ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಸಂದರ್ಭದಲ್ಲಿ 'ಜಿಯೋ ನ್ಯೂಸ್' ಪರಿಚಯಿಸಿದ ರಿಲಯನ್ಸ್

|
Google Oneindia Kannada News

ಮುಂಬೈ, ಏಪ್ರಿಲ್ 11: ಜಿಯೋ ಮಾರುಕಟ್ಟೆಗೆ ಹೊಸದಾಗಿ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್-ಆಧಾರಿತ ಸೇವೆ ರೂಪದಲ್ಲಿ ಜಿಯೋ ನ್ಯೂಸ್ ಎಂಬ ಕ್ರಾಂತಿಕಾರಿ ಡಿಜಿಟಲ್ ಉತ್ಪನ್ನವನ್ನು ಪರಿಚಯಿಸಿದೆ. ಈ ಆಪ್ ಅನ್ನು ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ ನಿಂದ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಜಿಯೋ ನ್ಯೂಸ್ ಉತ್ತಮ ಸಂದರ್ಭದಲ್ಲಿಯೇ ಲಾಂಚ್ ಆಗಿದ್ದು, ಭಾರತೀಯರಿಗೆ 2019ರ ಲೋಕಸಭಾ ಚುನಾವಣೆಯ ಬಗ್ಗೆ, ಐಪಿಎಲ್ 2019, ಕ್ರಿಕೆಟ್ ವಿಶ್ವಕಪ್ 2019ರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇದಲ್ಲದೇ ಭಾರತ ಮತ್ತು ವಿಶ್ವದಾದ್ಯಂತದ ನಡೆಯುವ ಪ್ರಮುಖ ಘಟನೆಗಳನ್ನು ಈ ಆಪ್ ಮೂಲಕವೇ ತಿಳಿದುಕೊಳ್ಳಲು ಅವಕಾಶ ನೀಡಲಿದೆ. ಈ ಆಪ್ ಬಳಸುವವರು ಇತ್ತೀಚಿನ ಸುದ್ದಿಗಳನ್ನು ಪಡೆಯುವುದಲ್ಲದೇ. ಬ್ರೇಕಿಂಗ್ ನ್ಯೂಸ್, ಲೈವ್ ಟಿವಿ, ವೀಡಿಯೊಗಳನ್ನು, ನಿಯತಕಾಲಿಕೆಗಳನ್ನು, ಪತ್ರಿಕೆಗಳನ್ನು ಓದುವುದು ಮತ್ತು ಇನ್ನು ಹೆಚ್ಚಿನ ಸೇವೆಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಒಂದೇ ಆಪ್‌ನಲ್ಲಿ ಸರ್ವವೂ ದೊರೆಯಲಿದೆ.

ಜಿಯೋ ನ್ಯೂಸ್ ಬಳಕೆದಾರರು ಸುದ್ದಿ ಓದುವ ಮತ್ತು ನೋಡುವ ವಿಧಾನವನ್ನು ಬದಲಾವಣೆಯನ್ನು ಮಾಡಲಿದ್ದು, ಹೊಸ ಅನುಭವನ್ನು ನೀಡಲಿದೆ. ಜಿಯೋ ನ್ಯೂಸ್ ಆಪ್ 'ನಿಮ್ಮ ಸುದ್ದಿ. ನಿಮ್ಮ ಭಾಷೆ' ಎಂಬ ಸಂಕಲ್ಪದಿಂದ ಕಾರ್ಯನಿರ್ವಹಿಸಲಿದೆ.

