ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡತಿ 24 ವರ್ಷ ದೊಡ್ಡವರು, ಮಗಳು ಸಹಪಾಠಿ- ಫ್ರಾನ್ಸ್ ಅಧ್ಯಕ್ಷರ ರಸಮಯ ಜೀವನ

|
Google Oneindia Kannada News

ಬೆಂಗಳೂರು, ಏ. 25: ಫ್ರಾನ್ಸ್ ದೇಶದ ಅತ್ಯಂತ ಕಿರಿಯ ಅಧ್ಯಕ್ಷ ಎಂದು ದಾಖಲೆ ಬರೆದಿರುವ ಇಮ್ಯಾನುಯಲ್ ಮ್ಯಾಕ್ರೋನ್ ಅವರು ಸತತ ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಫ್ರಾನ್ಸ್ ದೇಶದ ಬಲಪಂಥೀಯ ಪಕ್ಷದ ಮುಖಂಡ ಮರೈನ್ ಲೇ ಪೆನ್ ಅವರನ್ನು ಮಣಿಸಿ ಮ್ಯಾಕ್ರೋನ್ ಮತ್ತೊಮ್ಮೆ ಅಧ್ಯಕ್ಷ ಪದವಿ ಗಿಟ್ಟಿಸಿದ್ದಾರೆ. 20 ವರ್ಷಗಳ ಬಳಿಕ ಸತತ ವ್ಯಕ್ತಿಯೊಬ್ಬರು ಎರಡು ಬಾರಿ ಫ್ರಾನ್ಸ್ ಅಧ್ಯಕ್ಷರಾಗಿದ್ದು ಇದೇ ಮೊದಲು.

44 ವರ್ಷದ ಇಮ್ಯಾನುಯಲ್ ಮ್ಯಾಕ್ರೋನ್ ಅವರು ಮೊದಲ ಬಾರಿಗೆ ಅಧ್ಯಕ್ಷರಾದಾಗ ಅವರಿಗೆ 39 ವರ್ಷ ವಯಸ್ಸು. ಅಷ್ಟು ಕಿರಿಯ ವಯಸ್ಸಿನಲ್ಲಿ ಫ್ರಾನ್ಸ್ ಅಧ್ಯಕ್ಷರಾಗಿದ್ದು ಆ ದೇಶದ ಇತಿಹಾಸದಲ್ಲಿ ಅದೇ ಮೊದಲು. ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿರದ ಮ್ಯಾಕ್ರೋನ್ ಅವರು ಸತತ ಎರಡು ಬಾರಿ ಅಧ್ಯಕ್ಷ ಪದವಿ ಪಡೆದದ್ದು ಅಚ್ಚರಿಯೇ. ಅವರ ಜೀವನದಲ್ಲಿ ಇನ್ನೂ ಹಲವು ಅಚ್ಚರಿಗಳಿವೆ.

ಫ್ರೆಂಚ್ ಮರು ಚುನಾವಣೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರೋನ್ ಗೆಲುವು ಫ್ರೆಂಚ್ ಮರು ಚುನಾವಣೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರೋನ್ ಗೆಲುವು

ಕೇಜ್ರಿವಾಲ್, ಮ್ಯಾಕ್ರೋನ್ ಸಾಮ್ಯತೆ:

ಕೇಜ್ರಿವಾಲ್, ಮ್ಯಾಕ್ರೋನ್ ಸಾಮ್ಯತೆ:

ಒಂದೆರಡು ವಿಚಾರದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಮ್ಯಾಕ್ರೋನ್ ಮಧ್ಯೆ ಸಾಮ್ಯತೆ ಕಾಣುತ್ತದೆ. ಅರವಿಂದ್ ಕೇಜ್ರಿವಾಲ್ ಐಐಟಿ ಪದವಿ ಪಡೆದು ಸರಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿ, ನಂತರ ಒಂದು ಕಾಲಘಟ್ಟದಲ್ಲಿ ಕ್ಷಿಪ್ರ ರಾಜಕೀಯ ಸಂಚಲನಗೊಳಿಸಿದ್ದರು. ಅತ್ತ ಇಮ್ಯಾನುಯಲ್ ಮ್ಯಾಕ್ರೋನ್ ಅವರೂ ಕೂಡ ಸರಕಾರಿ ಅಧಿಕಾರಿಯಾಗಿದ್ದು ಬಳಿಕ ದಿಢೀರ್ ಎಂಬಂತೆ ಸಚಿವರಾಗಿ ಕೊನೆಗೆ ಫ್ರಾನ್ಸ್ ಅಧ್ಯಕ್ಷರೂ ಆದರು.

