• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೂಮಿಯ ಸಮೀಪ ಬರಲಿದೆ ಬೃಹತ್ ಕ್ಷುದ್ರಗ್ರಹ: ಏನಿದರ ವಿಶೇಷ? ಇಲ್ಲಿದೆ ವಿವರ

|

ಈಜಿಪ್ಟಿನ ಐತಿಹಾಸಿಕ ಗಿಜಾ ಪಿರಾಮಿಡ್‌ಗಿಂತಲೂ ಎರಡು ಪಟ್ಟು ದೊಡ್ಡದಾದ ಕ್ಷುದ್ರಗ್ರಹವೊಂದು ಭಾನುವಾರ (ಸೆ. 6) ಭೂಮಿಯ ಕಕ್ಷೆಯನ್ನು ಹಾದುಹೋಗುವ ಸಾಧ್ಯತೆ ಇದೆ.

ಈ ಕ್ಷುದ್ರಗ್ರಹದ ಚಲನೆಯನ್ನು ನಾಸಾ ಪರಿಶೀಲಿಸುತ್ತಿದ್ದು, ಇದಕ್ಕೆ 465824 (2010 FR) ಎಂದು ನಾಮಕರಣ ಮಾಡಲಾಗಿದೆ. ಅದರ ಒಟ್ಟಾರೆ ವ್ಯಾಸವು 120 ಮೀಟರ್‌ನಿಂದ 270 ಮೀಟರ್‌ನಷ್ಟು ಇದೆ ಎಂದು ಸೆಂಟರ್ ಫಾರ್ ನಿಯರ್ ಅರ್ಥ್ ಆಬ್ಜೆಕ್ಟ್ ಸ್ಟಡೀಸ್ (ಸಿಎನ್‌ಇಒಎಸ್) ತಿಳಿಸಿದೆ.

ಇದು ಈಜಿಪ್ಟಿನ ಗಿಜಾ ಪಿರಮಿಡ್‌ನ ಎರಡುಪಟ್ಟು ದೊಡ್ಡದಿದ್ದರೂ ಅದೃಷ್ಟವಶಾತ್ ಭೂಮಿಯ ಕಕ್ಷೆಯಲ್ಲಿ ಹಾದುಹೋಗುವಾಗ ಭೂಮಿಯ ಮೇಲ್ಭಾಗಕ್ಕೆ ತಗುಲುವುದಿಲ್ಲ. ಕ್ಷುದ್ರಗ್ರಹ 2010 FR ಭೂಮಿಗೆ ಅಪ್ಪಳಿಸುವ ಸಾಧ್ಯೆ ಶೂನ್ಯ ಎಂದು ನಾಸಾದ ಕ್ಷುದ್ರಗ್ರಹ ವೀಕ್ಷಣಾ ವಿಭಾಗ ತಿಳಿಸಿದೆ.

ಚಂದ್ರನ ಅಂಗಳಕ್ಕೆ ಕಾಲಿಟ್ಟು ಒಂದು ವರ್ಷ ಕಳೆದ ಚಂದ್ರಯಾನ-2ರ ಆರ್ಬಿಟರ್

ಭೂಮಿಯ ಕಕ್ಷೆಯನ್ನು ಹಾದು ಹೋಗುವುದರಿಂದ ಕ್ಷುದ್ರಗ್ರಹ 465824 (2010 FR) ಅನ್ನು ಅಪೊಲೋ ಕ್ಷುದ್ರಗ್ರಹ ಎಂದು ವರ್ಗೀಕರಿಸಲಾಗಿದೆ. ಈ ಆಕಾಶದ ವಸ್ತುವು ನಮ್ಮ ಗ್ರಹದ ಕಕ್ಷೆಯತ್ತ ಗಂಟೆಗೆ 31,400 ಮೈಲು ವೇಗದಲ್ಲಿ ಧಾವಿಸಿ ಬರಲಿದೆ. ಮುಂದೆ ಓದಿ.

ಚಂದ್ರನಿಗಿಂತಲೂ 19 ಪಟ್ಟು ದೂರ

ಚಂದ್ರನಿಗಿಂತಲೂ 19 ಪಟ್ಟು ದೂರ

ನಮ್ಮ ತಾರಾಲಯ ರಕ್ಷಣಾ ಪರಿಣತರು ಕ್ಷುದ್ರಗ್ರಹ 2010 FR ಬಗ್ಗೆ ಯಾವುದೇ ಚಿಂತೆ ಹೊಂದಿಲ್ಲ. ನೀವೂ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಅದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇಲ್ಲವೇ ಇಲ್ಲ. ಅದು ಸೆ. 6ರಂದು ಭೂಮಿಯಿಂದ ಸುರಕ್ಷಿತವಾಗಿ ಸಾಗಲಿದೆ. ಭೂಮಿಯಿಂದ ಅದು 4.6 ಮಿಲಿಯನ್ ಮೈಲುಗಳಷ್ಟು ದೂರ, ಅಂದರೆ ನಮ್ಮ ಚಂದ್ರನಿಗಿರುವ ದೂರಕ್ಕಿಂತಲೂ 19ಕ್ಕೂ ಹೆಚ್ಚು ಪಟ್ಟು ದೂರದಲ್ಲಿ ಸಾಗಲಿದೆ ಎಂದು ನಾಸಾ ಹೇಳಿದೆ.

