ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುವನಂತಪುರಂ : ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಆಸ್ತಿ ವಿವರ

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 02: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಅವರು ತಿರುವನಂತಪುರಂ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದ ಜೊತೆಗೆ ಸಲ್ಲಿಸಿರುವ ಅಫಿಡವಿಟ್ ನಂತೆ ಶಶಿ ತರೂರ್ ಅವರು ಆಸ್ತಿ ಮೌಲ್ಯ 35 ಕೋಟಿ ರು ಎಂದು ಘೋಷಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು 34,00,22, 585 ರು ಚರಾಸ್ತಿ, 1 ಕೋಟಿ ರು ಮೌಲ್ಯದದ ಸ್ಥಿರಾಸ್ತಿ ಹೊಂದಿದ್ದಾರೆ. 2017-18ರ ಐಟಿ ರಿಟರ್ನ್ಸ್ ಸಲ್ಲಿಕೆಯ ಪ್ರಕಾರ 3,66,21,978 ರು ಆದಾಯ ತೋರಿಸಿದ್ದಾರೆ. 15 ಕೋಟಿ ರು ಗೂ ಅಧಿಕ ಹೂಡಿಕೆ ಮಾಡಿದ್ದು, ವಿವಿಧ ಕಂಪನಿಗಳ ಷೇರು, ಬಾಂಡ್ ಹಾಗೂ ಮ್ಯೂಚುವಲ್ ಫಂಡ್ ಹೊಂದಿದ್ದಾರೆ.

ಸುನಂದಾ ಪುಷ್ಕರ್ ಕೇಸ್: ಶಶಿ ತರೂರ್ ಗೆ ನಿರೀಕ್ಷಣಾ ಜಾಮೀನು ಸುನಂದಾ ಪುಷ್ಕರ್ ಕೇಸ್: ಶಶಿ ತರೂರ್ ಗೆ ನಿರೀಕ್ಷಣಾ ಜಾಮೀನು

ಎರಡು ಸ್ವಂತ ಕಾರುಗಳನ್ನು ಹೊಂದಿದ್ದು, 25,000ರು ನಗದು ಹೊಂದಿದ್ದಾರೆ. ಭಾರತ ಹಾಗೂ ವಿದೇಶದ ವಿವಿಧ ಬ್ಯಾಂಕ್ ಠೇವಣಿ ಮೊತ್ತ 5.88 ಕೋಟಿ ರು ನಷ್ಟಿದೆ.

ತಿರುವನಂತಪುರಂ ಲೋಕಸಭಾ ಕ್ಷೇತ್ರ ಪರಿಚಯ ತಿರುವನಂತಪುರಂ ಲೋಕಸಭಾ ಕ್ಷೇತ್ರ ಪರಿಚಯ

Elections 2019 : Shashi Tharoor has total assets of over Rs 35 crore

ಸಂಸದನಾಗಿ ಪಡೆಯುವ ಸಂಬಳವೇ ಆದಾಯದ ಮೂಲ ಎಂದು ತೋರಿಸಿದ್ದಾರೆ. ವಿಶ್ವಸಂಸ್ಥೆಯಿಂದ ಪಿಂಚಣಿ, ಕೃತಿ ಹಾಗೂ ಲೇಖನಕ್ಕೆ ಸಿಗುವ ಸಂಭಾವನೆ, ಭಾಷಣಗಳಿಗೆ ಪಡೆಯುವ ಮೊತ್ತ ಕೂಡಾ ಇದರಲ್ಲಿ ಸೇರಿದೆ. ತಮ್ಮ ವಿರುದ್ಧ ಎರಡು ಕ್ರಿಮಿನಲ್ ಮೊಕದ್ದಮೆ ಇದೆ ಎಂದು ಘೋಷಿಸಿಕೊಂಡಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ 23 ಕೋಟಿ ರು ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದರು.

English summary
The affidavit filed by senior Congress leader Shashi Tharoor Monday while submitting his nomination papers for the Thiruvananthapuram Lok Sabha seat showed he has assets over Rs 35 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X