ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯಿಂದಲೇ ಕೆಲಸ ಬೆಸ್ಟ್ ಎಂದ ಉದ್ಯೋಗಿಗಳು

|
Google Oneindia Kannada News

ನವದೆಹಲಿ, ಜೂನ್ 9: ಕೆಲಸ ಅಂದರೆ ಅದು ಆಫೀಸಿಗೆ ಹೋಗಬೇಕು ಎನ್ನುವ ಪರಿಕಲ್ಪನೆಯನ್ನು ಬದಲಾಯಿಸಿದ್ದು ಕೋವಿಡ್-19 ಸಾಂಕ್ರಾಮಿಕ. ಅಂತಾರಾಷ್ಟ್ರೀಯ ಕಂಪನಿಗಳು, ಸಾಫ್ಟ್‌ವೇರ್, ಬ್ಯಾಂಕಿಂಗ್ ಸೇರಿದಂತೆ ಸಾಕಷ್ಟು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟವು.

ಈಗ ಮತ್ತೆ ಕಚೇರಿಯಿಂದ ಕೆಲಸ ಆರಂಭಿಸಲಾಗಿದೆ. ಅಂತಾರಾಷ್ಟ್ರೀಯ ಕಂಪನಿಗಳು, ಸ್ಟಾರ್ಟ್‌ಅಪ್‌ಗಳು ಮಹಾನಗರಗಳಲ್ಲಿ ಕಚೇರಿಗಳ ಸ್ಥಾಪನೆಗೆ ಜಾಗ ಹುಡುಕುತ್ತಿದ್ದಾರೆ. ಉದ್ಯೋಗಿಗಳನ್ನು ಮತ್ತೆ ಕಚೇರಿಯಿಂದ ಕೆಲಸ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ.

Work From Home ಅಂತ್ಯ: ಉದ್ಯೋಗಿಗಳತ್ತ ಕೈ ಬೀಸುತ್ತಿರುವ ಕಂಪನಿಗಳು ಯಾವುವು? Work From Home ಅಂತ್ಯ: ಉದ್ಯೋಗಿಗಳತ್ತ ಕೈ ಬೀಸುತ್ತಿರುವ ಕಂಪನಿಗಳು ಯಾವುವು?

ಸುದೀರ್ಘ ಎರಡು ವರ್ಷಗಳ ನಂತರ ಈಗೀಗ ಮತ್ತೆ ಕಚೇರಿಗೆ ಬರುವಂತೆ ಉದ್ಯೋಗಿಗಳಿಗೆ ಕಂಪನಿಗಳು ಕೇಳಿಕೊಳ್ಳುತ್ತಿವೆ, ಈ ಎರಡು ವರ್ಷ ಮನೆಯಿಂದ ಕೆಲಸ ಮಾಡಿದ ಉದ್ಯೋಗಿಗಳ ಮನಸ್ಥಿತಿ ಹೇಗಿದೆ, ಮತ್ತೆ ಆಫೀಸಿಗೆ ಬರುವ ಬಗ್ಗೆ ಉದ್ಯೋಗಿಗಳು ಏನು ಹೇಳುತ್ತಾರೆ.

ಬೆಂಗಳೂರಿನಲ್ಲಿ Work From Home ಕಡೆಗೆ ತಿರುಗಿದ ಐಟಿ ಕಂಪನಿಗಳು ಬೆಂಗಳೂರಿನಲ್ಲಿ Work From Home ಕಡೆಗೆ ತಿರುಗಿದ ಐಟಿ ಕಂಪನಿಗಳು

ತಮ್ಮ ಊರು, ಮನೆಯಿಂದಲೇ ಆಫೀಸಿನ ಕೆಲಸವನ್ನೂ ನಿಭಾಯಿಸಿದ ಉದ್ಯೋಗಿಗಳ ಯೋಚನೆ ಹೇಗಿದೆ ಎಂದು ಸಮೀಕ್ಷೆಯೊಂದನ್ನು ಮಾಡಲಾಗಿದೆ. ಚೆನ್ನೈನಲ್ಲಿ ನಡೆದ ನಾಸ್ಕಾಮ್‌ನ 'ಫ್ಯೂಚರ್ ಆಫ್ ವರ್ಕ್ 2022' ಶೃಂಗಸಭೆಯಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ.

ಸಮೀಕ್ಷೆಯಲ್ಲಿ ಏನಿದೆ?

ಸಮೀಕ್ಷೆಯಲ್ಲಿ ಏನಿದೆ?

