ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಸ್ ನೇಷನ್ ಸಮೀಕ್ಷೆ: ಪ್ರಧಾನಿ ಪಟ್ಟಕ್ಕೇರಲು ಮೋದಿಯೇ ಸೂಕ್ತ

|
Google Oneindia Kannada News

Recommended Video

Lok Sabha Elections 2019: ಪ್ರಧಾನಿ ಪಟ್ಟಕ್ಕೆ ನರೇಂದ್ರ ಮೋದಿಯವರ ಹೆಸರೇ ಸೂಕ್ತ | ಸಮೀಕ್ಷೆ ನೀಡಿದ ವರದಿ

ಲೋಕಸಭೆ ಚುನಾವಣೆ ಹೊತ್ತಿನಲ್ಲಿ ನಡೆಸಲಾಗುವ ಜನಾಭಿಪ್ರಾಯ ಸಂಗ್ರಹ, ಸಮೀಕ್ಷೆಗಳಲ್ಲಿ ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ಮಂದಿನ ಪ್ರಧಾನಿಯಾಗಲು ಯಾರು ಸೂಕ್ತ ಎಂಬ ಪ್ರಶ್ನೆಗೆ ಮೊದಲ ಆದ್ಯತೆ ಇರುತ್ತದೆ. 2019ರಲ್ಲಿ ನಡೆಸಲಾದ ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲೂ ರಾಹುಲ್ ಗಾಂಧಿಯನ್ನು ಮೋದಿ ಅವರು ಸೋಲಿಸುತ್ತಾ ಬಂದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ, ಸಿವೋಟರ್ ಹಾಗೂ ಐಎಎನ್ಎಸ್ ಸುದ್ದಿಸಂಸ್ಥೆ ನಡೆಸಿರುವ ಇತ್ತೀಚಿನ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ರಾಹುಲ್ ಅವರನ್ನು ಹಿಂದಿಕ್ಕಿದ್ದಾರೆ. ಆದರೆ, ಗೃಹಿಣಿಯರ ಪೈಕಿ ರಾಹುಲ್ ಗಾಂಧಿ ಜನಪ್ರಿಯತೆ ಹೆಚ್ಚಾಗಿದ್ದು, ಕಾಂಗ್ರೆಸ್ಸಿಗರಲ್ಲಿ ಹೊಸ ಹರ್ಷ ಮೂಡಿಸಿತ್ತು. ಉಭಯ ನಾಯಕರ ನಡುವಿನ ಜನಪ್ರಿಯತೆ ಅಂತರ ಕಡಿಮೆಯಾಗುತ್ತಿರುವುದು ಗಮನಾರ್ಹ ಬೆಳವಣಿಗೆ ಎನ್ನಬಹುದು.

ಸಮೀಕ್ಷೆ: ಗೃಹಿಣಿಯರಿಗೆ ರಾಹುಲ್, ನಿರುದ್ಯೋಗಿಗಳಿಗೆ ಮೋದಿ ಮೆಚ್ಚು ಸಮೀಕ್ಷೆ: ಗೃಹಿಣಿಯರಿಗೆ ರಾಹುಲ್, ನಿರುದ್ಯೋಗಿಗಳಿಗೆ ಮೋದಿ ಮೆಚ್ಚು

ಏಪ್ರಿಲ್ 11 ರಿಂದ ಮೇ 19 ರ ತನಕ ಏಳು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಮೇ 23ರಂದು ಚುನಾವಣಾ ಫಲಿತಾಂಶ ಹೊರಬರಲಿದೆ.

ಟೈಮ್ಸ್ ನೌ ಸಮೀಕ್ಷೆ: ಮ್ಯಾಜಿಕ್ ನಂಬರ್ ದಾಟಲಿದೆ ಮೋದಿ ಪಡೆಟೈಮ್ಸ್ ನೌ ಸಮೀಕ್ಷೆ: ಮ್ಯಾಜಿಕ್ ನಂಬರ್ ದಾಟಲಿದೆ ಮೋದಿ ಪಡೆ

ಇನ್ನು ಒಟ್ಟಾರೆಯಾಗಿ ಬಿಜೆಪಿ ನೇತೃತ್ವದ ಎನ್ಡಿಎ 543 ಸ್ಥಾನಗಳ ಪೈಕಿ 278 ಸ್ಥಾನಗಳಿಸಿ, ಅಧಿಕಾರ ಸ್ಥಾಪಿಸುವ ಅರ್ಹತೆ ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

