• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಇನ್ಮುಂದೆ ಎಲ್ಲಾ ಬಗೆಯ ಇ-ಸಿಗರೇಟ್ ನಿಷೇಧ

|

ನವದೆಹಲಿ, ಡಿಸೆಂಬರ್ 02: ನಿಕೋಟಿನ್ ಸೇವನೆ ಮೇಲೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಎಲ್ಲಾ ಬಗೆಯ ಇ-ಸಿಗರೇಟ್ ಗಳನ್ನು ಡ್ರಗ್ಸ್ ಎಂದು ಪರಿಗಣಿಸಿದ್ದು, ಸಂಪೂರ್ಣ ನಿಷೇಧ ಹೇರುವ ಮಸೂದೆ ಮಂಡನೆಯಾಗಿದ್ದು, ಸಂಸತ್ತಿನ ಮೇಲ್ಮನೆಯಲ್ಲಿ ಸಮ್ಮತಿ ಸಿಕ್ಕಿದೆ.

ಇ-ಸಿಗರೇಟು ಉತ್ಪಾದನೆ, ಆಮದು/ರಫ್ತು, ಮಾರಾಟ, ಶೇಖರಣೆ, ಜಾಹೀರಾತು ನೀಡಿಕೆ, ಬಳಕೆ ಎಲ್ಲವನ್ನು ನಿಷೇಧಿಸಲಾಗಿದೆ. ಎಲೆಕ್ಟ್ರೋನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್ (ENDS) ಮೂಲಕ ಸಿಗುವ ನಿಕೋಟಿನ್ ಸೇವನೆ ಸಾಧನಗಳನ್ನು ನಿಷೇಧಿಸುವಂತೆ ಆರೋಗ್ಯ ಇಲಾಖೆ ಈಗಾಗಲೇ ಶಿಫಾರಸು ಕಳಿಸಿತ್ತು. ಇದನ್ನು ಪರಿಗಣಿಸಿ, ಕೇಂದ್ರ ಬಜೆಟ್ ಮಂಡನೆ ವೇಳೆ ಘೋಷಣೆ ಮಾಡಬೇಕಾಗಿತ್ತು.

ಆದರೆ, ಸ್ವಲ್ಪ ತಡವಾಗಿದ್ದು, ಈಗ ಸಂಪೂರ್ಣ ನಿಷೇಧದ ಆದೇಶ ಜಾರಿಯಾಗಲಿದೆ. ಇ ಸಿಗರೇಟ್ ನಿಷೇಧ ಕಾಯ್ದೆ 2019ಗೆ ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಕಳೆದ ತಿಂಗಳು ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು.

ಧೂಮಪಾನ ತ್ಯಜಿಸಲು ನಿಕೋಟೀನ್ ಬದಲಿ ಚಿಕಿತ್ಸೆ

"ಸಿಗರೇಟು ಹಾಗೂ ಇತರೆ ತಂಬಾಕು ಉತ್ಪನ್ನ ಕಾಯ್ದೆಯಡಿಯಲ್ಲಿ ಕೇಂದ್ರ ಸರ್ಕಾರವು ಈ ಉತ್ಪನ್ನಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಮಾರಾಟದಲ್ಲಿ ನಿಯಂತ್ರಣ ಸಾಧಿಸಬಹುದು ಅಷ್ಟೇ. ಕಾನೂನಿನ ತೊಡಕಿನ ನಡುವೆ ಇ ಸಿಗರೇಟು ಮೇಲೆ ನಿಷೇಧ ಹೇರಲು ಸರ್ಕಾರ ಮುಂದಾಗಿತ್ತು. ಹೀಗಾಗಿ, ಕಾನೂನಿಗೆ ಅಗತ್ಯ ತಿದ್ದುಪಡಿ ಮಾಡಿ, ಮಸೂದೆ ಮಂಡನೆ ಮಾಡಲಾಗಿದೆ. ಇದರದಲ್ಲಿ ಯಾವುದೇ ದುರುದ್ದೇಶವಿಲ್ಲ,ತಂಬಾಕು ಸಂಪೂರ್ಣ ನಿಷೇಧವಾದರೆ ಅತ್ಯಂತ ಸಂತೋಷ ಪಡುವ ವ್ಯಕ್ತಿ ನಾನಾಗಿರುತ್ತೇನೆ" ಎಂದು ಆರೋಗ್ಯ ಸಚಿವ ಹರ್ಷ್ ವರ್ಧನ್ ಹೇಳಿದರು.

 7,700ಕ್ಕೂ ಅಧಿಕ ಮಾದರಿಯಲ್ಲಿ ಲಭ್ಯ

7,700ಕ್ಕೂ ಅಧಿಕ ಮಾದರಿಯಲ್ಲಿ ಲಭ್ಯ

ತಂಬಾಕು ಎಲೆಗಳನ್ನು ಸಂಪೂರ್ಣವಾಗಿ ಸುಡದೆ ಬಿಸಿ ಮುಟ್ಟಿಸಿ, ದ್ರವ ರೂಪದ ನಿಕೋಟಿನ್ ಅವಿಯನ್ನು ಸೇವಿಸುವ ಸಾಧನಗಳು ಹೆಚ್ಚು ಜನಪ್ರಿಯವಾಗಿವೆ. ಇಂಥ ಸಾಧನಗಳಿಗೆ ಯಾವುದೆ ಲೈಸನ್ಸ್ ಇಲ್ಲ, ಯುವ ಜನಾಂಗದ ದಿಕ್ಕು ತಪ್ಪಿಸಲಾಗುತ್ತಿದೆ, ಸುಮಾರು 460ಕ್ಕೂ ಅಧಿಕ ಇ ಸಿಗರೇಟು ಬ್ರ್ಯಾಂಡ್ ಗಳು ಭಾರತದಲ್ಲಿವೆ. ಸರಿ ಸುಮಾರು 7,700ಕ್ಕೂ ಅಧಿಕ ಮಾದರಿಯಲ್ಲಿ ಲಭ್ಯವಿದೆ.

