ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆಸ್ತಿ ವಿವರ

|
Google Oneindia Kannada News

ಲಕ್ನೋ, ಏಪ್ರಿಲ್ 19: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಸ್ಪರ್ಧಿಸುತ್ತಿದ್ದ ಆಜಂಗಢ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ತಮ್ಮ ಉಮೇದುವಾರಿಕೆ ಸಲ್ಲಿಸಿ, ಆಸ್ತಿ ವಿವರವನ್ನು ಪ್ರಕಟಿಸಿದ್ದು, ಪತ್ನಿ ಡಿಂಪಲ್ ಯಾದವ್ ಹಾಗೂ ತಮ್ಮ ಆಸ್ತಿ ಸೇರಿಸಿ 37 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

2014ರಲ್ಲಿ ಅಜಂಗಢದಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಮುಲಾಯಂ ಸಿಂಗ್ ಯಾದವ್ ಅವರು ಗೆಲುವು ಸಾಧಿಸಿದ್ದರು. ಈ ಬಾರಿ ಮುಲಾಯಂ ಅವರು ಮೈನ್ ಪುರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅಖಿಲೇಶ್‌ ಅವರ ಪತ್ನಿ ಡಿಂಪಲ್‌ ಯಾದವ್‌

ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಆಸ್ತಿ ವಿವರ ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಆಸ್ತಿ ವಿವರ

2000 ರಿಂದ 2012 ರವರೆಗೆ ಸತತ ಮೂರು ಬಾರಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕನೌಜ್ ಕ್ಷೇತ್ರದಿಂದ ಗೆಲುವು ಸಾಧಿಸಿದರು. 2012 ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ನಂತರ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆ ಸಂದರ್ಭದಲ್ಲಿ ತಮ್ಮ ಕ್ಷೇತ್ರವನ್ನು ಪತ್ನಿ ಡಿಂಪಲ್ ಯಾದವ್ ಗೆ ಬಿಟ್ಟುಕೊಟ್ಟರು.

ಹೆಸರು : ಅಖಿಲೇಶ್ ಯಾದವ್

ಕ್ಷೇತ್ರ: ಆಜಂಗಢ
ಪತ್ನಿ : ಡಿಂಪಲ್ ಯಾದವ್
ಪಕ್ಷ : ಸಮಾಜವಾದಿ ಪಕ್ಷ
ಒಟ್ಟು ಆಸ್ತಿ : 37 ಕೋಟಿ ರು
ಚರಾಸ್ತಿ: 7.9 ಕೋಟಿ ರು
ಸ್ಥಿರಾಸ್ತಿ : 16.90 ಕೋಟಿ ರು

ಡಿಂಪಲ್ ಯಾದವ್ ಆಸ್ತಿ ವಿವರ

ಡಿಂಪಲ್ ಯಾದವ್ ಆಸ್ತಿ ವಿವರ

ಒಟ್ಟು ಆಸ್ತಿ : 37.78 ಕೋಟಿ ರು (2014ರಲ್ಲಿ 28.04 ಕೋಟಿ ರು)
ಸ್ಥಿರಾಸ್ತಿ : 26.20 ಕೋಟಿ ರು (2014ರಲ್ಲಿ 21.71 ಕೋಟಿ ರು)
ಚರಾಸ್ತಿ : 11.58 ಕೋಟಿ ರು (2014ರಲ್ಲಿ 6.33 ಕೋಟಿ ರು)
* 925.36 ಚದರಡಿ ನಿವೇಶನ, 2 ಮನೆ(ಪತಿ ಅಖಿಲೇಶ್ ಯಾದವ್ ಆಸ್ತಿ ಸೇರಿದೆ).

ಆದಾಯ ಏರಿಕೆ ಇಳಿಕೆ

ಆದಾಯ ಏರಿಕೆ ಇಳಿಕೆ

2013-14ರಲ್ಲಿ 1.25 ಕೋಟಿ ರು ಇದ್ದ ಆದಾಯ 2017-18ರಲ್ಲಿ 84.83 ಲಕ್ಷ ರುಗೆ ಕುಸಿದಿದೆ. ಆದರೆ, ಡಿಂಪಲ್ ಯಾದವ್ ಅವರ ಆದಾಯ 2013-14ರಲ್ಲಿ 28,31,838 ರು ವಾರ್ಷಿಕ ಆದಾಯ ಹೊಂದಿದ್ದು, 2017-18ರಲ್ಲಿ 61,16,108 ರುಗೇರಿದೆ. ಅಖಿಲೇಶ್ ಯಾದವ್ ಹಾಗೂ ಡಿಂಪಲ್ ಯಾದವ್ ಬಳಿ ಇರುವ ನಗದು ವಿವರ: ಅಖಿಲೇಶ್ ಬಳಿ 3.91 ಲಕ್ಷ ರು ನಗದು ಹಾಗೂ ಡಿಂಪಲ್ ಬಳಿ 4,03,743 ರು ನಗದು ಹಣವಿದೆ.

ಇನ್ನಿತರ ಆಸ್ತಿ ವಿವರ

ಇನ್ನಿತರ ಆಸ್ತಿ ವಿವರ

ಅಖಿಲೇಶ್ ಅವರ ಬಳಿ 76,000 ರು ಮೌಲ್ಯದ ಸ್ಮಾರ್ಟ್ ಫೋನ್ ಇದೆ. 17,085 ರು ಮೌಲ್ಯದ ಪೀಠೋಪಕರಣಗಳಿವೆ. 5.34 ಲಕ್ಷ ರು ಮೌಲ್ಯದ ಕಸರತ್ತು ಸಾಧನಗಳಿವೆ.ಡಿಂಪಲ್ ಬಳಿ ಇರುವ ಚಿನ್ನ, ವಜ್ರ, ಹವಳಗಳ ಆಭರಣ ಮೌಲ್ಯ 59.76 ಲಕ್ಷ ರು, ಕಂಪ್ಯೂಟರ್ ಮೌಲ್ಯ 1.25 ಲಕ್ಷ ರು ಆಗುತ್ತದೆ.

2012ರಲ್ಲಿ ಅಖಿಲೇಶ್ ಆಸ್ತಿ

2012ರಲ್ಲಿ ಅಖಿಲೇಶ್ ಆಸ್ತಿ

ಅಖಿಲೇಶ್ ಅವರ ಬಳಿ 76,000 ರು ಮೌಲ್ಯದ ಸ್ಮಾರ್ಟ್ ಫೋನ್ ಇದೆ. 17,085 ರು ಮೌಲ್ಯದ ಪೀಠೋಪಕರಣಗಳಿವೆ. 5.34 ಲಕ್ಷ ರು ಮೌಲ್ಯದ ಕಸರತ್ತು ಸಾಧನಗಳಿವೆ.ಡಿಂಪಲ್ ಬಳಿ ಇರುವ ಚಿನ್ನ, ವಜ್ರ, ಹವಳಗಳ ಆಭರಣ ಮೌಲ್ಯ 59.76 ಲಕ್ಷ ರು, ಕಂಪ್ಯೂಟರ್ ಮೌಲ್ಯ 1.25 ಲಕ್ಷ ರು ಆಗುತ್ತದೆ.

English summary
Elections 2019: Uttar Pradesh former Chief Minister, Samajadwadi Party President Akhilesh Yadav has declared his assets and liabilities worth Rs 37 crore with his wife Dimple Yadav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X