ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರ ಲೋಕಸಮರ ಅತ್ಯಂತ ಶ್ರೀಮಂತ ಮಹಿಳಾ ಅಭ್ಯರ್ಥಿ ಯಾರು?

|
Google Oneindia Kannada News

ನವದೆಹಲಿ, ಮೇ 18: ಲೋಕಸಮರ 2019ರಲ್ಲಿ ಪುರುಷ ಅಭ್ಯರ್ಥಿಗಳ ಪೈಕಿ ಬಿಹಾರದ ಪಕ್ಷೇತರ ಅಭ್ಯರ್ಥಿ ರಮೇಶ್ ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಇದೇ ರೀತಿ ಮಹಿಳಾ ಅಭ್ಯರ್ಥಿಗಳ ಪೈಕಿ ಬಿಜೆಪಿ ಸಂಸದೆ, ಮಥುರಾ ಕ್ಷೇತ್ರದ ಅಭ್ಯರ್ಥಿ ಹೇಮಮಾಲಿನಿ ಅವರು ಅತ್ಯಂತ ಶ್ರೀಮಂತೆಯಾಗಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಲೋಕಸಭೆ ಚುನಾವಣೆ 2019ರಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್ ನಲ್ಲಿರುವ ಅಂಕಿ ಅಂಶಗಳನ್ನು ಕಲೆ ಹಾಕಿ ಆಸ್ತಿ ವಿವರಗಳ ಲೆಕ್ಕವನ್ನು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ಮಾಡಿದೆ.

ಈತ 2019ರ ಲೋಕಸಭೆ ಚುನಾವಣೆಯ ಅತಿ ಶ್ರೀಮಂತ ಅಭ್ಯರ್ಥಿ ಈತ 2019ರ ಲೋಕಸಭೆ ಚುನಾವಣೆಯ ಅತಿ ಶ್ರೀಮಂತ ಅಭ್ಯರ್ಥಿ

ಎಡಿಆರ್ ನೀಡಿರುವ ವರದಿ ಪ್ರಕಾರ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅತ್ಯಂತ ಶ್ರೀಮಂತ ಅಭ್ಯರ್ಥಿ ಬಿಹಾರದಲ್ಲಿದ್ದಾರೆ. ಬಿಹಾರ ಪಕ್ಷೇತರ ಅಭ್ಯರ್ಥಿ ರಮೇಶ್ ಕುಮಾರ್ ಶರ್ಮ ಅವರ ಆಸ್ತಿ ಮೌಲ್ಯ 11,07,58,33,190 ರು ಎಂದು ವರದಿ ಹೇಳಿದೆ.

ಬಿಜೆಪಿ ಅಭ್ಯರ್ಥಿ ಹೇಮಮಾಲಿನಿ ಅಸ್ತಿ

ಬಿಜೆಪಿ ಅಭ್ಯರ್ಥಿ ಹೇಮಮಾಲಿನಿ ಅಸ್ತಿ

ನಟಿ, ಸಂಸಸೆ ಹೇಮಮಾಲಿನಿ ಅವರ ಆಸ್ತಿ ಮೌಲ್ಯ 2,50,82,70,292 ರು (250 ಕೋಟಿ ರು) ಎಂದು ಎಡಿಆರ್ ತಿಳಿಸಿದೆ. ಚರಾಸ್ತಿ ಮೌಲ್ಯ 25,85,62,856 ರು ಹಾಗೂ ಸ್ಥಿರಾಸ್ತಿ ಮೌಲ್ಯ 2,24,97,07,436 ರು

7ನೇ ಹಂತದಲ್ಲಿ ರಮೇಶ್ ಹಾಗೂ ಬಾದಲ್ ಶ್ರೀಮಂತ ಅಭ್ಯರ್ಥಿಗಳು 7ನೇ ಹಂತದಲ್ಲಿ ರಮೇಶ್ ಹಾಗೂ ಬಾದಲ್ ಶ್ರೀಮಂತ ಅಭ್ಯರ್ಥಿಗಳು

ಟಿಡಿಪಿ ಅಭ್ಯರ್ಥಿ ಡಿ.ಎ ಸತ್ಯಪ್ರಭಾ

ಟಿಡಿಪಿ ಅಭ್ಯರ್ಥಿ ಡಿ.ಎ ಸತ್ಯಪ್ರಭಾ

ಎರಡನೇ ಸ್ಥಾನದಲ್ಲಿ ರಾಜಮ್ ಪೇಟ್ ನಿಂದ ಸ್ಪರ್ಧಿಸಿರುವ ಟಿಡಿಪಿ ಅಭ್ಯರ್ಥಿ ಡಿ.ಎ ಸತ್ಯಪ್ರಭಾ ಇದ್ದಾರೆ. ಇವರ ಆಸ್ತಿ ಮೌಲ್ಯ 220 ಕೋಟಿ ರು. ಚರಾಸ್ತಿ ಮೌಲ್ಯ: 1,50,73,33,211 ರು ಹಾಗೂ ಸ್ಥಿರಾಸ್ತಿ ಮೌಲ್ಯ : 69,75,00,000ರು

ಹರ್ ಸಿಮ್ರತ್ ಕೌರ್ ಆಸ್ತಿ ವಿವರ

ಹರ್ ಸಿಮ್ರತ್ ಕೌರ್ ಆಸ್ತಿ ವಿವರ

ಮೂರನೇ ಸ್ಥಾನದಲ್ಲಿ ಭಟಿಂಡಾದಿಂದ ಸ್ಪರ್ಧಿಸಿರುವ ಶಿರೋಮಣಿ ಅಕಾಲಿದಳ ಸ್ಪರ್ಧಿ ಹರ್ ಸಿಮ್ರತ್ ಕೌರ್ ಅವರಿದ್ದಾರೆ. ಇವರ ಆಸ್ತಿ ಮೌಲ್ಯ 217 ಕೋಟಿ ರು. ಚರಾಸ್ತಿ ಮೌಲ್ಯ : 1,00,30,02,445 ರು ಹಾಗೂ ಸ್ಥಿರಾಸ್ತಿ ಮೌಲ್ಯ 1,17,69,17,425 ರು.

ಬಿಹಾರ ಪಕ್ಷೇತರ ಅಭ್ಯರ್ಥಿ ರಮೇಶ್ ಕುಮಾರ್

ಬಿಹಾರ ಪಕ್ಷೇತರ ಅಭ್ಯರ್ಥಿ ರಮೇಶ್ ಕುಮಾರ್

ಬಿಹಾರ ಪಕ್ಷೇತರ ಅಭ್ಯರ್ಥಿ ರಮೇಶ್ ಕುಮಾರ್ ಶರ್ಮ ಅವರ ಆಸ್ತಿ ಮೌಲ್ಯ 11,07,58,33,190 ರು ಎಂದು ವರದಿ ಹೇಳಿದೆ. ಪಾಟಲೀಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ರಮೇಶ್ ಆಸ್ತಿ 1,107 ಕೋಟಿ ರು, ಚರಾಸ್ತಿ ಮೌಲ್ಯ 7,08,33,190 ರು ಹಾಗೂ ಸ್ಥಿರಾಸ್ತಿ ಮೌಲ್ಯ 11,00,50,00,000 ರು

English summary
Elections 2019: Contesting from the Mathura constituency in Uttar Pradesh, Hema has declared assets worth 2,50,82,70,292 (Rs 250 crore) according to a report by the Association for Democratic Reforms. Her movable and immovable assets are valued at Rs 25,85,62,856 and Rs 2,24,97,07,436 respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X