ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದ ಸಿವಾನ್ ಲೋಕಸಭಾ ಕ್ಷೇತ್ರದಲ್ಲಿ ರೌಡಿಗಳ ಪತ್ನಿಯರ ಫೈಟ್

|
Google Oneindia Kannada News

ಬಿಹಾರದ ಸಿವಾನ್​ಲೋಕಸಭೆ ಕ್ಷೇತ್ರದಲ್ಲಿ ಇಬ್ಬರು ರೌಡಿಗಳ ಪತ್ನಿಯರು ಸ್ಪರ್ಧಿಸುತ್ತಿದ್ದಾರೆ. ರೌಡಿ ಅಜಯ್​ಸಿಂಗ್ ಪತ್ನಿ ಕವಿತಾ ಸಿಂಗ್ ಅವರು ಎನ್ಡಿಎ ​ ಅಭ್ಯರ್ಥಿಯಾಗಿದ್ದಾರೆ. ಇನ್ನೊಂದೆಡೆ, ಮೇವು ಹಗರಣದಲ್ಲಿ ಜೈಲು ಸೇರಿರುವ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರ ಆರ್​ಜೆಡಿ ಪರ ಮೊಹಮ್ಮದ್​ ಶಹಾಬುದ್ದೀನ್​ಪತ್ನಿ ಹೀನಾ ಶಹಾಬ್​ಕಣದಲ್ಲಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಿಹಾರದಲ್ಲಿ ಎನ್ಡಿಎ ಸೀಟು ಹಂಚಿಕೆಯಂತೆ ಸಿವಾನ್ ಕ್ಷೇತ್ರ ಜೆಡಿಯು ಪಾಲಿಗೆ ಸಿಕ್ಕಿತ್ತು. ಕವಿತಾ ಅವರಿಗೆ ನಿತೀಶ್ ಕುಮಾರ್ ಅವರು ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಎರಡು ಬಾರಿ ಶಾಸಕಿಯಾಗಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿರುವ ಕವಿತಾ ಪಾಲಿಗೆ ಇದು ಮೊದಲ ಲೋಕಸಭೆ ಚುನಾವಣೆಯಾಗಿದೆ.

ಇನ್ನೊಂದೆಡೆ, ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿರುವ ಮೊಹಮ್ಮದ್ ಶಹಾಬುದ್ದೀನ್ ಅವರು ಸದ್ಯ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. 2004ರಲ್ಲಿ ಜೈಲಿನಲ್ಲಿದ್ದುಕೊಂಡು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಲೋಕಸಭೆ ಸದಸ್ಯನಾದ ದಾಖಲೆ ಕೂಡಾ ಇವರ ಹೆಸರಿನಲ್ಲಿದೆ. 2009ರಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದ ಕಾರಣ ಪತ್ನಿ ಹೀನಾ ಶಹಾಬ್​ ಸ್ಪರ್ಧಿಸಿದ್ದರು. ಹೀಗಾಗಿ, ಇದು ಹೀನಾ ಆವರಿಗೆ ಮೂರನೇ ಚುನಾವಣೆಯಾಗಿದ್ದು, ಮೊದಲ ಗೆಲುವಿನ ಕನಸು ಕಾಣುತ್ತಿದ್ದಾರೆ.

ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?

ದೇಶದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮಸ್ಥಳ ಸಿವಾನ್ ಕ್ಷೇತ್ರದ ಮೇಲೆ ಪ್ರಭುತ್ವ ಸ್ಥಾಪಿಸಲು ಮೊಹಮ್ಮದ್ ಶಹಾಬುದ್ದೀನ್ ಹಾಗೂ ಅಜಯ್ ಸಿಂಗ್ ಅವರು ಹಲವು ದಶಕಗಳಿಂದ ಹೋರಾಡುತ್ತಾ ಬಂದಿದ್ದಾರೆ. ಈಗ ಲೋಕಸಭಾ ರಣಕಣದಲ್ಲಿ ಇವರಿಬ್ಬರ ಪತ್ನಿಯರು ಕಾದಾಟಕ್ಕೆ ಅಣಿಯಾಗಿದ್ದಾರೆ.

