• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಮಾಜಿಕ ನ್ಯಾಯ, ಆರೋಗ್ಯ, ಕಾರ್ಮಿಕ ವರ್ಗಕ್ಕೆ ಬಲ : ಸಿಪಿಐಎಂ ಪ್ರಣಾಳಿಕೆ

|

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಐದು ವರ್ಷಗಳ ಆಳ್ವಿಕೆಯು ದೇಶಕ್ಕೆ ಮತ್ತು ಜನರಿಗೆ ಅಸಹನೀಯ ಆಪತ್ತಾಗಿ ಪರಿಣಮಿಸಿದೆ. ಚುನಾವಣೆಗಳು ಸ್ವತಂತ್ರ ಭಾರತದ ಇತಿಹಾಸದಲ್ಲೆ ಅತ್ಯಂತ ನಿರ್ಣಾಯಕವಾದದ್ದಾಗಿದೆ. ನಮ್ಮ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರದ ಭವಿಷ್ಯವೇ ಇಂದು ಅಪಾಯದಲ್ಲಿದೆ.

ಏಕೆಂದರೆ, ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯ ಅಡಿಯಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಕೋಮುವಾದಿ ಧೃವೀಕರಣವನ್ನು ಹರಿತಗೊಳಿಸುತ್ತಾ ನಮ್ಮ ಶ್ರೀಮಂತ, ವೈವಿಧ್ಯಮಯ ಸಾಮಾಜಿಕ ಬಂಧದ ಸಾಮರಸ್ಯವನ್ನು ತೀಕ್ಷ್ಣವಾಗಿ ಛಿದ್ರಗೊಳಿಸುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಕಳೆದ ಐದು ವರ್ಷಗಳಲ್ಲಿ ಅದು ನಮ್ಮ ಎಲ್ಲಾ ಸಾಂವಿಧಾನಿಕ ಸಂಘ ಸಂಸ್ಥೆಗಳ ಮೇಲೆ ನಿರ್ಲಜ್ಜ ಹಾಗೂ ನಿರಂತರ ದಾಳಿಯನ್ನು ತೀವ್ರವಾಗಿಸಿದೆ. ಬಿಜೆಪಿಯು ಈ ಕೇಂದ್ರ ಸರ್ಕಾರದಲ್ಲಿ ಮತ್ತೆ ಮುಂದುವರಿಯುವುದೆಂದರೆ ನಮ್ಮ ಸಂವಿಧಾನದ ಮೂಲಭೂತ ಆಧಾರಸ್ಥಂಭಗಳನ್ನು ಇನ್ನೂ ಹೆಚ್ಚು ಹಾನಿಗೊಳಪಡಿಸಿದಂತೆಯೇ ಸರಿ.

ಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಗ್ಗೆ ಯಾರು, ಏನಂದರು?

ಆದಕಾರಣ, ಈ ಸರ್ಕಾರವನ್ನು ಸೋಲಿಸುವುದು ಮತ್ತು ನಮ್ಮ ಸಾಂವಿಧಾನಿಕ ಗಣತಂತ್ರವನ್ನು ರಕ್ಷಿಸುವ ಹಾಗೂ ನಂತರ ಅದನ್ನು ಇನ್ನೂ ಕ್ರೋಢೀಕರಿಸುವ ಒಂದು ಪರ್ಯಾಯ ಜಾತ್ಯತೀತ ಸರ್ಕಾರವನ್ನು ಸ್ಥಾಪಿಸುವುದೇ ಭಾರತದ ಮತದಾರರ ಮುಂದಿರುವ ಪ್ರಥಮ ಜವಾಬ್ದಾರಿಯಾಗಿದೆ. ಆದರೆ, ಇದು ಸಾಧ್ಯವಾಗುವುದು ಈಗಿನ ನೀತಿಗಳ ದಿಕ್ಕನ್ನು ಆಮೂಲಾಗ್ರವಾಗಿ ಜನರ ಪರವಾಗಿ ತಿರುಗಿಸಿದಾಗ ಮಾತ್ರ. ಇದನ್ನು ನಿಜರೂಪಕ್ಕೆ ತರಲು ಭಾರತದ 17ನೇ ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಸಂಖ್ಯಾಬಲವನ್ನು ಹೆಚ್ಚಿಸಬೇಕಾದ ಅಗತ್ಯವಿದೆ.