ನಾಸ್ಕಾಮ್-ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ನೀಡಿರುವ ವರದಿ ಪ್ರಕಾರ, ಸಮೀಕ್ಷೆ ನಡೆಸಿದ ಉದ್ಯೋಗಿಗಳಲ್ಲಿ ಶೇಕಡಾ 5 ರಷ್ಟು ಟೆಕ್ ಸಿಬ್ಬಂದಿ ಮಾತ್ರ ಮತ್ತೆ ಸಂಪೂರ್ಣವಾಗಿ ಆಫೀಸಿನಿಂದ ಕೆಲಸ ಮಾಡಲು ಸಹಮತ ವ್ಯಕ್ತಪಡಿಸಿದ್ದಾರೆ. ಶೇಕಡಾ 25 ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮುಂದುವರೆಸಲು ಬಯಸಿದ್ದಾರೆ. ಇನ್ನುಳಿದ 70 ರಷ್ಟು ಮಂದಿ ಅನುಕೂಲಕ್ಕೆ ತಕ್ಕಂತೆ ಆಫೀಸ್ ಮತ್ತು ಮನೆಯಿಂದಲೇ ಕೆಲಸ ಮಾಡುವ ಎರಡೂ ವಿಧಾನಗಳಿದ್ದರೆ ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಡಿಜಿಟಲ್ ಕ್ಷೇತ್ರಗಳಲ್ಲಿ ಜನ ಹೇಗೆ ಕೆಲಸ ಮಾಡಲು ಬಯಸುತ್ತಾರೆ? ಎನ್ನುವುದರ ಕುರಿತು ಪ್ರಶ್ನೆಗಳನ್ನು ಕೇಳಲಾಗಿದೆ. ಸಂಪೂರ್ಣವಾಗಿ ಆಫೀಸ್‌ನಿಂದ ಕೆಲಸ ಮಾಡಲು ಉದ್ಯೋಗಿಗಳು ಆಸಕ್ತಿ ಹೊಂದಿಲ್ಲ ಎನ್ನುವ ಅಂಶ ದೃಢವಾಗಿದೆ.

ಮನೆಯಿಂದ ಕೆಲಸ ಮಾಡುವಾಗಿನ ತೊಂದರೆಗಳು

ಮನೆಯಿಂದ ಕೆಲಸ ಮಾಡುವಾಗಿನ ತೊಂದರೆಗಳು

ಉದ್ಯೋಗಿಗಳು ಅನೌಪಚಾರಿಕ ಮತ್ತು ಸಾಮಾಜಿಕ ಸಂವಹನಗಳು, ವೈಯಕ್ತಿಕವಾಗಿ ಔಪಚಾರಿಕ ಸಭೆಗಳು ಮತ್ತು ಉತ್ತಮ ಕೆಲಸದ ವ್ಯವಸ್ಥೆಯನ್ನು ಸಹ ಕಳೆದುಕೊಳ್ಳುತ್ತಾರೆ ಎಂದು ವರದಿ ಬಹಿರಂಗಪಡಿಸಿದೆ.

ಪ್ರಸ್ತುತ ಸಂದರ್ಭದಲ್ಲಿ ಮನೆಯಿಂದ ಕೆಲಸ ಮಾಡುವುದು ಸಾಮಾನ್ಯ ಎನ್ನುವಂತಾಗಿದೆ, ಆದರೆ ಇಲ್ಲೂ ಹಲವು ಸಮಸ್ಯೆಗಳನ್ನು ನೋಡಬಹುದು. ಮುಖ್ಯವಾಗಿ ಕೆಲಸ ಮಾಡುವ ವಾತಾವರಣ, ತಂಡ ನಿರ್ಮಾಣ ಚಟುವಟಿಕೆ, ಸಹಯೋಗ, ಪ್ರೇರಣೆ ಕೊರತೆಯಿಂದ ಉದ್ಯೋಗಿ ಸಾಮರ್ಥ್ಯ ಕಡಿಮೆಯಾಗುವ ಅಪಾಯವಿದೆ.

ಅಲ್ಲದೆ ಮನೆಯಿಂದ ಕೆಲಸ ಮಾಡುವ ಹಲವು ಉದ್ಯೋಗಿಗಳು ಒಂಟಿತನ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೊದಲಿನ ಹಾಗೆ ಆಗುವುದು ಕಷ್ಟ

