ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ಪರಿಣಾಮ: ಮಹಿಳೆಯರಿಗೆ ಕಾಡುತ್ತಿದೆ ಋತುಚಕ್ರ ಸಮಸ್ಯೆ

|
Google Oneindia Kannada News

ದೊಪ್ಪನೆ ಬಂದೆರಗಿದ ಕೊರೊನಾ ವೈರಸ್ ನಿಂದ ಇಡೀ ವಿಶ್ವದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈ ಮಹಾಮಾರಿಯನ್ನು ತಡೆಗಟ್ಟಲು ಬಹುತೇಕ ದೇಶಗಳು ಲಾಕ್ ಡೌನ್ ಮಂತ್ರವನ್ನು ಜಪಿಸುತ್ತಿವೆ. ಒಂದ್ಕಡೆ, ಕೋವಿಡ್-19 ಆತಂಕ. ಇನ್ನೊಂದು ಕಡೆ ಲಾಕ್ ಡೌನ್. ಇವೆರಡೂ ಮನುಷ್ಯರಲ್ಲಿ ಮಾನಸಿಕವಾಗಿ ಒತ್ತಡ ಉಂಟು ಮಾಡುತ್ತಿದೆ.

ಈ ಮಧ್ಯೆ ಲಾಕ್ ಡೌನ್ ನಿಂದ ಮಹಿಳೆಯರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಅತಿಯಾದ ಒತ್ತಡ ಮತ್ತು ಭೀತಿಯಿಂದ ಮಹಿಳೆಯರು ಋತುಚಕ್ರದ ಸಮಸ್ಯೆ ಎದುರಿಸುತ್ತಿದ್ದಾರೆ.

ಕೋವಿಡ್19: ಮಾನಸಿಕ ಆರೋಗ್ಯ ಸಮಸ್ಯೆ ನಿವಾರಣೆ ಹೇಗೆ?ಕೋವಿಡ್19: ಮಾನಸಿಕ ಆರೋಗ್ಯ ಸಮಸ್ಯೆ ನಿವಾರಣೆ ಹೇಗೆ?

ದಿನಗಟ್ಟಲೆ ಮನೆಯಲ್ಲಿ ಲಾಕ್ ಆಗಿರುವ ಕಾರಣ, ಮಹಿಳೆಯರ ಊಟ, ನಿದ್ರೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಭಾರಿ ವ್ಯತ್ಯಾಸವಾಗಿದೆ. ಇದು ಋತುಚಕ್ರದ ಮೇಲೂ ಪ್ರಭಾವ ಬೀರಿದೆ ಎನ್ನುತ್ತಾರೆ ವೈದ್ಯರು.

ಮುಟ್ಟು ವಿಳಂಬ

ಮುಟ್ಟು ವಿಳಂಬ

''ಅತಿಯಾದ ಒತ್ತಡ, ಆತಂಕ ಕೆಲವರಲ್ಲಿ ತಲೆನೋವು ತರಿಸಬಹುದು. ಹಾಗೇ, ಋತುಚಕ್ರಕ್ಕೂ ಅಡ್ಡಿಯುಂಟು ಮಾಡಬಹುದು. ನಿಯಮಿತ ಅವಧಿಯಲ್ಲಿ ಋತುಸ್ರಾವ ಸಂಭವಿಸಬೇಕು ಅಂದ್ರೆ ನಿರ್ದಿಷ್ಟ ದಿನಚರಿ ಮತ್ತು ಆರೋಗ್ಯಕರ ಜೀವನ ನಡೆಸಬೇಕು. ಆದರೆ ಕೋವಿಡ್-19 ಲಾಕ್ ಡೌನ್ ನಿಂದ ದಿನ ನಿತ್ಯದ ಚಟುವಟಿಕೆಗಳಲ್ಲಿ ವ್ಯತ್ಯಾಸವಾಗಿದ್ದು, ಹಲವು ಮಹಿಳೆಯರಲ್ಲಿ ಮುಟ್ಟು ವಿಳಂಬವಾಗುತ್ತಿದೆ'' ಎನ್ನುತ್ತಾರೆ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಜ್ಞೆ ಡಾ.ಮಾಧುರಿಮಾ ಕುಮಾರ್. ''ಒತ್ತಡದಿಂದಾಗಿ ದೇಹದಲ್ಲಿ ಹೆಚ್ಚು ಕಾರ್ಟಿಸೋಲ್ ಉತ್ಪತ್ತಿಯಾಗುತ್ತದೆ. ಈ ಕಾರ್ಟಿಸೋಲ್ ಹಾರ್ಮೋನ್ ನಮ್ಮ ಸಂತಾನೋತ್ಪತ್ತಿ ಹಾರ್ಮೋನುಗಳನ್ನು ನಿಗ್ರಹಿಸುತ್ತದೆ'' ಎಂದು ವಿವರಿಸುತ್ತಾರೆ ಡಾ.ಮಾಧುರಿಮಾ ಕುಮಾರ್.

