• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಮಾನ ಹಾರಾಟ ನಿರ್ಬಂಧ ಸಡಿಲಿಕೆ: ಏನಿದು ಏರ್ ಟ್ರಾನ್ಸ್‌ಪೋರ್ಟ್ ಬಬಲ್ಸ್? ಇಲ್ಲಿದೆ ವಿವರ

|

ನವದೆಹಲಿ, ಆಗಸ್ಟ್ 18: ಕೊರೊನಾ ವೈರಸ್ ಸೋಂಕಿನ ಹಾವಳಿ ನಡುವೆ ದ್ವಿರಾಷ್ಟ್ರೀಯ ಮಟ್ಟದ ವಿಮಾನ ಹಾರಾಟ ಸಂಪರ್ಕಿಸುವ ಕುರಿತು ಭಾರತವು 13 ದೇಶಗಳ ಜತೆಗೆ ಮಾತುಕತೆ ನಡೆಸುತ್ತಿದೆ. ಬಹುತೇಕ ದೇಶಗಳ ನಡುವೆ ನಿರಂತರ ವಿಮಾನ ಹಾರಾಟ ಸ್ಥಗಿತಗೊಂಡಿರುವುದರಿಂದ ಎರಡು ದೇಶಗಳ ನಡುವಿನ ಅಂತಾರಾಷ್ಟ್ರೀಯ ವಿಮಾನ ಹಾರಾಟ ಸೌಲಭ್ಯ ನಡೆಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ತಿಳಿಸಿದ್ದಾರೆ.

ಇನ್ನೂ 13 ದೇಶಗಳ ಜತೆಗೆ ವೈಮಾನಿಕ ಪ್ರಯಾಣ ವ್ಯವಸ್ಥೆಯನ್ನು ಪ್ರಾರಂಭಿಸುವ ಕುರಿತಾಗಿ ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆಸ್ಟ್ರೇಲಿಯಾ, ಇಟಲಿ, ಜಪಾನ್, ನ್ಯೂಜಿಲೆಂಡ್, ನೈಜೀರಿಯಾ, ಬಹ್ರೇನ್, ಇಸ್ರೇಲ್, ಕೀನ್ಯಾ, ಫಿಲಿಪ್ಪೀನ್ಸ್, ರಷ್ಯಾ, ಸಿಂಗಪುರ, ದಕ್ಷಿಣ ಕೊರಿಯಾ ಮತ್ತು ಥಾಯ್ಲೆಂಡ್ ದೇಶಗಳನ್ನು ಇದು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಪ್ರಯಾಣಕ್ಕೆ 8,500 ಕೋಟಿ ರೂಪಾಯಿಯ ವಿಮಾನಗಳು: ಏನಿದರ ವಿಶೇಷತೆ?

ಈ ದೇಶಗಳಲ್ಲಿ ಸಿಲುಕಿರುವ ಭಾರತೀಯರು ಮತ್ತು ಇತರರಿಗೆ ಈ ಮಾತುಕತೆ ಅನುಕೂಲ ಮಾಡಿಕೊಡಲಿದೆ. ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ನೇಪಾಳ ಮತ್ತು ಭೂತಾನ್ ಜತೆಗೂ 'ಏರ್ ಬಬಲ್' ಪ್ರಸ್ತಾವ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮುಂದೆ ಓದಿ...

ಷರತ್ತುಗಳು ಅನ್ವಯ

ಷರತ್ತುಗಳು ಅನ್ವಯ

ವಂದೇ ಭಾರತ್ ಮಿಷನ್ ಅನ್ನು ಬಲಪಡಿಸಲು ಸಚಿವಾಲಯ ಪ್ರಯತ್ನಿಸುತ್ತಿದ್ದು, ಈಗಾಗಲೇ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಯುಎಇ, ಕತಾರ್ ಮತ್ತು ಮಾಲ್ಡೀವ್ಸ್ ನಡುವೆ ವಿಮಾನ ಪ್ರಯಾಣ ಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಈ ದೇಶಗಳ ನಡುವಿನ ಓಡಾಟವು ಭಾರತದ ಗೃಹ ಸಚಿವಾಲಯ ಮತ್ತು ಆಯಾ ದೇಶಗಳ ಸರ್ಕಾರಗಳು ವಿಧಿಸಿರುವ ಷರತ್ತುಗಳಿಗೆ ಅನುಗುಣವಾಗಿ ಇರಲಿದೆ.

