ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿನ ಮೂಲ ವುಹಾನ್ ಮಾರುಕಟ್ಟೆ ಒಂದು ವರ್ಷದ ನಂತರ ಈಗ ಹೇಗಿದೆ?

|
Google Oneindia Kannada News

ಬೀಜಿಂಗ್, ಡಿಸೆಂಬರ್ 11: ಸದಾ ಗಿಜಿಗುಡುತ್ತಿದ್ದ ಚೀನಾದ ವುಹಾನ್ ನಗರದ ಮಾರುಕಟ್ಟೆ ಕಳೆದ ವರ್ಷ ಇಡೀ ಜಗತ್ತನ್ನೇ ನಡುಗಿಸುವಂತೆ ಮಾಡಿತ್ತು. ಹಸಿ ಮಾಂಸಗಳು, ಜೀವಂದ ಪ್ರಾಣಿಗಳನ್ನು ಖಾದ್ಯಕ್ಕಾಗಿ ಮಾರಾಟ ಮಾಡುವ ಈ ಮಾರುಕಟ್ಟೆಯ ಇಡೀ ಸನ್ನಿವೇಶವೇ 2019ರ ಡಿಸೆಂಬರ್ 31ರ ವೇಳೆಗೆ ಬದಲಾಗಿತ್ತು.

ಈ ಮಾರುಕಟ್ಟೆಗೆ ಸಂಬಂಧಿಸಿದವರಲ್ಲಿ ನಿಗೂಢ ನ್ಯುಮೋನಿಯಾದ ನಾಲ್ಕು ಪ್ರಕರಣಗಳು ವರದಿಯಾದ ಬಳಿಕ ರಾತ್ರೋರಾತ್ರಿ ಮಾರುಕಟ್ಟೆಯನ್ನು ಬಂದ್ ಮಾಡಲಾಗಿತ್ತು. ತಿಂಗಳ ಅಂತ್ಯದ ವೇಳೆಗೆ ವುಹಾನ್ ನಗರ 76 ದಿನಗಳ ಲಾಕ್‌ಡೌನ್‌ಗೆ ಒಳಗಾಯಿತು. ಲಾಕ್‌ಡೌನ್ ಜಾರಿಗೆ ಕೆಲವೇ ಗಂಟೆಗಳ ಮುಂಚೆಯಷ್ಟೇ ಸೂಚನೆ ಹೊರಡಿಸಲಾಗಿತ್ತು. ಜನರು ಮನೆಯಿಂದ ಹೊರಬರದಂತೆ ನಿಷೇಧಿಸಲಾಯಿತು.

ಚೀನಾ ಹೊಸ ವರಸೆ: ಕೊರೊನಾ ವೈರಸ್ ಬಂದಿದ್ದು ಆಸ್ಟ್ರೇಲಿಯಾದಿಂದ ಅಂತೆ!ಚೀನಾ ಹೊಸ ವರಸೆ: ಕೊರೊನಾ ವೈರಸ್ ಬಂದಿದ್ದು ಆಸ್ಟ್ರೇಲಿಯಾದಿಂದ ಅಂತೆ!

ಈ ಸಂಕಷ್ಟ ಶುರುವಾರ ಒಂದು ವರ್ಷವಾಗಿದೆ. ಕೊರೊನಾ ವೈರಸ್ ಎಂಬ ಮಹಾಮಾರಿ ಸೋಂಕು ಹುಟ್ಟಿದ್ದು ಎಲ್ಲಿಂದ ಎಂಬುದನ್ನು ತಿಳಿಯಲು ವಿಜ್ಞಾನಿಗಳು ಇನ್ನೂ ಸಂಶೋಧನೆ ನಡೆಸುತ್ತಲೇ ಇದ್ದಾರೆ. ಸೋಂಕಿನ ಮೂಲ ವುಹಾನ್ ಎಂದು ಜಗತ್ತಿನ ಎಲ್ಲ ದೇಶಗಳೂ ಬೊಟ್ಟು ಮಾಡುತ್ತಿದ್ದರೂ, ಚೀನಾ ಆ ಆಪಾದನೆಯನ್ನು ಅಮೆರಿಕ, ಭಾರತ, ಆಸ್ಟ್ರೇಲಿಯಾ ಹೀಗೆ ಕಂಡ ಕಂಡ ದೇಶಗಳ ಮೇಲೆಲ್ಲಾ ಹೊರಿಸುತ್ತಿದೆ. ಮುಂದೆ ಓದಿ.