ಆತಂಕ, ಒತ್ತಡ ಕಾರಣ

ಆತಂಕ, ಒತ್ತಡ ಕಾರಣ

''ಒತ್ತಡದಿಂದ ಹಾರ್ಮೋನುಗಳಲ್ಲಿ ಅಸಮತೋಲನವಾಗಲಿದ್ದು, ಪಿಸಿಓಎಸ್ ಕೂಡ ಉಂಟಾಗಬಹುದು. ಕೊರೊನಾ ಸೋಂಕು ಯಾವಾಗ ನಿಲ್ಲುತ್ತೆ.? ಲಾಕ್ ಡೌನ್ ಯಾವಾಗ ಮುಗಿಯುತ್ತೆ.? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲ. ಹೀಗಾಗಿ ಹಲವರಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದ ಆಹಾರ ಸೇವನೆ ಮತ್ತು ನಿದ್ದೆಗೆ ಭಂಗವಾದರೆ, ಋತುಸ್ರಾವ ಕೂಡ ಸರಿಯಾದ ಸಮಯಕ್ಕೆ ಆಗಲ್ಲ'' ಎನ್ನುತ್ತಾರೆ ಡಾ.ಶ್ವೇತಾ ಗೋಸ್ವಾಮಿ.

ಕೊರೊನಾ ಲಾಕ್ ಡೌನ್ ಮಾನಸಿಕ ಸಮಸ್ಯೆಗಳು; ವೈದ್ಯರು ಹೇಳೋದೇನು?ಕೊರೊನಾ ಲಾಕ್ ಡೌನ್ ಮಾನಸಿಕ ಸಮಸ್ಯೆಗಳು; ವೈದ್ಯರು ಹೇಳೋದೇನು?

ಅಸಮತೋಲನ ಉಂಟಾದರೆ...

ಅಸಮತೋಲನ ಉಂಟಾದರೆ...

''ಒತ್ತಡದಿಂದ ದೇಹದಲ್ಲಿ ಇನ್ಸುಲಿನ್ ಅಸಮತೋಲನ ಜಾಸ್ತಿಯಾಗಲಿದೆ. ಇದು ಲೆಪ್ಟಿನ್ ಹಾರ್ಮೋನ್ ಸ್ರವಿಸುವಿಕೆಗೆ ಕಾರಣವಾಗುತ್ತದೆ. ಪರಿಣಾಮ, 30 ದಿನಗಳಿಗೊಮ್ಮೆ ಋತುಸ್ರಾವ ಉಂಟಾಗುತ್ತಿದ್ದ ಮಹಿಳೆಯರಲ್ಲಿ 7-8 ದಿನ ಡಿಲೇ ಆಗಬಹುದು. ಹಾರ್ಮೋನ್ ಗಳಲ್ಲಿ ಅಸಮತೋಲನ ಹೆಚ್ಚಾದರೆ, ಕೂದಲು ಉದುರಲು ಆರಂಭವಾಗುತ್ತದೆ. ತೂಕದಲ್ಲೂ ವ್ಯತ್ಯಾಸವಾಗುತ್ತದೆ. ಹೀಗಾಗಿ, ಮಹಿಳೆಯರು ಆರೋಗ್ಯಕರ ಜೀವನ ಕ್ರಮವನ್ನು ಅನುಸರಿಸಿ'' ಎಂದು ಸಲಹೆ ನೀಡುತ್ತಾರೆ ಡಾ.ಶ್ವೇತಾ ಗೋಸ್ವಾಮಿ.

ಆರೋಗ್ಯಕರ ಆಹಾರ ಸೇವಿಸಿ

ಆರೋಗ್ಯಕರ ಆಹಾರ ಸೇವಿಸಿ

ಮುಟ್ಟಾದಾಗ ಒತ್ತಡದಿಂದಾಗಿ ಅತಿಯಾದ ರಕ್ತಸ್ರಾವ ಮತ್ತು ನೋವು ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ, ಫ್ಯಾಟ್ ಇರುವ ಆಹಾರವನ್ನು ನಿಯಮಿತಗೊಳಿಸಿ, ಆರೋಗ್ಯಕರ ಆಹಾರ ಸೇವಿಸಿ. ಯೋಗ ಮತ್ತು ವ್ಯಾಯಾಮ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎನ್ನುತ್ತಾರೆ ವೈದ್ಯರು.

ಶಾಂತಚಿತ್ತವಾಗಿರಿ..

ಶಾಂತಚಿತ್ತವಾಗಿರಿ..

ಲಾಕ್ ಡೌನ್ ಮತ್ತು ಕೊರೊನಾ ಬಗ್ಗೆ ಹೆಚ್ಚು ಆತಂಕಕ್ಕೊಳಗಾಗದೆ, ನಿಮ್ಮ ಮನಸ್ಸನ್ನು ಶಾಂತಚಿತ್ತವಾಗಿಟ್ಟುಕೊಳ್ಳಿ. ನಿರ್ದಿಷ್ಟ ದಿನಚರಿಯನ್ನು ರೂಪಿಸಿಕೊಂಡು, ಅದನ್ನು ತಪ್ಪದೆ ಪಾಲಿಸಿ. ಆರೋಗ್ಯಕರ ಆಹಾರ ಸೇವಿಸಿ, ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಿ. ನಿಮ್ಮ ಮನಸ್ಸು ಮತ್ತು ದೇಹ ಗಟ್ಟಿಯಾಗಿದ್ದರೆ, ಕೊರೊನಾ ವಿರುದ್ಧ ಶಕ್ತಿಯುತವಾಗಿ ಹೋರಾಡಬಹುದು.

English summary
Coronavirus Lockdown effect: Women experience Irregular periods and intense cramps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X