• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Video: ಇ-ರುಪಿ ಅಗತ್ಯ, ಡಿಜಿಟಲ್ ವಹಿವಾಟು ಬಗ್ಗೆ ಮೋದಿ

|
Google Oneindia Kannada News

eRupi-ಈ ಒಂದು ಬಾರಿಯ ಪಾವತಿ ಕಾರ್ಯವಿಧಾನವಾಗಿದ್ದು ಬಳಕೆದಾರರು ಸೇವಾ ಪೂರೈಕೆದಾರರಲ್ಲಿ ವೋಚರ್ ಅನ್ನು ಪಡೆದುಕೊಳ್ಳಲು ಯಾವುದೇ ಕಾರ್ಡ್, ಡಿಜಿಟಲ್ ಪಾವತಿ (Digital Payments) ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಅಗತ್ಯವಿಲ್ಲ. ಇ-ರುಪಿ (e-RUPI) ಎಂದರೆ, ವಾಸ್ತವವಾಗಿ ಇದು ನಗದುರಹಿತ (Cashless) ಮತ್ತು ಸಂಪರ್ಕವಿಲ್ಲದ ವಿಧಾನವಾಗಿದೆ. ಇದು ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿದೆ, ಇದನ್ನು ಫಲಾನುಭವಿಗಳ ಮೊಬೈಲ್‌ಗೆ ಕಳುಹಿಸಲಾಗುತ್ತದೆ.

 e-RUPI ಎಂದರೇನು?, ಬಳಕೆ ಹೇಗೆ, ಯಾವ ಬ್ಯಾಂಕ್‌ಗಳಲ್ಲಿ ಲಭ್ಯ? e-RUPI ಎಂದರೇನು?, ಬಳಕೆ ಹೇಗೆ, ಯಾವ ಬ್ಯಾಂಕ್‌ಗಳಲ್ಲಿ ಲಭ್ಯ?

ವ್ಯಕ್ತಿ ಮತ್ತು ನಿರ್ದಿಷ್ಟ ಉದ್ದೇಶದ ಡಿಜಿಟಲ್ ಪಾವತಿಗೆ ಪರಿಹಾರ ನೀಡುವ ಇ-ರುಪಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಸ್ಟ್ 2ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಾರಂಭಿಸಿದರು. ಇ-ರುಪಿ ಡಿಜಿಟಲ್ ಪಾವತಿಗಾಗಿ ನಗದುರಹಿತ ಮತ್ತು ಸಂಪರ್ಕವಿಲ್ಲದ ಸಾಧನವಾಗಿದೆ. ಇ- ರುಪಿ ವಿಧಾನವನ್ನು ಲೋಕಾರ್ಪಣೆ ಮಾಡಿ ಪ್ರಧಾನಿ ಮೋದಿ ಅವರು ಡಿಜಿಟಲ್ ವಹಿವಾಟು ಹಾಗೂ ಎಲ್ಲರೂ ತಂತ್ರಜ್ಞಾನ ಬಳಕೆ ಹೇಗೆ ಮಾಡಲು ಸಾಧ್ಯ ಎಂಬುದರ ಬಗ್ಗೆ ಮಾತನಾಡಿದರು.. ವಿಡಿಯೋ ನೋಡಿ ಹಾಗೂ ಭಾಷಣದ ಪೂರ್ಣಪಾಠ ಓದಿ..

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಇ-ರುಪಿ ವೋಚರ್ ನೇರ ಸೌಲಭ್ಯ ವರ್ಗಾವಣೆ - ಡಿಬಿಡಿ ವಲಯದಲ್ಲಿ ಹೆಚ್ಚಿನ ಪರಿಣಾಮಕಾರಿ ಪಾತ್ರ ನಿರ್ವಹಣೆಗೆ ಸಹಕಾರಿಯಾಗಲಿದೆ ಮತ್ತು ಡಿಜಿಟಲ್ ಆಡಳಿತಕ್ಕೆ ಹೊಸ ಆಯಾಮ ನೀಡಲಿದೆ. ಇ-ರುಪಿ ವೋಚರ್ ಉದ್ದೇಶಿತ, ಪಾರದರ್ಶಕ ಮತ್ತು ಸೋರಿಕೆ ರಹಿತವಾಗಿ ಉಚಿತ ಸೇವೆ ಒದಗಿಸಲು ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ. ಇ-ರುಪಿ ಜನರ ಜೀವನದಲ್ಲಿ ತಂತ್ರಜ್ಞಾನವನ್ನು ಹೇಗೆ ಸಂಪರ್ಕಿಸುತ್ತಿದೆ ಎಂಬುದರ ಪ್ರಗತಿಯ ಸಂಕೇತವಾಗಿದೆ. ದೇಶ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಮಯದಲ್ಲಿ ಈ ಉಪಕ್ರಮ ಜಾರಿಯಾಗಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ತಂತ್ರಜ್ಞಾನ ಬಳಕೆ ಎಲ್ಲರಿಗೂ ಲಭ್ಯ

