ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

23 ಗಂಟೆ 56 ನಿಮಿಷಕ್ಕೂ ಮೊದಲೇ ಸೂರ್ಯನ ಸುತ್ತಿ ಕೆಲಸ ಮುಗಿಸಿದ ಭೂಮಿ!

|
Google Oneindia Kannada News

ನವದೆಹಲಿ, ಆಗಸ್ಟ್ 02: ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ ಎಂಬ ಕನ್ನಡದ ಹಾಡನ್ನು ನೀವು ಕೇಳಿಯೇ ಇರುತ್ತೀರ. ಈ ಹಾಡಿನಲ್ಲೇ ಹೇಳಿದಂತೆ ಪ್ರತಿಗಂಟೆ ತಿರುಗುವ ಭೂಮಿಯು, ಈಗ ತನ್ನ ವೇಗವನ್ನು ಹೆಚ್ಚಿಸಿಕೊಂಡಿದೆ.

ಓದುವುದಕ್ಕೆ ಅಚ್ಚರಿ ಎನಿಸಿದರೂ ಇಂಥದೊಂದು ಸತ್ಯವನ್ನು ವಿಜ್ಞಾನಿಗಳು ಸಾಕ್ಷಿ ಸಮೇತವಾಗಿ ತೆೆರೆದಿಟ್ಟಿದ್ದಾರೆ. ವೇಗವಾಗಿ ತಿರುಗುತ್ತಿರುವ ಭೂಮಿ 24 ಗಂಟೆಗೂ ಮೊದಲೇ ಒಂದು ಸುತ್ತು ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಆಕಾಶದಲ್ಲಿ ತೇಲಾಡಬೇಕೇ?: 7 ದಿನ ಬಾಹ್ಯಾಕಾಶದಲ್ಲೇ ಹಾರಾಡಬಹುದು ಭಾರತೀಯರು!ಆಕಾಶದಲ್ಲಿ ತೇಲಾಡಬೇಕೇ?: 7 ದಿನ ಬಾಹ್ಯಾಕಾಶದಲ್ಲೇ ಹಾರಾಡಬಹುದು ಭಾರತೀಯರು!

ಭೂಮಿಯ ತಿರುಗುವಿಕೆಯ ವೇಗ ಹೆಚ್ಚಾಗಿರುವುದು ಭೂಕಂಪನ ಸೇರಿದಂತೆ ಪ್ರಕೃತಿಯಲ್ಲಿನ ಬದಲಾವಣೆ ಲಕ್ಷಣಗಳನ್ನು ತೋರಿಸುತ್ತಿದೆ. ಅಸಲಿಗೆ ಸೂರ್ಯನನ್ನು ಸುತ್ತುವುದಕ್ಕೆ ಭೂಮಿ ತೆಗೆದುಕೊಳ್ಳುವ ಅವಧಿ ಎಷ್ಟು?, ಭೂಮಿಯ ವೇಗ ಹೆಚ್ಚಾಗಿರುವುದರಿಂದ ಈಗ ತೆಗೆದುಕೊಳ್ಳುತ್ತಿರುವ ಸಮಯ ಎಷ್ಟು? ಯಾವ ದಿನದಂದು ಭೂಮಿಯು ಅತಿಹೆಚ್ಚು ವೇಗವಾಗಿ ತಿರುಗಿತು ಎಂಬ ಎಲ್ಲ ಕೌತುಕಗಳ ಪ್ರಶ್ನೆಗೆ ಈ ವರದಿಯಲ್ಲಿ ಉತ್ತರವನ್ನು ಕಂಡುಕೊಳ್ಳಿರಿ.

24 ಗಂಟೆಗಳಲ್ಲಿ ಸೂರ್ಯನನ್ನು ಒಂದು ಸುತ್ತು ಹಾಕುವ ಭೂಮಿ

24 ಗಂಟೆಗಳಲ್ಲಿ ಸೂರ್ಯನನ್ನು ಒಂದು ಸುತ್ತು ಹಾಕುವ ಭೂಮಿ

ಸಾಮಾನ್ಯವಾಗಿ ಭೂಮಿಯು ತನ್ನನ್ನು ತಾನು ತಿರುಗುತ್ತಾ, ಸೂರ್ಯ ಸುತ್ತಲೂ ಒಂದು ಸುತ್ತು ಹಾಕುವುದಕ್ಕೆ 24 ಗಂಟೆಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿಯೇ ಹಗಲು ಮತ್ತು ರಾತ್ರಿಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ಸ್ಥಾಪಿತ ಸತ್ಯದಲ್ಲಿನ ಕೆಲವು ಬದಲಾವಣೆಗಳು ಭೂಕಂಪನದ ಭಯವನ್ನು ಹುಟ್ಟು ಹಾಕುತ್ತಿವೆ.

23 ಗಂಟೆಗ 56 ನಿಮಿಷದಲ್ಲೇ ಕೆಲಸ ಮುಗಿಸಿದ ಭೂಮಿ!

