ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಿಠೀ ಈದ್' ರಂಜಾನ್ ಹಬ್ಬಕ್ಕೆ ವಿಶೇಷ ತಿನಿಸುಗಳು

|
Google Oneindia Kannada News

ಬೆಂಗಳೂರು, ಮೇ 01: ಮಂಗಳವಾರ ದಿನದಂದು ಸಂಭ್ರಮದ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತಿದೆ. ಕರ್ನಾಟಕದಲ್ಲಿ ಮೇ 2ರಂದೇ ರಂಜಾನ್ ಆಚರಣೆ ನಡೆಯಲಿದೆ. ಮುಸ್ಲಿಮ್ ಬಾಂಧವರ ಪವಿತ್ರ ಹಬ್ಬವಾದ ರಂಜಾನ್ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ದೇಶದ ಮುಸ್ಲಿಮರ ರಂಜಾನ್ ಹಬ್ಬದ ಪವಿತ್ರ ಪಾರ್ಥನೆಯ ಬಳಿಕ ಪ್ರಪಂಚದಾದ್ಯಂತ ಲಕ್ಷಾಂತರ ಮುಸ್ಲಿಂ ಮನೆಯವರ ಜೊತೆ ಸೇರಿ ಸ್ನೇಹಿತರು ಹಾಗೂ ಸಂಬಂಧಿಕರನ್ನು ತಮ್ಮ ಮನೆಗೆ ಸಂತೋಷದಿಂದ ಸ್ವಾಗತಿಸುತ್ತಾರೆ.

ಇದೇ ಮಂಗಳವಾರ ದೇಶದಲ್ಲಿ ರಂಜಾನ್ ಹಬ್ಬವನ್ನು "ಈದ್-ಉಲ್-ಫಿತರ್' ವಿಶೇಷ ಪ್ರಾರ್ಥನೆಯ ಮೂಲಕ ಸ್ವಾಗತಿಸಲಿದ್ದಾರೆ. ಇನ್ನು ರಂಜಾನ್ ಹಬ್ಬದ ಸಂಭ್ರಮದಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಪ್ರಾರ್ಥನೆಯ ನಂತರ ಕುಟುಂಬದ ಸಂಬಂಧಿಕರು, ಸ್ನೇಹ ಬಳಗಕ್ಕೆ ವಿಶೇಷವಾಗಿ ಆಹ್ವಾನವನ್ನು ನೀಡುತ್ತಾರೆ ಏಕೆಂದರೆ ಅಂದು ಸಂಭ್ರಮದ ಹಬ್ಬವಾಗಿರುತ್ತದೆ. ತಿಂಗಳು ಪೂರ್ತಿ ಉಪವಾಸವನ್ನು ಮಾಡುವ ಮುಸ್ಲಿಮರು "ಈದ್-ಉಲ್-ಫಿತರ್ ರಂಜಾನ್ ಹಬ್ಬವನ್ನು ಸ್ಮರಿಸುತ್ತಾರೆ.