ಭೂಮಿಗೆ ಅಪ್ಪಳಿಸುವ ಉಲ್ಕೆಗಳು

ಭೂಮಿಗೆ ಅಪ್ಪಳಿಸುವ ಉಲ್ಕೆಗಳು

ಈ ಕ್ಷುದ್ರಗ್ರಹವನ್ನು ಕ್ಯಾಟೆಲಿನಾ ಸ್ಕೈ ಸರ್ವೆ (ಸಿಎಸ್ಎಸ್) 2010ರ ಮಾರ್ಚ್ 18ರಂದು ಪತ್ತೆಹಚ್ಚಿತ್ತು. ನಾಸಾದ ಸಿಎನ್‌ಇಒಎಸ್ ಅಂದಿನಿಂದಲೂ ಈ ಬಾಹ್ಯಾಕಾಶದ ಬಂಡೆಯ ಚಲನೆಯನ್ನು ಗಮನಿಸುತ್ತಿದೆ. ಇದು ಭೂಮಿಯ ದಾರಿಯಲ್ಲಿ ಹಾದುಹೋಗುವ ಮೊದಲ ಕ್ಷುದ್ರಗ್ರಹವೇನಲ್ಲ. ವಿಜ್ಞಾನಿಗಳ ಪ್ರಕಾರ ಬಹಳ ಸಣ್ಣ ಕ್ಷುದ್ರಗ್ರಹಗಳ ತುಣುಕುಗಳು ಹಾಗೂ ಉಲ್ಕೆ, ಧೂಮಕೇತುಗಳು ಭೂಮಿಯ ವಾತಾವರಣಕ್ಕೆ ಪ್ರತಿದಿನವೂ ಅಪ್ಪಳಿಸುತ್ತವೆ ಮತ್ತು ಸ್ಫೋಟಿಸುತ್ತವೆ. ಈ ಘಟನೆಗಳು ರಾತ್ರಿ ವೇಳೆ ಗೋಚರಿಸುತ್ತವೆ.

ಚಂದ್ರನಲ್ಲಿ ಮನೆ ಕಟ್ಟಲು ಬೆಂಗಳೂರಿನ ವಿಜ್ಞಾನಿಗಳಿಂದ ವಿಶೇಷ ಇಟ್ಟಿಗೆ ತಯಾರಿಕೆ

ಉಳಿದ ಕಲ್ಲಿನ ಅವಶೇಷಗಳು

ಉಳಿದ ಕಲ್ಲಿನ ಅವಶೇಷಗಳು

ಕ್ಷುದ್ರಗ್ರಹಗಳು ಸುಮಾರು 4.6 ಬಿಲಿಯನ್ ವರ್ಷಗಳ ಹಿಂದೆ ನಮ್ಮ ಸೌರ ವ್ಯವಸ್ಥೆ ರಚನೆಯಾಗುವ ಆರಂಭದಲ್ಲಿ ಉಳಿದು ಹೋದ ಕಲ್ಲಿನ ಅವಶೇಷಗಳಾಗಿವೆ. ಇವುಗಳನ್ನು ಕೆಲವೊಮ್ಮೆ ಸಣ್ಣ ಗ್ರಹಗಳು ಎಂದೂ ಕರೆಯಲಾಗುತ್ತದೆ. ಹೆಚ್ಚಿನ ಸಣ್ಣ ಕಲ್ಲುಗಳು ಕ್ಷುದ್ರಗ್ರಹಗಳ ಸಾಲಿನಲ್ಲಿ ಕಾಣಸಿಗುತ್ತವೆ. ಇವು ಮಂಗಳ ಹಾಗೂ ಗುರುಗ್ರಹಗಳ ಮಧ್ಯೆ ಸೂರ್ಯನನ್ನು ಸುತ್ತುತ್ತಿರುತ್ತವೆ.