23 ಗಂಟೆಗ 56 ನಿಮಿಷದಲ್ಲೇ ಕೆಲಸ ಮುಗಿಸಿದ ಭೂಮಿ!

ಕಳೆದ ಜುಲೈ 29ರಂದು ಭೂಮಿಯು ತನ್ನ ಪ್ರಮಾಣಿತ ಕಾಲಮಿತಿಗಿಂತ ಅಂದರೆ 23 ಗಂಟೆ 56 ನಿಮಿಷಕ್ಕಿಂತ ಸುಮಾರು 1.59 ಮಿಲಿಸೆಕೆಂಡ್‌ಗಳಿಗೂ ಮೊದಲೇ ಭೂಮಿಯು ಸೂರ್ಯನನ್ನು ಪೂರ್ಣವಾಗಿ ಒಂದು ಸುತ್ತು ಹಾಕಿದೆ. ವಿಶೇಷವೆಂದರೆ ಭೂಮಿಯು ವೇಗವಾಗಿ ತಿರುಗುತ್ತಿರುವುದು ಇದೇ ಮೊದಲಲ್ಲ. ಆದಾಗ್ಯೂ, ಪರಮಾಣು ಗಡಿಯಾರಗಳು ಇತ್ತೀಚೆಗೆ ಭೂಮಿಯ ಪರಿಭ್ರಮಣೆಯು ವೇಗಗೊಳ್ಳುತ್ತಿದೆ ಎಂದು ಬಹಿರಂಗಪಡಿಸಿದೆ," ಎಂದು ವಿಜ್ಞಾನಿಗಳು ಹೇಳುತ್ತಾರೆ.

ಭೂಮಿಯ ವೇಗ ಹೆಚ್ಚಾಗಿದ್ದು ಇದೇ ಮೊದಲೇನಲ್ಲ!

ಭೂಮಿಯ ವೇಗ ಹೆಚ್ಚಾಗಿದ್ದು ಇದೇ ಮೊದಲೇನಲ್ಲ!

ಸೂರ್ಯನನ್ನು ಸುತ್ತು ಹಾಕುವ ಭೂಮಿಯು ತನ್ನ ವೇಗವನ್ನು ಹೆಚ್ಚಿಸಿಕೊಂಡಿರುವುದು ಇದೇ ಮೊದಲೇನಲ್ಲ. ಕಳೆದ 2020ರಲ್ಲಿ ಭೂಮಿಯು ಕಡಿಮೆ ತಿಂಗಳ ಅವಧಿಯನ್ನು ದಾಖಲಿಸಿತ್ತು. ಜುಲೈ 19 ಅನ್ನು 2020ರ ಕಡಿಮೆ ಅವಧಿಯ ದಿನ ಎಂದು ದಾಖಲಿಸಲಾಗಿತ್ತು. ಅಂದು 24 ಗಂಟೆಗಳ ಬದಲಿಗೆ 1.47 ಮಿಲಿಸೆಕೆಂಡ್‌ಗಳ ಮೊದಲೇ ಭೂಮಿಯು ಒಂದು ರೌಂಡ್ ಅನ್ನು ಪೂರ್ಣಗೊಳಿಸಿತ್ತು. 2021ರಲ್ಲಿಯೂ ಭೂಮಿಯು ಸಾಮಾನ್ಯವಾಗಿ ಹೆಚ್ಚಿದ ವೇಗದಲ್ಲಿ ತಿರುಗುವುದನ್ನು ಮುಂದುವರೆಸಿತು. ಆದರೆ ಯಾವುದೇ ಗರಿಷ್ಠ ದಾಖಲೆಗಳು ಸೃಷ್ಟಿಯಾಗಲಿಲ್ಲ.

ಇದೀಗ 2022ರ ಜೂನ್ 29ರಂದು ಭೂಮಿಯು ತನ್ನ ಅತ್ಯಂತ ವೇಗದ ತಿರುಗುವಿಕೆಯನ್ನು ಮುಗಿಸಿತು. ಜುಲೈ 26, 2022ರಂದು 1.50 ಮಿಲಿಸೆಕೆಂಡುಗಳಿಗೂ ಮೊದಲೇ ಭೂಮಿಯು ತನ್ನ ಡ್ಯೂಟಿ ಮುಗಿಸಿತ್ತು. ಈ ಬೆಳಣಿಗೆಗಳ ಹಿನ್ನೆಲೆ ಮುಂಬರುವ ವರ್ಷಗಳಲ್ಲಿ ಭೂಮಿಯಲ್ಲಿ ಕಡಿಮೆ ದಿನಗಳು ದಾಖಲಾಗಬಹುದು ಎಂಬ ವರದಿಗಳಿವೆ.

ಭೂಮಿಯ ಕೆಲಸ ಫಾಸ್ಟ್ ಆಗಿದ್ದು ಏಕೆ?

ಭೂಮಿಯ ಕೆಲಸ ಫಾಸ್ಟ್ ಆಗಿದ್ದು ಏಕೆ?

