ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನಲ್ಲಿ ಯಾವ ನಗರ ಸೇಫ್? ಭಾರತದಲ್ಲಿ ಯಾವ ಸಿಟಿ ಸುರಕ್ಷಿತ?

|
Google Oneindia Kannada News

ಸಿಟಿ ಬೆಳೆದರೆ ಮಾತ್ರ ಸಾಲದು, ಕಟ್ಟಡ, ಮೂಲಸೌಕರ್ಯದ ಜೊತೆ ಅಲ್ಲಿ ವಾಸಿಸುವ ಜನರ ಸುರಕ್ಷತೆಯೂ ಮುಖ್ಯವಾಗಿರುತ್ತದೆ. ಹೀಗೆ 'ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್' ಅಧ್ಯಯನ ವರದಿ ಜಗತ್ತಿನಲ್ಲೇ ಅತಿ ಸುರಕ್ಷಿತ ನಗರ ಯಾವುದು ಎಂಬ ಮಾಹಿತಿ ಹೊರಹಾಕಿದೆ. ಅಂದ ಹಾಗೆ ಎಕನಾಮಿಸ್ಟ್ ಇಂಟೆಲಿಜೆನ್ಸ್ ವರದಿ ಪ್ರಕಾರ ಡೆನ್ಮಾರ್ಕ್‌ ರಾಜಧಾನಿ 'ಕೋಪನ್ ಹೇಗನ್' ಜಗತ್ತಿನಲ್ಲೆ ಅತ್ಯಂತ ಸುರಕ್ಷಿತ ನಗರ ಎನಿಸಿಕೊಂಡಿದೆ.

100ಕ್ಕೆ 82.4 ಅಂಕ ಪಡೆದಿರುವ ಕೋಪನ್ ಹ್ಯಾಗನ್ ಎಲ್ಲಾ ಆಯಾಮದಲ್ಲೂ ಮನುಷ್ಯರು ವಾಸ ಮಾಡಲು ಯೋಗ್ಯವಾದ ನಗರ ಎಂದು 'ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್' ವರದಿ ಹೇಳಿದೆ. ಇದಾದ ನಂತರ ಕೆನಡಾ ರಾಜಧಾನಿ ಟೊರೊಂಟೊ ಹಾಗೂ ಸಿಂಗಾಪುರ್ ಕ್ರಮವಾಗಿ 2ನೇ ಮತ್ತು 3ನೇ ಸ್ಥಾನ ಪಡೆದಿವೆ.

ಆದ್ರೆ 'ಟಾಪ್-10' ಸುರಕ್ಷಿತ ನಗರಗಳಲ್ಲಿ ಭಾರತದ ನಗರಗಳು ಸ್ಥಾನ ಪಡೆದಿಲ್ಲ. 'ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್' ವರದಿಯಲ್ಲಿ ಪ್ರತಿ ನಗರದ ಡಿಜಿಟಲ್, ಆರೋಗ್ಯ, ಮೂಲಸೌಕರ್ಯ, ವೈಯಕ್ತಿಕ ಮತ್ತು ಪರಿಸರ ಭದ್ರತೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಇಷ್ಟೂ ಮಾಹಿತಿ ಆಧಾರದಲ್ಲಿ ಜಗತ್ತಿನ ಸುರಕ್ಷಿತ ನಗರಗಳ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ.

‘Economist Intelligence Unit’ released worlds safest cities list

ದೆಹಲಿ 48, ಮುಂಬೈ 50..!
ಮೊದಲೇ ತಿಳಿಸಿದಂತೆ ಭಾರತದ ಯಾವುದೇ ನಗರ ಜಗತ್ತಿನ 'ಟಾಪ್-10' ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಆದರೆ ರಾಷ್ಟ್ರ ರಾಜಧಾನಿ ದೆಹಲಿ 56.1 ಅಂಕಗಳೊಂದಿಗೆ 48ನೇ ಸ್ಥಾನ ಪಡೆದಿದೆ. ಮಹಾರಾಷ್ಟ್ರದ ರಾಜಧಾನಿ ಹಾಗೂ ಭಾರತದ 'ವಾಣಿಜ್ಯ ರಾಜಧಾನಿ' ಎಂಬ ಬಿರುದು ಪಡೆದಿರುವ ಮುಂಬೈ 54.4 ಅಂಕ ಪಡೆದು 50 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಹಾಗಾದರೆ ಯಾವ ಯಾವ ನಗರಕ್ಕೆ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ವರದಿಯಲ್ಲಿ ಯಾವ ಸ್ಥಾನ ಸಿಕ್ಕಿದೆ ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ.

Recommended Video

ಟೀಮ್ ಇಂಡಿಯಾ ಪ್ಲೇಯರ್ಸ್ ಕೆಲಸಕ್ಕೆ ಬಾರದವರು ಎಂದ ವಾನ್ ಗೆ ಜರ್ಸಿ ಕಳಿಸಿದ ಜಡೇಜಾ | Oneindia Kannada
ಸುರಕ್ಷಿತ ನಗರಗಳ ಪಟ್ಟಿ
ರ‍್ಯಾಂಕ್ ನಗರದ ಹೆಸರು ಮಾರ್ಕ್ಸ್ ದೇಶ
01 ಕೋಪನ್ ಹೇಗನ್ 82.4 ಡೆನ್ಮಾರ್ಕ್
02 ಟೊರೊಂಟೊ 82.2 ಕೆನಡಾ
03 ಸಿಂಗಪುರ 80.7 ಸಿಂಗಪುರ
04 ಸಿಡ್ನಿ 80.1 ಆಸ್ಟ್ರೇಲಿಯಾ
05 ಟೋಕಿಯೊ 80.0 ಜಪಾನ್
06 ಆಂಸ್ಟರ್ಡ್ಯಾಮ್ 79.3 ನೆದರ್ಲ್ಯಾಂಡ್ಸ್
07 ವೆಲ್ಲಿಂಗ್ಟನ್ 79.0 ನ್ಯೂಜಿಲ್ಯಾಂಡ್
08 ಹಾಂಗ್ ಕಾಂಗ್ 78.6 ಹಾಂಗ್ ಕಾಂಗ್
09 ಮೆಲ್ಬರ್ನ್ 78.6 ಆಸ್ಟ್ರೇಲಿಯಾ
10 ಸ್ಟಾಕ್ಹೋಮ್ 78.0 ಸ್ವೀಡನ್
48 ದೆಹಲಿ 56.1 ಭಾರತ
50 ಮುಂಬೈ 54.4 ಭಾರತ

English summary
‘The Economist Intelligence Unit’ released world's safest cities list of 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X