ವೇಗವಾಗಿ ಉತ್ತಮ ಸುದ್ದಿಯನ್ನು ತಲುಪಲಿದೆ

ವೇಗವಾಗಿ ಉತ್ತಮ ಸುದ್ದಿಯನ್ನು ತಲುಪಲಿದೆ

ಜಿಯೋ ನ್ಯೂಸ್ ತನ್ನ ಬಳಕೆದಾರರಿಗೆ ಸಾಧ್ಯವಾದಷ್ಟು ವೇಗವಾಗಿ ಉತ್ತಮ ಸುದ್ದಿಯನ್ನು ತಲುಪಿಸುವ ಕಾರ್ಯ ಮಾಡಲಿದೆ. ಕ್ರೀಡೆಗಳು, ಮನರಂಜನೆ, ವ್ಯಾಪಾರ, ತಂತ್ರಜ್ಞಾನ, ಜೀವನಶೈಲಿ, ಫ್ಯಾಷನ್, ವೃತ್ತಿ, ಆರೋಗ್ಯ, ಜ್ಯೋತಿಷ್ಯ, ಹಣಕಾಸು ಮತ್ತು ಇನ್ನೂ ಹೆಚ್ಚಿನ ಆಸಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಬಳಕೆದಾರರು ತಮ್ಮ ಮುಖಪುಟವನ್ನು ಸಂಪೂರ್ಣವಾಗಿ ವೈಯಕ್ತಿಕಗೊಳಿಕೊಳ್ಳುವ ಅವಕಾಶವು ದೊರೆಯಲಿದೆ.

12ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಲಭ್ಯ

12ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಲಭ್ಯ

ಜಿಯೋ ನ್ಯೂಸ್ 12ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಮೂಲಕ ತನ್ನ ಬಳಕೆದಾರರಿಗೆ ತಮ್ಮದೇ ಭಾಷೆಯಲ್ಲಿ ಸುದ್ದಿಯನ್ನು ಪಡೆಯಲು ಅವಕಾಶವನ್ನು ಮಾಡಿಕೊಟ್ಟಿದೆ. ತಮ್ಮ ಭಾಷೆಯಲ್ಲಿಯೇ ಆದ್ಯತೆಗಳನ್ನು ಆಯ್ಕೆ ಮೂಲಕ ಅವರ ಓದುವ ಅನುಭವವನ್ನು ವೈಯಕ್ತೀಕರಿಸಲು ಮುಂದಾಗಿದೆ. ಜಿಯೋ ನ್ಯೂಸ್ ಆಪ್ ನಲ್ಲಿ ಭಾರತ ಮತ್ತು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ 150+ ಲೈವ್ ನ್ಯೂಸ್ ಚಾನಲ್ಗಳು, 800+ ಮ್ಯಾಗಜೀನ್ಗಳು, 250+ ಸುದ್ದಿಪತ್ರಿಕೆಗಳು, ಪ್ರಸಿದ್ಧ ಬ್ಲಾಗ್ಗಳು ಮತ್ತು ಸುದ್ದಿ ವೆಬ್‌ಸೈಟ್‌ಗಳನ್ನು ಕಾಣಬಹುದಾಗಿದೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ

AI & ML (ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರಿಕ ಕಲಿಕೆ) ತಂತ್ರಜ್ಞಾನದೊಂದಿಗೆ, ಜಿಯೋ ನ್ಯೂಸ್ ಸಾವಿರಾರು ಸುದ್ದಿ ಮೂಲಗಳನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಅದರಿಂದ ಬಳಕೆದಾರರಿಗೆ ಬೇಕಾದ ವಿಷಯವನ್ನು ಹೆಚ್ಚು ಸೂಕ್ತವಾಗಿ ತೋರಿಸುತ್ತದೆ.

150+ ಲೈವ್ ಟಿವಿ ಅಲ್ಲದೇ ಬಾಲಿವುಡ್, ಫ್ಯಾಶನ್, ಹೆಲ್ತ್, ಆಟೋಮೋಟಿವ್, ಟೆಕ್ನಾಲಜಿ, ಕ್ರೀಡಾ ಮತ್ತು ಇನ್ನು ಹೆಚ್ಚಿನ ವಿಷಯಗಳಿಗೆ ಸಂಬಂಧಿಸಿದ ಟ್ರೆಂಡಿಂಗ್ ವೀಡಿಯೊಗಳನ್ನು ಜಿಯೋ ನ್ಯೂಸ್ ಆಪ್‌ನಲ್ಲಿ ನೋಡಿ ಆನಂದಿಸಬಹುದು.