ಮೋದಿ ಜನಪ್ರಿಯತೆ ಹೆಚ್ಚಾಗಲು ಕಾರಣ

ಮೋದಿ ಜನಪ್ರಿಯತೆ ಹೆಚ್ಚಾಗಲು ಕಾರಣ

ಕೇಂದ್ರ ಬಜೆಟ್, ಪುಲ್ವಾಮಾ ದಾಳಿ ನಂತರ ಬಾಲಕೋಟ್, ಮುಜಾಫರಬಾದ್ ಹಾಗೂ ಚಕೋತಿ ಮೇಲೆ ದಾಳಿ ನಡೆಸಿ, ಉಗ್ರರನ್ನು ಸದೆಬಡಿದ್ದು ಮೋದಿ ಸರ್ಕಾರದ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ ಹುಟ್ಟುವಂತೆ ಮಾಡಿದೆ ಎಂದು ನ್ಯೂಸ್ ನೇಷನ್ ಸಂಸ್ಥೆ ಸಮೀಕ್ಷೆಯಿಂದ ತಿಳಿದು ಬಂದಿದೆ.

ಏಪ್ರಿಲ್ ತಿಂಗಳ ಸಮೀಕ್ಷೆ ಫಲಿತಾಂಶ

ಏಪ್ರಿಲ್ ತಿಂಗಳ ಸಮೀಕ್ಷೆ ಫಲಿತಾಂಶ

ನ್ಯೂಸ್ ನೇಷನ್ ಸಂಸ್ಥೆ ನಡೆಸಿರುವ ಏಪ್ರಿಲ್ ತಿಂಗಳ ಸಮೀಕ್ಷೆಯಂತೆ ಪ್ರಧಾನಿ ಮೋದಿ ಪರ ಶೇ 48ರಷ್ಟು ಮತಗಳು ಬಂದಿದ್ದರೆ, ರಾಹುಲ್ ಗಾಂಧಿ ಪರ ಶೇ 29ರಷ್ಟು ಮತ ಸಿಕ್ಕಿವೆ. ಮಿಕ್ಕವರು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿಲ್ಲ.

ಹಿಂದಿ ಭಾಷಿಕ ರಾಜ್ಯಗಳಿಂದ ಕೈಗೆ ಬಲ

ಹಿಂದಿ ಭಾಷಿಕ ರಾಜ್ಯಗಳಿಂದ ಕೈಗೆ ಬಲ

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ ಸೇರಿದಂತೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯನ್ನು ಕಾಂಗ್ರೆಸ್ ಇಟ್ಟುಕೊಂಡಿದೆ. ಆದರೆ, ಒಟ್ಟಾರೆ ಕಾಂಗ್ರೆಸ್ ನೇತೃತ್ವದ ಯುಪಿಎಗೆ 128 ಸ್ಥಾನಗಳು ಲಭಿಸಲಿವೆ. ಇತರೆ ಪಕ್ಷಗಳನ್ನು ಒಟ್ಟುಗೂಡಿಸಿದರೂ ಅಧಿಕಾರ ಸ್ಥಾಪನೆ ಕಷ್ಟವಾಗಲಿದೆ.

2014ರ ಫಲಿತಾಂಶ ಪುನರಾವರ್ತನೆ ಸಾಧ್ಯವಿಲ್ಲ

2014ರ ಫಲಿತಾಂಶ ಪುನರಾವರ್ತನೆ ಸಾಧ್ಯವಿಲ್ಲ

2014ರಲ್ಲಿ 336 ಸ್ಥಾನ ಗಳಿಸಿದ್ದ ಎನ್ಡಿಎ ಭರ್ಜರಿ ಪ್ರದರ್ಶನ ನೀಡಿತ್ತು. ಕಾಂಗ್ರೆಸ್ 44 ಸ್ಥಾನಕ್ಕೆ ಕುಸಿದಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದ್ರೂ ಎನ್ಡಿಎ ಬಲ ಅಧಿಕಾರದತ್ತ ಸಾಗಲಿದೆ. ಈ ಬಾರಿ ಮೋದಿ ಸರ್ಕಾರವನ್ನು ಉಳಿಸಲು ವೈಮಾನಿಕ ದಾಳಿ, ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ಮುಂತಾದ ವಿಷಯಗಳು ಮೋದಿ ಪರ ವಾಲುವಂತೆ ಮಾಡಿವೆ ಎಂದು ನ್ಯೂಸ್ ನೇಷನ್ ಹೇಳಿದೆ.

English summary
Elections 2019: Narendra Modi continues to be nation’s top choice for the prime ministerial post, according to an opinion poll conducted by the News Nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X