• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಆಸ್ತಿ ವಿವರ: ಸ್ವಂತ ಕಾರು ಹೊಂದಿಲ್ಲ, ಸಾಲ ಮಾಡಿಲ್ಲ

|
   ನರೇಂದ್ರ ಮೋದಿ ಆಸ್ತಿ ವಿವರ | Lok Sabha Elections 2019

   ವಾರಣಾಸಿ, ಏಪ್ರಿಲ್ 26 : ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪುನರ್ ಆಯ್ಕೆ ಬಯಸಿ, ಹಾಲಿ ಸಂಸದ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರದ ಜೊತೆಗೆ ಸಲ್ಲಿಸಿರುವ ಆಸ್ತಿ ವಿವರ ಇಲ್ಲಿದೆ.

   ಗುರುವಾರದಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ದಶಾಶ್ವಮೇಧ ಘಾಟ್ ತನಕ ರೋಡ್ ಶೋ ನಡೆಸಿ, ಸಂಜೆ ವೇಳೆ ಗಂಗಾರತಿಯಲ್ಲಿ ಪಾಲ್ಗೊಂಡಿದ್ದರು.

   ಶುಕ್ರವಾರ ಎನ್ಡಿಎ ಮುಖಂಡರಾದ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಪ್ರಕಾಶ್​ ಸಿಂಗ್​ ಬಾದಲ್​, ಎಲ್​ಜೆಪಿ ಮುಖ್ಯಸ್ಥ ರಾಮ್​ವಿಲಾಸ್​ ಪಾಸ್ವಾನ್​, ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ, ಬಿಹಾರ ಸಿಎಂ ನಿತೀಶ್​ ಕುಮಾರ್​, ತಮಿಳುನಾಡು ಸಿಎಂ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರಸೆಲ್ವಂ ಜೊತೆ ಸಭೆ ನಡೆಸಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಪಿಯೂಷ್ ಗೋಯೆಲ್, ಜೆ.ಪಿ ನಡ್ಡಾ, ನಿತಿನ್ ಗಡ್ಕರಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಉಪಸ್ಥಿತರಿದ್ದಾರೆ.

   ವ್ಯಕ್ತಿ ಚಿತ್ರ : ವಾರಣಾಸಿ ಸಂಸದ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ

   ಮೋದಿ ಅವರು ಅರ್ಜಿ 26(ಎ)ನಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

   ಮೋದಿ ಸ್ವವಿವರ

   ಮೋದಿ ಸ್ವವಿವರ

   ಹೆಸರು: ನರೇಂದ್ರ ಮೋದಿ

   ವಯಸ್ಸು : 68

   ತಂದೆ : ದಾಮೋದರ್ ದಾಸ್ ಮೋದಿ

   ವಿಳಾಸ : ಸೋಮೇಶ್ವರ್ ಟೆನಾಮೆಂಟ್, ರಣಿಪ್, ಅಹಮದಾಬಾದ್.

   ಪಕ್ಷ : ಭಾರತೀಯ ಜನತಾ ಪಾರ್ಟಿ

   ಕ್ಷೇತ್ರ: ವಾರಣಾಸಿ

   ಮತದಾನ ಹಕ್ಕು : 55 ಸಬರಮತಿ ವಿಧಾನಸಭಾ ಕ್ಷೇತ್ರ.

   * 1 ಇಮೇಲ್ ಐಡಿ, 1 ವೆಬ್ ಸೈಟ್, 1 ಫೇಸ್ಬುಕ್, 1 ಟ್ವಿಟ್ಟರ್ ಖಾತೆ ಹೊಂದಿದ್ದಾರೆ.

   * 1967ರಲ್ಲಿ ಗುಜರಾತಿನಲ್ಲಿ ಎಸ್ಎಸ್ ಸಿ, 1978ರಲ್ಲಿ ದೆಹಲಿ ವಿವಿಯಿಂದ ಬಿ.ಎ, 1983ರಲ್ಲಿ ಗುಜರಾತ್ ವಿವಿಯಿಂದ ಎಂ.ಎ ಪದವಿ ಪಡೆದಿದ್ದಾರೆ.

   ಐಟಿ ರಿಟರ್ನ್ಸ್ ವಿವರ

   ಐಟಿ ರಿಟರ್ನ್ಸ್ ವಿವರ

   ನರೇಂದ್ರ ಮೋದಿ:

   2013-14 : 9,68,711 ರು ಆದಾಯ.

   2014-15: 8,58,780 ರು

   2015-16 : 19,23,160 ರು

   2016-17 : 14,59,750 ರು

   2017-18 : 19,92,520 ರು

   * ಪತ್ನಿ ಜಶೋದಾಬೆನ್ ಐಟಿ ರಿಟರ್ನ್ಸ್ ದಾಖಲೆ ವಿವರ ತಿಳಿದಿಲ್ಲ ಎಂದು ನಮೂದಿಸಿದ್ದಾರೆ.

   * ಯಾರು ಅವಲಂಬಿಯರಿಲ್ಲ. ಯಾವುದೇ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿಲ್ಲ ಎಂದು ಘೋಷಿಸಿದ್ದಾರೆ.

