ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲಿ ಜಾಧವರು ಅಲ್ಲಿ ಯಾದವರು ಅಪ್ಪ-ಮಕ್ಕಳ ಭವಿಷ್ಯ ನಿರ್ಧಾರ

|
Google Oneindia Kannada News

ಬೆಂಗಳೂರು, ಮೇ 23: ಲೋಕಸಭೆ ಚುನಾವಣೆ 2019ರ ಅಖಾಡದಲ್ಲಿ ಕುಟುಂಬ ರಾಜಕೀಯಕ್ಕೇನು ಕೊರತೆ ಇರಲಿಲ್ಲ. ಅಪ್ಪ ಮಕ್ಕಳು, ಗಂಡ ಹೆಂಡತಿ, ಅಣ್ಣ ತಮ್ಮಂದಿರು ಕಣದಲ್ಲಿದ್ದಾರೆ.

ಗುರುವಾರ(ಮೇ 23)ರಂದು ಮತದಾರರು ನೀಡಿರುವ ತೀರ್ಪು ಇಲ್ಲಿದೆ. ಲೋಕಸಮರದಲ್ಲಿ ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಕ್ಕಿದೆ ಎಂಬ ವಿವರ ಇಲ್ಲಿ ಸಿಗಲಿದೆ. ಕರ್ನಾಟಕದಲ್ಲಿ ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಕೂಡ ಪ್ರಕಟವಾಗಲಿದೆ.

ಕರ್ನಾಟಕ ಲೋಕಸಭೆ ಚುನಾವಣಾ ಫಲಿತಾಂಶ LIVE:ಮಂಡ್ಯದಲ್ಲಿ ಸುಮಲತಾ ಮುನ್ನಡೆಕರ್ನಾಟಕ ಲೋಕಸಭೆ ಚುನಾವಣಾ ಫಲಿತಾಂಶ LIVE:ಮಂಡ್ಯದಲ್ಲಿ ಸುಮಲತಾ ಮುನ್ನಡೆ

ಇಂದು ತಂದೆ ಮತ್ತು ಮಗನ ಭವಿಷ್ಯ ನಿರ್ಧಾರವಾಗಲಿದೆ. ಕಲಬುರ್ಗಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಉಮೇಶ್ ಜಾಧವ್ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅವರ ಪುತ್ರ ಅವಿನಾಶ್ ಜಾಧವ್ ಭವಿಷ್ಯ ನಿರ್ಧಾರವಾಗಲಿದೆ.

Elections 2019: Jadhav Family in Karnataka and Yadavs in UP

ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್ ಅವರು ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಅವರ ಪುತ್ರ ಅವಿನಾಶ್ ಜಾಧವ್ ಉಪ ಚುನಾವಣೆ ಕಣದಲ್ಲಿದ್ದಾರೆ. ಕಲಬುರಗಿ ಲೋಕಸಭೆ ಕ್ಷೇತ್ರ ಮತ್ತು ಚಿಂಚೋಳಿ ವಿಧಾನಸಭೆ ಕ್ಷೇತ್ರದ ಫಲಿತಾಂಶ ಒಂದೇ ದಿನ ಪ್ರಕಟವಾಗಲಿದ್ದು, ಇಬ್ಬರ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಇದೇ ವೇಳೆ ಉತ್ತರಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಅಖಿಲೇಶ್ ಯಾದವ್ ಹಾಗು ಅವರ ತಂದೆ ಮುಲಾಯಂ ಸಿಂಗ್ ಯಾದವ್ ಅವರ ಭವಿಷ್ಯ ನಿರ್ಧಾರವಾಗಲಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಸ್ಪರ್ಧಿಸುತ್ತಿದ್ದ ಆಜಂಗಢ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಮುಲಾಯಂ ಅವರು ಮೈನ್ ಪುರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ

English summary
Elections 2019: Jadhav Family Dr Avinash Jadhav contesting in Chincholi and his father Dr Umesh Jadhav in Gulbarga LS is expecting result in Karnataka and Mulayam Singh Yadav and Akhilesh Yadav in UP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X