ಮೂಲ ಹುಡುಕಲು ವರ್ಷಗಳೇ ಬೇಕು

ಮೂಲ ಹುಡುಕಲು ವರ್ಷಗಳೇ ಬೇಕು

ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡ ಮಾರುಕಟ್ಟೆ ಇರಲಿ, ಇನ್ನೂ ವುಹಾನ್ ನಗರಕ್ಕೂ ವಿಶ್ವ ಆರೋಗ್ಯ ಸಂಸ್ಥೆ ಈವರೆಗೂ ಭೇಟಿ ನೀಡಿಲ್ಲ. ಸೋಂಕಿನ ಮೂಲವನ್ನು ಹುಡುಕುವ ಪ್ರಯತ್ನಕ್ಕೆ ಹಲವು ವರ್ಷಗಳು ಬೇಕಾಗಬಹುದು ಎಂದು ಚೀನಾ ಮತ್ತು ವಿದೇಶಗಳ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ನಮ್ಮದಲ್ಲ ಎನ್ನುವ ವುಹಾನ್ ಜನತೆ

ನಮ್ಮದಲ್ಲ ಎನ್ನುವ ವುಹಾನ್ ಜನತೆ

ಕೊರೊನಾ ವೈರಸ್ ಸೋಂಕು ಹಾಗೂ ಅದರ ಯಾವ ಲಕ್ಷಣಗಳೂ ಜಗತ್ತಿನ ಯಾವ ಬೇರೆ ದೇಶದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ವುಹಾನ್‌ನ ನಿವಾಸಿಗಳು ಮತ್ತು ವ್ಯಾಪಾರಿಗಳು ವೈರಸ್ ಇದೇ ನಗರದಲ್ಲಿ ಹುಟ್ಟಿತ್ತು ಎಂಬುದನ್ನು ಒಪ್ಪಿಕೊಳ್ಳುತ್ತಿಲ್ಲ. 'ಅದು ವುಹಾನ್‌ನಲ್ಲಿ ಹುಟ್ಟಿರಲು ಸಾಧ್ಯವೇ ಇಲ್ಲ. ಬೇರೆ ಯಾರೋ ವ್ಯಕ್ತಿ ಅದನ್ನು ತಂದಿರುವುದು ಖಚಿತ. ಅಥವಾ ಅದು ವಿದೇಶದಿಂದ ಆಮದಾದ ಯಾವುದಾದರೂ ಉತ್ಪನ್ನದಿಂದಲೇ ಬಂದಿರಬೇಕು. ಆದರೆ ಹೇಗೋ ಇಲ್ಲಿ ಮೊದಲ ಪ್ರಭಾವ ಕಾಣಿಸಿಕೊಂಡಿದೆ' ಎಂದು ಅನೇಕರು ಹೇಳಿದ್ದಾರೆ.

ಭಾರತದಲ್ಲೇ ಕೊರೊನಾ ಸೋಂಕು ಹುಟ್ಟು, ಚೀನಾ ಗಂಭೀರ ಆರೋಪಭಾರತದಲ್ಲೇ ಕೊರೊನಾ ಸೋಂಕು ಹುಟ್ಟು, ಚೀನಾ ಗಂಭೀರ ಆರೋಪ

ಆದರೆ, ಕೊರೊನಾ ವೈರಸ್ ಸೋಂಕಿನ ಮೂಲ ಹುಡುಕುವ ತನಿಖೆಯು ವಾಸ್ತವವಾಗಿ ವುಹಾನ್ ನಗರ ಹಾಗೂ ಈ ಮಾರುಕಟ್ಟೆಯಿಂದಲೇ ಶುರುವಾಗಬೇಕು. ಹೀಗಾಗಿ ಮಾರುಕಟ್ಟೆಯನ್ನು ಸದ್ಯದ ಪರಿಸ್ಥಿತಿಯಲ್ಲಿ ಧ್ವಂಸಗೊಳಿಸುವ ಸಾಧ್ಯತೆ ಕಡಿಮೆ.