800+ ನಿಯತಕಾಲಿಕೆ ಆಯ್ಕೆಗೆ ಲಭ್ಯ

800+ ನಿಯತಕಾಲಿಕೆ ಆಯ್ಕೆಗೆ ಲಭ್ಯ

ಓದುವುದಕ್ಕೆ ಆದ್ಯತೆ ನೀಡುವವರಿಗೆ, ಅವರು ವಿವಿಧ ವರ್ಗಗಳಲ್ಲಿ 800+ ನಿಯತಕಾಲಿಕೆಗಳನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆ ನೀಡಲಾಗಿದೆ. ದೇಶಾದ್ಯಂತದ ಪ್ರಕಟವಾಗುವ ದಿನಪತ್ರಿಕೆಗಳು ಜಿಯೋ ನ್ಯೂಸ್ ನಲ್ಲಿ ಕಾಣಿಸಿಕೊಳ್ಳುತ್ತದೆ.

ಜಿಯೋ ನ್ಯೂಸ್ ಆಪ್‌ ಜಿಯೋ ಎಕ್ಸ್‌ಪ್ರೆಸ್ ನ್ಯೂಸ್, ಜಿಯೋ ಮ್ಯಾಗ್ಸ್ ಮತ್ತು ಜಿಯೋ ನ್ಯೂಸ್ ಪೇಪರ್ಸ್ ಆಪ್‌ಗಳನ್ನು ಒಳಗೊಂಡ ಸೇವೆಯಾಗಲಿದ್ದು, ಇದರಲ್ಲಿ ಹೆಚ್ಚುವರಿಯಾಗಿ ಲೈವ್ ಟಿವಿ ಮತ್ತು ವೀಡಿಯೋಗಳು ಕೊಡುಗೆಯಾಗಿ ದೊರೆಯಲಿದೆ.

ಸುದ್ದಿ ಓದುವ ಮತ್ತು ನೋಡುವ ವಿಧಾನ

ಸುದ್ದಿ ಓದುವ ಮತ್ತು ನೋಡುವ ವಿಧಾನ

ಈಗಾಗಲೇ ಈ ಮೂರು ಆಪ್‌ಗಳನ್ನು ಬಳಕೆ ಮಾಡುತ್ತಿರುವವರು ಬಳಕೆದಾರರು ಜಿಯೋ ನ್ಯೂಸ್ ಆಪ್‌ಗೆ ಸೇರ್ಪಡೆಯಾಗಲಿದ್ದಾರೆ. ಇದಲ್ಲದೇ ಜಿಯೋ ಬಳಕೆದಾರರಲ್ಲದವರಿಗೂ ಪ್ರೀಮಿಯಮ್ ಆಯ್ಕೆಯ ಮೂಲಕ ಜಿಯೋ ನ್ಯೂಸ್ ಆಪ್ ಬಳಕೆಗೆ ಅವಕಾಶವನ್ನು ಮಾಡಿಕೊಟ್ಟಿದೆ. ದೇಶದಾದ್ಯಂತದ ಎಲ್ಲಾ ಪ್ರಮುಖ ಮತ್ತು ಜನಪ್ರಿಯ ಟಿವಿ ಸುದ್ದಿ ವಾಹಿನಿಗಳನ್ನು ಒಳಗೊಂಡಿರುವ 150+ ಲೈವ್ ಟಿವಿಯನ್ನು ಬಳಕೆದಾರರು ಈ ಆಪ್‌ನಲ್ಲಿ ಕಾಣಬಹುದು.

English summary
Jio has launched a revolutionary digital product called JioNews in the form of a mobile application as well as web-based service. The app is available on both the Google Play Store & Apple App Store for users to download.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X