ಅಭಿವೃದ್ಧಿಯ ಒಂದು ಪರ್ಯಾಯ

ಅಭಿವೃದ್ಧಿಯ ಒಂದು ಪರ್ಯಾಯ

ದೇಶಕ್ಕೆ ಮತ್ತು ಜನರಿಗೆ ಅಗತ್ಯವಿರುವುದು, ಆರ್ಥಿಕ ಬೆಳವಣಿಗೆ ಮತ್ತು ಒಟ್ಟು ಅಭಿವೃದ್ಧಿಯ ಒಂದು ಪರ್ಯಾಯ ದಿಕ್ಪಥ ಮತ್ತು ಒಟ್ಟಾರೆ ಅಭಿವೃದ್ಧಿ ಎಂಬುದು ಸ್ಪಷ್ಟವಾಗಿದೆ. ಇದನ್ನು ಬಿಜೆಪಿಯು ಈಗ ಅನುಸರಿಸುತ್ತಿರುವ ಆರ್ಥಿಕ ನೀತಿಗಳನ್ನು ಮತ್ತು ಕೋಮುವಾದಿ ಧೃವೀಕರಣವನ್ನು ಹರಿತಗೊಳಿಸುವ ಅದರ ಅಜೆಂಡಾವನ್ನು ತಿರಸ್ಕರಿಸಿ, ಜನ-ಪರ ನೀತಿಗಳತ್ತ ಒಂದು ನೀತಿ ಪಲ್ಲಟದ ಆಧಾರದಲ್ಲಿ ಮಾತ್ರವೇ ಸಾಧಿಸಲು ಸಾಧ್ಯ.

ಬಿಜೆಪಿ ಚುನಾವಣಾ ಪ್ರಣಾಳಿಕೆ: ಕೃಷಿ ಕ್ಷೇತ್ರಕ್ಕೆ ಭರವಸೆಗಳೇನು?

ಭಾರತದಲ್ಲಿ ಸಂಪನ್ಮೂಲಗಳ ಕೊರತೆ ಇಲ್ಲ

ಭಾರತದಲ್ಲಿ ಸಂಪನ್ಮೂಲಗಳ ಕೊರತೆ ಇಲ್ಲ

ಭಾರತದಲ್ಲಿ ಸಂಪನ್ಮೂಲಗಳ ಕೊರತೆ ಇಲ್ಲ. ಈಗ ಚಮಚಾ ಬಂಡವಾಳಶಾಹಿ ಮತ್ತು ರಫೇಲ್ ವಿಮಾನ ವ್ಯವಹಾರದ ರೀತಿಯ ಭ್ರಷ್ಟಾಚಾರದ ಹಗರಣಗಳ ಮೂಲಕ ಆಗುತ್ತಿರುವ ನಮ್ಮ ಸಂಪನ್ಮೂಲಗಳ ಕೊಳ್ಳೆಯನ್ನು ನಿಲ್ಲಿಸಿದರೆ, ದೇಶದ ಪ್ರತಿ ನಾಗರಿಕರಿಗೂ ಶಿಕ್ಷಣ, ಗುಣಮಟ್ಟದ ಆರೋಗ್ಯ ಪಾಲನೆ, ಉದ್ಯೋಗ ಮತ್ತು ಒಂದು ಘನತೆಯ ಜೀವನೋಪಾಯ ಒದಗಿಸಲು ಸಾಕಾಗುವಷ್ಟು ಸಂಪನಮೂಲಗಳು ಲಭ್ಯ ಇವೆ. ಇದು ಕೈಗೂಡಬೇಕು ಎಂದಾದರೆ, ನಮ್ಮ ಧೋರಣೆಯ ದಿಕ್ಕಿನಲ್ಲಿ ಒಂದು ತೀವ್ರ ಪಲ್ಲಟ ಆಗಬೇಕಾಗಿದ್ದು ಅದನ್ನು ಖಾತ್ರಗೊಳಿಸಬೇಕಾಗಿದೆ.