ಏನಿದು ಏರ್ ಬಬಲ್ಸ್?

ಏನಿದು ಏರ್ ಬಬಲ್ಸ್?

ಟ್ರಾನ್ಸ್‌ಪೋರ್ಟ್ ಬಬಲ್ ಅಥವಾ ಏರ್ ಬಬಲ್ಸ್ ಎನ್ನುವುದು ಎರಡು ದೇಶಗಳ ನಡುವಿನ ತಾತ್ಕಾಲಿಕ ಸಾರಿಗೆ ವ್ಯವಸ್ಥೆ. ಈ ಹಿಂದೆ ಹಾರಾಟ ನಡೆಸುತ್ತಿದ್ದ ಅಂತಾರಾಷ್ಟ್ರೀಯ ವಿಮಾನ ಸಂಚಾರವು ಕೊರೊನಾ ವೈರಸ್ ಕಾರಣದಿಂದ ಸ್ಥಗಿತಗೊಂಡಿರುವುದರಿಂದ ವಾಣಿಜ್ಯ ಪ್ರಯಾಣಿಕ ಸೇವೆಗಳನ್ನು ಪುನಃ ಆರಂಭಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಒಪ್ಪಂದಕ್ಕೆ ಬದ್ಧವಾದ ಎರಡೂ ದೇಶಗಳ ವಿಮಾನಯಾನ ಸಂಸ್ಥೆಗಳಿಗೆ ಒಂದೇ ರೀತಿಯ ಪ್ರಯೋಜನಗಳು ಸಿಗಲಿವೆ.

ಏಪ್ರಿಲ್‌ನಿಂದ ಜುಲೈವರೆಗೆ ಬೆಂಗಳೂರು ಏರ್‌ಪೋರ್ಟ್‌ಗೆ ಭೇಟಿಕೊಟ್ಟ ಪ್ರಯಾಣಿಕರೆಷ್ಟು?

ಭಾರತದಿಂದ ಯಾರು ವಿದೇಶಕ್ಕೆ ತೆರಳಬಹುದು?

ಭಾರತದಿಂದ ಯಾರು ವಿದೇಶಕ್ಕೆ ತೆರಳಬಹುದು?

ಈ 'ಏರ್ ಬಬಲ್ಸ್'ನ ಮಾರ್ಗದರ್ಶಿ ನಿಯಮಗಳ ಪ್ರಕಾರ, ಈ ಎರಡೂ ದೇಶಗಳ ನಡುವೆ ಪ್ರಯಾಣಿಸಲು ಬಯಸುವ ನಾಗರಿಕರು, ವಿದೇಶಿ ಪ್ರಯಾಣಿಕರು ಹಾಗೂ ಭಾರತೀಯ ನಾಗರಿಕರು ಕೂಡ ಕೆಲವು ಷರತ್ತುಗಳಿಗೆ ಒಳಪಟ್ಟು ಪ್ರಯಾಣಿಸಬಹುದಾಗಿದೆ.

ಭಾರತವು ವಿಮಾನ ಸಾರಿಗೆ ವ್ಯವಸ್ಥೆ ಹೊಂದಿರುವ ದೇಶಗಳಿಗೆ ಪ್ರವಾಸ ಉದ್ದೇಶದ ವೀಸಾ ಹೊರತುಪಡಿಸಿ ಕನಿಷ್ಠ ಒಂದು ತಿಂಗಳ ವಾಯ್ದೆಯುಳ್ಳ ವೀಸಾ ಹೊಂದಿರುವ ಭಾರತೀಯರು ತೆರಳಬಹುದು. ಯುಎಇ ತನ್ನ ಗಡಿಯೊಳಗೆ ಪ್ರವಾಸಿಗರಿಗೂ ಅವಕಾಶ ನೀಡುತ್ತಿದೆ. ವಿದ್ಯಾರ್ಥಿ ವೀಸಾ, ಬಿಜಿನೆಸ್ ವೀಸಾ, ಉದ್ಯೋಗ ವೀಸಾ ಮುಂತಾದ ವೀಸಾಗಳನ್ನು ಹೊಂದಿರುವವರು ಭಾರತದ ಹೊರಗೆ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿದೆ.

