ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಆಸ್ತಿ ಕೋಟಿ ರು ಹೆಚ್ಚಳ

|
Google Oneindia Kannada News

ನವದೆಹಲಿ, ಏಪ್ರಿಲ್ 24: ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಅವರು ಕಣಕ್ಕಿಳಿದ್ದು, ನಾಮಪತ್ರದ ಜೊತೆಗೆ ಆಸ್ತಿ ವಿವರವುಳ್ಳ ಅಫಿಡವಿಟ್ ಸಲ್ಲಿಸಿದ್ದಾರೆ.

ಲೋಕಸಭೆ ಚುನಾವಣೆ ವಿಶೇಷ ಪುಟ

ಮನೋಜ್ ಅವರು 2014ರಲ್ಲಿ ಘೋಷಿಸಿದ್ದ ಆಸ್ತಿಗೂ 2019ರಲ್ಲಿ ನೀಡಿರುವ ಆಸ್ತಿ ವಿವರಕ್ಕೂ 4 ಕೋಟಿ ರು ಹೆಚ್ಚಳವಾಗಿದೆ. ಈಶಾನ್ಯ ದೆಹಲಿಯಿಂದ ಸ್ಪರ್ಧಿಸುತ್ತಿರುವ ಮನೋಜ್ ತಿವಾರಿ ಅವರು ಚರಾಸ್ತಿ 24 ಕೋಟಿ ರು ಘೋಷಿಸಿದ್ದಾರೆ. 2014ರಲ್ಲಿ 20 ಕೋಟಿ ರು ಇತ್ತು. 2017-18ರ ಐಟಿ ರಿಟರ್ನ್ಸ್ ನಲ್ಲಿ 48.03 ಲಕ್ಷ ರು ಆದಾಯ ಎಂದು ತೋರಿಸಿದ್ದಾರೆ. 2014ರಲ್ಲಿ ಆದಾಯ 85 ಲಕ್ಷ ರು ಇತ್ತು.

ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ್ ಒಟ್ಟು ಆಸ್ತಿ ಎಷ್ಟು?ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ್ ಒಟ್ಟು ಆಸ್ತಿ ಎಷ್ಟು?

ಮೂರು ಕ್ರಿಮಿನಲ್ ಕೇಸ್ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಎರಡು ಕೇಸ್ ಈಶಾನ್ಯ ದೆಹಲಿಯ ಗೋಕುಲ್ ಪುರಿ ಹಾಗೂ ಉಸ್ಮಾನ್ ಪುರ್ ಪೊಲೀಸ್ ಠಾಣೆಯಲ್ಲಿವೆ. ಮಧ್ಯಪ್ರದೇಶದಲ್ಲಿ ಇನ್ನೊಂದು ಕೇಸಿದ್ದು, ದೋಷರೋಪಣ ಪಟ್ಟಿ ಸಲ್ಲಿಕೆಯಾಗಿದೆ ಎಂದು ಘೋಷಿಸಿದ್ದಾರೆ.

Elections 2019: North East Delhi BJP Candidate Manoj Tiwari Assets

ಒಟ್ಟರೆ, ಚರಾಸ್ತಿ 8.51 ಕೋಟಿ ರು ಹಾಗೂ ಸ್ಥಿರಾಸ್ತಿ 15.76 ಕೋಟಿ ರು ಎಂದು ನಮೂದಿಸಿದ್ದರ್ರೆ. 1.36 ಕೋಟಿ ರು ಸಾಲ ಇದೆ ಹಾಗೂ ಸರ್ಕಾರದಿಂದ ಬಂದಿರುವ ಎರಡು ನಿವಾಸಗಳಿವೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ 2019ರಲ್ಲಿ ದೆಹಲಿ ರಣಕಣದಲ್ಲಿ ಘಟಾನುಘಟಿ ನಾಯಕರನ್ನು ಪ್ರಮುಖ ಪಕ್ಷಗಳು ಕಣಕ್ಕಿಳಿದಿದ್ದಾರೆ. ಎಎಪಿ ಹಾಗೂ ಕಾಂಗ್ರೆಸ್ ನಡುವಿನ ತಿಕ್ಕಾಟದ ಲಾಭವನ್ನು ಬಿಜೆಪಿ ಪಡೆಯುವ ನಿರೀಕ್ಷೆಯಿದೆ.

English summary
Elections 2019: BJP candidate from North East Delhi, city BJP chief Manoj Tiwari has seen a rise of over Rs 4 crore in the last five years, according to his affidavit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X