ಮುಖ್ಯಾಂಶಗಳು

ಭಾರತದ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಜಾತ್ಯತೀತ ತತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ.

ಭಾರತದ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಜಾತ್ಯತೀತ ತತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ.

ತಮ್ಮ ಉತ್ಪತ್ತಿಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ, ಅಂದರೆ, ಉತ್ಪಾದನಾ ವೆಚ್ಚಕ್ಕಿಂತ ಶೇ.50ರಷ್ಟಾದರೂ ಹೆಚ್ಚಿನ ಮಟ್ಟದಲ್ಲಿ ಮಾರುವ ರೈತರ ಹಕ್ಕನ್ನು ಜಾರಿಗೊಳಿಸುವುದು.

ಕನಿಷ್ಠ ಕೂಲಿಯು 18,000 ರೂಗಳಿಗೆ ಕಡಿಮೆ ಇಲ್ಲದಂತೆ ಶಾಸನಬದ್ಧಗೊಳಿಸುವದು ಮತ್ತು ಕೂಲಿಯನ್ನು ಬಳಕೆದಾರ ಬೆಲೆ ಸೂಚ್ಯಂಕದೊಂದಿಗೆ ಜೋಡಿಸುವುದು.

ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಒಂದು ಕೆ.ಜಿ ಗೆ 2 ರೂಪಾಯಿ ಗರಿಷ್ಟ ಬೆಲೆಯಲ್ಲಿ ಪ್ರತಿ ಕುಟುಂಬಕ್ಕೆ 35 ಕೆ.ಜಿ ಅಥವಾ ಪ್ರತಿ ವ್ಯಕ್ತಿಗೆ 7 ಕೆ.ಜಿ ಧಾನ್ಯಗಳನ್ನು ಸಾರ್ವತ್ರಿಕವಾಗಿ ಸರಬರಾಜು ಮಾಡುವುದು.

ಉಚಿತ ಆರೋಗ್ಯ ಪಾಲನೆಯ ಹಕ್ಕು; ಖಾಸಗಿ ವಿಮಾ ಕಂಪೆನಿಗಳ ಹಿಡಿತದಲ್ಲಿರುವ ಆರೋಗ್ಯ ಪಾಲನಾ ಯೋಜನೆಯನ್ನು ಕೊನೆಗೊಳಿಸುವುದು; ಆರೋಗ್ಯದ ಮೇಲಿನ ಸಾರ್ವಜನಿಕ ವೆಚ್ಚವನ್ನು ಜಿಡಿಪಿಯ ಶೇ.5ರಷ್ಟು ಮಟ್ಟಕ್ಕೆ ಏರಿಸುವುದು.

ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಮೂರನೆ ಒಂದು ಭಾಗ ಮೀಸಲಾತಿಯನ್ನು ಜಾರಿಗೊಳಿಸುವುದು; ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನುಕೊನೆಗೊಳಿಸಲು ಸಮಗ್ರ ಕ್ರಮಗಳನ್ನು ಜರುಗಿಸುವುದು.