 ನಿಯಮ ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ

ನಿಯಮ ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ

ನಿಯಮ ಉಲ್ಲಂಘಿಸಿದವರಿಗೆ ಮೊದಲ ಬಾರಿಗೆ 1 ಲಕ್ಷ ರೂ. ದಂಡ, ಒಂದು ವರ್ಷ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು. ಎರಡನೇ ಬಾರಿಗೆ ನಿಯಮ ಉಲ್ಲಂಘಿಸಿದವರೆಗೆ 5 ಲಕ್ಷ ರೂ. ದಂಡ, 3 ವರ್ಷದವರೆಗೆ ಜೈಲುಶಿಕ್ಷೆ ಅಥವಾ ದಂಡ ಸಹಿತ ಸೆರೆಮನೆವಾಸ ವಿಧಿಸಬಹುದು.

ದಂಡ ಕಟ್ಟುವ ಭಯಕ್ಕಾದರೂ ಧೂಮಪಾನ ತ್ಯಜಿಸಿ!

 ಕರ್ನಾಟಕದಲ್ಲಿ ಅಧಿಕ ಮಂದಿ ಬಲಿ

ಕರ್ನಾಟಕದಲ್ಲಿ ಅಧಿಕ ಮಂದಿ ಬಲಿ

ಭಾರತದಲ್ಲಿ 27.4 ಕೋಟಿ ಜನರು ತಂಬಾಕನ್ನು ವಿವಿಧ ರೂಪದಲ್ಲಿ ಸೇವಿಸುತ್ತಿದ್ದಾರೆ. ತಂಬಾಕು ಸೇವನೆಯಿಂದ ಪ್ರತಿದಿನ 2700 ಮಂದಿ ಸಾವನ್ನಪ್ಪುತ್ತಿದ್ದಾರೆ. ದುರಂತ ಎಂದರೆ ಇಡೀ ರಾಷ್ಟ್ರದಲ್ಲೇ ಅತೀ ಹೆಚ್ಚು ತಂಬಾಕು ಸೇವಿಸುವ ರಾಜ್ಯ ಕರ್ನಾಟಕವಾಗಿದೆ. ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ ಒಂದೂವರೆ ಲಕ್ಷ ಜನರು ತಂಬಾಕಿನಿಂದ ಉಂಟಾಗುವ ವಿವಿಧ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿ ವರ್ಷ 35000 ಮಂದಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಒಂದು ತಂಬಾಕು ಎಲೆಯಲ್ಲಿ ನಾಲ್ಕು ಸಾವಿರ ರಾಸಾಯನಿಕಗಳಿರುತ್ತವೆ. ಅದರಲ್ಲಿ ನಾಲ್ಕು ನೂರು ಕಾಸ್ಮೋಜೆನಿಕ್ ರಾಸಾಯಕನಿಕಗಳು ಎಂಬ ಆತಂಕಕಾರಿ ಅಂಕಿ-ಅಂಶಗಳನ್ನು ಡಾ ಚಂದ್ರಕಿರಣ್ ನೀಡಿದ್ದಾರೆ.

 ಇ ಸಿಗರೇಟು ಉತ್ಪನ್ನ ಎಲ್ಲವೂ ನಿಷೇಧ

ಇ ಸಿಗರೇಟು ಉತ್ಪನ್ನ ಎಲ್ಲವೂ ನಿಷೇಧ

ಇ ಸಿಗರೇಟು ಉತ್ಪನ್ನಗಳನ್ನು ಡ್ರಗ್ಸ್ ಹಾಗೂ ಕಾಸ್ಮೆಟಿಕ್ಸ್ ಕಾಯ್ದೆ 1940(ಡಿಸಿಎ) ಸೆಕ್ಷನ್ 3 (ಬಿ) ಅಡಿಯಲ್ಲಿ ತರಲು ಸಾಧ್ಯವಾಗಿಲ್ಲ. ಸೆಕ್ಷನ್ 26 (ಎ) ಅಡಿಯಲ್ಲಿ ನಿಷೇಧಕ್ಕೆ ಯತ್ನಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಅದರಂತೆ ಅಗತ್ಯ ತಿದ್ದುಪಡಿ ತರಲಾಗಿದೆ. ಪಂಜಾಬ್, ಹರ್ಯಾಣ ಹಾಗೂ ಚಂಡೀಗಢದಲ್ಲಿ ಮಾತ್ರ ಇ ಸಿಗರೇಟ್, ಇ-ಶೀಶಾ, ಇ ನಿಕೋಟಿನ್, ಪರಿಮಳ ಭರಿತ ಹುಕ್ಕಾ ಎಲ್ಲದರ ಮೇಲೆ ನಿಷೇಧವಿದೆ.

English summary
Parliament on Monday passed a bill which seeks to prohibit the production, trade, transport, storage and advertisement of electronic cigarettes in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more