ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭದ್ರತೆ ಹೊಂದಿರುವ ಇ-ಪಾಸ್‌ಪೋರ್ಟ್: ನಕಲಿ ಪತ್ತೆ ಸರಳ

|
Google Oneindia Kannada News

ನವದೆಹಲಿ, ಫೆಬ್ರವರಿ 04: ಎಂಬೆಡೆಡ್ ಚಿಪ್‌ಗಳನ್ನು ಹೊಂದಿರುವ ಇ-ಪಾಸ್‌ಪೋರ್ಟ್‌ಗಳನ್ನು 2022-2023 ರಲ್ಲಿ ದೇಶದಲ್ಲಿ ಹೊರತರಲಾಗುವುದು. ಇ-ಪಾಸ್‌ಪೋರ್ಟ್‌ಗಳು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ಚಿಪ್‌ನಂತಹ ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಇ-ಪಾಸ್‌ಪೋರ್ಟ್‌ಗಳನ್ನು ಸರ್ಕಾರವು ಈ ವರ್ಷ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅರ್ಜಿದಾರರ ವೈಯಕ್ತಿಕ ವಿವರಗಳನ್ನು ಪಾಸ್‌ಪೋರ್ಟ್ ಬುಕ್‌ಲೆಟ್‌ನಲ್ಲಿ ಅಳವಡಿಸಲಾಗಿರುವ ಚಿಪ್‌ನಲ್ಲಿ ಡಿಜಿಟಲ್ ಆಗಿ ಸಂಗ್ರಹಿಸಲಾಗುವುದು ಎಂದು ವಿ ಮುರಳೀಧರನ್ ತಿಳಿಸಿದ್ದಾರೆ.

E-Passport : ಬಜೆಟ್‌ 2022-23ರಲ್ಲಿ ಇ-ಪಾಸ್‌ಪೋರ್ಟ್ ಜಾರಿಗೆ: ವಿತ್ತ ಸಚಿವೆE-Passport : ಬಜೆಟ್‌ 2022-23ರಲ್ಲಿ ಇ-ಪಾಸ್‌ಪೋರ್ಟ್ ಜಾರಿಗೆ: ವಿತ್ತ ಸಚಿವೆ

"ಸಚಿವಾಲಯವು ಸುಧಾರಿತ ಭದ್ರತಾ ವೈಶಿಷ್ಟ್ಯಗಳೊಂದಿಗೆ ನಾಗರಿಕರಿಗೆ ಚಿಪ್-ಸಕ್ರಿಯಗೊಳಿಸಿದ ಇ-ಪಾಸ್‌ಪೋರ್ಟ್‌ಗಳನ್ನು ನೀಡಲು ಯೋಜಿಸುತ್ತಿದೆ. ಇ-ಪಾಸ್‌ಪೋರ್ಟ್ ಸಂಪರ್ಕವಿಲ್ಲದ ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನವನ್ನು ಹೊಂದಿದೆ. ಇದರಲ್ಲಿ ಎಂಬೆಡೆಡ್ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ಚಿಪ್ ಅನ್ನು ಮುಂಭಾಗ ಅಥವಾ ಹಿಂಭಾಗದಲ್ಲಿ ಅಳವಡಿಸಲಾಗಿದೆ," ಎಂದು ಇ-ಪಾಸ್‌ಪೋರ್ಟ್‌ಗಳ ಕುರಿತ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಹೇಳಿದರು. ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಒದಗಿಸುವ ನಿಟ್ಟಿನಲ್ಲಿ 2022-23 ವರ್ಷದಿಂದ ಇ-ಪಾಸ್‌ಪೋರ್ಟ್‌ಗಳನ್ನು ಜಾರಿಗೆ ತರಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಘೋಷಣೆ ಮಾಡಿದ್ದರು.

E-passports to have tamper-proof security features will facilitate travel, check forgery

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೇಂದ್ರ ಬಜೆಟ್‌ ಅನ್ನು ಮಂಡನೆ ಮಾಡುವ ಸಂದರ್ಭದಲ್ಲಿ, "ಇ-ಪಾಸ್‌ಪೋರ್ಟ್‌ಗಳಲ್ಲಿ ಎಂಬೆಡೆಡ್ ಚಿಪ್ಸ್ ಮತ್ತು ಫ್ಯೂಚರಿಸ್ಟಿಕ್ ಎಂಬ ತಂತ್ರಜ್ಞಾನವನ್ನು ಬಳಸಲಾಗುತ್ತದೆ," ಎಂದು ಕೂಡಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಹಾಗಾದರೆ ಈ ಇ-ಪಾಸ್‌ಪೋರ್ಟ್‌ನ ವಿಶೇಷತೆ ಏನು?, ಹೇಗೆ ಸಹಾಯಕ ಎಂದು ತಿಳಿಯಲು ಮುಂದೆ ಓದಿ...

