ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಂದಿನಿ ಚೌಕ್ ಅಭ್ಯರ್ಥಿ ಕೇಂದ್ರ ಸಚಿವ ಹರ್ಷವರ್ಧನ್ ಆಸ್ತಿ ವಿವರ

|
Google Oneindia Kannada News

ನವದೆಹಲಿ, ಏಪ್ರಿಲ್ 24: ಲೋಕಸಭೆ ಚುನಾವಣೆಯಲ್ಲಿ 2019ರಲ್ಲಿ ದೆಹಲಿ ರಣಕಣದಲ್ಲಿ ಘಟಾನುಘಟಿ ನಾಯಕರನ್ನು ಪ್ರಮುಖ ಪಕ್ಷಗಳು ಕಣಕ್ಕಿಳಿಸಿವೆ. ಮುಖ್ಯವಾಗಿ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗದಂತೆ ಮಾಡಲು ಯತ್ನಿಸಲಾಗುತ್ತಿದೆ. ಆದರೆ, ಎಎಪಿ ಹಾಗೂ ಕಾಂಗ್ರೆಸ್ ನಡುವಿನ ತಿಕ್ಕಾಟದ ಲಾಭವನ್ನು ಬಿಜೆಪಿ ಪಡೆಯುವ ನಿರೀಕ್ಷೆಯಿದೆ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಜೆ.ಪಿ ಅಗರವಾಲ್ ಸ್ಪರ್ಧಿಸುತ್ತಿದ್ದರೆ, ಎಎಪಿಯಿಂದ ಪಂಕಜ್ ಗುಪ್ತಾ ಕಣದಲ್ಲಿದ್ದರೆ, ಬಿಜೆಪಿಯಿಂದ ಕೇಂದ್ರ ಸಚಿವ ಹರ್ಷ್ ವರ್ಧನ್ ಎದುರಾಳಿಯಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ್ ಒಟ್ಟು ಆಸ್ತಿ ಎಷ್ಟು?ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ್ ಒಟ್ಟು ಆಸ್ತಿ ಎಷ್ಟು?

ಕಳೆದ ಐದು ವರ್ಷಗಳಲ್ಲಿ ಹರ್ಷ್ ವರ್ಧನ್ ಅವರ ಆಸ್ತಿ 1.94 ಕೋಟಿ ರು ಅಧಿಕವಾಗಿದೆ ಎಂದು 2019ರ ಲೋಕಸಭಾ ಚುನಾವಣೆಗಾಗಿ ಸಲ್ಲಿಸಿದ ಉಮೇದುವಾರಿಕೆ ಪತ್ರದ ಜೊತೆಗಿನ ಅಫಿಡವಿಟ್ ನಲ್ಲಿ ಘೋಷಿಸಿಕೊಂಡಿದ್ದಾರೆ.

ಅಮೇಥಿ ಕ್ಷೇತ್ರದ ಅಭ್ಯರ್ಥಿ ಸ್ಮೃತಿ ಇರಾನಿ ಆಸ್ತಿ, ಸಾಲ ವಿವರಅಮೇಥಿ ಕ್ಷೇತ್ರದ ಅಭ್ಯರ್ಥಿ ಸ್ಮೃತಿ ಇರಾನಿ ಆಸ್ತಿ, ಸಾಲ ವಿವರ

2017-18ರ ಆರ್ಥಿಕ ವರ್ಷದಲ್ಲಿ ಸಲ್ಲಿಸಿರುವ ಐಟಿ ರಿಟರ್ನ್ಸ್ ನಂತೆ ಹರ್ಷ್ ವರ್ಧನ್ 7.76 ಲಕ್ಷ ರು ಹಾಗೂ ಅವರ ಪತ್ನಿ ನೂತನ್ ಗೊಯೆಲ್ 3.06 ಲಕ್ಷ ರು ಆದಾಯ ಹೊಂದಿದ್ದಾರೆ. ಹರ್ಷ್ ವರ್ಧನ್ 38.50 ಲಕ್ಷರು, ಪತ್ನಿ ನೂತನ್ : 20.73 ಲಕ್ಷ ರು. 2014ರಲ್ಲಿ 28.77 ಲಕ್ಷ ರು ಹಾಗೂ ಪತ್ನಿ ಹೆಸರಿನಲ್ಲಿ 10.67 ಲಕ್ಷ ರು ಎಂದು ತೋರಿಸಿದ್ದರು. ಅವಲಂಬಿತ ಆಸ್ತಿ 24,848.71 ರು ಹಾಗೂ 11,769 ರು ಎಂದು ಘೋಷಿಸಿದ್ದರು.

