ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲಾನ್ ಮಸ್ಕ್ ಅವಳಿಮಕ್ಕಳ ತಾಯಿ ಶಿವೋನ್‌ಗೆ ಇದೆ ಭಾರತದ ಕನೆಕ್ಷನ್

|
Google Oneindia Kannada News

ನವದೆಹಲಿ, ಜುಲೈ 8: ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎನಿಸಿರುವ ಎಲಾನ್ ಮಸ್ಕ್ ಕಳೆದ ವರ್ಷ ನವೆಂಬರ್‌ನಲ್ಲಿ ಅವಳಿ ಮಕ್ಕಳಿಗೆ ತಂದೆಯಾಗಿದ್ದರು. ಪತ್ನಿಗೆ ವಿಚ್ಛೇದನ ಕೊಟ್ಟಿರುವ ಎಲಾನ್ ಮಸ್ಕ್ ಅವರ ಈ ಮಕ್ಕಳಿಗೆ ತಾಯಿ ಯಾರು ಎಂದು ಅಧಿಕೃತವಾಗಿ ಗೊತ್ತಾಗಿಲ್ಲ. ಆದರೆ, ಎಲಾನ್ ಮಸ್ಕ್ ಅವರ ನ್ಯೂರಾಲಿಂಕ್ ಸಂಸ್ಥೆಯಲ್ಲಿ ಕೆಲಸ ಮಾಡುವ ಶಿವೋನ್ ಜಿಲಿಸ್ ಎಂಬಾಕೆ ಈ ಎರಡು ಮಕ್ಕಳಿಗೆ ಜನ್ಮ ನೀಡಿದವಳೆಂದು ನಂಬಲಾಗಿದೆ.

ಎಲಾನ್ ಮಸ್ಕ್ ಅವರು ಅವಳಿಜವಳಿ ಮಕ್ಕಳ ಅಪ್ಪನಾಗಿದ್ದು ಇದು ಎರಡನೇ ಬಾರಿ. ಒಮ್ಮೆ ಅವರು ತ್ರಿವಳಿ ಮಕ್ಕಳ ಅಪ್ಪನೂ ಆಗಿದ್ದಾರೆ. ಅವರ ಮೊದಲ ಪತ್ನಿ ಜಸ್ಟಿನ್ ವಿಲ್ಸನ್. ಈಕೆಗೆ ವಿಚ್ಛೇದನ ಕೊಟ್ಟ ಬಳಿಕ ನಟಿ ತಲುಲಾ ರಿಲೇ ಅವರನ್ನು ಎರಡು ಬಾರಿ ವಿವಾಹವಾದರು.

ಮಸ್ಕ್ ಎಫೆಕ್ಟ್; ಟ್ವಿಟ್ಟರ್‌ನಲ್ಲಿ ಶುರುವಾಯ್ತು ಲೇ ಆಫ್ಮಸ್ಕ್ ಎಫೆಕ್ಟ್; ಟ್ವಿಟ್ಟರ್‌ನಲ್ಲಿ ಶುರುವಾಯ್ತು ಲೇ ಆಫ್

ರಿಲೇಗೆ 2004ರಲ್ಲಿ ವಿಚ್ಛೇದನ ಕೊಟ್ಟ ಬಳಿಕ ಎಲಾನ್ ಮಸ್ಕ್ ಮತ್ತೆ ಮದುವೆಯಾಗಿಲ್ಲ. ಕೆನಡಾದ ಹಾಡುಗಾರ್ತಿ ಗ್ರೈಮ್ಸ್ ಜೊತೆ ಸಂಬಂಧ ಹೊಂದಿದ್ದರು. ಗ್ರೈಮ್ಸ್ ಮೂಲಕ ಎಲಾನ್ ಮಸ್ಕ್ ಎರಡು ಮಕ್ಕಳನ್ನು ಹೊಂದಿದ್ದಾರೆ.

ಈಗ ಶಿವೋನ್ ಜಿಲಿಸ್ (Shivon Zilis) ಅವರನ್ನೂ ಮಸ್ಕ್ ಮದುವೆಯಾಗಿಲ್ಲ. ಶಿವೋನ್ ಜಿಲಿಸ್ ಭಾರತ ಮೂಲದವರು ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

 ಯಾರು ಈ ಶಿವೋನ್?

ಯಾರು ಈ ಶಿವೋನ್?

ಶಿವೋನ್ ಜಿಲಿಸ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿದವಳು. 35 ವರ್ಷದ ಅವರು ಸದ್ಯ ನ್ಯೂರಾಲಿಂಕ್ ಸಂಸ್ಥೆಯಲ್ಲಿ ಆಪರೇಷನ್ಸ್ ಮತ್ತು ಸ್ಪೆಷಲ್ ಪ್ರಾಜೆಕ್ಟ್ಸ್ ವಿಭಾಗದ ನಿರ್ದೇಶಕಿಯಾಗಿದ್ದಾರೆ. ೨೦೧೭ರಿಂದಲೂ ಅವರು ಈ ಕಂಪನಿಯಲ್ಲಿದ್ದಾರೆ.

