ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೋತ್ತರ ಸಮೀಕ್ಷೆ: ಯಾವ ಪಕ್ಷಕ್ಕೆ ಎಷ್ಟು ಸೀಟು?

|
Google Oneindia Kannada News

ಬೆಂಗಳೂರು, ಡಿಸೆಂಬರ್ 5: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯ ಮತದಾನದ ಪ್ರಕ್ರಿಯೆ ಪೂರ್ಣಗೊಂಡಿದೆ. ಅನರ್ಹ ಶಾಸಕರನ್ನು ತಿರಸ್ಕರಿಸಿ ಎಂದು ವಿರೋಧಪಕ್ಷಗಳ ನಾಯಕರು ಮತ್ತು ಬಿಜೆಪಿ ವಿರೋಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಯಾನವನ್ನೇ ನಡೆಸಿದ್ದರು. ಇತ್ತ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗದಂತೆ ತಡೆಯಲು, ಸುಭದ್ರ ಹಾಗೂ ಸ್ಥಿರ ಸರ್ಕಾರಕ್ಕಾಗಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಬಿಜೆಪಿ ನಾಯಕರು ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಅನರ್ಹ ಶಾಸಕರನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದರು.

ಅನರ್ಹ ಶಾಸಕರನ್ನು ಸೋಲಿಸುವ ಮೂಲಕ ಪಕ್ಷಾಂತರಿಗಳಿಗೆ ತಕ್ಕಪಾಠ ಕಲಿಸುತ್ತಾರೆಯೇ ಅಥವಾ ಅನರ್ಹರನ್ನು 'ಅರ್ಹ'ರನ್ನಾಗಿಸುತ್ತಾರೆಯೇ ಎಂಬುದು ಸದ್ಯಕ್ಕೆ ಇರುವ ಪ್ರಶ್ನೆ. ಇದಕ್ಕೆ ಅಧಿಕೃತ ಉತ್ತರ ಸಿಗಲು ಡಿ.9ರ ಫಲಿತಾಂಶದ ದಿನದವರೆಗೂ ಕಾಯಬೇಕು. ಗುರುವಾರ ನಡೆದ ಚುನಾವಣೆಯಲ್ಲಿ ಮತದಾರರ ಅಭಿಪ್ರಾಯ ಮತಯಂತ್ರಗಳಲ್ಲಿ ಸೇರಿಕೊಂಡಿವೆ.

ಯಡಿಯೂರಪ್ಪ ಬೆಚ್ಚುವಂತೆ ಮಾಡಿದ ಆಂತರಿಕ ಸಮೀಕ್ಷೆ ರಿಸಲ್ಟ್!ಯಡಿಯೂರಪ್ಪ ಬೆಚ್ಚುವಂತೆ ಮಾಡಿದ ಆಂತರಿಕ ಸಮೀಕ್ಷೆ ರಿಸಲ್ಟ್!

ಫಲಿತಾಂಶ ಹೊರಬೀಳುವುದಕ್ಕೂ ಮೊದಲೇ ವಿವಿಧ ಸುದ್ದಿವಾಹಿನಿಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಿವೆ. ಯಾವ ಮಾಧ್ಯಮ, ಯಾವ ಪಕ್ಷಕ್ಕೆ ಎಷ್ಟು ಸೀಟುಗಳು ಸಿಗಲಿವೆ ಎಂಬ ಲೆಕ್ಕಾಚಾರವನ್ನು ನೀಡಿದ್ದು, ಅವುಗಳ ಮಾಹಿತಿ ಇಲ್ಲಿದೆ. ಇಲ್ಲಿ ನೀಡಿರುವ ಸಮೀಕ್ಷಾ ಲೆಕ್ಕಾಚಾರ ಆಯಾ ಮಾಧ್ಯಮಗಳು ನೀಡಿದ ವರದಿಗಳಾಗಿದ್ದು, ಅವುಗಳನ್ನು 'ಒನ್ ಇಂಡಿಯಾ' ಪ್ರಮಾಣೀಕರಿಸುವುದಿಲ್ಲ.

ಸಿ-ವೋಟರ್ ಸಮೀಕ್ಷೆ

ಸಿ-ವೋಟರ್ ಸಮೀಕ್ಷೆ

ಬಿಜೆಪಿ- 9 ರಿಂದ 12

ಕಾಂಗ್ರೆಸ್- 3 ರಿಂದ 6

ಜೆಡಿಎಸ್- 1

ಪಕ್ಷೇತರ- 0

ಬಿಟಿವಿ ಸಮೀಕ್ಷೆ

ಬಿಟಿವಿ ಸಮೀಕ್ಷೆ

ಬಿಜೆಪಿ- 9

ಕಾಂಗ್ರೆಸ್- 3

ಜೆಡಿಎಸ್- 2

ಇತರೆ- 1

ಪಬ್ಲಿಕ್ ಟಿವಿ ಸಮೀಕ್ಷೆ

ಪಬ್ಲಿಕ್ ಟಿವಿ ಸಮೀಕ್ಷೆ

ಬಿಜೆಪಿ- 8 ರಿಂದ 10

ಕಾಂಗ್ರೆಸ್- 3 ರಿಂದ 5

ಜೆಡಿಎಸ್- 1 ರಿಂದ 2

ಪಕ್ಷೇತರ- 0 ರಿಂದ 1

ದಿಗ್ವಿಜಯ ಎಕ್ಸಿಟ್ ಪೋಲ್

ದಿಗ್ವಿಜಯ ಎಕ್ಸಿಟ್ ಪೋಲ್

ಬಿಜೆಪಿ- 9 ರಿಂದ 11

ಕಾಂಗ್ರೆಸ್- 2 ರಿಂದ 4

ಜೆಡಿಎಸ್- 0 ರಿಂದ 2

ಪಕ್ಷೇತರ- 0 ರಿಂದ 1

ಟಿವಿ5 ವಾಹಿನಿ ಎಕ್ಸಿಟ್ ಪೋಲ್

ಟಿವಿ5 ವಾಹಿನಿ ಎಕ್ಸಿಟ್ ಪೋಲ್

ಬಿಜೆಪಿ- 9 ರಿಂದ 11

ಕಾಂಗ್ರೆಸ್- 1 ರಿಂದ 3

ಜೆಡಿಎಸ್- 1 ರಿಂದ 2

ಪಕ್ಷೇತರ- 0 ರಿಂದ 1

English summary
Karnataka by elections in 15 constituencies. Exit poll results released by various media organisations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X