ಹರ್ಷವರ್ಧನ್ ಸ್ವವಿವರ

ಹರ್ಷವರ್ಧನ್ ಸ್ವವಿವರ

ಹೆಸರು : ಡಾ. ಹರ್ಷ್ ವರ್ಧನ್
ಕ್ಷೇತ್ರ: ಚಾಂದಿನಿ ಚೌಕ್
ಪಕ್ಷ: ಭಾರತೀಯ ಜನತಾ ಪಕ್ಷ
* ಇಮೇಲ್, ಒಂದು ಫೇಸ್ ಬುಕ್, ಎರಡು ಟ್ವಿಟ್ಟರ್ ಖಾತೆ, ಒಂದು ಇನ್ ಸ್ಟಾಗ್ರಾಮ್, ಶೇರ್ ಚಾರ್, ಯೂಟ್ಯೂಬ್, ಮೊಬೈಲ್ ಆಪ್, ವೆಬ್ ಸೈಟ್ ಹೊಂದಿದ್ದಾರೆ.
* ಯಾವುದೇ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿಲ್ಲ.
* ಅವಲಂಬಿತರಿಗೆ ಐಟಿ ರಿಟರ್ನ್ಸ್ ಅನ್ವಯವಾಗುವುದಿಲ್ಲ
1971ರಲ್ಲಿ ಹೈಯರ್ ಸೆಕಂಡರಿ, 1979ರಲ್ಲಿ ಎಂಬಿಬಿಎಸ್, 1983ರಲ್ಲಿ ಎಂಎಸ್ (ಇಎನ್ ಟಿ) ಗಳಿಸಿದ್ದಾರೆ.

ಹರ್ಷ್ ವರ್ಧನ್ ಚರಾಸ್ತಿ

ಹರ್ಷ್ ವರ್ಧನ್ ಚರಾಸ್ತಿ

ಹರ್ಷ್ ವರ್ಧನ್ 38.50 ಲಕ್ಷರು, ಪತ್ನಿ ನೂತನ್ : 20.73 ಲಕ್ಷ ರು. 2014ರಲ್ಲಿ 28.77 ಲಕ್ಷ ರು ಹಾಗೂ ಪತ್ನಿ ಹೆಸರಿನಲ್ಲಿ 10.67 ಲಕ್ಷ ರು ಎಂದು ತೋರಿಸಿದ್ದರು. ಅವಲಂಬಿತ ಆಸ್ತಿ 24,848.71 ರು ಹಾಗೂ 11,769 ರು ಎಂದು ಘೋಷಿಸಿದ್ದರು.
ಹರ್ಷವರ್ಧನ್
ನಗದು : 49,970 ರು
ದೆಹಲಿ ಎಸ್ಬಿಐನಲ್ಲಿ 7,37,402 ರು ಎಫ್ ಡಿ
ಬ್ಯಾಂಕ್ ಆಫ್ ಇಂಡಿಯಾದಲ್ಲಿ 1,46,925 ರು ಎಫ್ ಡಿ
ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಪಿಪಿಎಫ್ 5,74,494 ರು
ಎಲ್ ಐಸಿ 9,08,628 ರು
ವಾಹನ: ಟಯೋಟಾ ಇಟಿಯೋಸ್ ಲಿವಾ ಅಂದಾಜು 1,90,000ರು
ಸ್ವಿಫ್ಟ್ 2014ರ ಮಾಡೆಲ್ 2,70,000 ರು
ಚಿನ್ನಾಭರಣ
102.62 ಗ್ರಾಂ ಚಿನ್ನ : 3,31,383 ರು ಅಂದಾಜು
ವಜ್ರದ ಉಂಗುರ : 1,23,500 ರು
ಬೆಳ್ಳಿ : 91,700 ರು
ಪೀಠೋಪಕರಣ 35,000, ಲ್ಯಾಪ್ ಟಾಪ್ ಗಳು 3,82,400
ಒಟ್ಟು ಚರಾಸ್ತಿ : 38,50,801 ರು

