ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೇಕಾ..! ಇಲ್ಲಿ ಎಲ್ಲವೂ ಉಲ್ಟಾ, ನಕ್ಷತ್ರಕ್ಕೂ ಮೊದಲೇ ಹುಟ್ಟಿತು ಗ್ರಹ..!

|
Google Oneindia Kannada News

ನಕ್ಷತ್ರ ಹುಟ್ಟುವುದಕ್ಕೂ ಮೊದಲೇ ಗ್ರಹವೊಂದು ಜನ್ಮತಾಳುತ್ತಿರುವ ವಿಸ್ಮಯಕಾರಿ ಘಟನೆಯನ್ನ ಬಾಹ್ಯಾಕಾಶ ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಸಾಮಾನ್ಯವಾಗಿ ನಕ್ಷತ್ರ ಜನ್ಮತಾಳಿದ ಬಳಿಕ ಗ್ರಹಗಳು ರೂಪುಗೊಳ್ಳುತ್ತವೆ. ನಮ್ಮ ಭೂಮಿ ಸೇರಿದಂತೆ ಸೌರಮಂಡಲದ ಇತರ ಗ್ರಹಗಳು ಕೂಡ ಇದೇ ರೀತಿ ಸೂರ್ಯನ ಜನನದ ಬಳಿಕ ರೂಪುಗೊಂಡಿರುವುದು. ಆದರೆ ಇದೇ ಮೊದಲಬಾರಿ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಇಂತಹ ವಿಸ್ಮಯಕಾರಿ ಘಟನೆಯನ್ನ ಗುರುತಿಸಿದ್ದಾರೆ.

ಇದೀಗ ತಾನೆ ಹುಟ್ಟಿರುವ ಗ್ರಹ ಇನ್ನೂ ಬಾಲ್ಯಾವಸ್ಥೆಯಲ್ಲಿದೆ, ಆದರೆ ಅದರ ನಕ್ಷತ್ರ ಮಾತ್ರ ಇನ್ನೂ ರೂಪ ಪಡೆಯುತ್ತಲೇ ಇದೆ. ಹೈಡ್ರೋಜನ್ ಮೋಡಗಳ ಗುರುತ್ವ ಬಲದಿಂದ ನಕ್ಷತ್ರ ಜನ್ಮತಾಳುತ್ತದೆ. ಹೀಗೆ ಆ ನಕ್ಷತ್ರದ ಸುತ್ತಲೂ ಹರಡಿರುವ ಸಣ್ಣಪುಟ್ಟ ಮೋಡಗಳೇ ಮುಂದೆ ಗ್ರಹಗಳಾಗುತ್ತವೆ ಎಂಬುದು ಈವರೆಗೂ ಸಾಬೀತಾಗಿದೆ. ಆದರೆ ಇದೀಗ ವಿಜ್ಞಾನಿಗಳು ಪತ್ತೆ ಹಚ್ಚಿರುವುದು ಮಹತ್ವದ ಘಟನೆ. ಏಕೆಂದರೆ ಬ್ರಹ್ಮಾಂಡ ಹೀಗೆ ಇರುತ್ತದೆ, ಹೀಗೆ ಇರಬೇಕು ಎಂಬ ವಾದವನ್ನು ಇದು ಸುಳ್ಳಾಗಿಸುತ್ತಿದೆ. ಇಂತಹ ಅಧ್ಯಯನಗಳ ಮೂಲಕ ಹೊಸ ಗ್ರಹಗಳ ಸಂಶೋಧನೆ ಹಾಗೂ ಭೂಮಿಯ ಪೂರ್ವ ಸ್ಥಿತಿಯನ್ನು ಅಧ್ಯಯನ ಮಾಡುವುದು ಸುಲಭವಾಗಲಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ನಕ್ಷತ್ರದ ಜನನ ಹೇಗೆ..?

ನಕ್ಷತ್ರದ ಜನನ ಹೇಗೆ..?