ಶೀಘ್ರದಲ್ಲೇ ಇ-ಪಾಸ್‌ಪೋರ್ಟ್ ಬಿಡುಗಡೆ: ಏನಿದು?, ಇಲ್ಲಿದೆ ವಿವರಶೀಘ್ರದಲ್ಲೇ ಇ-ಪಾಸ್‌ಪೋರ್ಟ್ ಬಿಡುಗಡೆ: ಏನಿದು?, ಇಲ್ಲಿದೆ ವಿವರ

ಈ ಇ-ಪಾಸ್‌ಪೋರ್ಟ್‌ನ ವಿಶೇಷತೆ ಏನು?

* ಸುರಕ್ಷಿತ ಬಯೋಮೆಟ್ರಿಕ್ ಡೇಟಾವನ್ನು ಹೊಂದಿರುವ ಇ-ಪಾಸ್‌ಪೋರ್ಟ್‌ಗಳನ್ನು 2022-2023 ರಲ್ಲಿ ದೇಶದಲ್ಲಿ ಬಿಡುಗಡೆ ಮಾಡಲಾಗುವುದು.
* ಇದು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ICAO) ಮಾನದಂಡಗಳಿಗೆ ಅನುಗುಣವಾಗಿರುತ್ತದೆ.
* ಎಂಬೆಡೆಡ್ RFID ಚಿಪ್ ಸೇರಿದಂತೆ ಸಂಪರ್ಕರಹಿತ ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನವನ್ನು ಇ-ಪಾಸ್‌ಪೋರ್ಟ್ ಒಳಗೊಂಡಿದೆ.
* ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ಚಿಪ್ ಅನ್ನು ಹೊಂದಿರುವ ಇ-ಪಾಸ್‌ಪೋರ್ಟ್ ಸುಧಾರಿತ ಭದ್ರತಾ ವೈಶಿಷ್ಟ್ಯವನ್ನು ಹೊಂದಿರುತ್ತದೆ
* ಪಾಸ್‌ಪೋರ್ಟ್‌ನ ಮುಂಭಾಗ ಅಥವಾ ಹಿಂದಿನ ಕವರ್ ಅಥವಾ ಪುಟದಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಚಿಪ್ ಅನ್ನು ಎಂಬೆಡ್ ಮಾಡಲಾಗುತ್ತದೆ.
* ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನವು ಜನರು ಅಥವಾ ವಸ್ತುಗಳನ್ನು ಗುರುತಿಸಲು ರೇಡಿಯೋ ಪ್ರೀಕ್ವೆನ್ಸಿಯನ್ನು ಬಳಸುತ್ತದೆ.
* ವೈರ್‌ಲೆಸ್ ಸಾಧನ ಅಥವಾ 'ಟ್ಯಾಗ್'ನಲ್ಲಿರುವ ಮಾಹಿತಿಯನ್ನು ಹೊಂದಿರುವ ಸಾಧನವಿದೆ.
* ಪಾಸ್‌ಪೋರ್ಟ್ ಬುಕ್‌ಲೆಟ್‌ನಲ್ಲಿ ಅಳವಡಿಸಲಾಗಿರುವ ಚಿಪ್‌ನಲ್ಲಿ ಅರ್ಜಿದಾರರ ವೈಯಕ್ತಿಕ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ.
* ಯಾರಾದರೂ ಚಿಪ್ ಅನ್ನು ನಕಲಿ ಮಾಡಿದರೆ ಅದು ತಿಳಿಯಲು ಸಾಧ್ಯವಾಗುತ್ತದೆ. ಪಾಸ್ಪೋರ್ಟ್ ದೃಢೀಕರಣವು ವಿಫಲಗೊಳ್ಳುತ್ತದೆ.

ಇ-ಪಾಸ್‌ಪೋರ್ಟ್ ಹೇಗೆ ಸಹಾಯಕ?

* ಇ-ಪಾಸ್‌ಪೋರ್ಟ್‌ಗಳ ಸುಧಾರಿತ ಭದ್ರತಾ ವೈಶಿಷ್ಟ್ಯಗಳು ನಕಲಿ ಪಾಸ್‌ಪೋರ್ಟ್ ಅನ್ನು ಪತ್ತೆ ಹಚ್ಚುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.
* ಎಂಬೆಡೆಡ್ RFID ಚಿಪ್‌ ಹಿನ್ನೆಲೆ ಇ-ಪಾಸ್‌ಪೋರ್ಟ್ ಮೂಲಕ ವಿಮಾನ ನಿಲ್ದಾಣಗಳಲ್ಲಿ ವಲಸೆ ಪ್ರಕ್ರಿಯೆ ಸರಳವಾಗಲಿದೆ.
* ನಕಲಿ ಪಾಸ್‌ಪೋರ್ಟ್ ಪತ್ತೆಗೆ ಸಹಕಾರಿ

ಈ ನಡುವೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕೂಡ ಇ-ಪಾಸ್‌ಪೋರ್ಟ್‌ಗಳನ್ನು ಪರಿಚಯಿಸುವುದಾಗಿ ಘೋಷಿಸಿದೆ. 93 ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಮತ್ತು 428 ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. (ಒನ್‌ಇಂಡಿಯಾ ಸುದ್ದಿ)

English summary
E-passports to have tamper-proof security features, facilitate immigration at airports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X