• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಡಿಯಾ ಟಿವಿ ಸಮೀಕ್ಷೆ: ಮ್ಯಾಜಿಕ್ ನಂಬರ್ 272 ದಾಟಲಿದೆ ಎನ್ಡಿಎ

|

ನವದೆಹಲಿ, ಏಪ್ರಿಲ್ 07: 2019ರ ಲೋಕಸಭೆ ಚುನಾವಣೆಗಾಗಿ ವಿವಿಧ ಸಂಸ್ಥೆಗಳು ರಾಜ್ಯವಾರು ಸಮೀಕ್ಷೆಗಳನ್ನು ನಡೆಸುತ್ತಿವೆ. ಇಂಡಿಯಾ ಟಿವಿ - ಸಿಎನ್ಎಕ್ಸ್ ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ 272ರ ಮ್ಯಾಜಿಕ್ ನಂಬರ್ ದಾಟಲಿದೆ ಎಂದು ವರದಿ ನೀಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇಂಡಿಯಾ ಟಿವಿ ಮತ್ತು ಸಿಎನ್‌ಎಕ್ಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯನ್ನು ಮಾರ್ಚ್ 24 ರಿಂದ 31ರ ಅವಧಿಯಲ್ಲಿ ದೇಶದ 543 ಕ್ಷೇತ್ರಗಳಲ್ಲಿ 65,100 ಜನರ ಅಭಿಪ್ರಾಯವನ್ನು ಸಂಗ್ರಹಣೆ ಮಾಡಿ ವರದಿ ತಯಾರಿಸಲಾಗಿದೆ.

ಟೈಮ್ಸ್ ನೌ ಸಮೀಕ್ಷೆ: ಮೋದಿ ಅಲೆ ಭಾರತದೆಲ್ಲೆಡೆ ಎನ್ಡಿಎ ಜಯಭೇರಿ

ಸಮೀಕ್ಷೆಯ ವರದಿ ಪ್ರಕಾರ ಎನ್‌ಡಿಎ ಮೈತ್ರಿಕೂಟ 275 ಸ್ಥಾನಗಳಲ್ಲಿ ಜಯಗಳಿಸಲಿದೆ. ಯುಪಿಎ ಮೈತ್ರಿಕೂಟ 147 ಸ್ಥಾನಗಳಲ್ಲಿ ಜಯ ಸಾಧಿಸಲಿದೆ. ಎಸ್ಪಿ ಬಿಎಸ್ಪಿ ಸೇರಿದಂತೆ ಇತರರು 121 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

ಮಾರ್ಚ್ ತಿಂಗಳ ಸಮೀಕ್ಷೆಯಲ್ಲಿ ಬಿಜೆಪಿಗೆ ಮ್ಯಾಜಿಕ್ ನಂಬರ್ 272 ದಾಟಲು ಮಿತ್ರಪಕ್ಷಗಳ ನೆರವು ಅಗತ್ಯ ಎಂದು ಸಮೀಕ್ಷೆ ಹೇಳಿತ್ತು.

ಇಂಡಿಯಾ TV-CNX ಸಮೀಕ್ಷೆ: ಬಿಜೆಪಿ 238, ಕಾಂಗ್ರೆಸ್ ಗೆ 82 ಸ್ಥಾನ

ಒಡಿಶಾದಲ್ಲಿ ಮತ್ತೊಮ್ಮೆ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಅಧಿಕಾರಕ್ಕೆ ಬರಲಿದೆ. ಅಂಧ್ರಪ್ರದೇಶದಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಸಾರ್ ಕಾಂಗ್ರೆಸ್ ಪಕ್ಷವು ಚಂದ್ರಬಾಬು ನಾಯ್ಡು ಅವರನ್ನು ಕೆಳಗಿಳಿಸಿ ಅಧಿಕಾರ ಸ್ಥಾಪಿಸಲಿದೆ.

2014ರಲ್ಲಿ ಎನ್ಡಿಎ 336ಸ್ಥಾನ ಗಳಿಸಿತ್ತು

2014ರಲ್ಲಿ ಎನ್ಡಿಎ 336ಸ್ಥಾನ ಗಳಿಸಿತ್ತು

ಈ ಬಾರಿ 275 ಪ್ಲಸ್ ಸ್ಥಾನ ಗಳಿಸಿರುವ ಎನ್ಡಿಎ ಮತ್ತೆ ಅಧಿಕಾರ ಸ್ಥಾಪಿಸುವ ಕನಸು ಕಾಣಬಹುದು. ಬಿಜೆಪಿ 230, ಕಾಂಗ್ರೆಸ್ 97(ಕಳೆದ ಬಾರಿಗಿಂತ 44 ಸ್ಥಾನ ಅಧಿಕ) ಸ್ಥಾನ ಗಳಿಸಲಿವೆ. 2014ರಲ್ಲಿ ಎನ್ಡಿಎ 336ಸ್ಥಾನ ಗಳಿಸಿತ್ತು.