ವಿದೇಶದಿಂದ ಭಾರತಕ್ಕೆ ಯಾರು ಬರಬಹುದು?

ವಿದೇಶದಿಂದ ಭಾರತಕ್ಕೆ ಯಾರು ಬರಬಹುದು?

ಭಾರತದ ಅಥವಾ ವಿದೇಶಿ ವಿಮಾನಯಾನ ಸಂಸ್ಥೆಗಳ ವಿಮಾನಗಳಲ್ಲಿ ಭಾರತೀಯ ಪ್ರಜೆಗಳು ಮತ್ತು ಕೆಲವು ವರ್ಗದ ವಿದೇಶಿ ಪ್ರಜೆಗಳು ಕೂಡ ಭಾರತಕ್ಕೆ ಪ್ರಯಾಣಿಸಲು ಅವಕಾಶವಿದೆ. ಇತ್ತೀಚಿನ ದಿನಗಳವರೆಗೂ ಓವರ್‌ಸೀಸ್ ಸಿಟಿಜನ್ಸ್ ಆಫ್ ಇಂಡಿಯಾದ (ಒಸಿಐ) ಕೆಲವು ನಿರ್ದಿಷ್ಟ ವೀಸಾ ಸೌಲಭ್ಯ ಹೊಂದಿದವರಿಗೆ ಮಾತ್ರ ಭಾರತಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿತ್ತು. ಆದರೆ ಈಗ ಎಲ್ಲ ಒಸಿಐ ಕಾರ್ಡ್ ಹೊಂದಿರುವವರಿಗೆ ಭಾರತಕ್ಕೆ ಬರಲು ಅವಕಾಶ ನೀಡಲಾಗಿದೆ.

ಆಗಸ್ಟ್ 31ರವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಷೇಧ ವಿಸ್ತರಣೆ

ವಿಮಾನಗಳ ಹಾರಾಟ: ಎಲ್ಲಿಂದ ಎಲ್ಲಿಗೆ?

ವಿಮಾನಗಳ ಹಾರಾಟ: ಎಲ್ಲಿಂದ ಎಲ್ಲಿಗೆ?

ದೆಹಲಿ, ಮುಂಬೈ, ಅಹಮದಾಬಾದ್, ಬೆಂಗಳೂರು, ಹೈದರಾಬಾದ್, ಕೊಚ್ಚಿ, ಅಮೃತಸರ ಮತ್ತು ತಿರುವನಂತರಪುರಂಗಳಿಂದ ಲಂಡನ್, ಬರ್ಮಿಂಗ್ಹ್ಯಾಮ್, ಫ್ರಾಂಕ್‌ಫರ್ಟ್, ಪ್ಯಾರಿಸ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ಷಿಕಾಗೋ ಮತ್ತು ವಾಷಿಂಗ್ಟನ್ ಡಿಸಿಗೆ ಏರ್ ಇಂಡಿಯಾ ವಿಮಾನ ಸಂಚಾರ ನಡೆಸುತ್ತಿದೆ.

ಈ ದೇಶಗಳ ವಿಮಾನಯಾನ ಸಂಸ್ಥೆಗಳೂ ಕೂಡ ವಿಮಾನದ ಎರಡೂ ಓಡಾಟಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅನುಮತಿ ನೀಡಿವೆ. ಯುನೈಟೆಡ್, ಏರ್ ಫ್ರಾನ್ಸ್, ಲುಫ್ತಾನ್ಸಾ, ಏರ್ ಕೆನಡಾ, ಎಮಿರೈಟ್ಸ್, ಎತಿಹಾದ್, ವರ್ಜಿನ್ ಅಟ್ಲಾಂಟಾ ಸೇರಿದಂತೆ ಕೆಲವು ವಿಮಾನಗಳಲ್ಲಿ ಒಂದು ಭಾಗದ ಸಂಚಾರ ಖಾಲಿ ಇರಬೇಕಾಗುತ್ತದೆ.

English summary
India negotiating with 13 countires for bilateral air travel arrangements. Here is the explainer about Air Transport Bubbles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X