ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರಂತಜ್ಜ ಮೆಚ್ಚಿದ ಅರಣ್ಯಾಧಿಕಾರಿ ಡಾ. ಯಲ್ಲಪ್ಪ ರೆಡ್ಡಿ ಹೇಳಿದ ಕಥೆಗಳು

|
Google Oneindia Kannada News

ಕಾಡಿನ ಬಗ್ಗೆ ಹಲವಾರು ಕಥೆಗಳನ್ನು ಕೇಳಿದ್ದೇವೆ , ಜಿಮ್ ಕಾರ್ಬೆಟ್, ಕೆನೆತ್ ಆಂಡರ್ಸನ್, ಕಾಕೆಮಾನಿ ಸುಬ್ಬಯ್ಯ ಅವರ ಅನುಭವಗಳನ್ನು ಮೈಯೆಲ್ಲ ಕಣ್ಣಾಗಿಸಿಕೊಂಡು ಓದಿ ರೋಮಾಂಚನಗೊಂಡಿದ್ದೇವೆ. ಶಿವರಾಮ ಕಾರಂತ, ಕುವೆಂಪು, ತೇಜಸ್ವಿ, ಕೆದಂಬಾಡಿ ಜತ್ತಪ್ಪ ರೈ ಅವರ ಕಾಡಿನ ಕುರಿತ ಅನುಭವಗಳು ನಮ್ಮನ್ನು ಪುಳಕಗೊಳಿಸಿವೆ. ಇಂಥದ್ದೇ ಅನುಭವಗಳನ್ನು ಅರಣ್ಯಾಧಿಕಾರಿಯೊಬ್ಬರ ಬಾಯಿಂದ ಕೇಳುವ ಸಮಯ ಈಗ ಬಂದಿದೆ.

ಗುಲಗಂಜಿ ತಂಡದವರು ನಿವೃತ್ತ ಅರಣ್ಯಾಧಿಕಾರಿ, ಪರಿಸರವಾದಿ ಡಾ.ಎ.ಎನ್. ಯಲ್ಲಪ್ಪ ರೆಡ್ಡಿ ಅವರ ಬದುಕಿನ ಕಥನವನ್ನು ಸರಣಿ ಸಂದರ್ಶನ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ.

ವಿಶೇಷ: ಜಲತಜ್ಞ ಡಾ. ದೇವರಾಜ್ ರೆಡ್ಡಿರಿಂದ ಪ್ರವಾಹದ ನೈಜ ಕಾರಣ ಬಹಿರಂಗವಿಶೇಷ: ಜಲತಜ್ಞ ಡಾ. ದೇವರಾಜ್ ರೆಡ್ಡಿರಿಂದ ಪ್ರವಾಹದ ನೈಜ ಕಾರಣ ಬಹಿರಂಗ

ಗುಲಗಂಜಿ ತಂಡದವರ ಮೊದಲ ಭೇಟಿಯಲ್ಲೇ 'ಗುಲಗಂಜಿ' ಎಂಬ ಹೆಸರಿಟ್ಟಿದ್ದಕ್ಕೆ ಮೆಚ್ಚುಗೆ ಸೂಚಿಸಿ, ಆ ಗಿಡದ ಕೆಲವು ವಿಶೇಷತೆಗಳನ್ನು ಹೇಳಿದರು ಎಂದು ತಂಡದ ಸದಸ್ಯರು ಒನ್ಇಂಡಿಯಾಕ್ಕೆ ತಿಳಿಸಿದರು.

"ಭೂಕಂಪ ಆಗುವ ಮುನ್ನ ಮುನ್ಸೂಚನೆಯಂತೆ ಗುಲಗಂಜಿ ಸಸ್ಯ ಕಂಪಿಸುತ್ತದೆ. ಜೊತೆಗೆ ಎಲ್ಲಾ ಗುಲಗಂಜಿ ಬೀಜಗಳು ಸಮತೂಕ ಹೊಂದಿರುತ್ತವಂತೆ , ಅದಕ್ಕಾಗಿಯೇ ಅದನ್ನು ಚಿನ್ನ ತೂಗಲು ಬಳಸುತ್ತಾರೆ" ಎಂದು ಯಲ್ಲಪ್ಪ ರೆಡ್ಡಿ ಹೇಳಿದರು. ಡಾ.ಯಲ್ಲಪ್ಪ ರೆಡ್ಡಿ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹುಡುಕಲು ಅವರ ಆತ್ಮಕಥೆ 'ಹಸಿರು ಹಾದಿ' ಯಲ್ಲಿ ನೋಡಬಹುದು.

