಕದ ಸುಪ್ರೀಂಕೋರ್ಟ್ ಮೊರೆ ಹೋಗಲು ಅವಕಾಶ ಇದೆ. ಇದೀಗ ಟ್ರಂಪ್ ಕೂಡ ಅಂಚೆ ಮತದಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ತಾವು ಸೋತರೆ ಅಧಿಕಾರ ಹಸ್ತಾಂತರ ಸುಪ್ರೀಂಕೋರ್ಟ್‌ನಲ್ಲಿ ನಿರ್ಧಾರವಾಗಬಹುದು ಎಂದಿದ್ದಾರೆ.

ಚುನಾಯಿತ ಪ್ರತಿನಿಧಿಗಳ ಆಯ್ಕೆ ಹೇಗೆ..?

ಚುನಾಯಿತ ಪ್ರತಿನಿಧಿಗಳ ಆಯ್ಕೆ ಹೇಗೆ..?

ಚುನಾಯಿತ ಪ್ರತಿನಿಧಿಗಳು ಅಮೆರಿಕ ಅಧ್ಯಕ್ಷರನ್ನು ನೇರವಾಗಿ ಆಯ್ಕೆಮಾಡುವ ಅಧಿಕಾರ ಹೊಂದಿರುವವರು. ಆಯಾ ರಾಜ್ಯಗಳ ಜನಸಂಖ್ಯೆಗೆ ಅನುಗುಣವಾಗಿ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಅಂದರೆ 2019ರಲ್ಲಿ ನಡೆದ ಅಮೆರಿಕದ ಜನಗಣತಿ ಆಧಾರದಲ್ಲಿ ಅಮೆರಿಲದಲ್ಲಿ ಒಟ್ಟು 32.8 ಕೋಟಿ ಪ್ರಜೆಗಳಿದ್ದಾರೆ. ಈ ಜನಸಂಖ್ಯೆಗೆ ಅನುಗುಣವಾಗಿ 2020ರಲ್ಲಿ ಚುನಾಯಿತ ಪ್ರತಿನಿಧಿಗಳ ಆಯ್ಕೆ ನಡೆಯಲಿದೆ. ಇನ್ನೂ ಚುನಾಯಿತ ಪ್ರತಿನಿಧಿಗಳನ್ನು ಹೇಗೆ ಆಯ್ಕೆಮಾಡಲಾಗುತ್ತದೆ ಎಂದರೆ, ಎರಡೂ ರಾಜಕೀಯ ಪಕ್ಷಗಳು ಆಯಾ ರಾಜ್ಯದಲ್ಲಿ ಚುನಾವಣೆಗೂ ಮುನ್ನ ತಮ್ಮ ಚುನಾಯಿತ ಪ್ರತಿನಿಧಿಯನ್ನು ಆಯ್ಕೆಮಾಡುತ್ತವೆ. ಪ್ರಜೆಗಳು ಆಯಾ ಪಕ್ಷಗಳ ಅಭ್ಯರ್ಥಿಗಳಿಗೆ ಅಥವಾ ತಮಗಿಷ್ಟವಾದ ಚುನಾಯಿತ ಪ್ರತಿನಿಧಿಗೆ ಮತ ಚಲಾಯಿಸುತ್ತಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..?ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..?

Graphics Data

Graphics Data

ಒಟ್ಟು ಚುನಾಯಿತ ಪ್ರತಿನಿಧಿಗಳು- 538


270 (ಅಧ್ಯಕ್ಷರ ಆಯ್ಕೆಗೆ ಬೇಕಾದ ಸಂಖ್ಯೆ)


100 (ಸೆನೆಟ್‌ ಸದಸ್ಯರ ಸಂಖ್ಯೆ)


435 (ಕಾಂಗ್ರೆಸ್‌ ಸದಸ್ಯರ ಸಂಖ್ಯೆ)


3 (ಡಿಸ್ಟ್ರಿಕ್ಟ್ ಆಫ್‌ ಕೊಲಂಬಿಯಾ)

ಅಧ್ಯಕ್ಷೀಯ ಚುನಾವಣೆ ಮುಂದೂಡಲು ಟ್ರಂಪ್ ಸರ್ಕಸ್..?ಅಧ್ಯಕ್ಷೀಯ ಚುನಾವಣೆ ಮುಂದೂಡಲು ಟ್ರಂಪ್ ಸರ್ಕಸ್..?

English summary
The countdown to the US election has begun. Voting for the US presidential election will be held November 3. So here is full picture of the US presidential election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X