ಎಲಾನ್ ಮಸ್ಕ್ ಸ್ಥಾಪನೆಯ ಮತ್ತೊಂದು ಕಂಪನಿ ಟೆಸ್ಲಾ ಜೊತೆಗೂ ಶಿವೋನ್ ಜಿಲಿಸ್ ನಂಟಿದೆ. ಅಮೆರಿಕದ ಯಾಲೆ ಯೂನಿವರ್ಸಿಟಿಯಲ್ಲಿ ಆಕೆ ಎಕನಾಮಿಕ್ಸ್ ಮತ್ತು ಫಿಲಾಸಫಿ ಪದವಿ ಪಡೆದಿದ್ದಾರೆ.

ಅಪ್ಪನ ಗುರುತೇ ಬೇಡ; ಎಲಾನ್ ಮಸ್ಕ್ ಮಗ ಅಲ್ಲ ಮಗಳ ಲಿಂಗ ಪರಿವರ್ತನೆ, ನಾಮ ಬದಲಾವಣೆಅಪ್ಪನ ಗುರುತೇ ಬೇಡ; ಎಲಾನ್ ಮಸ್ಕ್ ಮಗ ಅಲ್ಲ ಮಗಳ ಲಿಂಗ ಪರಿವರ್ತನೆ, ನಾಮ ಬದಲಾವಣೆ

 ಟ್ವಿಟ್ಟರ್‌ಗೆ ಈಕೆಯೇ ಸಿಇಒ?

ಟ್ವಿಟ್ಟರ್‌ಗೆ ಈಕೆಯೇ ಸಿಇಒ?

ಶಿವೋನ್ ಜಿಲಿಸ್ ತಮ್ಮ ವೃತ್ತಿಯಲ್ಲಿ ಬಹಳಷ್ಟು ಎತ್ತರಕ್ಕೆ ಹೋಗಿದ್ದಾರೆ. ಈಕೆ ೩೦ ವರ್ಷ ವಯೋಮಾನದೊಳಗಿನ ಶ್ರೀಮಂತರ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಲಿಂಕಡ್‌ಇನ್ ಪಟ್ಟಿಯಲ್ಲೂ ಈಕೆ ಇದ್ದಾರೆ.

ಕೆಲ ವರದಿಗಳ ಪ್ರಕಾರ, ಎಲಾನ್ ಮಸ್ಕ್ ಒಂದು ವೇಳೆ ಟ್ವಿಟ್ಟರ್ ಖರೀದಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅದರ ಸಿಇಒ ಸ್ಥಾನವನ್ನು ಶಿವೋನ್ ಜಿಲಿಸ್‌ಗೆ ವಹಿಸುವ ಸಾಧ್ಯತೆ ಇದೆ. ಸದ್ಯ ಟ್ವಿಟ್ಟರ್‌ಗೆ ಭಾರತ ಮೂಲದ ಪರಾಗ್ ಅಗರ್ವಾಲ್ ಸಿಇಒ ಆಗಿದ್ದಾರೆ. ಮಸ್ಕ್ ಸಿಇಒ ಸ್ಥಾನವನ್ನು ಬದಲಾಯಿಸುವುದು ಬಹುತೇಕ ಖಚಿತವಾಗಿದೆ.

 ಭಾರತ ಮೂಲದವರಾ ಶಿವೋನ್?

ಭಾರತ ಮೂಲದವರಾ ಶಿವೋನ್?

