ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಸ್ ನೇಷನ್ ಸಮೀಕ್ಷೆ : ಕರ್ನಾಟಕದಲ್ಲಿ ಕೇಸರಿ ಪಡೆಗೆ ಹೆಚ್ಚಿನ ಸ್ಥಾನ

|
Google Oneindia Kannada News

ಲೋಕಸಭೆ ಚುನಾವಣೆಯ ಮೊದಲ ಮತದಾನದ ದಿನ ಹತ್ತಿರವಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟವು ಭರ್ಜರಿಯಾಗಿ ಪ್ರಚಾರ ಕಾರ್ಯ ಕೈಗೊಂಡಿದೆ. ಆದರೆ, ಬಿಜೆಪಿಗೆ ಹೆಚ್ಚಿನ ಸ್ಥಾನ ತಂದುಕೊಡುವಲ್ಲಿ ಯಡಿಯೂರಪ್ಪ ಹಾಗೂ ತಕ್ಕಮಟ್ಟಿಗೆ ಯಶಸ್ವಿಯಾಗಬಲ್ಲರು ಎಂದು ನ್ಯೂಸ್ ನೇಷನ್ ಸಮೀಕ್ಷೆ ಹೇಳಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇತ್ತೀಚಿಗೆ ಹೇಳಿರುವ 22 ಸಂಖ್ಯೆಯನ್ನು ಮುಟ್ಟಲು ಸಾಧ್ಯವಾಗದಿದ್ದರೂ ಬಿಜೆಪಿ 16 ಸ್ಥಾನ ಗೆಲ್ಲುವ ಸಾಧ್ಯತೆ ಕಂಡು ಬಂದಿದೆ. ಆದರೆ, ಕಾಂಗ್ರೆಸ್ -ಜೆಡಿಎಸ್ ಗೆ ಹೋಲಿಸಿದರೆ ಬಿಜೆಪಿಯ ಶೇಕಡಾವಾರು ಮತಗಳಿಕೆ ಕುಸಿಯಲಿದೆ.

ನ್ಯೂಸ್ ನೇಷನ್ ಸಮೀಕ್ಷೆ : ಕರ್ನಾಟಕದಲ್ಲಿ ಮೋದಿ ಅಲೆಯ ಮೇಲೆ ಬಿಜೆಪಿ ಸವಾರಿ?ನ್ಯೂಸ್ ನೇಷನ್ ಸಮೀಕ್ಷೆ : ಕರ್ನಾಟಕದಲ್ಲಿ ಮೋದಿ ಅಲೆಯ ಮೇಲೆ ಬಿಜೆಪಿ ಸವಾರಿ?

ಕರ್ನಾಟಕದ 28 ಮತಕ್ಷೇತ್ರಗಳಿಗೆ ಏಪ್ರಿಲ್ 18 ಹಾಗೂ 23ರಂದು ಮತದಾನ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರ ಬರಲಿದೆ.

ಟೈಮ್ಸ್ ನೌ ಸಮೀಕ್ಷೆ: ಮ್ಯಾಜಿಕ್ ನಂಬರ್ ದಾಟಲಿದೆ ಮೋದಿ ಪಡೆಟೈಮ್ಸ್ ನೌ ಸಮೀಕ್ಷೆ: ಮ್ಯಾಜಿಕ್ ನಂಬರ್ ದಾಟಲಿದೆ ಮೋದಿ ಪಡೆ

2014ರಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಸ್ಥಾನ ಗಳಿಸಿತ್ತು. 2009ರಲ್ಲಿ ಬಿಜೆಪಿ 19, ಕಾಂಗ್ರೆಸ್ 6 ಹಾಗೂ 3 ಜೆಡಿಎಸ್ ಪಾಲಾಗಿತ್ತು. 2019ರಲ್ಲಿ ನ್ಯೂಸ್ ನೇಷನ್ ಸಮೀಕ್ಷೆಯಂತೆ ಕರ್ನಾಟಕದಲ್ಲಿ ಇನ್ನು ಮೋದಿ ಅಲೆ ಸ್ಥಿರವಾಗಿದೆ. ಕೈ ತೆನೆ ಮೈತ್ರಿಯಿಂದ ಬಿಜೆಪಿಗೆ ಹೆಚ್ಚಿನ ಹಾನಿಯಾಗುವುದಿಲ್ಲ.