ಅಧ್ಯಯನ ಶುರುವಾಗಬೇಕಿರುವುದು ಇಲ್ಲಿಂದ

ಅಧ್ಯಯನ ಶುರುವಾಗಬೇಕಿರುವುದು ಇಲ್ಲಿಂದ

'ಮೊದಲ ಗುಂಪು ಪ್ರಕರಣಗಳು ಶುರುವಾಗಿದ್ದು ಮಾರುಕಟ್ಟೆಯಿಂದ. ಹೀಗಾಗಿ ವೈರಸ್‌ನ ಮೂಲವನ್ನು ಕಂಡುಕೊಳ್ಳಲು ಹಾಗೂ ಅದು ವನ್ಯಜೀವಿಗಳಿಂದ ಹರಡಿದ್ದೇ ಅಥವಾ ಮನುಷ್ಯರ ಕಡೆಯಿಂದಲೇ ಸೃಷ್ಟಿಯಾಗಿದ್ದೇ ಎಂಬ ಕಲ್ಪನೆಗಳಿಗೆ ಉತ್ತರ ಕಂಡುಕೊಳ್ಳಲು ಇಲ್ಲಿಂದಲೇ ಅಧ್ಯಯನ ನಡೆಯಬೇಕಿದೆ' ಎಂದು ಹಾಂಕಾಂಗ್ ವಿಶ್ವವಿದ್ಯಾಲಯದ ವೈರಾಲಜಿ ಪ್ರೊಫೆಸರ್ ಜಿನ್ ಡಾಂಗ್ ಯಾನ್ ಹೇಳಿದ್ದಾರೆ.

ಮುಂದುವರಿದ ನಿರ್ಬಂಧ

ಮುಂದುವರಿದ ನಿರ್ಬಂಧ

ಮಾರುಕಟ್ಟೆಯ ಮೂಲದಿಂದ ಸೋಂಕು ಕಾಣಿಸಿಕೊಂಡು ಒಂದು ವರ್ಷ ಕಳೆದಿದೆ. ಮಾರುಕಟ್ಟೆ ಮುಚ್ಚಿಯೂ ಒಂದು ವರ್ಷವಾಗುತ್ತಾ ಬಂದಿದೆ. ಆಗ ವಿಧಿಸಿದ ಕಠಿಣ ನಿರ್ಬಂಧಗಳು ಈಗಲೂ ಅಲ್ಲಿ ಜಾರಿಯಲ್ಲಿವೆ. ಲಾಕ್‌ಡೌನ್‌ಗೂ ಮುನ್ನ ಮಾರುಕಟ್ಟೆಯ ಬೃಹತ್ ಕಟ್ಟಡಗಳನ್ನು ರೆಡ್ ಮೀಟ್, ಸೀಫುಡ್ ಮತ್ತು ತರಕಾರಿಗಳೆಂದು ವಿಭಜಿಸಿ ನೂರಾರು ಅಂಗಡಿಗಳಲ್ಲಿ ಮಾರಾಟ ಚಟುವಟಿಕೆಗಳು ನಡೆಯುತ್ತಿದ್ದವು.

