ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವೀಟ್‌ಗೆ ಬೆಲೆ ಕಟ್ಟಲಿರುವ ಮಸ್ಕ್; ಟ್ವಿಟ್ಟರ್ ಎಲ್ಲರಿಗೂ ಫ್ರೀ ಇರಲ್ಲ

|
Google Oneindia Kannada News

ನವದೆಹಲಿ, ಮೇ 4: ಎಲಾನ್ ಮಸ್ಕ್ ಮಧ್ಯ ಪ್ರವೇಶದ ಬಳಿಕ ಟ್ವಿಟ್ಟರ್‌ನ ಕಾರ್ಯಾಚರಣೆ ಸ್ವರೂಪದಲ್ಲಿ ಅಮೂಲಾಗ್ರ ಬದಲಾವಣೆ ಆಗುವ ಸಾಧ್ಯತೆ ಇದೆ. ಟ್ವಿಟ್ಟರ್‌ನ ಹೊಸ ಮಾಲೀಕರಾಗಿರುವ ಅವರು ಕೆಲ ಮಹತ್ವದ ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ.

ಟ್ವಿಟ್ಟರ್ ಖಾತೆ ಎಲ್ಲರಿಗೂ ಉಚಿತ ಕೊಡದೆ, ಆಯ್ದೆ ಕೆಲ ವರ್ಗಗಳಿಗೆ ನಿಗದಿತ ಮೊತ್ತದ ಶುಲ್ಕ ವಿಧಿಸುವ ಆಲೋಚನೆಯಲ್ಲಿ ಮಸ್ಕ್ ಇದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಿಂದ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಟ್ವಿಟ್ಟರ್‌ನಿಂದ ಸಿಇಒ ಪರಾಗ್ ಹೊರಕ್ಕೆ; ಮಸ್ಕ್ ರಹಸ್ಯ ಪ್ಲಾನ್ ಸೋರಿಕೆಟ್ವಿಟ್ಟರ್‌ನಿಂದ ಸಿಇಒ ಪರಾಗ್ ಹೊರಕ್ಕೆ; ಮಸ್ಕ್ ರಹಸ್ಯ ಪ್ಲಾನ್ ಸೋರಿಕೆ

"ಮಾಮೂಲಿಯ ಟ್ವಿಟ್ಟರ್ ಖಾತೆದಾರರು ಉಚಿತವಾಗಿ ಸೇವೆ ಬಳಸಬಹುದು. ಆದರೆ, ವಾಣಿಜ್ಯ ಮತ್ತು ಸರ್ಕಾರ ಸಂಸ್ಥೆಗಳ ಖಾತೆದಾರರಿಗೆ ತುಸು ಶುಲ್ಕ ವಿಧಿಸಲಾಗುವುದು" ಎಂದು ಮಸ್ಕ್ ಒಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Elon Musk may decide to charge selected Twitter Users

ಅಲ್ಲದೇ, "ಕಲ್ಲು ಹೊಡೆಯುವ ಸೇವೆಯನ್ನ ಉಚಿತವಾಗಿ ನೀಡಿದ್ದು ಫ್ರೀಮೇಸನ್‌ಗಳ ಪತನಕ್ಕೆ ಕಾರಣ" ಎಂದು ಅದಕ್ಕೆ ಮೊದಲಿನ ಟ್ವೀಟ್‌ನಲ್ಲಿ ಎಲಾನ್ ಮಸ್ಕ್ ವ್ಯಂಗ್ಯ ಮಾಡಿದ್ದಾರೆ.

ಇವರ ಈ ಟ್ವೀಟ್‌ಗೆ ಒಬ್ಬ ಯೂಸರ್, "ಡಿಸ್ಕೌಂಟ್ ಮೇಸನ್‌ಗಳೊಂದಿಗೆ ಫ್ರೀಮೇಸನ್‌ಗಳು ಸ್ಪರ್ಧೆ ಮಾಡಲು ಸಾಧ್ಯವಾಗಲಿಲ್ಲ" ಎಂದು ಪ್ರತಿಕ್ರಿಯೆ ನೀಡಿದರು. ಅದಕ್ಕೆ ಸ್ಪಂದಿಸಿದ ಮಸ್ಕ್, "ಏನೂ ಇಲ್ಲದಿರುವುದಕ್ಕಿಂತ ಅಲ್ಪವಾದರೂ ಒಂದಷ್ಟು ಆದಾಯ ಇರುವುದು ಒಳ್ಳೆಯದೇ ಅಲ್ವಾ" ಎಂದಿದ್ದಾರೆ.