ಪತ್ನಿ ನೂತನ್ ಗೋಯೆಲ್ ಚರಾಸ್ತಿ

ಪತ್ನಿ ನೂತನ್ ಗೋಯೆಲ್ ಚರಾಸ್ತಿ

ನಗದು : 10,000 ರು
ಎಸ್ಬಿಐನಲ್ಲಿ 15,05,082 ರು ಎಫ್ ಡಿ,
ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 2,55,733 ರು
* 27,950 ರು ಮೌಲ್ಯದ ಷೇರುಗಳು
ಚಿನ್ನಾಭರಣ
ಚಿನ್ನ 68.48 ಗ್ರಾಂ: 2,21,131 ರು ಮೌಲ್ಯ
ಬೆಳ್ಳಿ 568 ಗ್ರಾಂ : 23,200 ರು
ಪೀಠೋಪಕರಣ : 30,000 ರು
ಒಟ್ಟು ಚರಾಸ್ತಿ : 30,73,096 ರು

ಹರ್ಷವರ್ಧನ್ ಸ್ಥಿರಾಸ್ತಿ

ಹರ್ಷವರ್ಧನ್ ಸ್ಥಿರಾಸ್ತಿ

ಹರ್ಷವರ್ಧನ್ : 1.05 ಕೋಟಿ ರು, ಪತ್ನಿ ನೂತನ್: 1.37 ಕೋಟಿ ರು.
* ಸರ್ಕಾರಿ ಬಂಗಲೆ ತೀಸ್ ಜನವರಿ ಮಾರ್ಗ್ ನಲ್ಲಿದೆ. ಯಾವುದೇ ಸಾಲ ಹೊಂದಿಲ್ಲ
ಹರ್ಷ ವರ್ಧನ್ ಹೆಸರಿನಲ್ಲಿ ಕೃಷನಗರ್, ಗೌತಮ್ ಬುಧ್ ನಗರ್ ನಲ್ಲಿ ಮನೆಗಳಿವೆ.
ಪತ್ನಿ ನೂತನ್ ಹೆಸರಿನಲ್ಲಿ ಹೆಸರಿನಲ್ಲಿ ಫ್ಲಾಟ್ ಹಾಗೂ ನಿವೇಶನಗಳಿವೆ
ಹರ್ಷ್ ವರ್ಧನ್ ಸ್ಥಿರಾಸ್ತಿ : 1,05,00,000 ರು ಹಾಗೂ ನೂತನ್ : 1,37,48,000 ರು

ಐಟಿ ರಿಟರ್ನ್ಸ್ ವಿವರ

ಐಟಿ ರಿಟರ್ನ್ಸ್ ವಿವರ

ಹರ್ಷ್ ವರ್ಧನ್ :
2013-14 : 8,05,709 ರು
2014-15: 10,36,331 ರು
2015-16:7,60,966 ರು
2017-18: 7,76,152 ರು

ಪತ್ನಿ ನೂತನ್
2013-14: ತೆರಿಗೆ ಮಿತಿಗಿಂತ ಕಡಿಮೆ ಆದಾಯ
2014-15: 3,31,802 ರು
2015-16: ತೆರಿಗೆ ಮಿತಿಗಿಂತ ಕಡಿಮೆ ಆದಾಯ
2016-17: 4,02,374 ರು
2017-18: 3,06,675 ರು
ಅವಲಂಬಿತರಿಗೆ ಐಟಿ ರಿಟರ್ನ್ಸ್ ಅನ್ವಯವಾಗುವುದಿಲ್ಲ

English summary
BJP candidate from Chandni Chowk, New Delhi, Union Minister Harsh Vardhan has declared assets which is increased by over 1.94 cr compared to 2014 declaration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X