ತಂತ್ರಜ್ಞಾನ ಬಳಕೆ ಎಲ್ಲರಿಗೂ ಲಭ್ಯ

ಯಾವುದೇ ಸಂಘಟನೆ ಯಾವುದೋ ವ್ಯಕ್ತಿಯ ಚಿಕಿತ್ಸೆ, ಶಿಕ್ಷಣ ಅಥವಾ ಇತರೆ ಯಾವುದೇ ಕೆಲಸಕ್ಕೆ ನೆರವು ನೆರವು ನೀಡಲು ಬಯಸಿದವರು ನಗದು ಬದಲು ಇ-ರುಪಿ ವೋಚರ್ ಗಳನ್ನು ನೀಡಬಹುದು. ಇದು ಆತ ನೀಡಿದ ಹಣದ ಮೊತ್ತವನ್ನು ನೀಡಿದ ನಿರ್ದಿಷ್ಟ ಕೆಲಸಕ್ಕೆ ಬಳಸುವುದನ್ನು ಖಾತ್ರಿ ಪಡಿಸುತ್ತದೆ ಎಂದರು.

ಇ-ರುಪಿ ಒಂದು ವ್ಯಕ್ತಿಯಷ್ಟೇ ಅಲ್ಲದೇ ಅದು ನಿರ್ದಿಷ್ಟ ಉದ್ದೇಶವೂ ಸಹ ಆಗಿದೆ. ಯಾವುದೇ ಸಹಾಯ ಅಥವಾ ಯಾವುದೇ ಪ್ರಯೋಜನವನ್ನು ಒದಗಿಸುವ ಉದ್ದೇಶಕ್ಕಾಗಿ ಹಣವನ್ನು ಬಳಸಲಾಗಿದೆಯೇ ಎಂಬುದನ್ನು ಇ-ರುಪಿ ಖಚಿತಪಡಿಸುತ್ತದೆ. ಇದು ಒಂದು ಕಾಲದಲ್ಲಿ ತಂತ್ರಜ್ಞಾನ ಶ್ರೀಮಂತರ ಕಾರ್ಯಕ್ಷೇತ್ರ ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಭಾರತದಂತಹ ಬಡ ದೇಶದಲ್ಲಿ ತಂತ್ರಜ್ಞಾನಕ್ಕೆ ಯಾವುದೇ ಅವಕಾಶವಿಲ್ಲ ಎಂದು ಹೇಳಲಾಗುತ್ತಿತ್ತು.

ತಂತ್ರಜ್ಞಾನ ಪಾರದರ್ಶಕತೆ

ತಂತ್ರಜ್ಞಾನ ಪಾರದರ್ಶಕತೆ

ಈ ಸರ್ಕಾರ ತಂತ್ರಜ್ಞಾನವನ್ನು ಒಂದು ಅಭಿಯಾನವಾಗಿ ತೆಗೆದುಕೊಂಡಾಗ ಅದನ್ನು ಕೆಲವು ರಾಜಕೀಯ ನಾಯಕರು ಮತ್ತು ಕೆಲವು ರೀತಿಯ ತಜ್ಞರ ಪ್ರಶ್ನಿಸಿದ್ದನ್ನು ಸ್ಮರಿಸಿಕೊಂಡರು. ಈ ರೀತಿಯ ವ್ಯಕ್ತಿಗಳ ಆಲೋಚನೆಯನ್ನು ದೇಶ ಇಂದು ನಿರಾಕರಿಸಿದೆ ಮತ್ತು ಅವುಗಳನ್ನು ತಪ್ಪು ಎಂದು ಸಾಬೀತುಪಡಿಸಿದೆ. ಇಂದು ದೇಶದ ಚಿಂತನೆ ವಿಭಿನ್ನವಾಗಿದೆ, ಇದು ಹೊಸತು ಕೂಡ ಆಗಿದೆ. ಇಂದು ತಂತ್ರಜ್ಞಾನ ಬಡವರಿಗೆ ಸಹಾಯ ಮಾಡುವ ಸಾಧನವಾಗಿದ್ದು, ಅವರ ಪ್ರಗತಿಯ ಪರಿಕರವೂ ಆಗಿದೆ ಎಂದರು.