ಸರಕಾರದಲ್ಲಿದ್ದುಕೊಂಡೇ ಜನಪರ ಹೋರಾಟಕ್ಕೆ ಪಕ್ಷ ಕಟ್ಟಿದ್ದ ಮ್ಯಾಕ್ರೋನ್:

ಸರಕಾರದಲ್ಲಿದ್ದುಕೊಂಡೇ ಜನಪರ ಹೋರಾಟಕ್ಕೆ ಪಕ್ಷ ಕಟ್ಟಿದ್ದ ಮ್ಯಾಕ್ರೋನ್:

ಅರವಿಂದ್ ಕೇಜ್ರಿವಾಲ್ ಅವರು ಐಎಸಿ ಹೋರಾಟದ ಬಳಿಕ ಆಮ್ ಆದ್ಮಿ ಪಕ್ಷ ಹುಟ್ಟುಹಾಕಿ ಡೆಲ್ಲಿ ವಿಧಾನಸಭೆಯಲ್ಲಿ ಭರ್ಜರಿ ಜಯ ಸಾಧಿಸಿ ಸಿಎಂ ಅದರು. ಅತ್ತ ಮ್ಯಾಕ್ರೋನ್ ಅವರು 2015ರಲ್ಲಿ ಕೇಂದ್ರ ಸಚಿವರಾಗಿದ್ದಾಗೇ 'ಎನ್ ಮಾರ್ಚ್' (En Marche) ಎಂಬ ಹೊಸ ಉದಾರವಾದಿ ವಿಚಾರಗಳ ಸಂಘಟನೆಯನ್ನ ಹುಟ್ಟುಹಾಕಿದರು. ಕೊನೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ 2017ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಇತಿಹಾಸ ನಿರ್ಮಿಸಿದರು. ಇವರು ಕಟ್ಟಿದ ಸಂಘಟನೆಯ ವಿಚಾರಗಳು ಹಾಗು ಇವರು ಸಚಿವಾಗಿದ್ದಾಗ ಮಾಡಿದ ಕೆಲ ಗಮನಾರ್ಹ ಕೆಲಸಗಳು ಇವರಿಗೆ ಅಧ್ಯಕ್ಷೀಯ ಪದವಿಗಾದಿ ತಲುಪಿಸಿದವು.

ಸೋಷಯಲಿಸ್ಟ್ ಸಿದ್ಧಾಂತದ ಪ್ರೇರಣೆ:

ಸೋಷಯಲಿಸ್ಟ್ ಸಿದ್ಧಾಂತದ ಪ್ರೇರಣೆ:

ಫ್ರಾನ್ಸ್ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ ಅವರು 2004ರಲ್ಲಿ ಫ್ರಾನ್ಸ್ ಸರಕಾರದ ಹಣಕಾಸು ಸಚಿವಾಲಯದಲ್ಲಿ ಇನ್ಸ್‌ಪೆಕ್ಟರ್ ಹುದ್ದೆ ಪಡೆದರು. ನಂತರದ ವರ್ಷಗಳಲ್ಲಿ ಹಲವು ಸ್ತರಗಳಲ್ಲಿ ಕೆಲಸ ಮಾಡಿದರು. ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿಯೂ ಕೆಲಸ ಮಾಡಿದರು. ಯುವಕರಾಗಿ ಇಮ್ಯಾನುಯಲ್ ಮ್ಯಾಕ್ರೋನ್ ಅವರು ಸೋಷಿಯಲಿಸ್ಟ್ ತತ್ವಕ್ಕೆ ಮಾರುಹೋಗಿದ್ದರು. ಸಿಟಿಜನ್ ಅಂಡ್ ರಿಪಬ್ಲಿಕನ್ ಮೂವ್ಮೆಂಟ್ ಎಂಬ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸೋಷಿಯಲಿಸ್ಟ್ ಪಾರ್ಟಿಯಿಂದ ವಿಧಾನಸಭೆ ಚುನಾವಣೆಗೆ ಟಿಕೆಟ್ ಪಡೆಯಲು ಅವರು ವಿಫಲ ಪ್ರಯತ್ನ ಮಾಡಿದ್ದರು. 2012ರಲ್ಲಿ ಅವರು ಫ್ರಾನ್ಸ್ ಅಧ್ಯಕ್ಷ ಫ್ರಾಂಕಾಯಿಸ್ ಹಾಲೆಂಡ್ ಅವರ ಸಿಬ್ಬಂದಿವರ್ಗದಲ್ಲಿ ಹಿರಿಯ ಅಧಿಕಾರಿಯಾಗಿ ಆಯ್ಕೆಯಾದರು. ಅಲ್ಲಿ ಅವರ ಹಲವು ಕೆಲಸಗಳು ಗಮನ ಸೆಳೆದವು.