ಇಲ್ಲಿ ಕಮರ್ಷಿಯ್ ಮತ್ತು ಸರಕಾರಿ ಸಂಸ್ಥೆಗಳಿಗೆ ಮಸ್ಕ್ ಅವರು ಶುಲ್ಕ ವಿಧಿಸಲು ಯಾವ ಮಾನದಂಡ ಅನುಸರಿಸಬಹುದು ಎಂಬ ಕುರಿತು ಟ್ವಿಟ್ಟಿಗರ ಮಧ್ಯೆ ಚರ್ಚೆ ನಡೆದಿದೆ. ಕಾರ್ಪೊರೇಟ್ ಕಂಪನಿಗಳು ಶುಲ್ಕ ಪಾವತಿಸಬೇಕು ಎನ್ನುವುದಾದರೆ ಎಷ್ಟು ಗಾತ್ರದ ಕಂಪನಿಗಳಾಗಿರಬೇಕು ಎಂಬ ಪ್ರಶ್ನೆ ಬರುತ್ತದೆ.

ಎಲೋನ್ ಮಸ್ಕ್ ಟ್ವಿಟ್ಟರ್ ಅಸಲಿ ಖಾತೆಯ ನಕಲಿ ಫಾಲೋವರ್ಸ್ ಕತೆ ಬಹಿರಂಗಎಲೋನ್ ಮಸ್ಕ್ ಟ್ವಿಟ್ಟರ್ ಅಸಲಿ ಖಾತೆಯ ನಕಲಿ ಫಾಲೋವರ್ಸ್ ಕತೆ ಬಹಿರಂಗ

ಎಲ್ಲಾ ನೊಂದಾಯಿತ ಕಂಪನಿಗಳ ಟ್ವಿಟ್ಟರ್ ಖಾತೆಗಳಿಗೆ ಶುಲ್ಕ ಹಾಕಲಾಗುತ್ತಾ? ಬೃಹತ್ ಸಂಸ್ಥೆಗಳ ಖಾತೆ ಮತ್ತು ಒಂದಿಬ್ಬರು ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಏಕರೂಪದ ಶುಲ್ಕ ವಿಧಿಸಲಾಗುತ್ತಾ? ತೀರಾ ಹೆಚ್ಚು ಶುಲ್ಕ ವಿಧಿಸಿದರೆ ಜನರು ಟ್ವಿಟ್ಟರ್‌ನಿಂದ ದೂರ ಸರಿಯಬಹುದು. ತೀರಾ ಕಡಿಮೆ ಶುಲ್ಕ ವಿಧಿಸಿದರೆ ಸಿಗುವ ಆದಾಯ ನಗಣ್ಯವಾಗಬಹುದು. ಇವೇ ಇತ್ಯಾದಿ ಅಭಿಪ್ರಾಯಗಳ ಮಹಾಪೂರವೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದರ ಜೊತೆಗೆ ಟ್ವಿಟ್ಟರ್‌ನ ಬ್ಲೂ ಟಿಕ್ ಪ್ರೀಮಿಯಮ್ ಸಬ್‌ಸ್ಕ್ರಿಪ್ಷನ್ ಸೇವೆಯಲ್ಲಿ ಬದಲಾವಣೆ ತರುವ ಬಗ್ಗೆಯೂ ಮಸ್ಕ್ ಚರ್ಚೆ ಹುಟ್ಟುಹಾಕಿದ್ದಾರೆ. ಸಬ್‌ಸ್ಕ್ರಿಪ್ಚನ್ ದರ ತಗ್ಗಿಸುವುದು, ಜಾಹೀರಾತು ನಿರ್ಬಂಧಿಸುವುದು ಇದರಲ್ಲಿ ಒಳಗೊಂಡಿದೆ ಹಾಗೆಯೇ, ಡೋಜೆಕಾಯಿನ್ (Dogecoin) ಎಂಬ ಕ್ರಿಪ್ಟೋಕರೆನ್ಸಿಯಲ್ಲಿ ಹಣ ಪಾವತಿ ಮಾಡುವ ಅವಕಾಶ ಕೊಡುವುದಾಗಿ ಹೇಳಿ ಎಲಾನ್ ಮಸ್ಕ್ ಕುತೂಹಲ ಮೂಡಿಸಿದ್ದಾರೆ.