ನ್ಯೂಸ್ ನೇಷನ್ ಸಮೀಕ್ಷೆ ಏಪ್ರಿಲ್ ತಿಂಗಳ ವರದಿ

ನ್ಯೂಸ್ ನೇಷನ್ ಸಮೀಕ್ಷೆ ಏಪ್ರಿಲ್ ತಿಂಗಳ ವರದಿ

ನ್ಯೂಸ್ ನೇಷನ್ ಸಮೀಕ್ಷೆ ಏಪ್ರಿಲ್ ತಿಂಗಳ ವರದಿಯಂತೆ
ಬಿಜೆಪಿ :16,
ಕಾಂಗ್ರೆಸ್-ಜೆಡಿಎಸ್ :12
ಇತರೆ :0

ಶೇಕಡಾವಾರು ಮತ ಗಳಿಕೆ
ಬಿಜೆಪಿ : 42%
ಕಾಂಗ್ರೆಸ್ /ಜೆಡಿಎಸ್ : 42%
ಇತರೆ : 7%
ಯಾವುದೇ ಪ್ರತಿಕ್ರಿಯೆ : 7%
ಮಾರ್ಚ್ ತಿಂಗಳ ಸಮೀಕ್ಷೆಯಲ್ಲಿ ನ್ಯೂಸ್ ನೇಷನ್

ಮಾರ್ಚ್ ತಿಂಗಳ ಸಮೀಕ್ಷೆಯಲ್ಲಿ ನ್ಯೂಸ್ ನೇಷನ್

ನ್ಯೂಸ್ ನೇಷನ್ ಸಂಸ್ಥೆ ಮಾರ್ಚ್ ತಿಂಗಳಿನಲ್ಲಿ ನಡೆಸಿದ ಸಮೀಕ್ಷೆಯಂತೆ ಯಡಿಯೂರಪ್ಪ ಮುಂದಾಳತ್ವದ ಭಾರತೀಯ ಜನತಾ ಪಕ್ಷ 15 ಸೀಟು ಗೆಲ್ಲಬಹುದು ಎಂದು ಸಮೀಕ್ಷೆ ಅಂದಾಜು ಮಾಡಿದೆ. ಉಳಿದ 13 ಸೀಟುಗಳು ಮೈತ್ರಿಕೂಟದ ಪಾಲಾಗಲಿವೆ ಎಂದು ಹೇಳಿದೆ.

ಯಡಿಯೂರಪ್ಪ 22 ಟಾರ್ಗೆಟ್

ಯಡಿಯೂರಪ್ಪ 22 ಟಾರ್ಗೆಟ್

2009ರಲ್ಲಿ 19, 2014ರಲ್ಲಿ 17 ಸೀಟು ಗೆಲ್ಲಿಸಿಕೊಟ್ಟಿದ್ದ ಬಿಎಸ್ ಯಡಿಯೂರಪ್ಪ ಅವರು ಈ ಬಾರಿ 22 ಸ್ಥಾನ ಗೆಲ್ಲುವ ಗುರಿ ಹೊಂದಿದ್ದಾರೆ. ಸಮೀಕ್ಷೆ ವರದಿಯಂತೆ ಬಿಜೆಪಿ ಶೇ43.37ರಷ್ಟು ಮತ ಗಳಿಕೆ ಪಡೆಯಲಿದ್ದು, 2014ರಂತೆ 134ಕ್ಕೂ ಅಧಿಕ ವಿಧಾನ ಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲಿದೆ.

ಕಾಂಗ್ರೆಸ್ -ಜೆಡಿಎಸ್ ಮೈತ್ರಿ

ಕಾಂಗ್ರೆಸ್ -ಜೆಡಿಎಸ್ ಮೈತ್ರಿ

ಕಾಂಗ್ರೆಸ್ ಪರ ಶೇ 41.15ರಷ್ಟು ಮತಗಳು ಬಂದಿವೆ, ಜೆಡಿಎಸ್ ಗೆ ಶೇ 11.07 ಮತ ಸಿಕ್ಕಿದೆ. 2014ರ ಎಣಿಕೆಯಂತೆ ಈ ಬಾರಿ ಕೂಡಾ ಕಾಂಗ್ರೆಸ್ 77 ಹಾಗೂ ಜೆಡಿಎಸ್ 15 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ.


English summary
Elections 2019: According to the opinion poll conducted the News Nation, the Bharatiya Janata Party (BJP) is likely to get more seats than the JDS-Congress alliance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X