ಚಂದ್ರನಿಗಿಂತಲೂ ಚಿಕ್ಕದು

ಚಂದ್ರನಿಗಿಂತಲೂ ಚಿಕ್ಕದು

ನಾಸಾ ಪ್ರಕಾರ ಕ್ಷುದ್ರಗ್ರಹಗಳ ಸಾಲಿನಲ್ಲಿರುವ ಅತ್ಯಂತ ದೊಡ್ಡ ಕ್ಷುದ್ರಗ್ರಹ ವೆಸ್ಟಾದ 329 ಮೈಲು (530) ಕಿ.ಮೀ. ವ್ಯಾಸದಿಂದ ಅತಿ ಚಿಕ್ಕದಾದ 33 ಅಡಿ (10 ಮೀಟರ್) ವ್ಯಾಸದವರೆಗಿನ ಗಾತ್ರವನ್ನು ಹೊಂದಿರುತ್ತವೆ. ಒಟ್ಟಾರೆ ಎಲ್ಲ ಕ್ಷುದ್ರಗ್ರಹಗಳನ್ನು ಒಂದು ಸೇರಿಸಿದರೂ ಅವುಗಳ ಗಾತ್ರ ಭೂಮಿಯ ಚಂದ್ರನಿಗಿಂತಲೂ ಚಿಕ್ಕದಾಗಿರುತ್ತದೆ. ಇವುಗಳಿಗೆ ನಿರ್ದಿಷ್ಟ ಗಾತ್ರವಿರುವುದಿಲ್ಲ. ಕೆಲವು ಮಾತ್ರ ಗೋಳಾಕಾರ ಹೊಂದಿರುತ್ತವೆ. ಹೆಚ್ಚಿನವು ಕುಳಿಗಳಿಂದ ತುಂಬಿರುತ್ತವೆ.

ಭೂಮಿಗೆ ಹಾನಿ ಮಾಡಬಲ್ಲವೇ?

ಭೂಮಿಗೆ ಹಾನಿ ಮಾಡಬಲ್ಲವೇ?

ಬಹುತೇಕ ಭೂ ಸಾಮೀಪ್ಯದ ವಸ್ತುಗಳು (ಎನ್‌ಇಒ), ಅಂದರೆ ಕ್ಷುದ್ರಗ್ರಹ ಅಥವಾ ಧೂಮಕೇತುಗಳು ಭೂಮಿಯ ವಾತಾವರಣದೊಳಗೆ ಧಾವಿಸುವ ಪ್ರವೇಶಿಸಿ ಮೇಲ್ಮೈಗೆ ತಲುಪುವ ಮೊದಲೇ ನಾಶವಾಗುತ್ತವೆ. ಇದರಿಂದಾಗಿ ಪ್ರತಿ ದಿನ ಭೂಮಿಯ ವಾತಾವರಣದಲ್ಲಿ 100 ಟನ್‌ಗಳಿಗೂ ಅಧಿಕ ದೂಳಿನ ಕಣಗಳು ತುಂಬಿಕೊಳ್ಳುತ್ತವೆ. ಆದರೆ 98-164 ಅಡಿಗಳಿಗಿಂತ ಹೆಚ್ಚಿರುವ ಎನ್‌ಇಒಗಳು ತಾವು ಅಪ್ಪಳಿಸುವ ಸ್ಥಳದಲ್ಲಿ ಹೆಚ್ಚಿನ ಹಾನಿ ಉಂಟುಮಾಡಬಲ್ಲವು. ಮುಂದಿನ 100 ವರ್ಷದಲ್ಲಿ ಭೂಮಿಗೆ ದೊಡ್ಡ ಮಟ್ಟದಲ್ಲಿ ಹಾನಿ ಮಾಡುವಂತಹ ಯಾವುದೇ ಕ್ಷುದ್ರಗ್ರಹ ಕಂಡುಬಂದಿಲ್ಲ ಎಂದು ನಾಸಾ ತಿಳಿಸಿದೆ.

ನೂರು ವರ್ಷದಲ್ಲಿ ಒಂದು ಗ್ರಹ

ನೂರು ವರ್ಷದಲ್ಲಿ ಒಂದು ಗ್ರಹ

150ಕ್ಕೂ ಅಧಿಕ ಕ್ಷುದ್ರಗ್ರಹಗಳು ಸಣ್ಣ ಚಂದ್ರನನ್ನು ಸಂಗಾತಿಗಳಾಗಿ ಹೊಂದಿವೆ. ಕೆಲವು ಕ್ಷುದ್ರಗ್ರಹಗಳಿಗೆ ಎರಡು ಚಂದ್ರಗಳಿವೆ. ನಾಸಾ ಇದುವರೆಗೂ 9,94,385 ಕ್ಷುದ್ರಗ್ರಹಗಳನ್ನು ಗುರುತಿಸಿವೆ. ನಾಸಾ ಗುರುತಿಸಿರುವ ಕ್ಷುದ್ರ ಗ್ರಹಗಳ ಪೈಕಿ 714ರಲ್ಲಿ 1 ಭಾಗದಷ್ಟು ಮಾತ್ರವೇ ಅತ್ಯಧಿಕ ಹಾನಿಯ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. 2009 FD ಎಂಬ ಕ್ಷುದ್ರಗ್ರಹ 2185ರಲ್ಲಿ ಈ ಪರಿಣಾಮ ಉಂಟುಮಾಡುವ ಸಂಭವ ಇದೆ. ಅದರ ಪರಿಣಾಮ ಶೇ 0.2ಕ್ಕಿಂತಲೂ ಕಡಿಮೆ ಇರಲಿದೆ ಎಂದು ನಾಸಾ ಹೇಳಿದೆ.

English summary
Explainer: Asteroid 465824 2010 FR which is twice as big as Pyramid of Giza will cross Earth's orbit on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X