Elon Musk may decide to charge selected Twitter Users

ಇದು ಡೋಜೆಕಾಯಿನ್ ಕ್ರಿಪ್ಟೋಕರೆನ್ಸಿಯ ಪ್ರೊಮೋಶನ್‌ಗೆ ಅವರು ಮಾಡಿರುವ ತಂತ್ರ ಎನ್ನಲಡ್ಡಿ ಇಲ್ಲ. ಆದರೆ, ಅವರು ಈ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಇನ್ನು, ಜಾಹೀರಾತಿನ ಮೇಲೆ ಟ್ವಿಟ್ಟರ್ ಅವಲಂಬನೆಯನ್ನು ಕಡಿಮೆ ಮಾಡುವುದಾಗಿ ಪೋಸ್ಟ್ ಹಾಕಿ ಆ ಟ್ವೀಟ್ ಅನ್ನೂ ಡಿಲೀಟ್ ಮಾಡಿದ್ದಾರೆ.

ಸ್ಪೇಸ್ ಎಕ್ಸ್, ಟೆಸ್ಲಾದಂತಹ ದೊಡ್ಡ ಸಂಸ್ಥೆಗಳ ಸಂಸ್ಥಾಪಕರಾಗಿರುವ ಎಲಾನ್ ಮಸ್ಕ್ ಅವರು ಇತ್ತೀಚೆಗಷ್ಟೇ ಅನಿರೀಕ್ಷಿತವೆಂಬಂತೆ ಟ್ವಿಟ್ಟರ್ ಅನ್ನು ಖರೀದಿ ಮಾಡಿದ್ದಾರೆ. ಇದರ ಮಾರಾಟ ಒಪ್ಪಂದದ ಎಲ್ಲಾ ಪ್ರಕ್ರಿಯೆ ಇನ್ನು ಕೆಲವೇ ದಿನಗಳಲ್ಲಿ ಮುಗಿಯುವ ನಿರೀಕ್ಷೆ ಇದೆ. ಖರೀದಿ ಪ್ರಸ್ತಾವಕ್ಕೂ ಮುನ್ನವೇ ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ನಲ್ಲಿ ಅಮೂಲಾಗ್ರ ಬದಲಾವಣೆ ಮಾಡುವುದಾಗಿ ಹೇಳಿದ್ದರು.

ಟ್ವಿಟ್ಟರ್‌ನ ಮ್ಯಾನೇಜ್ಮೆಂಟ್ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಸದ್ಯ ಟ್ವಿಟ್ಟರ್‌ಗೆ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಸಿಇಒ ಆಗಿದ್ದಾರೆ. ಮಸ್ಕ್ ಸಂಪೂರ್ಣವಾಗಿ ಟ್ವಿಟ್ಟರ್ ಅನ್ನು ಹತೋಟಿಗೆ ಪಡೆದ ಬಳಿಕ ಸಿಇಒ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಹಾಗೆಯೇ, ಟ್ವಿಟ್ಟರ್ ಬಹುತೇಕ ಖಾಸಗಿಯಾಗಿ ಬದಲಾಗಲಿದೆ. ಸದ್ಯ ಅದು ಷೇರುಪೇಟೆಯ ಸೂಚ್ಯಂಕದಲ್ಲಿ ಲಿಸ್ಟ್ ಆಗಿದೆ. ಖಾಸಗಿಯಾಗಿ ಬದಲಾದರೆ ಷೇರುಪೇಟೆಯಿಂದ ಟ್ವಿಟ್ಟರ್ ಹೊರಗೆ ಬರುತ್ತದೆ. ಷೇರುದಾರರ ಹಿತ ಎಂಬ ತಡೆ ಇಲ್ಲದೇ ಟ್ವಿಟ್ಟರ್ ಕಂಪನಿಯಲ್ಲಿ ಬೇಕಾದ್ದು ಬದಲಾವಣೆ ಮಾಡಲು ಎಲಾನ್ ಮಸ್ಕ್ ಅವರಿಗೆ ಸಾಧ್ಯವಾಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Governments and commercial users might soon find that their tweets come with a price tag, at least that’s what new Twitter owner Elon Musk has hinted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X