ರಂಜಾನ್ ಹಬ್ಬದ ದಿನದಂದು ಮುಸ್ಲಿಮರು ಸ್ನೇಹಿತರುನ್ನು ಹಾಗೂ ಸಂಬಂಧಿಗಳನ್ನು ಸಂತೋಷ ಪಡಿಸಲು ಹಾಗೂ ರಂಜಾನ್ ಹಬ್ಬದಲ್ಲಿ ಅಡುಗೆಯ ಹಬ್ಬದೂಟವನ್ನು ವಿಶೇಷವಾಗಿ ತಯಾರಿಸುತ್ತಾರೆ. ಈ ಆಚರಣೆಯು ಮುಸ್ಲಿಂ ಪವಿತ್ರ ತಿಂಗಳು ರಂಜಾನ್ ಅಂತ್ಯವನ್ನು ಸ್ಮರಿಸುತ್ತದೆ. ಈ ಸಮಯದಲ್ಲಿ ಮುಸ್ಲಿಮರು ಇಡೀ ದಿನ ಉಪವಾಸ ಮಾಡುತ್ತಾರೆ. ಆದರೆ ಈದ್ ದಿನದಂದು ಉಪವಾಸ ಇರುವುದಿಲ್ಲ. ಈದ್-ಉಲ್-ಫಿತರ್‍‌ನ್ನು 'ಮೀಠಿ ಈದ್' ಎಂದೂ ಕರೆಯಲಾಗುತ್ತದೆ. ಈ ಹಬ್ಬವನ್ನು ಸಾಮೂಹಿಕ ರಂಜಾನ್ ಪ್ರಾರ್ಥನೆಯ ನಂತರ ಹಬ್ಬದ ಜೊತೆಗೆ ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ರಂಜಾನ್ ಹಬ್ಬವನ್ನು ವ್ಯಾಪಕವಾಗಿ ಆಚರಿಸಲಾಗುತ್ತದೆ. ಈ ಮಂಗಳವಾರವು ರಂಜಾನ್ ಹಬ್ಬವು ಕೂಡ ಪ್ರಪಂಚದಾದ್ಯಂತ ಲಕ್ಷಾಂತರ ಮುಸ್ಲಿಂ ಮನೆಗಳಲ್ಲಿ ಸ್ನೇಹಿತರು ಮತ್ತು ಸಂಬಂಧಿಕರನ್ನು ತಮ್ಮ ಮನೆಗೆ ಸಂತೋಷದಿಂದ ಸ್ವಾಗತಿಸಿ ವಿಷೇಶ ಔತನಕೂಟದಲ್ಲಿ ಬಾಗಿಯಾಗಲು ವಿಶೇಷ ಆಹ್ವಾನವನ್ನು ನೀಡುತ್ತಾರೆ.

ರಂಜಾನ್‌ ಸಂಭ್ರಮದ "ಮೀಠಿ ಈದ್'ನ್ನು ಸಂಭ್ರಮಿಸಲು ಲಕ್ಷಾಂತರ ಕುಟುಂಬಗಳು ರಂಜಾನ್ ಸಂಭ್ರಮದ ಆಚರಣೆಯಲ್ಲಿ ಸಿಹಿತಿಂಡಿಗಳು, ಶಿರ್ ಖುರ್ಮಾ ಈ ಸಿಹಿ ತಿಂಡಿಯು ರಂಜಾನ್ ಹಬ್ಬದ ವಿಶೇಷ ಸಿಹಿತಿಂಡಿ (ಪಾಯಸ) ಆಗಿರುತ್ತದೆ. ಇನ್ನು ಹಣ್ಣಿನ ಪದಾರ್ಥಗಳ ಜ್ಯೂಸ್, ಹಲೀಮ್ ಕಿಚಡಿ, ವಿವಿಧ ತರಹದ ಕಬಾಬ್, ಕೀಮಾ, ಚಿಕನ್ ಶವರ್ಮಾ, ಮಟನ್‌ ಬಿರಿಯಾನಿ, ದಮ್ ಬಿರಿಯಾನಿ, ರೂಅಫ್ಸಾ (ಶರಬತ್‌) ಮುಂತಾದ ತಿಂಡಿಗಳನ್ನು ಮಾಡಿ ಕುಟುಂಬಸ್ಥರು ಹಾಗೂ ಹಬ್ಬಕ್ಕೆಂದು ಆಹ್ವಾನಿಸಿದ ಸ್ನೇಹಿತರೊಂದಿಗೆ ಹಬ್ಬದೂಟವನ್ನು ಸವಿದು ಸಂತೋಷವನ್ನು ಪರಸ್ಪರವಾಗಿ ಹಂಚಿಕೊಳ್ಳುತ್ತಾರೆ.

ಬಿರಿಯಾನಿ

ಬಿರಿಯಾನಿ

ಈದ್‌ನಲ್ಲಿ ಪ್ರತಿಮನೆಯಲ್ಲಿ ತಯಾರಿಸುವ ಅಡುಗೆ ಎಂದರೆ ಬಿರಿಯಾನಿ. ಈ ಬಿರಿಯಾನಿಯನ್ನು ಚಿಕನ್ ಹಾಗೂ ಮಟನ್ ಬಳಸಿ ಎರಡು ಪ್ರಕಾರದ ಬಿರಿಯಾನಿ ಮಾಡುತ್ತಾರೆ. ರುಚಿಕರವಾಗಿ ಖಾರವಾಗಿರುತ್ತದೆ. ಇದರ ಜೊತೆಗೆ ಮೊಸರು ಬಳಸಿ ಸಲಾಡಿನ ಚಟ್ನಿ ಜೊತೆ ತಿನ್ನಲಾಗುತ್ತದೆ.