ಬ್ರಹ್ಮಾಂಡದ ಉಗಮವಾಗಿ ಸುಮಾರು 1375 ಕೋಟಿ ವರ್ಷವಾಗಿದೆ. 1375 ಕೋಟಿ ವರ್ಷದಲ್ಲಿ ಬಿಲಿಯನ್ ಲೆಕ್ಕದಲ್ಲಿ ಗ್ಯಾಲಕ್ಷಿಗಳು ಜನ್ಮತಾಳಿವೆ. ಪ್ರತಿಯೊಂದು ಗ್ಯಾಲಕ್ಸಿಯಲ್ಲೂ ಮತ್ತೊಂದಿಷ್ಟು ಬಿಲಿಯನ್ ನಕ್ಷತ್ರಗಳು, ಗ್ರಹಗಳು ಕೂಡ ಹರಡಿವೆ. ಈ ಸಮೂಹದಲ್ಲಿ ಸೌರಮಂಡಲವೂ ಒಂದು. ಹೀಗೆ ಬ್ರಹ್ಮಾಂಡದಲ್ಲಿ ನಕ್ಷತ್ರಗಳಿಗೆ ವಿಶೇಷ ಸ್ಥಾನಮಾನವಿದೆ. ನಕ್ಷತ್ರಗಳ ಹುಟ್ಟು ಹಾಗೂ ಬೆಳವಣಿಗೆ ಕೋಟಿ ಕೋಟಿ ವರ್ಷಗಳ ಪ್ರಕ್ರಿಯೆ. ಅದು ದಿಢೀರ್ ಎಂದು ಸಂಭವಿಸುವುದಿಲ್ಲ. ದಟ್ಟ ಧೂಳಿನ ಮೋಡಗಳು ಗುರತ್ವದ ಬಲದಿಂದ ಒಂದುಗೂಡಿ, ನಂತರ ಮೋಡದ ಒಳಗೆ ಗುರತ್ವದ ಬಲದಿಂದ ಶಾಖ ಏರ್ಪಡುತ್ತದೆ. ಬಿಸಿ ಹೆಚ್ಚಾಗುತ್ತಾ ಸಾಗಿ ಬೈಜಿಕ ಸಮ್ಮಿಲ ಕ್ರಿಯೆ ಆರಂಭವಾಗುತ್ತದೆ.

ಅಣು ಬಾಂಬ್ ತಯಾರಿಕೆಗೂ ಇದೇ ಮೂಲ

ಅಣು ಬಾಂಬ್ ತಯಾರಿಕೆಗೂ ಇದೇ ಮೂಲ

ಇದನ್ನು ಸಾಮಾನ್ಯವಾಗಿ ಹೇಳುವುದಾದರೆ ಭೂಮಿ ವಿನಾಶಕ್ಕೆ ಮನುಷ್ಯ ಕಂಡುಹಿಡಿದಿರುವ ಅಣುಬಾಂಬ್ ಅಥವಾ ನ್ಯೂಕ್ಲಿಯರ್ ವೆಪನ್ಸ್ ಇದೇ ಮಾದರಿ ಅನುಸರಿಸುತ್ತವೆ. ಆದರೆ ಮಾನವನ ಬಾಂಬ್ ಬೈಜಿಕ ವಿದಳನ ಕ್ರಿಯೆ ಅವಲಂಬಿಸಿರುತ್ತದೆ. ಆದರೆ ನಕ್ಷತ್ರಗಳಲ್ಲಿ ಬೈಜಿಕ ಸಮ್ಮಿಲನ ಕ್ರಿಯೆ ಮೂಲಕ ಅಪಾರ ಪ್ರಮಾಣದಲ್ಲಿ ಶಾಖ ಹಾಗೂ ಶಕ್ತಿ ಬಿಡುಗಡೆಯಾಗುತ್ತದೆ. ಇದೇ ಪ್ರಕ್ರಿಯೆ ಮುಂದೆ ನಕ್ಷತ್ರ ರೂಪಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹೈಡ್ರೋಜನ್ (H1) + ಹೈಡ್ರೋಜನ್ (H1) ಒಂದುಗೂಡಿ ಹೀಲಿಯಂ (H2) ಆಗುತ್ತದೆ. ಮುಂದೆ ಹೀಲಿಯಂ (H2) + ಹೀಲಿಯಂ (H2) ಒಂದುಗೂಡಿ ಬೆರಿಲಿಯಂ (Be4) ಆಗುತ್ತದೆ. ನಕ್ಷತ್ರಗಳ ಬೈಜಿಕ ಸಮ್ಮಿಲನ 1+1ರ ಸೂತ್ರ ಅವಲಂಬಿಸಿರುತ್ತದೆ.

ನಕ್ಷತ್ರವೇ ಮೊದಲು ಹುಟ್ಟುವುದು ಏಕೆ..?

ನಕ್ಷತ್ರವೇ ಮೊದಲು ಹುಟ್ಟುವುದು ಏಕೆ..?