ತಂತ್ರಜ್ಞಾನ ಪಾರದರ್ಶಕತೆ ಮತ್ತು ವಹಿವಾಟಿನಲ್ಲಿ ಸಮಗ್ರತೆ ತರುತ್ತದೆ, ಇದರಿಂದ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಹಾಗೂ ಅವುಗಳನ್ನು ಬಡವರಿಗೆ ಲಭ್ಯವಾಗುವಂತೆ ಮಾಡುತ್ತೇವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಇಂದಿನ ಅನನ್ಯ ಉತ್ಪನ್ನವನ್ನು ತಲುಪಲು ಮೊಬೈಲ್ ಮತ್ತು ಆಧಾರ್ ಅನ್ನು ಸಂಪರ್ಕಿಸುವ ಜೆ.ಎ.ಎಂ ವ್ಯವಸ್ಥೆ ರಚನೆಯ ಅಡಿಪಾಯವನ್ನು ಸಿದ್ಧಪಡಿಸಲಾಗಿದೆ. ಜೆ.ಎ.ಎಂನ ಪ್ರಯೋಜನಗಳು ಜನರಿಗೆ ಗೋಚರಿಸಲು ಸ್ವಲ್ಪ ಸಮಯ ತೆಗೆದುಕೊಂಡಿತು. ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಹೇಗೆ ಸಹಾಯ ಮಾಡಬಹುದು ಎನ್ನುವುದನ್ನು ನಾವು ನೋಡಿದ್ದೇವೆ. ಇತರೆ ದೇಶಗಳ ಜನರಿಗೆ ಸಹಾಯ ಮಾಡಲು ಹೆಣಗಾಡುತ್ತಿವೆ ಎಂದರು.

ಪಿ.ಎಂ. ಕಿಸಾನ್ ನಿಧಿ ಕಾರ್ಯಕ್ರಮ

ಪಿ.ಎಂ. ಕಿಸಾನ್ ನಿಧಿ ಕಾರ್ಯಕ್ರಮ

ನೇರ ನಗದು ವರ್ಗಾವಣೆ ಯೋಜನೆಯಡಿ ಹದಿನೇಳೂವರೆ ಲಕ್ಷ ಕೋಟಿಗೂ ಹೆಚ್ಚು ಜನರ ಖಾತೆಗಳಿಗೆ ಸೌಲಭ್ಯಗಳನ್ನು ನೇರವಾಗಿ ವರ್ಗಾವಣೆ ಮಾಡಬಹುದಾಗಿದೆ. 300 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಡಿಬಿಟಿ ಬಳಸಲಾಗುತ್ತಿದೆ. ಎಲ್.ಪಿ.ಜಿ, ಪಡಿತರ ಚೀಟಿ, ವೈದ್ಯಕೀಯ ಚಿಕಿತ್ಸೆ, ವಿದ್ಯಾರ್ಥಿ ವೇತನ, ಪಿಂಚಣಿ ಅಥವಾ ವೇತನ ವಿತರಣೆ ವಲಯದಲ್ಲಿ 90 ಕೋಟಿ ಭಾರತೀಯರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಡಿಬಿಟಿ ಬಳಸಲಾಗುತ್ತಿದೆ.