Environmentalist Dr AN Yellappa reddy life series Interview by Gulaganji

ನಿವೃತ್ತ ಅರಣ್ಯಾಧಿಕಾರಿಗಳಾದ ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಅವರು ಅನೇಕ ಹುದ್ದೆಗಳಲ್ಲಿ ದುಡಿದು, ಸದ್ಯಕ್ಕೆ ಲಾಲ್ಬಾಗ್ ಮತ್ತು ಕಬ್ಬನ್ ಪಾರ್ಕ್ ಸಲಹಾ ಸಮಿತಿಯಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಹೊರತಾಗಿ ಅನೇಕ ಪ್ರಕೃತಿ ಸಂಬಂಧಿಸಿದ ಕಾರ್ಯಕ್ರಮಗಳನ್ನೂ ನಡೆಸುತ್ತಾರೆ .

ಸರ್ಕಾರಿ ಅಧಿಕಾರಿಯಾಗಿದ್ದರು ಅಂದ ತಕ್ಷಣ ಅವರು ಕೆಲಸವಿಲ್ಲದೆ , ಆರಾಮಾಗಿರುತ್ತಾರೆ ಎನ್ನುವ ಭಾವನೆ ಸಹಜ. ಆದರೆ ಅರಣ್ಯಾಧಿಕಾರಿ ಹುದ್ದೆ ನಾವಂದುಕೊಂಡಂತೆ ಸುಲಭದ ಕೆಲಸವಲ್ಲ. ಗಂಧದಗುಡಿ ಹಾಗೂ ಇನ್ನಿತರ ಅರಣ್ಯದ ಕಥಾವಸ್ತುವನ್ನು ಹೊಂದಿರುವ ಚಿತ್ರಗಳಲ್ಲಿ ನಿಷ್ಟಾವಂತ ಅಧಿಕಾರಿಯ ಮೇಲೆ ನಡೆಯುವ ಹಿರಿಯ ಅಧಿಕಾರಿಗಳ ದರ್ಪ , ಅನ್ಯಾಯವನ್ನು ಖಂಡಿಸಿದಾಗ ನಡೆಯುವ ಹಲ್ಲೆ,
ರಾಜಕಾರಣಿಗಳನ್ನು ವಿರೋಧಿಸಿದಾಗ ಎದುರಾಗುವ ಸಂಕಷ್ಟಗಳು ಇವರ ಬದುಕಿನಲ್ಲೂ ನಡೆದಿವೆ.

ಇದರ ಜೊತೆಗೆ ಇವರ ಪ್ರಾಮಾಣಿಕತೆಗೆ ಮೆಚ್ಚುಗೆ ಸೂಚಿಸಲು ಖುದ್ದು ಶಿವರಾಮ ಕಾರಂತರೇ ಇವರನ್ನು ಭೇಟಿ ಮಾಡಿ ಇವರ ಕೆಲಸವನ್ನು ಹೊಗಳಿದ ಸಂತಸದ ಸಂಗತಿಗಳೂ ಇವೆ. ಪರಿಸರ ನಾಶದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳು, ಕಸ್ತೂರಿ ರಂಗನ್ ಮತ್ತು ಗಾಡ್ಗಿಲ್ ವರದಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ , ಇನ್ನೂ ಹಲವು ಮಾಹಿತಿಗಳನ್ನು 'ಗುಲಗಂಜಿ ' ನಿಮ್ಮ ಮುಂದಿಡಲಿದೆ.

ಅವರ ಬಾಲ್ಯದ ನೆನಪುಗಳ ಮೊದಲ ಸಂಚಿಕೆ ನಿಮ್ಮ ಮುಂದೆ.

English summary
Dr AN Yellappa reddy former Forest Secretary in Government of Karnataka,Environmentalist speaks about his life journey, flora, fauna of Karnataka in series of Interview by Gulaganji team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X