ಒಂದು ಗುಂಪಿಗೆ ನಾಯಕ ಇದ್ದಂತೆ ಗ್ರಹಗಳಿಗೆ ನಕ್ಷತ್ರವೇ ನಾಯಕ. ಮೊದಲು ನಕ್ಷತ್ರವೇ ರೂಪುಗೊಳ್ಳುತ್ತದೆ. ನಂತರ ನಕ್ಷತ್ರದ ಗುರುತ್ವದ ಬಲದಿಂದ ಗ್ರಹಗಳು ರೂಪತಳೆಯುತ್ತವೆ. ಭೂಮಿ ಕೂಡ ಈ ರೀತಿ ಸೂರ್ಯನ ಸುತ್ತ ಸುತ್ತುತ್ತಾ ಜನ್ಮತಾಳಿತ್ತು. ಭೂಮಿ ಮಾತ್ರವಲ್ಲ ಸೌರಮಂಡಲದ ಇತರ ಗ್ರಹಗಳು ಸೂರ್ಯನ ನಂತರವೇ ರೂಪುಗೊಂಡಿದ್ದು. ಆದರೆ ವಿಜ್ಞಾನಿಗಳು ಇದೀಗ ಕಂಡುಹಿಡಿದಿರುವ ಗ್ರಹ ಅದರ ನಕ್ಷತ್ರಕ್ಕಿಂತಲೂ ಮೊದಲೇ ರೂಪುಗೊಂಡಿದೆ. ಇದು ವಿಜ್ಞಾನಿಗಳಿಗೆ ಆಶ್ಚರ್ಯದ ಜೊತೆ ಹೊಸ ಅಧ್ಯಯನ ಕೈಗೊಳ್ಳಲು ಸ್ಫೂರ್ತಿ ನೀಡಿದೆ.

ಮಾನವರಿಗೆ ಲಾಭ ಏನು..?

ಮಾನವರಿಗೆ ಲಾಭ ಏನು..?

ನಕ್ಷತ್ರಗಳು ಇಲ್ಲದೆ ಗ್ರಹಗಳು ಬದುಕಲು ಸಾಧ್ಯವೇ ಇಲ್ಲ. ಏಕೆಂದರೆ ನಕ್ಷತ್ರಗಳು ಗ್ರಹಗಳಿಗೆ ಗಾಡ್ ಫಾದರ್ ಇದ್ದಂತೆ. ನಕ್ಷತ್ರಗಳಿಂದ ಸಿಗುವ ಶಾಖ ಹಾಗೂ ಬೆಳಕು ಗ್ರಹಗಳನ್ನ ಬದುಕಿಸುತ್ತದೆ ಹಾಗೂ ನಕ್ಷತ್ರಗಳ ಸುತ್ತ ಸುತ್ತುವಂತೆ ಪ್ರೇರಿಪಿಸುತ್ತದೆ. ಈ ಪ್ರಕ್ರಿಯೆ ಇಲ್ಲದಿದ್ದರೆ ಅದು ಗ್ರಹವಾಗಿ ಉಳಿಯಲು ಸಾಧ್ಯವಿಲ್ಲ. ಆಗ ಅದು ಕೇವಲ ಕಲ್ಲು ಬಂಡೆಯಾಗಿ ಗುರುತಿಸಲ್ಪಡುತ್ತದೆ. ನಿರ್ಜೀವ ವಸ್ತುವಿನಂತಾಗಿ ಬ್ರಹ್ಮಾಂಡದ ಸುತ್ತಲೂ ಸುತ್ತುವ ಅತೃಪ್ತ ಆತ್ಮವಾಗುತ್ತದೆ. ಆದರೆ ಗ್ರಹಕ್ಕೆ ನಕ್ಷತ್ರವೊಂದು ಇದ್ದರೆ, ಇತರ ಗ್ರಹಗಳ ಜೊತೆ ಅದೂ ಕುಟುಂಬದಲ್ಲಿ ವಾಸಿಸಲು ಸಾಧ್ಯ. ಕಲ್ಲು ಬಂಡೆಗೆ ಗ್ರಹದ ಸ್ಥಾನಮಾನವೂ ಸಿಗುತ್ತದೆ. ಈಗ ವಿಜ್ಞಾನಿಗಳು ಗುರುತಿರುವ ವಿಶಿಷ್ಟ ಗ್ರಹದ ಅಧ್ಯಯನದಿಂದ ಭೂಮಿಯ ಹಿಂದಿನ ಪರಿಸ್ಥಿತಿ ತಿಳಿಯಬಹುದು. ಇದರಿಂದ ಭೂಮಿಯ ತಾಪಮಾನ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಸೂರ್ಯನ ಬಗ್ಗೆ ನಡೆಯುತ್ತಿರುವ ಅಧ್ಯನಕ್ಕೂ ಇಂತಹ ಸಂಶೋಧನೆಗಳು ಸಹಕಾರಿಯಾಗಲಿವೆ.

English summary
Astronomers confirmed the start of an astonishing event in which a planet was born before the star was born. Planets are usually formed after the birth of a star.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X