ಶಿವೋನ್ ಜಿಲಿಸ್ ಕೆನಡಾ ಸಂಜಾತೆ. ಈಕೆಗೆ ಭಾರತದ ನಂಟಿದೆ. ಈಕೆಯ ತಾಯಿ ಭಾರತ ಮೂಲದವರಾಗಿದ್ದು ತಂದೆ ಪಾಶ್ಚಿಮಾತ್ಯದವರು. ಯಾಲೆ ವಿವಿಯಲ್ಲಿ ಓದಿದ ಬಳಿಕ ಐಬಿಎಂನಲ್ಲಿ ಕೆಲಸ ಮಾಡಿದರು. ನಂತರ 2011ರಲ್ಲಿ ಬ್ಲೂಂಬರ್ಗ್ ಬೀಟಾದ ಸಂಸ್ಥಾಪಕರಲ್ಲಿ ಒಬ್ಬರಾದರು. ಕೃತಕ ಬುದ್ಧಿಮತ್ತೆ, ಜೈವಿಕ ಬುದ್ಧಿಮತ್ತೆ ಇತ್ಯಾದಿ ಹೊಸ ತಲೆಮಾರಿತನ ತಂತ್ರಜ್ಞಾನದಲ್ಲಿ ಪರಿಣತೆಯಾಗಿರುವ ಇವರು ಎಲಾನ್ ಮಸ್ಕ್ ಅವರ ಅನೇಕ ಪ್ರಾಜೆಕ್ಟ್‌ಗಳಲ್ಲಿ ಜೋಡಿಸಿಕೊಂಡಿದ್ದಾರೆ. ಸ್ಪೇಸ್ ಎಕ್ಸ್, ನ್ಯೂರಾಲಿಂಕ್, ಎಐ ಇತ್ಯಾದಿ ಮಸ್ಕ್ ಸ್ಥಾಪಿತ ಕಂಪನಿಗಳಲ್ಲಿ ಶಿವೋಮ್ ಕೆಲಸ ಮಾಡಿದ್ದಾರೆ.

 ಎಲಾನ್ ಮಸ್ಕ್ ಮಕ್ಕಳ ಸಂಖ್ಯೆ 9

ಎಲಾನ್ ಮಸ್ಕ್ ಮಕ್ಕಳ ಸಂಖ್ಯೆ 9

ಭಾರತದಲ್ಲಿ ನಾವಿಬ್ಬರು ನಮಗಿಬ್ಬರು ಎಂಬುದು ಫ್ಯಾಮಿಲಿ ಪ್ಲಾನಿಂಗ್. ಆದರೆ, ಎಲಾನ್ ಮಸ್ಕ್ ಎಷ್ಟಾಗುತ್ತೋ ಅಷ್ಟು ಮಕ್ಕಳು ಹುಟ್ಟಲಿ ಎನ್ನುವ ಸಿದ್ಧಾಂತದವರು. ಮಾನವನ ಸಂತತಿ ಅಳಿವಿನಲ್ಲಿದೆ. ಜನಸಂಖ್ಯೆ ಇಳಿಮುಖವಾಗುತ್ತಿದೆ. ಮುಂಬರುವ ದಿನಗಳಲ್ಲಿ ಮನುಷ್ಯನ ಸಂತತಿ ಗಣನೀಯವಾಗಿ ತಗ್ಗಿ ಕೊನೆಗೆ ನಾಮಾವಶೇಷವಾಗಲಿದೆ ಎಂದು ಮಸ್ಕ್ ಹಲವು ಬಾರಿ ಎಚ್ಚರಿಸಿದ್ಧಾರೆ.

ಅಂತೆಯೇ ಮಸ್ಕ್ ಈವರೆಗೆ ೯ ಮಕ್ಕಳ ತಂದೆಯಾಗಿ ತಾನು ನುಡಿದದ್ದನ್ನು ಸಾಧಿಸಿ ತೋರಿಸುತ್ತಿದ್ದಾರೆ ಎನ್ನಲಡ್ಡಿ ಇಲ್ಲ. ಮೊದಲ ಹೆಂಡತಿ ಜಸ್ಟೀನ್ ವಿಲ್ಸನ್‌ರಿಂದ ೫ ಮಕ್ಕಳು, ಗ್ರೈಮ್ಸ್‌ರಿಂದ ಇಬ್ಬರು ಮತ್ತು ಈಗ ಶಿವೋಮ್‌ರಿಂದ ಇಬ್ಬರು ಮಕ್ಕಳಿಗೆ ಎಲಾನ್ ಮಸ್ಕ್ ತಂದೆಯಾಗಿದ್ದಾರೆ.

ಮೊದಲ ಹೆಂಡತಿಯ ಮೊದಲ ಮಗು ಸತ್ತು ಹೋಗಿದ್ದನ್ನೂ ಸೇರಿಸಿದರೆ ಎಲಾನ್ ಮಸ್ಕ್ ಮಕ್ಕಳ ಸಂಖ್ಯೆ ೧೦ಕ್ಕೆ ಏರುತ್ತದೆ.

(ಒನ್ಇಂಡಿಯಾ ಸುದ್ದಿ)

Recommended Video

ಟೀಮ್ ಇಂಡಿಯಾದಿಂದ ವಿರಾಟ್ ಕೊಹ್ಲಿಗೆ ಗೇಟ್ ಪಾಸ್ ಸಿಕ್ರೆ ಆ ಜಾಗ ತುಂಬೋ ಆಟಗಾರ ಇವನೇ | *Cricket |OneIndia Kannada

English summary
Shivon Zilis believed to be the mother of Elon Musk's latest twin children. She is said to have indian connection through her mother.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X