ಮೊದಲ ಗೆಲುವಿಗಾಗಿ ಹೀನಾ ಮತ್ತೆ ಕಣಕ್ಕೆ

ಮೊದಲ ಗೆಲುವಿಗಾಗಿ ಹೀನಾ ಮತ್ತೆ ಕಣಕ್ಕೆ

ಸಿವಾನ್​ನ ವಿದ್ಯಾಭವನ್ ಮಹಿಳಾ ಮಹಾವಿದ್ಯಾಲಯದಲ್ಲಿ ಪದವೀಧರೆಯಾಗಿರುವ ಹೀನಾ ಅವರು 2009 ಮತ್ತು 2014ರಲ್ಲಿ ಎರಡು ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಸೋಲುಂಡಿದ್ದಾರೆ. ಎರಡು ಬಾರಿ ಓಂ ಪ್ರಕಾಶ್ ಯಾದವ್ ವಿರುದ್ಧ ಸೋಲು ಕಂಡಿದ್ದರು. ಹಿಜಾಬ್ ಧರಿಸಿ ಚುನಾವಣಾ ಪ್ರಚಾರಕ್ಕಿಳಿಯುವ ಹೀನಾ ಅವರು ಈ ಹಿಂದೆ 1 ಲಕ್ಷಕ್ಕೂ ಅಧಿಕ ಅಂತರದ ಮತಗಳಿಂದ ಸೋಲು ಕಂಡಿದ್ದರು. 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಬಿಜೆಪಿ ಹಾಗೂ 3 ಜೆಡಿಯು ಪಾಲಾಗಿವೆ.

ಬಿಹಾರದಿಂದ ಲೋಕಸಭೆಗೆ : ಎಲ್ ಜೆಪಿ ಬೇಡಿಕೆಗೆ ಅಸ್ತು ಎಂದ ಬಿಜೆಪಿಬಿಹಾರದಿಂದ ಲೋಕಸಭೆಗೆ : ಎಲ್ ಜೆಪಿ ಬೇಡಿಕೆಗೆ ಅಸ್ತು ಎಂದ ಬಿಜೆಪಿ

ಸಂಸತ್ ಪ್ರವೇಶ ಬಯಸಿರುವ ಮಾಜಿ ಶಾಸಕಿ ಕವಿತಾ

ಸಂಸತ್ ಪ್ರವೇಶ ಬಯಸಿರುವ ಮಾಜಿ ಶಾಸಕಿ ಕವಿತಾ

ರೌಡಿ ಅಜಯ್​ಸಿಂಗ್ ಪತ್ನಿ ಕವಿತಾ ಅವರು 2011 ಮತ್ತು 2015ರಲ್ಲಿ ಎರಡು ಬಾರಿ ಶಾಸಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2011ರಲ್ಲಿ ಜೆಡಿಯು ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಬಿಹಾರ ವಿಧಾನಸಭೆಯನ್ನು ಪ್ರವೇಶಿಸಿದ್ದರು. ಬಿಹಾರದಲ್ಲಿ ಶಾಸಕಿಯಾಗಿ ಆಯ್ಕೆಯಾದ ಅತಿಕಿರಿಯ ವಯಸ್ಸಿನ ಶಾಸಕಿ ಎನಿಸಿಕೊಂಡಿದ್ದರು. ಈಗ 2019ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.

ಇಂಡಿಯಾ ಟಿವಿ - ಸಿಎನ್ಎಕ್ಸ್ ರಾಜ್ಯವಾರು ಸಮೀಕ್ಷೆಯಲ್ಲಿ ಬಿಜೆಪಿಗೆ ಜಯಇಂಡಿಯಾ ಟಿವಿ - ಸಿಎನ್ಎಕ್ಸ್ ರಾಜ್ಯವಾರು ಸಮೀಕ್ಷೆಯಲ್ಲಿ ಬಿಜೆಪಿಗೆ ಜಯ