   ಮೋದಿ ವಿರುದ್ಧ ಕಣಕ್ಕಿಳಿದಿರುವ ಅಜಯ್ ರಾಯ್ ವ್ಯಕ್ತಿಚಿತ್ರ

   ನಗದು, ಹೂಡಿಕೆ, ಚರಾಸ್ತಿ ವಿವರ

   ನಗದು, ಹೂಡಿಕೆ, ಚರಾಸ್ತಿ ವಿವರ

   ಕೈಲಿರುವ ನಗದು 38,750 ರು (2018ರಲ್ಲಿ 48,944 ರು)

   * ಗಾಂಧಿನಗರದ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಠೇವಣಿ: 4,143 ರು

   * ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ ಎಫ್ ಡಿ 1,27,81,574 ರು (2018ರಲ್ಲಿ 1,07,96,228ರೂ)

   * ಎಲ್‌ & ಟಿ ಇನ್‌ಫ್ರಾಸ್ಟ್ರಕ್ಚರ್ ಬಾಂಡ್ ನಲ್ಲಿ ಆದಾಯ ತೆರಿಗೆ ಉಳಿಸುವ ನಿಟ್ಟಿನಲ್ಲಿ 20 ಸಾವಿರ ಗಳ ಮೌಲ್ಯದ ಬಾಂಡ್ ಹೊಂದಿದ್ದಾರೆ.

   * ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಸರ್ಕಾರಿ ಒಡೆತನದ ಹೂಡಿಕೆಯಲ್ಲಿ 7,61,466ರು (2018ರಲ್ಲಿ 5,18,235ರೂ) ಮೌಲ್ಯದ ಬಾಂಡ್.

   * ಎಲ್ ಐಸಿಯಲ್ಲಿ 1,90,347ರು ( 2018ರಲ್ಲಿ 1,59,281ರೂಗಳ ವಿಮೆ ) ಪಾಲಿಸಿಯನ್ನು ಹೊಂದಿದ್ದಾರೆ.

   ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ್ ಒಟ್ಟು ಆಸ್ತಿ ಎಷ್ಟು?

   ಚಿನ್ನಾಭರಣ ಇತರೆ ಚರಾಸ್ತಿ

   ಚಿನ್ನಾಭರಣ ಇತರೆ ಚರಾಸ್ತಿ

   45 ಗ್ರಾಂ ಚಿನ್ನ: 1,13,800 ರು ಮೌಲ್ಯ

   ಟಿಡಿಎಸ್ ಕಡಿತ 2018-19ರ ಆರ್ಥಿಕ ವರ್ಷ : 85,145 ರು (ಅಂದಾಜು)

   ಪ್ರಧಾನಿ ಸಚಿವಾಲಯ 1,40,895 ರು

   ಒಟ್ಟಾರೆ ಮೊತ್ತ : 1,41,36,119 ರು

   ಸ್ಥಿರಾಸ್ತಿ:

   ಗುಜರಾತ್ ನ ಗಾಂಧಿನಗರದ ವಸತಿ ಕಟ್ಟಡವೊಂದರಲ್ಲಿ ಶೇ.25 ರಷ್ಟು ಮೌಲ್ಯದ ಶೇರುಗಳನ್ನು ಹೊಂದಿದ್ದಾರೆ. 1.30,488 ರು ಮೌಲ್ಯದ ಫ್ಲಾಟ್ ಹೊಂದಿದ್ದಾರೆ. ನಿರ್ಮಾಣ ಹೂಡಿಕೆ 2,57,208 ರು

   ಒಟ್ಟಾರೆ 1,10,00,000 ರು ಸ್ಥಿರಾಸ್ತಿ ಮೌಲ್ಯ.

   * ನವದೆಹಲಿಯ ಲೋಕ್ ಕಲ್ಯಾಣ್ ಮಾರ್ಗ್ ನಲ್ಲಿ ಸರ್ಕಾರಿ ಮನೆ, ಗಾಂಧಿನಗರದಲ್ಲಿ ಸರ್ಕಾರಿ ವಸತಿ ಹೊಂದಿದ್ದಾರೆ.

   * ಯಾವುದೇ ಸಾಲ, ಯಾವುದೇ ತೆರಿಗೆ ಬಾಕಿ ಹೊಂದಿಲ್ಲ.

   * ಸರ್ಕಾರಿ ಹುದ್ದೆ ಹಾಗೂ ಬ್ಯಾಂಕಿನ ಬಡ್ಡಿದರವೇ ಆದಾಯದ ಮೂಲ ಎಂದಿದ್ದಾರೆ.

   ಅಮಿತ್ ಶಾ ಆಸ್ತಿ ಏಳು ವರ್ಷಗಳಲ್ಲಿ ಮೂರು ಪಟ್ಟು ಏರಿಕೆ!

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   BJP candidate from Uttar Pradesh's Varanasi PM Narendra Modi today filed nomination. The declaration shows that the Prime Minister has not taken any loan from banks.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more