2014ರಲ್ಲಿ ಅವರು ಪ್ರಧಾನಿ ಮ್ಯಾನುಯಲ್ ವಾಲ್ಸ್ ಅವರ ಸಂಪುಟದಲ್ಲಿ ಆರ್ಥಿಕತೆ ಮತ್ತು ಉದ್ಯಮ ಸಚಿವರಾಗಿ ನೇಮಕವಾದರು. ಇಲ್ಲಿಯೂ ಮ್ಯಾಕ್ರೋನ್ ಅವರ ಹಲವು ಕೆಲಸಗಳು ಗಮನ ಸೆಳೆದವು. ಅದಾದ ಬಳಿಕ ಅವರು ಸ್ವಂತ ಪಕ್ಷ ಕಟ್ಟಿ 2017ರಲ್ಲಿ ಫ್ರಾನ್ಸ್ ಅಧ್ಯಕ್ಷರೂ ಅಗಿದ್ದು ಈಗ ಇತಿಹಾಸ.

24 ವರ್ಷ ಹಿರಿಯಳೊಂದಿಗೆ ವಿವಾಹ:

24 ವರ್ಷ ಹಿರಿಯಳೊಂದಿಗೆ ವಿವಾಹ:

ಇಮ್ಯಾನುಯಲ್ ಮ್ಯಾಕ್ರೋನ್ ಅವರ ವೈಯಕ್ತಿಕ ಜೀವನವೂ ಆಸಕ್ತಿಕರ ಸಂಗತಿಗಳಿಂದ ಕೂಡಿವೆ. ಮ್ಯಾಕ್ರೋನ್ ಮದುವೆಯಾದಾಗ ಅವರಿಗೆ 29 ವರ್ಷ. ಇವರ ಹೆಂಡತಿ ಬ್ರಿಗಿಟ್ಟೆ ಇವರಿಗಿಂತ 24 ವರ್ಷ ಹಿರಿಯರು. ಮ್ಯಾಕ್ರೋನ್ ಅವರಿಗೆ ಡ್ರಾಮಾ ಟೀಚರ್ ಆಗಿದ್ದವರು. ಆಗಲೇ ಮ್ಯಾಕ್ರೋನ್ ಅವರಿಗೆ ಟೀಚರ್ ಮೇಲೆ ಪ್ರೇಮಾಂಕುರವಾಗಿತ್ತು.

ಬ್ರಿಗಿಟ್ಟೆ ಅವರು ತಮ್ಮ ಹಿಂದಿನ ಪತಿಗೆ ಡಿವೋರ್ಸ್ ನೀಡುವ ಮುನ್ನ 3 ಮಕ್ಕಳನ್ನು ಹೊಂದಿದ್ದರು. ಬ್ರಿಗಿಟ್ಟೆ ಅವರ ಒಬ್ಬ ಮಗಳು ಮತ್ತು ಮ್ಯಾಕ್ರೋನ್ ಇಬ್ಬರೂ ಕ್ಲಾಸ್‌ಮೇಟ್ಸ್. ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಆದರೂ ಕೂಡ ಬ್ರಿಗಿಟ್ಟೆ ಅವರನ್ನು ಮ್ಯಾಕ್ರೋನ್ ವಿವಾಹವಾಗಲು ಒಪ್ಪಿಸಿದರು. 2007ರಲ್ಲಿ ಇಬ್ಬರ ಮದುವೆ ಆಯಿತು. ಇವರಿಬ್ಬರಿಗೆ ಮಕ್ಕಳಾಗಲಿಲ್ಲ, ಬ್ರಿಗಿಟ್ಟೆ ಅವರ ಮಕ್ಕಳು ಮತ್ತು ಮೊಮ್ಮಕ್ಕಳೇ ತನ್ನ ಪರಿವಾರ ಎಂದು ಮ್ಯಾಕ್ರೋನ್ ಹಲವ ಬಾರಿ ಹೇಳಿಕೊಂಡಿದ್ದುಂಟು.

ಹೆಂಡತಿ ಎಂದರೆ ಪ್ರಾಣ:

ಹೆಂಡತಿ ಎಂದರೆ ಪ್ರಾಣ:

ನನ್ನ ಜೀವನಕ್ಕೆ ಬ್ರಿಗಿಟ್ಟೆ ಬಹಳ ಮುಖ್ಯ. ನಾನು ಖುಷಿಯಾಗಿದ್ದರೆ ಚೆನ್ನಾಗಿ ಕೆಲಸ ಮಾಡಬಲ್ಲೆ. ನಾನು ಖುಷಿಯಾಗಿರಬೇಕೆಂದರೆ ಬ್ರಿಗಿಟ್ಟೆ ನನ್ನ ಜೊತೆ ಇರಬೇಕು ಎಂಬುದು ಇಮ್ಯಾನುಯಲ್ ಮ್ಯಾಕ್ರೋನ್ ಅವರ ಅನಿಸಿಕೆ.

(ಒನ್ಇಂಡಿಯಾ ಸುದ್ದಿ)

English summary
France's youngest president Emmanuel Macron has interesting personal life. He had married Briggitte who is 24 years older. His rise in politics can be compared to Arvind Kejriwal in some ways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X