ಸೂರ್ಯನನ್ನು ಸುತ್ತುವ ಭೂಮಿಯು ಏಕೆ ವೇಗವಾಗಿ ತಿರುಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಕ್ಷಣದಲ್ಲಿ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ. ಆದರೆ ಕೆಲವು ಪ್ರಮುಖ ಸಿದ್ಧಾಂತಗಳನ್ನು ಪಟ್ಟಿ ಮಾಡಲಾಗಿದೆ. ಆ ಪ್ರಕಾರ:

* ಹಿಮನದಿಗಳ ಕರಗುವಿಕೆಯಿಂದಾಗಿ ಧ್ರುವಗಳ ತೂಕವು ಕುಸಿದಿದೆ ಎಂದು ಕೆಲವರು ಹೇಳುತ್ತಾರೆ

* ನಮ್ಮ ಗ್ರಹದ ಒಳಭಾಗದ ಕರಗಿದ ಕಾಲಾನಂತರದಲ್ಲಿ ಚಲನೆ ವೇಗ ಹೆಚ್ಚಾಗುತ್ತಿದೆ ಎಂದು ಇತರರು ಗಮನಿಸಿದ್ದಾರೆ

* ಕೆಲವರು ಭೂಕಂಪನ ಚಟುವಟಿಕೆ ಕಾರಣ ಎಂದು ನಂಬಿದ್ದಾರೆ

* ಇದು "ಚಾಂಡ್ಲರ್ ವೊಬಲ್" ಕಾರಣವೆಂದು ಕೆಲವರು ನಂಬಿದ್ದರೆ, ಇದು ಅದರ ಮೇಲ್ಮೈಯಲ್ಲಿ ಭೂಮಿಯ ಭೌಗೋಳಿಕ ಧ್ರುವಗಳಲ್ಲಿನ ಸಣ್ಣ ವಿಚಲನವಾಗಿದೆ ಎಂದು ಮತ್ತೆ ಕೆಲವರು ಹೇಳುತ್ತಾರೆ.

ಭೂಮಿ ವೇಗ ಹೆಚ್ಚಾದರೆ, ಅದರ ಪರಿಣಾಮವೇನು?

ಭೂಮಿ ವೇಗ ಹೆಚ್ಚಾದರೆ, ಅದರ ಪರಿಣಾಮವೇನು?

ವರದಿಗಳ ಪ್ರಕಾರ, ಜಿಪಿಎಸ್ ಉಪಗ್ರಹಗಳಲ್ಲಿ ಬಳಸಲಾಗುವ ಪರಮಾಣು ಗಡಿಯಾರಗಳ ಮೇಲೆ ಭೂಮಿಯ ತಿರುಗುವಿಕೆಯು ಪ್ರಮುಖ ಪರಿಣಾಮಗಳನ್ನು ಉಂಟು ಮಾಡಬಹುದು. ಇದು ಭೂಮಿಯ ಬದಲಾಗುತ್ತಿರುವ ತಿರುಗುವಿಕೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇದರ ಅರ್ಥ ಜಿಪಿಎಸ್ ಉಪಗ್ರಹಗಳು-ಐನ್‌ಸ್ಟೈನ್‌ನ ಸಾಪೇಕ್ಷತಾ ಸಿದ್ಧಾಂತದ ಪರಿಣಾಮಕ್ಕಾಗಿ ಈಗಾಗಲೇ ಸರಿಪಡಿಸಬೇಕಾಗಿದೆ. ಇದರ ಹೊರತಾಗಿ, ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಇತರ ಸಂವಹನ ವ್ಯವಸ್ಥೆಗಳು ನೆಟ್‌ವರ್ಕ್ ಟೈಮ್ ಪ್ರೋಟೋಕಾಲ್ (ಎನ್‌ಟಿಪಿ) ಸರ್ವರ್‌ಗಳೊಂದಿಗೆ ಸಿಂಕ್ರೊನೈಸ್ ಆಗಿರುವುದರಿಂದ ಅವು ಅನುಪಯುಕ್ತವಾಗುತ್ತವೆ.

ಗಡಿಯಾರವು 00:00:00ಗೆ ಮರುಹೊಂದಿಸುವ ಮೊದಲು 23:59:59 ರಿಂದ 23:59:60ಕ್ಕೆ ಮುಂದುವರಿಯುತ್ತವೆ. ಇದರಿಂದ ಈ ರೀತಿಯ ಸಮಯ ಜಂಪ್ ಪ್ರೋಗ್ರಾಂಗಳನ್ನು ಕ್ರ್ಯಾಶ್ ಮಾಡಬಹುದು ಮತ್ತು ಡೇಟಾವನ್ನು ಭ್ರಷ್ಟಗೊಳಿಸಬಹುದು ಎಂದು ಹೇಳಲಾಗುತ್ತಿದೆ.

English summary
Earth takes approximately 24 hours to rotate on its axis. But this established fact is seeing some major seismic changes. According to scientists, on July 29, Earth completed a full spin in about 1.59 milliseconds. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X