ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ದಾರ್ ಪಟೇಲರ ಸಿದ್ದಾಂತವನ್ನು ಮೋದಿ ಕಿಂಚಿತ್ತೂ ಪಾಲಿಸುತ್ತಿಲ್ಲ: ನಜ್ಮಾ ಚಿಕ್ಕನೇರಳೆ ಸಂದರ್ಶನ

|
Google Oneindia Kannada News

"ಮುಸ್ಲಿಮರು ಎಂದರೆ ಬರೀ ತ್ರಿವಳಿ ತಲಾಖ್, ಗೋಹತ್ಯೆ, ಟಿಪ್ಪು ಜಯಂತಿ ಆಚರಣೆಯಲ್ಲ. ನಮ್ಮದೇ ಆದ ಬಹಳಷ್ಟು ಸಮಸ್ಯೆಗಳಿವೆ, ನಮ್ಮ ರೈತರೂ ಸಂಕಷ್ಟದಲ್ಲಿದ್ದಾರೆ'ಎಂದು ಜೆಡಿಎಸ್ ನಾಯಕಿ ನಜ್ಮಾ ನಜೀರ್ ಚಿಕ್ಕನೇರಳೆ ಹೇಳಿದ್ದಾರೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ, ಸಾಮಾಜಿಕ ಹೋರಾಟಗಾರ್ತಿ, ದಲಿತಪರ ಧ್ವನಿಯೂ ಆಗಿರುವ ನಜ್ಮಾ ನಜೀರ್ ಚಿಕ್ಕನೇರಳೆ, ಜೆಡಿಎಸ್ ಪಕ್ಷವನ್ನು ಸೇರಿದ್ದರು. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರ ಸಮ್ಮುಖದಲ್ಲಿ ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಜೆಡಿಎಸ್ ಪಕ್ಷವನ್ನು ನಜ್ಮಾ ಸೇರಿದ್ದರು.

 ಏನಿದು ಎಚ್.ಡಿ.ಕುಮಾರಸ್ವಾಮಿಯವರ ಮಹತ್ವಾಕಾಂಕ್ಷೆಯ 'ಮಿಷನ್ 123'? ಏನಿದು ಎಚ್.ಡಿ.ಕುಮಾರಸ್ವಾಮಿಯವರ ಮಹತ್ವಾಕಾಂಕ್ಷೆಯ 'ಮಿಷನ್ 123'?

ಎನ್ ಆರ್ ಸಿ, ಸಿಎಎ ವಿರುದ್ದದ ಹೋರಾಟದಲ್ಲೂ ಮಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ನಜ್ಮಾ ಅವರು ಇತ್ತೀಚೆಗೆ, ಒನ್ ಇಂಡಿಯಾ ಕನ್ನಡ ಫೇಸ್ ಬುಕ್ ಸಂವಾದದ 84ನೇ ಸರಣಿಯಲ್ಲಿ ಭಾಗವಹಿಸಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಅಫ್ಘಾನಿಸ್ತಾನದ ಸಮಸ್ಯೆ, ತಾಲಿಬಾನ್, ಮೈಸೂರು ಅತ್ಯಾಚಾರ, ಕೊರೊನಾ ನಿರ್ವಹಣೆ, ಶಾಲಾ ಕಾಲೇಜು ಆರಂಭಿಸುವ ಸರಕಾರದ ನಿರ್ಧಾರದ ವಿಚಾರದಲ್ಲಿ ನಜ್ಮಾ ನೇರಳೆಕಟ್ಟೆ ಸಂವಾದದಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಸಂವಾದದ ಆಯ್ದ ಭಾಗ ಇಂತಿದೆ:

 ನಮ್ಮವರು ನಮ್ಮ ನಾಯಕರಾದರೆ, ನಮಗೆ ನ್ಯಾಯ ಸಿಗುತ್ತೆ ಎನ್ನುವ ಕಾರಣ

ನಮ್ಮವರು ನಮ್ಮ ನಾಯಕರಾದರೆ, ನಮಗೆ ನ್ಯಾಯ ಸಿಗುತ್ತೆ ಎನ್ನುವ ಕಾರಣ

ಪ್ರ: ಪಕ್ಷದ ಯಾವ ಸಿದ್ದಾಂತ ನಿಮ್ಮನ್ನು ಜೆಡಿಎಸ್ ಪಕ್ಷಕ್ಕೆ ಸೆಳೆಯುವಂತೆ ಮಾಡಿತು?
ನಜ್ಮಾ ಚಿಕ್ಕನೇರಳೆ: ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕತೆ ಎನ್ನುವುದು ಮಾಯವಾಗುತ್ತಿದೆ. ವ್ಯವಸ್ಥಿತವಾಗಿ ಎರಡು ರಾಷ್ಟ್ರೀಯ ಪಕ್ಷಗಳು ಒಕ್ಕೂಟ ವ್ಯವಸ್ಥೆಯನ್ನು ಒಡೆದು ಹಾಕಲು ನೋಡುತ್ತಿವೆ. ಕೇಂದ್ರಾಡಳಿತ ಮಾಡುವ ಎಲ್ಲಾ ಪ್ರಯತ್ನಗಳು ನಡೆಯುತ್ತಿರುವುದು ಗೊತ್ತಿರುವ ವಿಚಾರ. ಭಾರತವನ್ನು ವಿವಿಧ ಸಂಸ್ಕೃತಿಗಳ ಆಗರ ಎಂದು ನಾವು ಕರೆಯುತ್ತೇವೆ. ರಾಜಕಾರಣವನ್ನು ನಾವು ಪ್ರಾದೇಶಿಕ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮಾಡಬೇಕಿದೆ. ಅಲ್ಲೆಲ್ಲೋ ಕೂತಿರುವವರಿಗೆ ನಮ್ಮ ಹೊಗೆಸೊಪ್ಪು, ರಾಗಿ ಬೆಳೆಗಾರರ ಸಮಸ್ಯೆ ಅರ್ಥವಾಗುವುದಿಲ್ಲ. ನಮ್ಮವರು ನಮ್ಮ ನಾಯಕರಾದರೆ, ನಮಗೆ ನ್ಯಾಯ ಸಿಗುತ್ತೆ ಎನ್ನುವ ಕಾರಣಕ್ಕಾಗಿ ನಾನು ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡುತ್ತೇನೆ.

 ಅಫಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಇಲ್ಲ ಎಂದು ಮಾಧ್ಯಮಗಳಲ್ಲಿ ಚರ್ಚೆ

ಅಫಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಇಲ್ಲ ಎಂದು ಮಾಧ್ಯಮಗಳಲ್ಲಿ ಚರ್ಚೆ

ಪ್ರ: ಮೈಸೂರು ಅತ್ಯಾಚಾರ ಪ್ರಕರಣ, ಗೃಹ ಸಚಿವರು ನೀಡಿದ ಹೇಳಿಕೆಯ ಬಗ್ಗೆ ಏನಂತೀರಿ?

ನಜ್ಮಾ: ಅಫಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಇಲ್ಲ ಎಂದು ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಹೆಣ್ಣು ಮಕ್ಕಳು ಬುರ್ಖಾ ಹಾಕಿಕೊಂಡೇ ಅಲ್ಲಿ ಓಡಾಡಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ತಾಲಿಬಾನ್ ತರಹದ ಹೇಳಿಕೆಯನ್ನೇ ನಮ್ಮ ಗೃಹ ಮಂತ್ರಿಗಳು ನೀಡಿದ್ದಾರೆ. ಸಚಿವರು ಹೇಳಿದ ಹಾಗೆ ಸಂಜೆ 7.30 ತುಂಬಾ ಟೈಂ ಏನೂ ಅಲ್ಲ. ಹನ್ನೆರಡು ಗಂಟೆ ರಾತ್ರಿಗೆ ಹೆಣ್ಣು ಮಗಳು ನಿರ್ಭೀತಿಯಿಂದ ಓಡಾಡಿದಳು ಎಂದರೆ ಅದು ನನ್ನ ಹೋರಾಟದ ಫಲ ಎಂದು ಗಾಂಧೀಜಿ ಹೇಳಿದ್ದರು. ತಪ್ಪು ಮಾಡಿದವರ ವಿಚಾರವನ್ನು ಸಚಿವರು ಪ್ರಸ್ತಾವಿಸದೇ, ಅದರಲ್ಲೂ ಪಕ್ಷ ರಾಜಕಾರಣ ಮಾಡುತ್ತಿದ್ದಾರೆ. ಗೃಹ ಸಚಿವರ ಮನಸ್ಥಿತಿಗೂ, ತಾಲಿಬಾಲ್ ಗಳ ಮನಸ್ಥಿತಿಗೂ ಏನೂ ವ್ಯತ್ಯಾಸವಿಲ್ಲ. ಪುರೋಹಿತ ಶಾಹಿಗಳದ್ದೂ ಒಂದೇ ಅಜೆಂಡಾ.

 ಅಫಘಾನಿಸ್ತಾನದ ವಿದ್ಯಮಾನವನ್ನು ಖಂಡಿಸುತ್ತೇನೆ. ಯಾವ ದೇಶದಲ್ಲಿ ಆ ರೀತಿ ಆಗ ಕೂಡದು

ಅಫಘಾನಿಸ್ತಾನದ ವಿದ್ಯಮಾನವನ್ನು ಖಂಡಿಸುತ್ತೇನೆ. ಯಾವ ದೇಶದಲ್ಲಿ ಆ ರೀತಿ ಆಗ ಕೂಡದು

ಪ್ರ: ಅಫಘಾನಿಸ್ತಾನದ ವಿದ್ಯಮಾನದ ಬಗ್ಗೆ ನಿಮ್ಮ ಅಭಿಪ್ರಾಯ?