ಪಿ.ಎಂ. ಕಿಸಾನ್ ನಿಧಿ ಕಾರ್ಯಕ್ರಮದಡಿ 1 ಲಕ್ಷದ 35 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದ್ದು, ಗೋಧಿ ಖರೀದಿ ಮಾಡಿದ ಹಿನ್ನೆಲೆಯಲ್ಲಿ 85 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಇದೇ ಮಾದರಿಯಲ್ಲಿ ವರ್ಗಾವಣೆ ಮಾಡಲಾಗಿದೆ. ''ಮತ್ತೊಂದು ಅತಿ ದೊಡ್ಡ ಲಾಭವೆಂದರೆ 1 ಲಕ್ಷದ 78 ಸಾವಿರ ಕೋಟಿ ರೂಪಾಯಿ ತಪ್ಪು ವ್ಯಕ್ತಿಗಳ ಕೈಗೆ ಹೋಗುವುದನ್ನು ಸಹ ತಪ್ಪಿಸಲಾಗಿದೆ''ಎಂದು ಹೇಳಿದರು.

ಭಾರತದಲ್ಲಿ ಬಡವರು ಮತ್ತು ಅವಕಾಶ ವಂಚಿತರು, ಸಣ್ಣ ಉದ್ದಿಮೆದಾರರು, ರೈತರು ಮತ್ತು ಬುಡಕಟ್ಟು ಜನರನ್ನು ಸಬಲೀಕರಣಗೊಳಿಸಿದೆ. ಜುಲೈ ತಿಂಗಳಲ್ಲಿ 300 ಕೋಟಿ ಯುಪಿಐ ಡಿಜಿಟಲ್ ವಹಿವಾಟು ನಡೆದಿದ್ದು, ಇದರ ಒಟ್ಟು ಮೊತ್ತ 6 ಲಕ್ಷ ಕೋಟಿ ರೂಪಾಯಿ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು.

ಪಿಎಂ ಸನ್ನಿಧಿ ಯೋಜನೆ

ಪಿಎಂ ಸನ್ನಿಧಿ ಯೋಜನೆ

ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮತ್ತು ಅದಕ್ಕೆ ಹೊಂದಿಕೊಳ್ಳುವಲ್ಲಿ ಭಾರತವು ಯಾರಿಗೂ ಸಾಟಿಯಿಲ್ಲ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸುತ್ತಿದೆ. ಅವಿಷ್ಕಾರಗಳು, ತಂತ್ರಜ್ಞಾನದ ಬಳಕೆ ಮತ್ತು ಸೇವಾ ವಿತರಣೆಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳೊಂದಿಗೆ ಜಾಗತಿಕ ನಾಯಕತ್ವ ನೀಡುವ ಸಾಮರ್ಥ್ಯ ಭಾರತಕ್ಕಿದೆ ಎಂದು ಹೇಳಿದರು.

ಪಿಎಂ ಸನ್ನಿಧಿ ಯೋಜನೆಯಿಂದ ಸಣ‍್ಣ ಪಟ್ಟಣಗಳು ಮತ್ತು ದೊಡ್ಡ ನಗರಗಳ 23 ಲಕ್ಷ ವ್ಯಾಪಾರಿಗಳಿಗೆ ಸಹಾಯವಾಗಿದೆ. ಈ ಸಾಂಕ್ರಾಮಿಕ ಸಂದರ್ಭದಲ್ಲಿ ಸುಮಾರು 2,300 ಕೋಟಿ ರೂಪಾಯಿ ನೆರವನ್ನು ಇವರಿಗೆ ವಿತರಣೆ ಮಾಡಲಾಗಿದೆ. ಡಿಜಿಟಲ್ ಮೂಲ ಸೌಕರ್ಯ ಮತ್ತು ಡಿಜಿಟಲ್ ವಹಿವಾಟು ವಲಯದಲ್ಲಿ 6-7 ವರ್ಷಗಳಲ್ಲಿ ದೇಶದಲ್ಲಿ ಮಾಡಿದ ಕೆಲಸದ ಪರಿಣಾಮವನ್ನು ಜಗತ್ತು ಗುರುತಿಸಿದೆ. ವಿಶೇಷವಾಗಿ ಭಾರತದಲ್ಲಿ ಅಭಿವೃಧ‍್ಧಿ ಹೊಂದಿದ ದೇಶಗಳಲ್ಲಿಯೂ ಇಲ್ಲದಂತಹ ಹಣಕಾಸು ತಂತ್ರಜ್ಞಾನದ ಬೃಹತ್ ನೆಲೆಯನ್ನು ರಚಿಸಲಾಗಿದೆ ಎಂದು ಹೇಳಿದರು.

English summary
eRUPI voucher will play a huge role in making DBT more effective and will give a new dimension to digital governance: PM Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X