ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಅಧಿಕಾರಕ್ಕೆ ಬರಲು 4 ರಾಜ್ಯ ಗೆಲ್ಲಬೇಕು: ಡಾ. ಸಂದೀಪ್

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

Lok Sabha Elections 2019: ಈ ನಾಲ್ಕು ರಾಜ್ಯಗಳು ನರೇಂದ್ರ ಮೋದಿಯವರ ಭವಿಷ್ಯ ನಿರ್ಧರಿಸುತ್ತೆ | Oneindia Kannada

ಬೆಂಗಳೂರು, ಏಪ್ರಿಲ್ 17: ಲೋಕಸಭೆ ಚುನಾವಣೆ ಸಮರದಲ್ಲಿ ಈ ಬಾರಿ ಬಂದಿರುವ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಬಹುತೇಕ ಎನ್ಡಿಎ ಮುಂದಿದೆ. ಆದರೆ, ಬಿಜೆಪಿ ಮ್ಯಾಜಿಕ್ ನಂಬರ್ 272 ದಾಟಲು ತಿಣುಕಾಡುತ್ತಿದೆ. ಬಿಜೆಪಿ ಸ್ವಯಂಬಲದಿಂದ ಬಹುಮತ ಗಳಿಸುವುದು ಯಾಕೋ ಕಷ್ಟವೆನಿಸುತ್ತಿದೆ ಎಂದು ರಾಜಕೀಯ ತಜ್ಞ ಡಾ. ಸಂದೀಪ್ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಕೇಂದ್ರ ಬಜೆಟ್, ಪುಲ್ವಾಮಾ ದಾಳಿ ನಂತರ ಬಾಲಕೋಟ್, ಮುಜಾಫರಬಾದ್ ಹಾಗೂ ಚಕೋತಿ ಮೇಲೆ ದಾಳಿ ನಡೆಸಿ, ಉಗ್ರರನ್ನು ಸದೆಬಡಿದ್ದು, ಮೇಲ್ವರ್ಗದ ಬಡವರಿಗೆ ಶೇ 10ರಷ್ಟು ಮೀಸಲಾತಿ ಒದಗಿಸಿದ್ದು ಮೋದಿ ಸರ್ಕಾರದ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ ಹುಟ್ಟು ಹಾಕಿದೆ ಎಂದರೆ ತಪ್ಪಾಗಲಾರದು. ಇನ್ನೊಂದೆಡೆ, ಕಾಂಗ್ರೆಸ್ ತನ್ನ ಸ್ಥಳೀಯ ಮಟ್ಟದ ಪ್ರಣಾಳಿಕೆಗಳ ಮೂಲಕ ನ್ಯಾಯ ಒದಗಿಸುವ ಮಾತನಾಡುತ್ತಿದೆ.

ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸುಮಲತಾಗೆ ಗೆಲುವು: ಸಮೀಕ್ಷೆ ವರದಿ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸುಮಲತಾಗೆ ಗೆಲುವು: ಸಮೀಕ್ಷೆ ವರದಿ

ಈ ನಿಟ್ಟಿನಲ್ಲಿ ಡಾ. ಸಂದೀಪ್ ಶಾಸ್ತ್ರಿ ಅವರು, ಬಿಜೆಪಿಗೆ ಬಹುಮತ ಪಡೆಯಬೇಕಾದರೆ ನಾಲ್ಕು ರಾಜ್ಯಗಳಲ್ಲಿ ಉತ್ತಮ ಫಲಿತಾಂಶ ಹೊರ ತರಬೇಕು ಎಂದಿದ್ದಾರೆ. ಈ ರಾಜ್ಯಗಳಲ್ಲಿ ಹೆಚ್ಚಿನ ಶ್ರಮ ವಹಿಸಿದರೆ, ಉತ್ತರಪ್ರದೇಶದಲ್ಲಿ ನೀಡಿದಂಥ ಫಲಿತಾಂಶ ನಿರೀಕ್ಷೆ ಸಾಧ್ಯವಿದೆ ಎಂದಿದ್ದಾರೆ.

ಉತ್ತರಪ್ರದೇಶದ 80 ಸ್ಥಾನಗಳು

ಉತ್ತರಪ್ರದೇಶದ 80 ಸ್ಥಾನಗಳು

ಭಾರತೀಯ ಜನತಾ ಪಕ್ಷ(ಬಿಜೆಪಿ) ಈ ಬಾರಿ ಅಧಿಕಾರದಲ್ಲಿದೆ. ಆದರೆ, ಉಪ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಮೈತ್ರಿ ಮಾಡಿಕೊಂಡಿರುವ ಎಸ್ಪಿ, ಬಿಎಸ್ಪಿ ಉತ್ತಮ ಪ್ರದರ್ಶನ ನೀಡಿದೆ. ಹೀಗಾಗಿ, ಕಳೆದ ಬಾರಿ 73 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 50 ಪ್ಲಸ್ ಸ್ಥಾನಕ್ಕೆ ಸೀಮಿತವಾಗಬೇಕಿದೆ. ಉತ್ತರ ಪ್ರದೇಶ ಗೆದ್ದರೆ ಭಾರತ ಗೆದ್ದಂತೆ ಎಂಬ ಅಘೋಷಿತ ವಾಕ್ಯಕ್ಕೆ ಬೆಲೆ ಸಿಗುವುದೇ ಕಾದು ನೋಡಬೇಕಿದೆ.