ಮೊದಲಿನ ಹಾಗೆ ಆಗುವುದು ಕಷ್ಟ

ಸಂಸ್ಥೆಗಳು ತಮ್ಮ ಕಚೇರಿಗಳನ್ನು ಪುನಃ ತೆರೆಯಲು ವೇಗವಾಗಿ ಸಿದ್ಧತೆ ಮಾಡುತ್ತಿವೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇನ್ನುಮುಂದೆ ಸಂಸ್ಥೆಗಳು ಕೆಲಸ ಮಾಡುವ ವಿಧಾನವು ಮತ್ತೆ ಮೊದಲಿನಂತೆ ಆಗಿರುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ಕಂಪನಿಗಳು ಹೊಸ ನಗರಗಳಲ್ಲಿ ಮೈಕ್ರೋ-ಹಬ್‌ಗಳನ್ನು ರಚಿಸುತ್ತಿವೆ ಮತ್ತು ಅಸ್ತಿತ್ವದಲ್ಲಿರುವ ಕಚೇರಿ ಸ್ಥಳಗಳನ್ನು ಮರು ವಿನ್ಯಾಸ ಮಾಡುತ್ತಿವೆ ಎಂದು ನಾಸ್ಕಾಮ್ ಎಸ್‌ವಿಪಿ ಸಂಗೀತಾ ಗುಪ್ತಾ ಹೇಳಿದ್ದಾರೆ.

ಉದ್ಯೋಗಿ ಮತ್ತು ಉದ್ಯೋಗದಾತರ ನಡುವೆ ಆರೋಗ್ಯಕರ ಪರಸ್ಪರ ಸಂಬಂಧವನ್ನು ಬೆಳೆಸಲು ಹೈಬ್ರಿಡ್ ಮತ್ತು ಸಹಯೋಗದ ಕೆಲಸದ ವಾತಾವರಣದ ಹೊಸ ವಿಧಾನಗಳನ್ನು ಹುಡುಕಲು ಕಾರಣವಾಗಿದೆ.

ಕೆಲಸದ ಸ್ಥಳವನ್ನು ಮರುವಿನ್ಯಾಸಗೊಳಿಸುವುದು ಮತ್ತು ಪ್ರತಿಭೆಗಳಿಗೆ ಪ್ರವೇಶಾವಕಾಶ ವಿಸ್ತರಿಸುವುದು ಮುಂತಾದ ಹಲವಾರು ಅಂಶಗಳನ್ನು ಸಂಸ್ಥೆಗಳು ಈಗ ಹೊಸ ಕೆಲಸದ ಮಾದರಿ ರೂಪಿಸಲು ಪರಿಗಣನೆಗೆ ತೆಗೆದುಕೊಳ್ಳುತ್ತಿವೆ ಎಂದು ಹೇಳಿದರು.

2 ಲಕ್ಷ ಉದ್ಯೋಗಿಗಳ ಅಭಿಪ್ರಾಯ ಸಂಗ್ರಹ

2 ಲಕ್ಷ ಉದ್ಯೋಗಿಗಳ ಅಭಿಪ್ರಾಯ ಸಂಗ್ರಹ

2021 ರ ಜುಲೈ-ಸೆಪ್ಟೆಂಬರ್ ವೇಳೆಯಲ್ಲಿ ಜಗತ್ತಿನಾದ್ಯಂತ ಸುಮಾರು 2 ಲಕ್ಷ ಉದ್ಯೋಗಿಗಳನ್ನು ಸಮೀಕ್ಷೆಗೆ ಒಳಪಡಿಸಿದೆ. ಇದರಲ್ಲಿ 500 ಮಂದಿ ಭಾರತದಿಂದ ಭಾಗವಹಿಸಿದ್ದಾರೆ ಎಂದು ಬಿಸಿಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಪಾಲುದಾರ ನಿತಿನ್ ಚಾಂಡಾಲಿಯಾ ಹೇಳಿದ್ದಾರೆ.

ಇನ್ನು ಇತ್ತೀಚಿನ ವರದಿಯಂತೆ ಭಾರತದ ಹಲವು ನಗರಗಳಲ್ಲಿ ಹೊಸ ಕಂಪನಿಗಳು ಕಚೇರಿ ಆರಂಭಿಸಲು ಕಟ್ಟಡಗಳನ್ನು ಹುಡುಕುವುದು ಹೆಚ್ಚಾಗಿದೆ. ವರ್ಕ್ ಫ್ರಂ ಹೋಮ್‌ ಮಾದರಿಗೆ ಒಗ್ಗಿ ಹೋಗಿರುವ ಉದ್ಯೋಗಿಗಳನ್ನು ಕಚೇರಿಯತ್ತ ಬರುವಂತೆ ಮಾಡಲು ಶ್ರಮಿಸುತ್ತಿವೆ. ಹೈಬ್ರಿಡ್ ಕೆಲಸದ ಮಾದರಿಯಿಂದ ಕಚೇರಿ ಸ್ಥಳ ಕುಗ್ಗುತ್ತವೆ ಎಂದಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

English summary
A Survey Said 70 per cent Employees chose a combination of remote and work from office, followed by 25 per cent opted for WHF completely remote and just 5 per cent selecting the completely on-site option.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X