ಮಾರುಕಟ್ಟೆಗೆ ಹೊಸ ಅಲಂಕಾರ

ಮಾರುಕಟ್ಟೆಗೆ ಹೊಸ ಅಲಂಕಾರ

ಇತ್ತೀಚೆಗೆ ಸ್ಥಳೀಯ ಸರ್ಕಾರವು ಈ ಪ್ರದೇಶದಲ್ಲಿ ಸುತ್ತಲೂ ಅಳವಡಿಸಿರುವ ಭಾಗಶಃ ಕಾಯಂ ನೀಲಿ ಬ್ಯಾರಿಕೇಡ್‌ಗಳಿಗೆ ಹಸಿರು ಗಿಡಗಳನ್ನು, ಸಾಂಪ್ರದಾಯಿಕ ಚೀನೀ ಚಿತ್ರಕಲೆಗಳನ್ನು ಅಂಟಿಸಿದೆ. ಮಾರುಕಟ್ಟೆ ಒಳಭಾಗದಲ್ಲಿ ಅಂಗಡಿಗಳ ಸಾಲಿನಲ್ಲಿ ಮರದ ಫಲಕಗಳನ್ನು ಇರಿಸಿದೆ. ಈ ಖಾಲಿ ಮಾರುಕಟ್ಟೆಯ ಎರಡನೆಯ ಮಹಡಿಯಲ್ಲಿ ಗಾಜುಗಳನ್ನು ಮತ್ತು ದೃಷ್ಟಿಮಾಪನ ಉಪಕರಣಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಜೂನ್‌ನಲ್ಲಿ ಮತ್ತೆ ತೆರೆಯಲಾಗಿದೆ.

ಮಾರುಕಟ್ಟೆಯ ಪ್ರವೇಶ ದ್ವಾರದಲ್ಲಿ ಕಾವಲುಗಾರನನ್ನು ನಿಯೋಜಿಸಲಾಗಿದೆ. ಅಲ್ಲಿಗೆ ಬರುವ ಗ್ರಾಹಕರ ದೇಹದ ಉಷ್ಣಾಂಶಗಳನ್ನು ಪರಿಶೀಲಿಸುವ ಆತ, ಅಲ್ಲಿ ಫೋಟೊ ಮತ್ತು ವಿಡಿಯೋಗಳನ್ನು ತೆಗೆಯದಂತೆ ಪತ್ರಕರ್ತರಿಗೆ ಎಚ್ಚರಿಕೆ ನೀಡುತ್ತಾನೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ.

ಮಾರುಕಟ್ಟೆ ಈಗ ಖಾಲಿ ಕಟ್ಟಡ

ಮಾರುಕಟ್ಟೆ ಈಗ ಖಾಲಿ ಕಟ್ಟಡ

'ಕೆಲವು ಜನರಲ್ಲಿ ಮಾರುಕಟ್ಟೆ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿರಬಹುದು. ಆದರೆ ಅದೀಗ ಖಾಲಿ ಕಟ್ಟಡವಷ್ಟೇ. ಖಾಲಿ ಕಟ್ಟಡದ ಬಗ್ಗೆ ಯಾರು ಚಿಂತೆ ಪಡುತ್ತಾರೆ?' ಎಂದು ಮಾರುಕಟ್ಟೆಯಲ್ಲಿ ಕಾಂಟ್ಯಾಕ್ಟ್ ಲೆನ್ಸ್ ವ್ಯಾಪಾರ ಮಾಡುವ ಸಹಾಯಕ ತಿಳಿಸಿದ್ದಾನೆ.

ಮೇ ತಿಂಗಳಿನಿಂದ ಇದುವರೆಗೂ ವುಹಾನ್‌ನಲ್ಲಿ ಸ್ಥಳೀಯವಾಗಿ ಹರಡಿದ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಮಾಂಸಾಹಾರಗಳಿಗೆ ಈ ಮಾರುಕಟ್ಟೆಯನ್ನೇ ಮುಖ್ಯವಾಗಿ ಅವಲಂಬಿಸಿದ್ದವರು ಮತ್ತು ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

English summary
Wuhan meat market which said to be origin of Coronavirus outbreak is still remain barricaded and empty after one year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X