ಜಾಹೀರಾತು, ಸಂದರ್ಶನ ಕವಿತಾ- ಅಜಯ್ ಮದುವೆ

ಜಾಹೀರಾತು, ಸಂದರ್ಶನ ಕವಿತಾ- ಅಜಯ್ ಮದುವೆ

ಕವಿತಾ ಸಿಂಗ್ ಅವರು ಛಾಪ್ರಾದ ಜೆಪಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. 30 ಕೊಲೆ, ಅಪಹರಣ ಮತ್ತು ಸುಲಿಗೆ ಪ್ರಕರಣಗಳ ಆರೋಪಿ ಅಜಯ್ ಸಿಂಗ್ 2011ರ ಚುನಾವಣೆ ಸ್ಪರ್ಧಿಸಲು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರನ್ನು ಕೇಳಿದಾಗ, ಮದುವೆಯಾದರೆ ಟಿಕೆಟ್ ನೀಡುವೆ ಎಂದು ಹೇಳಿ ಕಳಿಸಿದ್ದಾರಂತೆ.

ಅದರಂತೆ, ಅಜಯ್ ಸಿಂಗ್ ಪತ್ರಿಕಾ ಜಾಹೀರಾತು ನೀಡಿ, ಸಿವಾನ್ ಕ್ಷೇತ್ರದಲ್ಲಿ ಮತದಾರರಾಗಿದ್ದು, ಗುರುತಿನ ಚೀಟಿ ಹೊಂದಿದ್ದು, ರಾಜಕೀಯ ಹಿನ್ನೆಲೆಯುಳ್ಳವರು ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಿದ್ದರು. ಹೀಗೆ ಸಂದರ್ಶನಕ್ಕೆ ಹಾಜರಾದ ಕವಿತಾ ಸಿಂಗ್ ಪಾಸಾಗಿ, ಪಿತೃಪಕ್ಷದಲ್ಲಿ ಅಜಯ್ ಸಿಂಗ್​ಜತೆ ಮದುವೆಯಾಗಿ, 2011ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಹಿಂದಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಜಯ್ ಸಿಂಗ್

ಹಿಂದಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಜಯ್ ಸಿಂಗ್

ಕ್ರಿಮಿನಲ್ ಹಿನ್ನೆಲೆಯುಳ್ಳ ಅಜಯ್ ಅವರು ಬಿಹಾರ್ ಹಿಂದಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. 2002 ರಿಂದ 2007ರ ಅವಧಿಯಲ್ಲಿ ಅಜಯ್ ಸಿಂಗ್ ಸಿವಾನ್, ಗೋಪಾಲ್ ಗಂಜ್, ಸರಣ್ ಜಿಲ್ಲೆಗಳಲ್ಲಿ ಹಲವು ವಿಧ್ವಂಸಕ ಕೃತ್ಯಗಳಿಗೆ ಕಾರಣರಾದ ಆರೋಪಗಳಿವೆ.

ರಾಜಕೀಯ ದ್ವೇಷದಿಂದ ಸಿಪಿಐಎಂಎಲ್ ಕಾರ್ಯಕರರಾದ ಶಂಭು ಯಾದವ್, ರಾಜು ಖಾರ್ಬಾರ್ ಹತ್ಯೆಗೈದ ಆರೋಪ, ರಘುನಾಥ್ ಪುರ್ ಬಿಜೆಪಿ ಶಾಸಕ ವಿಕ್ರಮ್ ಮನೆ ಮೇಲೆ ದಾಳಿ, ಚೈನಾಪುರ್ ಎಸ್ ಎಚ್ ಒ ಬಿಕೆ ಯಾದವ್, ರಿಯಾಜುದ್ದೀನ್, ಬಬ್ಲೂ ಯಾದವ್ ಹತ್ಯೆ ಹೀಗೆ ಪಟ್ಟಿ ಬೆಳೆಯುತ್ತದೆ.

English summary
Bihar's Siwan is poised to witness a fierce electoral battle between the spouses of two dons -- Mohammad Shahabuddin and Ajay Singh, who have been fighting with each other for supremacy for the past few decades.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X