ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ ಸಿಪಿ ಪ್ರಭಾವಿ ಅಭ್ಯರ್ಥಿ ಸುಪ್ರಿಯಾ ಸುಳೆ ಆಸ್ತಿ ವಿವರ

|
Google Oneindia Kannada News

ಮಹಾರಾಷ್ಟ್ರದ ಪುಣೆಯ ಬಾರಾಮತಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ಸುಪ್ರಿಯಾ ಸುಳೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ(ಎನ್ ಸಿಪಿ)ಯ ಪ್ರಭಾವಿ ನಾಯಕಿಯಾಗಿ ಬೆಳೆದವರು. ಹಿರಿಯ ರಾಜಕಾರಣಿ ಎನ್‌ಸಿಪಿ ಸ್ಥಾಪಕ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಂತೆ ಒಟ್ಟು 140.88 ಕೋಟಿ ರು ಆಸ್ತಿ ಹೊಂದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

2009ರಲ್ಲಿ ಬಾರಾಮತಿ ಲೋಕಸಭೆ ಕ್ಷೇತ್ರದಿಂದ ಮೊದಲ ಬಾರಿ ಸ್ಪರ್ಧಿಸಿದ ಅವರು ಪ್ರಥಮ ಪ್ರಯತ್ನದಲ್ಲಿಯೇ ಗೆಲುವಿನ ರುಚಿ ಕಂಡರು. ಅಪ್ಪ ಶರದ್ ಪವಾರ್ ಅವರ ಕ್ಷೇತ್ರವಾಗಿದ್ದರಿಂದ ಸುಲಭ ಜಯ ಸಾಧ್ಯವಾಯಿತು. 2014ರ ಮೇ ತಿಂಗಳಿನಿಂದ ಲೋಕಸಭೆಯ ಸದಸ್ಯೆಯಾಗಿರುವ ಸುಪ್ರಿಯಾ, ಕಲಾಪಗಳು ಮತ್ತು ಚರ್ಚೆಗಳಲ್ಲಿ ಭಾಗವಹಿಸುವುದರಲ್ಲಿ ಮುಂದಿದ್ದಾರೆ.

ಬಾರಾಮತಿ: ಅಪ್ಪನ ಪ್ರಭಾವಳಿಯ ಕ್ಷೇತ್ರದಲ್ಲಿ ಸುಪ್ರಿಯಾ ಪಾರುಪತ್ಯಬಾರಾಮತಿ: ಅಪ್ಪನ ಪ್ರಭಾವಳಿಯ ಕ್ಷೇತ್ರದಲ್ಲಿ ಸುಪ್ರಿಯಾ ಪಾರುಪತ್ಯ

ಸಂಸದೆಯಾಗಿ ಅವರು ಕೆಳಮನೆ ಅಧಿವೇಶನಗಳಲ್ಲಿ ಶೇ 96ರಷ್ಟು ಬಾರಿ ಹಾಜರಾತಿ ಹಾಕಿದ್ದಾರೆ. 152 ಚರ್ಚೆಗಳಲ್ಲಿ ಅವರು ಪಾಲ್ಗೊಂಡಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಸುಪ್ರಿಯಾ ಅವರು 5,21,562 ಮತಗಳನ್ನು ಪಡೆದಿದ್ದರೆ, ಅವರ ಎದುರಾಳಿಯಾಗಿದ್ದ ಆರ್‌ಎಸ್‌ಪಿಯ ಮಹಾದೇವ್ ಜಗನ್ನಾಥ್ ಜಂಕರ್ ಅವರು 4,51,843 ಮತಗಳನ್ನು ಗಳಿಸಿದ್ದರು.

ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿ ಸುಪ್ರಿಯಾ

ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿ ಸುಪ್ರಿಯಾ

ಇದಕ್ಕೂ ಮೊದಲು 2009ರ ಚುನಾವಣೆಯಲ್ಲಿ ಸುಪ್ರಿಯಾ ಭರ್ಜರಿ ಗೆಲುವು ಕಂಡಿದ್ದರು. ಸುಪ್ರಿಯಾ 4,87,827 ಮತಗಳನ್ನು ಗಳಿಸಿದ್ದರೆ, ಅವರ ಎದುರಾಳಿಯಾಗಿದ್ದ ಬಿಜೆಪಿಯ ಕಾಂತ ಜಯಸಿಂಗ್ ನಲವಾಡೆ 1,50,996 ಮತಗಳನ್ನು ಮಾತ್ರ ಪಡೆದಿದ್ದರು. ಈ ಕ್ಷೇತ್ರದಲ್ಲಿ ಜಯಗಳಿಸಿರುವ ಏಕೈಕ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಯನ್ನೂ ಸುಪ್ರಿಯಾ ಹೊಂದಿದ್ದಾರೆ. ಈ ಬಾರಿ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದಾರೆ.

ಸುಪ್ರಿಯಾ ಸ್ವವಿವರ

ಸುಪ್ರಿಯಾ ಸ್ವವಿವರ

ಹೆಸರು : ಸುಪ್ರಿಯಾ ಸುಳೆ
ಕ್ಷೇತ್ರ : ಬಾರಾಮತಿ, ಮಹಾರಾಷ್ಟ್ರ
ಪಕ್ಷ : ಎನ್ ಸಿಪಿ
ಒಟ್ಟು ಘೋಷಿತ ಆಸ್ತಿ: 140.88 ಕೋಟಿ ರು (2014ರಲ್ಲಿ 116.46 ಕೋಟಿ ರು)
ಸ್ಥಿರಾಸ್ತಿ: 22.55 ಕೋಟಿ ರು (2014ರಲ್ಲಿ 17.47 ಕೋಟಿ ರು)
ಚರಾಸ್ತಿ : 118.33 ಕೋಟಿ ರು (2014ರಲ್ಲಿ 98.99 ಕೋಟಿ ರು)
ಹೂಡಿಕೆ: 97.86 ಕೋಟಿ ರು (16.74 ಕೋಟಿ ರು ಸುಳೆ, 81.12 ಕೋಟಿ ಪತಿ ಸದಾನಂದರಿಂದ)

ಸುಪ್ರಿಯಾ ಕುಟುಂಬದ ಬಳಿ ನಗದು

ಸುಪ್ರಿಯಾ ಕುಟುಂಬದ ಬಳಿ ನಗದು

ನಗದು
ಒಟ್ಟು : 94,320 ರು
ಸುಪ್ರಿಯಾ : 28,770 ರು
ಪತಿ ಸದಾನಂದ : 23,050 ರು
ಪುತ್ರಿ ರೇವತಿ: 28,900 ರು
ಪುತ್ರ ವಿಜಯ್ : 13,600 ರು

ಕೃಷಿ ಭೂಮಿ, ಸಾಲ ವಿವರ

ಕೃಷಿ ಭೂಮಿ, ಸಾಲ ವಿವರ

ಕೃಷಿ ಭೂಮಿ
* 16.7 ಎಕರೆ ಕೃಷಿ ಭೂಮಿ 2.7 ಕೋಟಿ ರು ಮೌಲ್ಯ
* 1.77 ಕೃಷಿಯೇತರ ಭೂಮಿ 1.03 ಕೋಟಿ ರು ಮೌಲ್ಯ
* ಎರಡು ನಿವೇಶನ 2,765 ಚದರ ಅಡಿ ಹಾಗೂ2541 ಚದರ ಅಡಿ ವಿಸ್ತೀರ್ಣ
* ಒಂದು ಮನೆ 4,442 ಚದರ ಅಡಿ, ಪತಿ ಹೆಸರಿನಲ್ಲಿದೆ.

ಸಾಲ
55 ಲಕ್ಷ ರು
* ಯಾವುದೇ ಕ್ರಿಮಿನಲ್ ಕೇಸ್ ಹೊಂದಿಲ್ಲ.

English summary
Elections 2019: The sitting NCP MP Supriya Sule will be contesting in Baramati parliamentary constituency in Maharashtra. She declared her assets worth Rs 140.88 core. Here are her declared Assets and Liabilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X