ಸಾರ್ವಜನಿಕ ಶಿಕ್ಷಣ - ಶಾಲಾ ಮತ್ತು ಉನ್ನತ ಶಿಕ್ಷಣ - ವ್ಯವಸ್ಥೆಯ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಿ ವ್ಯಾಪಕವಾಗಿ ವಿಸ್ತರಿಸುವುದು; ಶಿಕ್ಷಣದ ಮೇಲಿನ ಸಾರ್ವಜನಿಕ ವೆಚ್ಚವನ್ನು ಜಿಡಿಪಿಯ ಶೇ.6ರಷ್ಟು ಮಟ್ಟಕ್ಕೆ ಏರಿಸುವುದು; ಕೋಮುವಾದೀಕರಣದಿಂದ ಶಿಕ್ಷಣ ವ್ಯವಸ್ಥೆಯನ್ನು ಮುಕ್ತಗೊಳಿಸುವುದು ಮತ್ತು ಅದರ ಪ್ರಜಾಪ್ರಭುತ್ವ ಸ್ವರೂಪವನ್ನು ಖಾತ್ರಿಗೊಳಿಸುವುದು.

ಕೆಲಸ ಇಲ್ಲದವರಿಗೆ ನಿರುದ್ಯೋಗ ಭತ್ಯೆ ಒದಗಿಸುವುದು.

ಕೆಲಸ ಇಲ್ಲದವರಿಗೆ ನಿರುದ್ಯೋಗ ಭತ್ಯೆ ಒದಗಿಸುವುದು.

ಎಲ್ಲ ಹಿರಿಯ ನಾಗರಿಕರಿಗೆ ಕನಿಷ್ಠ ಕೂಲಿಯ ಅರ್ಧಕ್ಕಿಂತ ಕಡಿಮೆ ಇಲ್ಲದಷ್ಟು ಅಥವಾ 6,000 ರೂಗಳು, ಈ ಎರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತದ ವೃದ್ಧಾಪ್ಯ ವೇತನ .

ಸಾರ್ವಜನಿಕ ಚಲಯದ ಉದ್ದಿಮೆಗಳ ಖಾಸಗೀಕರಣವನ್ನು ನಿಲ್ಲಿಸುವುದು ಮತ್ತು ರಕ್ಷಣೆ, ಇಂಧನ, ರೈಲ್ವೆ ಮತ್ತಿತರ ಮೂಲ ಸೇವೆಗಳಲ್ಲಿ ಆಗಿರುವ ಖಾಸಗೀಕರಣವನ್ನು ಹಿಂದಿನ ಸ್ಥಿತಿಗೆ ಮರಳಿಸುವುದು.

ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಕೆಗೆ ಮೀಸಲಾತಿ ಕಲ್ಪಿಸುವುದು.

ಶ್ರೀಮಂತರು ಮತ್ತು ಕಾರ್ಪೊರೇಟ್‌ಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವುದು; ಅತಿ ಶ್ರೀಮಂತರ ಮೇಲೆ ಮೊದಲಿದ್ದಂತೆ ಸಂಪತ್ತು ತೆರಿಗೆ ವಿಧಿಸುವುದು ಮತ್ತು ವಾರಸುದಾರಿಕೆ ತರಿಗೆಯನ್ನು ಆರಂಭಿಸುವುದು ಹಾಗೂ ದೀರ್ಘಾವದಿ ಬಂಡವಾಳ ಗಳಿಕೆ ತರಿಗೆಯನ್ನು ಮತ್ತೆ ತರುವುದು

ಆನುಪಾತಿಕ ಪ್ರಾತಿನಿಧ್ಯವನ್ನು, ಭಾಗಶಃ ಪಟ್ಟಿ ಪದ್ಧತಿಯೊಂದಿಗೆ ಜಾರಿಗೆ ತಂದು ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು; ಚುನಾವಣಾ ಬಾಂಡ್‌ಗಳನ್ನು ರದ್ದುಪಡಿಸುವುದು; ಅಭ್ಯರ್ಥಿಗಳ ಚುನಾವಣಾ ವೆಚ್ಚಗಳನ್ನು ಸಾಮಗ್ರಿಗಳ ರೂಪದಲ್ಲಿ ಸರ್ಕಾರವೇ ಭರಿಸುವುದು.

English summary
An election manifesto released by CPI (M) State unit for Karnataka has three primary agendas were removing the Narendra Modi government from the Centre, enhancing CPI (M)’s participation in Parliament and forming a secular government at the Centre
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X