ಇಂಡಿಯಾ ಟಿವಿ ಮತ್ತು ಸಿಎನ್‌ಎಕ್ಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯನ್ನು ಮಾರ್ಚ್ 24 ರಿಂದ 31ರ ಅವಧಿಯಲ್ಲಿ ದೇಶದ 543 ಕ್ಷೇತ್ರಗಳಲ್ಲಿ 65,100 ಜನರ ಅಭಿಪ್ರಾಯವನ್ನು ಸಂಗ್ರಹಣೆ ಮಾಡಿ ವರದಿ ತಯಾರಿಸಲಾಗಿದೆ.

ಬಿಜೆಪಿಗೆ 230 ಸ್ಥಾನ ಲಭಿಸಲಿದೆ

ಬಿಜೆಪಿಗೆ 230 ಸ್ಥಾನ ಲಭಿಸಲಿದೆ

ಇಂಡಿಯಾ TV-CNX ಸಮೀಕ್ಷೆ ಪ್ರಕಾರ ಬಿಜೆಪಿಗೆ 230 ಸ್ಥಾನ ಲಭಿಸಲಿದೆ. ಎನ್ಡಿಎ ಮಿತ್ರ ಪಕ್ಷಗಳಾದ ಶಿವಸೇನಾ (13), ಎಐಎಡಿಎಂಕೆ (10), ಜೆಡಿಯು (9), ಆಕಾಲಿ ದಳ (2), ಎಲ್ ಜೆಪಿ (3) ಹಾಗೂ ಪಿಎಂಕೆ (2) ಗೆಲ್ಲಲಿದೆ.

ಯುಪಿಎ ಪೈಕಿ ಡಿಎಂಕೆ (16), ಆರ್ ಜೆಡಿ(8) ಹಾಗೂ ಟಿಡಿಪಿ (7) ಗಳಿಸಲಿವೆ.

ಮಿಕ್ಕಂತೆ ತೃಣಮೂಲ ಕಾಂಗ್ರೆಸ್ 28, ಸಮಾಜವಾದಿ ಪಕ್ಷ 15, ಬಿಎಸ್ಪಿ 14, ವೈಎಸ್ಸಾರ್ ಕಾಂಗ್ರೆಸ್ 18, ಟಿಆರ್ ಎಸ್ 12, ಬಿಜೆಡಿ 14 ಹಾಗೂ ಎಡಪಕ್ಷ 8.

ದೆಹಲಿ, ಉತ್ತರಪ್ರದೇಶದಲ್ಲಿ ಫಲಿತಾಂಶ ನಿರೀಕ್ಷೆ

ದೆಹಲಿ, ಉತ್ತರಪ್ರದೇಶದಲ್ಲಿ ಫಲಿತಾಂಶ ನಿರೀಕ್ಷೆ

* ದೆಹಲಿಯಲ್ಲಿ ಎಲ್ಲಾ 7 ಸೀಟುಗಳು ಬಿಜೆಪಿ ಪಾಲಾಗಲಿವೆ.

* ಉತ್ತರಪ್ರದೇಶದಲ್ಲಿ ಬಿಜೆಪಿ 40, ಬಿಎಸ್ಪಿ 16, ಎಸ್ಪಿ 18, ಕಾಂಗ್ರೆಸ್ 4 ಸ್ಥಾನ, ಆರ್ ಎಲ್ ಡಿ 1 ಹಾಗೂ ಅಪ್ನಾದಳ್ 1 ಸ್ಥಾನ ಮಾತ್ರ ಗಳಿಸಲಿವೆ.

* ಉತ್ತರಾಖಂಡ್ ಬಿಜೆಪಿ 3, ಕಾಂಗ್ರೆಸ್ 2

* ರಾಜಸ್ಥಾನ್ : ಬಿಜೆಪಿ 17, ಕಾಂಗ್ರೆಸ್ 8

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 12 ಸ್ಥಾನ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 12 ಸ್ಥಾನ