 ಗಾಲೌಟಿ ಕಬಾಬ್ಸ್

ಗಾಲೌಟಿ ಕಬಾಬ್ಸ್

ಅತ್ಯಂತ ಜನಪ್ರಿಯವಾದ ಈದ್ ಊಟವೆಂದರೆ ಗಾಲೌಟಿ ಕಬಾಬ್, ಅಂದರೆ 'ಮೃದು'. ಈ ಕಬಾಬ್‌ಗಳು ನಿಮ್ಮ ಬಾಯಿಯಲ್ಲಿ ಕರಗುತ್ತವೆ. ವಿವಿಧ ಮಸಾಲೆಗಳೊಂದಿಗೆ ಬೇಯಿಸಿದ ಈ ಕಬಾಬ್‌ಗಳು ನಿಮ್ಮ ರುಚಿ ಮೊಗ್ಗುಗಳಿಗೆ ರುಚಿಕರವಾದ ಸತ್ಕಾರವಾಗಿದೆ. ರೂಮಾಲಿ ರೊಟ್ಟಿ ಮತ್ತು ಪರೊಟಾದೊಂದಿಗೆ ಗಾಲೌಟಿ ಕಬಾಬ್‌ಗಳು ರುಚಿಕರವಾಗಿರುತ್ತವೆ

 ಶೀರ್ ಖುರ್ಮಾ

ಶೀರ್ ಖುರ್ಮಾ

ಈ ಈದ್ ಭೋಜನವು ಸಾಂಪ್ರದಾಯಿಕ ಖಾದ್ಯವಾಗಿದ್ದು ಇದನ್ನು ವಿವಿಧ ಮನೆಗಳಲ್ಲಿ ಹಲವಾರು ರೀತಿಯಲ್ಲಿ ತಯಾರಿಸಲಾಗುತ್ತದೆ. ಶೀರ್ ಖುರ್ಮಾ ಇದನ್ನು ಸಾಂಪ್ರದಾಯಿಕವಾಗಿ ಈದ್ ಹಬ್ಬದ ಸಮಯದಲ್ಲಿ ನೀಡಲಾಗುತ್ತದೆ. ಶೀರ್ ಎಂಬುದು ಹಾಲಿನ ಪರ್ಷಿಯನ್ ಪದ, ಮತ್ತು ಖುರ್ಮಾ ಎಂಬುದು ಖರ್ಜೂರದ ಪರ್ಷಿಯನ್ ಪದವಾಗಿದೆ. ಇದು ವರ್ಮಿಸೆಲ್ಲಿ, ಹಾಲು ಮತ್ತು ಸಾಕಷ್ಟು ಬಾದಾಮಿಗಳಿಂದ ಮಾಡಿದ ರುಚಿಕರವಾದ ಭಾರತೀಯ ಭಕ್ಷ್ಯವಾಗಿದೆ.

 ಚಿಕನ್ ಪಿಲಾಫ್

ಚಿಕನ್ ಪಿಲಾಫ್

ಈ ರೈಸ್ ಪಿಲಾಫ್ ಪರಿಮಳಯುಕ್ತ ಹಳದಿ ಅಕ್ಕಿ ಪ್ಯಾಚ್‌ಗಳನ್ನು ರಚಿಸಲು ಕೇಸರಿ ಭರಿತ ನೀರಿನಿಂದ ಆವೃತವಾಗಿದೆ. ಇಡೀ ಪಿಲಾಫ್ ಅನ್ನು ಬೆಣ್ಣೆ-ಸ್ಯಾಚುರೇಟೆಡ್ ಲಾವಾಶ್‌ದಿಂದ ಮಾಡಿದ ಗರಿಗರಿಯಾದ, ಗೋಲ್ಡನ್-ಕಂದು, ಕ್ರ್ಯಾಕರ್-ತೆಳುವಾದ ಕವಚದಲ್ಲಿ ಸುತ್ತಿಡಲಾಗುತ್ತದೆ.

English summary
On this same Tuesday, a festive Ramadan festival is being celebrated. Ramadan, the festival of holy Muslims, is quite special, Ramadan is celebrated on the occasion of the holy month of Ramadan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X