ನಜ್ಮಾ: ಅಫಘಾನಿಸ್ತಾನದ ವಿದ್ಯಮಾನವನ್ನು ನಾನು ಖಂಡಿಸುತ್ತೇನೆ. ಯಾವ ದೇಶದಲ್ಲಿ ಆ ರೀತಿ ಆಗ ಕೂಡದು. ಧರ್ಮಾಧಾರಿತವಾಗಿ ದೇಶವನ್ನು ಕಟ್ಟಲು ಹೊರಟರೆ ಹೀಗೇ ಆಗುವುದು ಎನ್ನುವುದಕ್ಕೆ ಆ ದೇಶದ ವಿದ್ಯಮಾನ ಒಂದು ಉದಾಹರಣೆ. ಹಿಂದೂ, ಮುಸ್ಲಿಂ ಅಥವಾ ಯಾರೇ ಆಗಿರಲಿ ಧರ್ಮದ ಅಮಲಿನಲ್ಲಿ ರಾಜಕಾರಣ ಮಾಡಬಾರದು. ಮೂಲಭೂತವಾದ ಎಲ್ಲಿರುತ್ತದೋ, ಅಲ್ಲಿ ದೇಶ ಉದ್ದಾರ ಆಗುವುದಿಲ್ಲ ಎನ್ನುವುದಕ್ಕೆ ಅಫ್ಘನ್ ಒಂದು ನಿದರ್ಶನ. ಅಲ್ಲಿನ, ಮಕ್ಕಳ, ಹೆಂಗಸರ ಪರಿಸ್ಥಿತಿಯನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಆ ದೇಶದ ಪರಿಸ್ಥಿತಿ ಯಾರಿಗೂ ಬರದಿರಲಿ, ಕೋಮುವಾದ ಯಾರಿಗೂ ಒಳ್ಳೆಯದಲ್ಲ.
 ಮುಸ್ಲಿಮರಿಗೆ ಯಾವುದೇ ರೀತಿಯ ಸೌಲಭ್ಯ ಇಲ್ಲದಿದ್ದಾಗಲೂ ದೇವೇಗೌಡ್ರ ನೇತೃತ್ವದಲ್ಲಿ ಹೋರಾಟ

ಮುಸ್ಲಿಮರಿಗೆ ಯಾವುದೇ ರೀತಿಯ ಸೌಲಭ್ಯ ಇಲ್ಲದಿದ್ದಾಗಲೂ ದೇವೇಗೌಡ್ರ ನೇತೃತ್ವದಲ್ಲಿ ಹೋರಾಟ

ಪ್ರ: ಜೆಡಿಎಸ್ ಪಕ್ಷ ಇತ್ತೀಚೆಗೆ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿದೆಯಾ?

ನಜ್ಮಾ: ನಮ್ಮ ಪಕ್ಷಕ್ಕೆ ಉಪ ಚುನಾವಣೆಯ ವೇಳೆ ಅಲ್ಪಸಂಖ್ಯಾತರ ಬಗ್ಗೆ ಪ್ರೀತಿ ಹುಟ್ಟಿದ್ದಲ್ಲ. ಮುಸ್ಲಿಮರಿಗೆ ಯಾವುದೇ ರೀತಿಯ ಸೌಲಭ್ಯ ಇಲ್ಲದಿದ್ದಾಗಲೂ ದೇವೇಗೌಡ್ರ ನೇತೃತ್ವದಲ್ಲಿ ಹೋರಾಟವನ್ನು ಮಾಡಲಾಗಿತ್ತು. ಪ್ರತೀ ಬಾರಿಯೂ ನಮ್ಮ ದೇಶ, ಭಾಷಾ ಭಕ್ತಿಯನ್ನು ಪ್ರದರ್ಶಿಸುವ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಸರ್ದಾರ್ ಪಟೇಲ್ ಅವರ ದೊಡ್ಡ ಪುತ್ಥಳಿಯನ್ನು ನಮ್ಮ ಪ್ರಧಾನಿ ಮೋದಿ ನಿರ್ಮಿಸಿದ್ದಾರೆ. ಆದರೆ, ಅವರ ಸಿದ್ದಾಂತವನ್ನು ಒಂದು ಚೂರು ಪಾಲಿಸುತ್ತಿಲ್ಲ. ಸರ್ದಾರ್ ಪಟೇಲರು ಹೇಳಿದ್ದರು, ಯಾವ ದೇಶದಲ್ಲಿ ಅಲ್ಪಸಂಖ್ಯಾತರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೋ, ಆ ದೇಶ ಸುಭಿಕ್ಷವಾಗಿರುತ್ತದೆ ಎಂದು. 2023ರ ಅಸೆಂಬ್ಲಿ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯಯುತವಾಗಿ ಎಷ್ಟು ಟಿಕೆಟ್ ಅನ್ನು ಕೊಡಬೇಕು, ಅದನ್ನು ನಮ್ಮ ಪಕ್ಷ ಕೊಡುತ್ತದೆ.

English summary
Exclusive Interview with JDS Leader Najma Nazeer Chikkanerale on Muslim Community, Triple Talaq, Tippu Jayanti, Cow Slaughter and PM Modi. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X