ಪಶ್ಚಿಮ ಬಂಗಾಳ :ತೃಣಮೂಲ ಕಾಂಗ್ರೆಸ್ 28, ಬಿಜೆಪಿ 12, ಕಾಂಗ್ರೆಸ್ 1, ಎಲ್ ಎಫ್ 1

ಒಡಿಶಾ : ಬಿಜು ಜನತಾದಳ 14, ಬಿಜೆಪಿ 6, ಕಾಂಗ್ರೆಸ್ 1

ಮಧ್ಯಪ್ರದೇಶ : ಬಿಜೆಪಿ 21, ಕಾಂಗ್ರೆಸ್ 8

ಛತ್ತೀಸ್ ಗಢ : ಬಿಜೆಪಿ 3, ಕಾಂಗ್ರೆಸ್ 8

ಪಂಜಾಬ್ : ಕಾಂಗ್ರೆಸ್ 9, ಅಕಾಲಿ ದಳ 2, ಎಎಪಿ 1, ಬಿಜೆಪಿ 1

ಹರ್ಯಾಣ,ಬಿಹಾರ, ಜಾರ್ಖಂಡ್, ಗುಜರಾತ್

ಹರ್ಯಾಣ,ಬಿಹಾರ, ಜಾರ್ಖಂಡ್, ಗುಜರಾತ್

ಹರ್ಯಾಣ : ಬಿಜೆಪಿ 9, ಕಾಂಗ್ರೆಸ್ 1

ಬಿಹಾರ : ಬಿಜೆಪಿ 14, ಜೆಡಿಯು 9, ಆರ್ ಜೆಡಿ 8, ಎಲ್ ಜೆಪಿ 3, ಆರ್ ಎಲ್ ಎಸ್ ಪಿ1 ಎಚ್ಎಎಂ 1, ವಿಐಪಿ 1

ಜಾರ್ಖಂಡ್ : ಬಿಜೆಪಿ 9, ಜೆಎಂಎಂ 2, ಕಾಂಗ್ರೆಸ್ 3

ಗುಜರಾತ್ : ಬಿಜೆಪಿ 24, ಕಾಂಗ್ರೆಸ್ 2

ಹಿಮಾಚಲ ಪ್ರದೇಶ: ಬಿಜೆಪಿ 3, ಕಾಂಗ್ರೆಸ್ 1

ಮಹಾರಾಷ್ಟ್ರ: ಬಿಜೆಪಿ 21, ಶಿವಸೇನಾ 13, ಕಾಂಗ್ರೆಸ್ 7, ಎನ್ ಸಿಪಿ 6, ಇತರೆ 1

***

ಗೋವಾ, ತಮಿಳುನಾಡು, ಕರ್ನಾಟಕ, ಆಂಧ್ರ

ಗೋವಾ, ತಮಿಳುನಾಡು, ಕರ್ನಾಟಕ, ಆಂಧ್ರ

ಗೋವಾ : ಬಿಜೆಪಿ 2, ಕಾಂಗ್ರೆಸ್ 0

ತಮಿಳುನಾಡು : ಡಿಎಂಕೆ 16, ಎಐಎಡಿಎಂಕೆ 10, ಕಾಂಗ್ರೆಸ್ 5, ಬಿಜೆಪಿ 1, ಪಿಎಂಕೆ 2, ಇತರೆ 05

ಆಂಧ್ರಪ್ರದೇಶ: ವೈಎಸ್ ಆರ್ ಕಾಂಗ್ರೆಸ್ 18, ಟಿಡಿಪಿ 7

ತೆಲಂಗಾಣ : ಟಿಆರ್ ಎಸ್ 12, ಎಐಎಂಐಎಂ 1,ಕಾಂಗ್ರೆಸ್ 4

ಕರ್ನಾಟಕ : ಬಿಜೆಪಿ 16, ಕಾಂಗ್ರೆಸ್ 10, ಜೆಡಿಎಸ್ 2

ಕೇರಳ : ಯುಡಿಎಫ್ 14, ಎಲ್ ಡಿಎಫ್ 5, ಬಿಜೆಪಿ 1

ಜಮ್ಮು ಮತ್ತು ಕಾಶ್ಮೀರ: ಬಿಜೆಪಿ 2, ಎನ್ ಸಿ 3, ಕಾಂಗ್ರೆಸ್ 1

ಅಸ್ಸಾಂ : ಬಿಜೆಪಿ 5, ಎಐ ಯುಡಿಎಫ್ 2, ಕಾಂಗ್ರೆಸ್ 5, ಇತರೆ 2

ಇತರೆ ಈಶಾನ್ಯ ರಾಜ್ಯ : ಬಿಜೆಪಿ 4, ಕಾಂಗ್ರೆಸ್ 4, ಎನ್ ಪಿಪಿ 1, ಎನ್ ಡಿ ಪಿಪಿ 1, ಎಸ್ ಡಿ ಎಫ್ 1

ಇತರೆ ಕೇಂದ್ರಾಡಳಿತ ಪ್ರದೇಶ : ಬಿಜೆಪಿ 4, ಕಾಂಗ್ರೆಸ್ 2

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Elections 2019:The India TV-CNX poll showed that the NDA may get 275 seats with BJP leading the pack with 230 seats while the Congress is likely to get 97 seats, more than double the figure of 44 it won in the last Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more