ಕರ್ನಾಟಕ 28 ಸ್ಥಾನ

ಕರ್ನಾಟಕ 28 ಸ್ಥಾನ

ಕರ್ನಾಟಕದಲ್ಲಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳಿಲ್ಲದಿದ್ದರೂ, ದಕ್ಷಿಣದಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಉಳಿಸಿ, ಬೆಳಸಲು ಕರ್ನಾಟಕ ಹೆಬ್ಬಾಗಿಲಾಗಲಿದೆ.ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇತ್ತೀಚಿಗೆ ಹೇಳಿರುವ 22 ಸಂಖ್ಯೆಯನ್ನು ಮುಟ್ಟಲು ಸಾಧ್ಯವಾಗದಿದ್ದರೂ ಬಿಜೆಪಿ 16 ಸ್ಥಾನ ಗೆಲ್ಲುವ ಸಾಧ್ಯತೆ ಕಂಡು ಬಂದಿದೆ. 2014ರಲ್ಲಿ ಬಿಜೆಪಿ 17, 2009ರಲ್ಲಿ 19 ಸ್ಥಾನ ಗಳಿಸಿತ್ತು.

ನ್ಯೂಸ್ ನೇಷನ್ ಸಮೀಕ್ಷೆ : ಕರ್ನಾಟಕದಲ್ಲಿ ಮೋದಿ ಅಲೆಯ ಮೇಲೆ ಬಿಜೆಪಿ ಸವಾರಿ?ನ್ಯೂಸ್ ನೇಷನ್ ಸಮೀಕ್ಷೆ : ಕರ್ನಾಟಕದಲ್ಲಿ ಮೋದಿ ಅಲೆಯ ಮೇಲೆ ಬಿಜೆಪಿ ಸವಾರಿ?

ರಾಜಸ್ಥಾನ 25 ಸ್ಥಾನ

ರಾಜಸ್ಥಾನ 25 ಸ್ಥಾನ

ಕರ್ನಾಟಕದಂತೆ ರಾಜಸ್ಥಾನ ಕೂಡಾ ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು ಹೊಂದಿಲ್ಲದಿದ್ದರೂ, ಬಿಜೆಪಿಯ ಪ್ರತಿಷ್ಠೆಯ ಕಣವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಸೇಡು ತೀರಿಸಿಕೊಳ್ಳಬೇಕಿದೆ. ಹಾಗೂ ಮೋದಿ ಅಲೆ ಇದೆ ಎಂಬುದನ್ನು ಸಾಬೀತು ಪಡಿಸಲು ಬಿಜೆಪಿ ಮುಂದಾಗಿದೆ. 2014ರಲ್ಲಿ ಇಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು.

ಬಿಹಾರ 40 ಸ್ಥಾನ

ಬಿಹಾರ 40 ಸ್ಥಾನ

ಮಹಾಘಟಬಂದನ್ ಗೆ ಭಾರಿ ಪೆಟ್ಟು ನೀಡಲು ಜೆಡಿಯು ಜತೆ ಕಣಕ್ಕಿಳಿದಿರುವ ಬಿಜೆಪಿಗೆ ಬಿಹಾರದಲ್ಲಿ ಗೆಲುವು ಅಷ್ಟು ಸುಲಭವಲ್ಲ. ಮಿತ್ರಪಕ್ಷ ಅಧಿಕಾರದಲ್ಲಿದ್ದರೂ, 2014ರ ಫಲಿತಾಂಶ ಹೊರ ತರಲು ಸಾಧ್ಯವೆ ಎಂಬ ಪ್ರಶ್ನೆ ಎದ್ದಿದೆ. ಆದರೆ, ಪ್ರಶಾಂತ್ ಕಿಶೋರ್ ರಂಥ ರಾಜಕೀಯ ನಿಪುಣರ ನೆರವಿನಿಂದ ಬಿಹಾರದಲ್ಲಿ ಈ ಬಾರಿ ಎನ್ಡಿಎ ಮೈತ್ರಿ ಕೂಟ 30 ಪ್ಲಸ್ ಸ್ಥಾನದ ನಿರೀಕ್ಷೆಯಲ್ಲಿದೆ.

ಚುನಾವಣಾ ಫಲಿತಾಂಶ 2014: ಪಕ್ಷಗಳ ಬಲಾಬಲಚುನಾವಣಾ ಫಲಿತಾಂಶ 2014: ಪಕ್ಷಗಳ ಬಲಾಬಲ

English summary
All pre-poll surveys suggest that the National Democratic Alliance is ahead, but the question is will the BJP manage a majority on its own.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X